For Quick Alerts
ALLOW NOTIFICATIONS  
For Daily Alerts

ಕೊರೊನಾ ಲಸಿಕೆಯ ಅಡ್ಡಪರಿಣಾಮ: ಕೋವಿಡ್ ಆರ್ಮ್‌ ಬಗ್ಗೆ ನೀವು ತಿಳಿಯಲೇಬೇಕಾದ ಅಂಶಗಳು

|

ಇದೀಗ ಭಾರತದಲ್ಲಿ ಎರಡನೇ ಹಂತದ ಕೊರೊನಾ ಲಸಿಕೆ ನೀಡಲಾಗುತ್ತಿದೆ. ಆದರೂ ಜನರಿಗೆ ಲಸಿಕೆ ಕುರಿತ ಸಂಶಯ, ಆತಂಕ ಕಡಿಮೆಯಾಗಿಲ್ಲ. ಎಲ್ಲಾದರೂ ಲಸಿಕೆಯ ಅಡ್ಡಪರಿಣಾಮ ಸುದ್ದಿ ಕೇಳಿದ ತಕ್ಷಣ ಆತಂಕಕ್ಕೆ ಒಳಗಾಗುತ್ತಾರೆ.

ಇನ್ನು ಕೊರೊನಾ ಲಸಿಕೆ ಅಡ್ಡಪರಿಣಾಮದ ಬಗ್ಗೆ ಜನರು ಹೆಚ್ಚಾಗಿ ಮಾತನಾಡುತ್ತಿರುವುದು 'ಕೋವಿಡ್ ಆರ್ಮ್ ' ಬಗ್ಗೆ. ಕೋವಿಡ್ ಆರ್ಮ್‌ ಎಂದರೆ ಲಸಿಕೆ ತೆಗೆದುಕೊಂಡ ಜಾಗದಲ್ಲಿ ಕಂಡು ಬರುವ ಊತ, ಗುಳ್ಳೆಯ ಬಗ್ಗೆ.

ಕೋವಿಡ್‌ ಆರ್ಮ್‌ನ ಲಕ್ಷಣಗಳೇನು?

ಕೋವಿಡ್‌ ಆರ್ಮ್‌ನ ಲಕ್ಷಣಗಳೇನು?

ಕೆಲವರಿಗೆ ಕೋವಿಡ್ ಲಸಿಕೆ ಪಡೆದುಕೊಂಡ ಬಳಿಕ ಆ ಚುಚ್ಚಿದ ಭಾಗದಲ್ಲಿ ಗುಳ್ಳೆ ಹಾಗೂ ಊತ ಕಂಡು ಬರುತ್ತದೆ. ಇದನ್ನು ಮೆಡಿಕಲ್ ಭಾಷೆಯಲ್ಲಿ delayed cutaneous hypersensitivity ಎಂದು ಕರೆಯುತ್ತಾರೆ. ಅಂದ್ರೆ ಲಸಿಕೆ ಪಡೆದುಕೊಂಡ ಬಳಿಕ ತಡವಾಗಿ ಕಂಡು ಬರುವ ರಿಯಾಕ್ಷನ್ ಇದಾಗೊದೆ. ಈ ರೀತಿಯಾದಾಗ ಕಂಡು ಬರುವ ಲಕ್ಷಣಗಳು

* ಚುಚ್ಚಿದ ಭಾಗ ಕೆಂಪಾಗುವುದು

* ಊತ

ಈ ರೀತಿ ಲಸಿಕೆ ಪಡೆದುಕೊಂಡು 8 ಅಥವಾ ಅದಕ್ಕಿಂತ ಹೆಚ್ಚಿನ ದಿನಗಳಾದ ಬಳಿಕ ಕಂಡು ಬರುವುದು.

ಕೋವಿಡ್ ಆರ್ಮ್‌ನಿಂದ ಅಪಾಯವಿದೆಯೇ?'

ಕೋವಿಡ್ ಆರ್ಮ್‌ನಿಂದ ಅಪಾಯವಿದೆಯೇ?'

