For Quick Alerts
ALLOW NOTIFICATIONS  
For Daily Alerts

ಕೋವಿಡ್‌ ವ್ಯಾಕ್ಸಿನ್ 2 ಡೋಸ್ ಪಡೆದವರಿಗೂ ಕಾಡಿದೆ ಡೆಲ್ಟಾ ವೈರಸ್: ಏಮ್ಸ್

|

ಕೊರೊನಾವೈರಸ್‌ 2ನೇ ಅಲೆ ಸ್ವಲ್ಪ ಮಟ್ಟಿಗೆ ತಗ್ಗಿದೆ. ಆದರೆ ಇದೀಗ ದೇಶಕ್ಕೆ ಡೆಲ್ಟಾ ವೈರಸ್‌ ಆತಂಕ ಎದುರಾಗಿದೆ. ಕೊರೊನಾವೈರಸ್‌ನ ರೂಪಾಂತರ ವೈರಸ್ ಇದಗಿದೆ. ಇದರ ಬಗ್ಗೆ ಎಚ್ಚರವಹಿಸದಿದ್ದರೆ ಅಪಾಯ ತಪ್ಪಿದ್ದಲ್ಲ.

Delta variant

ಕೊರೊನಾವೈರಸ್‌ ವಿರುದ್ಧ ಕೋವಿಡ್‌ ಲಸಿಕೆ ಡ್ರೈವ್‌ ಆಗುತ್ತಿದೆ. ಜೂನ್‌ 8ರವರೆಗಿನ ಅಂಕಿ ಅಂಶ ನೋಡಿದಾಗ 23 ಕೋಟಿಗೂ ಅಧಿಕ ಜನ ಲಸಿಕೆ ಪಡೆದಿದ್ದಾರೆ, ಅದರಲ್ಲಿ 1,82,303 ಜನ ಸೆಕೆಂಡ್‌ ಡೋಸ್‌ ಪಡೆದಿದ್ದಾರೆ.

ಯಾರು ಮೊದಲ ಡೋಸ್‌ ಲಸಿಕೆ ಪಡೆದಿದ್ದರೋ ಅವರು ಆದಷ್ಟು ಬೇಗ ಸೆಕೆಂಡ್‌ ಡೋಸ್‌ ಲಸಿಕೆ ಪಡೆಯಬೇಕು, ಆಗ ಮಾತ್ರ ಡೆಲ್ಟಾ ವೈರಸ್‌ನಿಂದ ಉಂಟಾಗುವ ತಪ್ಪಿಸಬಹುದು ಎಂದು ತಜ್ಞರು ಈಗಾಗಲೇ ಎಚ್ಚರಿಸಿದ್ದಾರೆ.

ಇದೀಗ ಏಮ್ಸ್ ವರದಿಯು ಕೊವಿಶೀಲ್ಡ್, ಕೊವಾಕ್ಸಿನ್ ತೆಗೆದುಕೊಂಡವರಿಗೂ ಡೆಲ್ಟಾ ಸೋಂಕು ತಗುಲಬಹುದು ಎಂದು ಹೇಳಿದೆ.

 ಏಮ್ಸ್ ವರದಿ

ಏಮ್ಸ್ ವರದಿ

ಏಮ್ಸ್ IGIB(Institute of Genomics and Integrative Biology ) ಹಾಗೂ NCDC (National Centre for Disease Control) ಜೊತೆ ಸೇರಿ ನಡೆಸಿದ ಅಧ್ಯಯನದಲ್ಲಿ ಡೆಲ್ಟಾ ರೂಪಾಂತರ ವೈರಸ್‌ ಕೊವಿಶೀಲ್ಡ್ ಹಾಗೂ ಕೊವಾಕ್ಸಿನ್ ಎರಡೂ ಪಡೆದವರಿಗೂ ತಗುಲಬಹುದು ಎಂದು ಹೇಳಿದೆ.

ಅಧ್ಯಯನದಲ್ಲಿ 67 ಸೋಂಕಿತರಲ್ಲಿ 36 ಜನರು 2 ಡೋಸ್‌ ಪಡೆದಿದ್ದರೆ 27 ಜನ ಒಂದು ಡೋಸ್‌ ಪಡೆದವರಾಗಿದ್ದರು.

 ಸಾವಿನ ಸಂಖ್ಯೆ ವರದಿಯಾಗಿಲ್ಲ

ಸಾವಿನ ಸಂಖ್ಯೆ ವರದಿಯಾಗಿಲ್ಲ

2 ಡೋಸ್‌ ಲಸಿಕೆ ಪಡೆದವರಲ್ಲಿಯೂ ಸೋಂಕು ಕಂಡು ಬಂದರೂ ಯಾವುದೇ ಸಾವು ಸಂಭವಿಸಿಲ್ಲ ಎಂದು ಅಧ್ಯಯನ ವರದಿ ಹೇಳಿದೆ. ಡೆಲ್ಟಾ ವೈರಸ್‌ ಸೋಂಕಿತರಲ್ಲಿ ಶೇ. 70ರಷ್ಟು ಜನರು ಲಸಿಕೆ ಪಡೆದವರಾಗಿದ್ದಾರೆ.