ತಜ್ಞರ ಪ್ರಕಾರ ಕೋವಿಡ್ ಆರ್ಮ್ ಅಪಾಯಕಾರಿಯಲ್ಲ. ಇದರ ಬಗ್ಗೆ ಮೂರು ಹಂತದಲ್ಲಿ ಕ್ಲಿನಿಕಲ್ ಟ್ರಯಲ್ ನಡೆಸಿದ Moderna mRNAದ ಸಂಶೋಧಕರು ಈ ರಿಯಾಕ್ಷನ್ 4 ಅಥವಾ 5 ದಿನದಲ್ಲಿ ಕಡಿಮೆಯಾಗಿತ್ತೆ ಎಂದು ಹೇಳಿದ್ದಾರೆ.

ಯಾರಿಗೆ ಕೋವಿಡ್ ಆರ್ಮ್ ರಿಯಾಕ್ಷನ್ ಆಗುವ ಸಾಧ್ಯತೆ ಹೆಚ್ಚು?

ಯಾರಿಗೆ ಕೋವಿಡ್ ಆರ್ಮ್ ರಿಯಾಕ್ಷನ್ ಆಗುವ ಸಾಧ್ಯತೆ ಹೆಚ್ಚು?

ನ್ಯೂ ಇಂಗ್ಲೆಂಡ್ ಜರ್ನಲ್ ವರದಿ ಪ್ರಕಾರ ಮಹಿಳೆಯರಲ್ಲಿ ಈ ರೀತಿಯ ರಿಯಾಕ್ಷನ್‌ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಕೆಲವರಿಗೆ ಮೊದಲನೇಯ ಡೋಸ್‌ನಲ್ಲಿ ರಿಯಾಕ್ಷನ್ ಕಾಣಿಸಿದರೆ ಇನ್ನು ಕೆಲವರಿಗೆ ಎರಡನೇ ಡೋಸ್‌ ಪಡೆದುಕೊಂಡ ಬಳಿಕ ಈ ರೀತಿಯ ರಿಯಾಕ್ಷನ್ ಕಂಡು ಬರುವುದು.

ಮುನ್ನೆಚ್ಚರಿಕೆಗಳು

ಮುನ್ನೆಚ್ಚರಿಕೆಗಳು

ಲಸಿಕೆ ಪಡೆಯುವ ಮುಂಚೆ ಏನು ಮಾಡಬೇಕು, ಏನು ಮಾಡಬಾರದು ಎಂದು ಗೊತ್ತಿರಬೇಕು. ನಿಮಗೆ ಒಂದು ವೇಳೆ ಹೈಪರ್‌ ಟೆನ್ಷನ್, ಮಧುಮೇಹ, ಕಿಡ್ನಿ ಸಮಸ್ಯೆ ಮುಂತಾದ ಆರೋಗ್ಯ ಸಮಸ್ಯೆಗಳಿದ್ದರೆ ವೈದ್ಯರಿಂದ ಕ್ಲಿಯರೆನ್ಸ್ ಸರ್ಟಿಫಿಕೇಟ್ ಪಡೆದ ಬಳಿಕ ಕೋವಿಡ್ 19 ಲಸಿಕೆ ಪಡೆಯಬೇಕು.

ಲಸಿಕೆ ಪಡೆದ ಬಳಿಕ ಏನಾದರೂ ಅಲರ್ಜಿ ಕಂಡು ಬಂದರೆ ಕೂಡಲೇ ವೈದ್ಯರಿಗೆ ತೋರಿಸಿ ಅವರ ಸಲಹೆ ಪಡೆದುಕೊಳ್ಳಬೇಕು.

ಲಸಿಕೆ ಪಡೆದ ಬಳಿಕ ದೇಹದಲ್ಲಿ ಕೊರೊನಾ ವಿರುದ್ಧ ರೋಗ ನಿರೋಧಕ ಶಕ್ತಿ ಹೆಚ್ಚಲು ಕೆಲವು ದಿನಗಳು ಬೇಕು. ಆದ್ದರಿಂದ ಹೊರಗಡೆ ಹೋಗುವಾಗ ಮಾಸ್ಕ್ ಧರಿಸಬೇಕು, ಕೈಗಳಿಗೆ ಸ್ಯಾನಿಟೈಸರ್ ಬಳಸಬೇಕು, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ.

English summary

Coronavirus vaccine side-effect: What is 'COVID arm'? Here's is All you need to know in Kannada

Coronavirus vaccine side-effect: What is 'COVID arm'? Here's is All you need to know in Kannada...
X
Desktop Bottom Promotion