ಬೇಟಾ ಹಾಗೂ ಡೆಲ್ಟಾ ವೈರಸ್ ಅನ್ನು ಕೊವಾಕ್ಸಿನ್ ನಿಷ್ಕ್ರಿಯೆಗೊಳಿಸುವುದು: ICMR ವರದಿ

ಬೇಟಾ ಹಾಗೂ ಡೆಲ್ಟಾ ವೈರಸ್ ಅನ್ನು ಕೊವಾಕ್ಸಿನ್ ನಿಷ್ಕ್ರಿಯೆಗೊಳಿಸುವುದು: ICMR ವರದಿ

ICMR ಅಧ್ಯಯನವು ಭಾರತ್‌ ಬಯೋಟೆಕ್‌ನ ಕೊವಾಕ್ಸಿನ್ ಕೊರೊನಾ ರೂಪಾಂತರ ತಳಿಗಳಾದ B.1.351 (ಬೇಟಾ) ಮತ್ತು B.1.617.2 (ಡೆಲ್ಟಾ) ನಿಷ್ಕ್ರಿಯಗೊಳಿಸುವಲ್ಲಿ ಪರಿಣಾಮಕಾರಿಯಾಗಿದೆ ಎಂದು ICMR ಹೇಳಿದೆ. ಈ ಅಧ್ಯಯನಕ್ಕೆ ಒಳಪಟ್ಟವರಲ್ಲಿ ಡೆಲ್ಟಾ ವೈರಸ್‌ ಸೋಂಕಿದವರಲ್ಲಿ ಲಸಿಕೆ ಪಡೆಯದವರು ಚೇತರಿಸಿಕೊಳ್ಳಲು 5-20 ವಾರ ತೆಗೆದುಕೊಂಡರೆ ಕೊವಾಕ್ಸಿನ್ 2 ಡೋಸ್‌ ಪಡೆದವರು 28 ದಿನಗಳ ಒಂಗಾಗಿ ಚೇತರಿಸಿದ್ದಾರೆ ಎಂದು ವರದಿ ಹೇಳಿದೆ. ಕೊವಾಕ್ಸಿನ್ ಡೆಲ್ಟಾ ಮತ್ತು ಬೀಟಾ ವೈರಸ್ ನಿಷ್ಕ್ರಿಯಗೊಳಿಸುವಲ್ಲಿ ಪರಿಣಾಮಕಾರಿ ಎಂದು ವರದಿ ಹೇಳಿದೆ.

 ಕೊನೆಯದಾಗಿ:

ಕೊನೆಯದಾಗಿ:

ಇದೀಗ ದೇಶದ ಮುಂದೆ ಡೆಲ್ಟಾ ವೈರಸ್‌ ಭೀತಿ ಇದೆ, ಈ ವೈರಸ್‌ನಿಂದ ಪಾರಾಗಲು ಕೊರೊನಾದ ಎಲ್ಲಾ ಮುನ್ನೆಚ್ಚರಿಕೆವಹಿಸಬೇಕು. ಹೊರಗಡೆ ಹೋಗುವಾಗ ಮಾಸ್ಕ್‌ ಧರಿಸಬೇಕು, ಕೈಗಳಿಗೆ ಸ್ಯಾನಿಟೈಸರ್‌ ಬಳಸಬೇಕು ಮುಖ್ಯವಾಗಿ ಎಲ್ಲರು ಕೊರೊನಾ ಲಸಿಕೆ ಪಡೆಯಬೇಕಾಗಿದೆ. ಲಸಿಕೆ ಪಡೆದವರಿಗೂ ಡೆಲ್ಟಾ ರೂಪಾಂತರ ವೈರಸ್ ತಗುಲುತ್ತಿವೆ, ಆದರೆ ಸಾವು ಸಂಭವಿಸಿಲ್ಲ ಅಲ್ಲದೆ ಬೇಗನೆ ಚೇತರಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ ಲಸಿಕೆ ಪಡೆಯಿರಿ.

English summary

Covid-19: Delta Variant May Infect Those Who Received Covishield Or Covaxin Doses: AIIMS Study

Covid-19: Delta variant may infect those who received covishield or covaxin doses: AIIMS study, read on..,
Story first published: Thursday, June 10, 2021, 21:28 [IST]
X
Desktop Bottom Promotion