For Quick Alerts
ALLOW NOTIFICATIONS  
For Daily Alerts

ನೀವು ಇತ್ತೀಚೆಗೆ ಕೊರೊನಾ ಲಸಿಕೆ ಪಡೆದಿದ್ದರೆ ಈ ವಿಷಯಗಳು ತಿಳಿದಿರಲಿ

|

ಭಾರತದಲ್ಲಿ ಕೊರೊನಾ ಲಸಿಕೆ ಡ್ರೈವ್‌ ಜನವರಿಯಿಂದ ಪ್ರಾರಂಭವಾಗಿದ್ದರೂ ಇನ್ನೂ ಸಾಕಷ್ಟು ಜನರಿಗೆ ಲಸಿಕೆ ಲಭ್ಯವಾಗಿಲ್ಲ. ಜನರು ಲಸಿಕೆ ಕೇಂದ್ರಗಳ ಮುಂದೆ ಕ್ಯೂ ನಿಂತಿರುತ್ತಾರೆ. 50 ಅಥವಾ100 ಡೋಸ್‌ಗಳಷ್ಟೇ ಬರುತ್ತಿರುವುದರಿಂದ ಒಂದು ಡೋಸ್‌ ಪಡೆಯಲು ಹಲವಾರು ಬಾರಿ ಲಸಿಕೆ ಕೇಂದ್ರಗಳಿಗೆ ಹೋಗಿ ಟೋಕನ್ ಸಿಗುತ್ತಾ ಎಂದು ಕಾಯುವಂತಾಗಿದೆ. ಇದು ಮೊದಲ ಡೋಸ್‌ ಪಡೆಯಬೇಕಾದವರ ಕತೆಯಾದರೆ ಎರಡನೇ ಡೋಸ್‌ ಸಿಗಬೇಕಾದವರದ್ದು ಬೇರೇನೇ ಕತೆ. ಎರಡನೇ ಡೋಸ್‌ ಪಡೆಯಲು ಸಮಯವಾಗಿರುತ್ತದೆ., ಇನ್ನೂ ಲಭ್ಯವಾಗಿರುವುದಿಲ್ಲ... ಮೂರನೇ ಅಲೆಯ ಆತಂಕ ಶುರುವಾಗಿರುವುದರಿಂದ ಎರಡು ಡೋಸ್‌ ಲಸಿಕೆ ಸಿಕ್ಕರೆ ಸಾಕು ಇನ್ನೇನು ಭಯವಿಲ್ಲ ಎಂಬ ಭಾವನೆ ಜನರಲ್ಲಿದೆ.

ಆದರೆ ಈ ರೀತಿಯ ಆಲೋಚನೆಗಳಿಂದ ನಿರ್ಲಕ್ಷ್ಯ ತೋರಿದರೆ ಕೋವಿಡ್ 19 ತಗುಲಬಹುದು ಅಲ್ಲದೆ ಲಸಿಕೆ ತೆಗೆಯದೇ ಇರುವವರಷ್ಟೇ ಲಸಿಕೆ ಪಡೆದವರು ಕೊರೊನಾ ಸೋಂಕು ಹರಡುತ್ತಿದ್ದಾರೆ ಎಂಬುವುದು ಈಗಾಗಲೇ ಸಾಬೀತಯಾಗಿದೆ. ಲಸಿಕೆ ಪಡೆದವರಿಗೆ ಆರೋಗ್ಯ ಸ್ಥಿತಿ ಗಂಭೀರವಾಗದೇ ಇರಬಹುದು, ಆದರೆ ಇವರಿಂದ ಸೋಂಕು ಹರಡಿದವರು ಲಸಿಕೆ ಪಡೆಯದೇ ಇದ್ದರೆ ಅವರ ಆರೋಗ್ಯ ಸ್ಥಿತಿ ಗಂಭೀರವಾಗುವ ಅಪಾಯ ಹೆಚ್ಚು.

ಆದ್ದರಿಂದ ಲಸಿಕೆ ಪಡೆದವರು ಆರೋಗ್ಯ ತಜ್ಞರ ಪ್ರಕಾರ ನಿಮ್ಮನ್ನು ಹಾಗೂ ನಿಮ್ಮ ಸುತ್ತ ಇರುವವರನ್ನು ಕೋವಿಡ್‌ 19ನಿಂದ ರಕ್ಷಿಸಲು ಈ ಕ್ರಮಗಳನ್ನು ಅನುಸರಿಸಬೇಕಾಗಿದೆ.

ಸುರಕ್ಷಿತೆ ಕ್ರಮಗಳನ್ನು ಎರಡು ಡೋಸ್‌ನ ಬಳಿಕ ಕೂಡ ಪಾಲಿಸಬೇಕು

ಸುರಕ್ಷಿತೆ ಕ್ರಮಗಳನ್ನು ಎರಡು ಡೋಸ್‌ನ ಬಳಿಕ ಕೂಡ ಪಾಲಿಸಬೇಕು

ಲಸಿಕೆ ಪಡೆದು ರೋಗ ನಿರೋಧಕ ಶಕ್ತಿ ಹೆಚ್ಚಲು ಕೆಲವು ವಾರಗಳು ಬೇಕಾಗಬಹುದು ಹಾಗೂ ಲಸಿಕೆ ಪಡೆದ ಬಳಿಕ ದೇಹದಲ್ಲಿ ರೋಗ ನಿರೋಧಕ ಶಕ್ತಿ ಎಷ್ಟು ತಿಂಗಳು ಅಥವಾ ವರ್ಷಗಳವರೆಗೆ ಇರುತ್ತದೆ ಎಂಬುವುದರ ಬಗ್ಗೆ ಖಚಿತ ಮಾಹಿತಿಯಿಲ್ಲ, ಇದರ ಕುರಿತು ಹಲವಾರು ಸಂಶೋಧನೆಗಳು ನಡೆಯುತ್ತಿವೆ. ಅಲ್ಲದೆ ರೂಪಾಂತರ ವೈರಸ್‌ ಡೆಲ್ಟಾ ಪ್ಲಸ್‌ ಕೋವಿಡ್ 19 ಲಸಿಕೆ ಪಡೆದವರಲ್ಲೂ ಕಂಡು ಬರುತ್ತಿದೆ. ಆದ್ದರಿಂದ ಅಗ್ಯತ ಸುರಕ್ಷಿತ ಕ್ರಮಗಳನ್ನು ಅನುಸರಿಸಬೇಕು. ಹೊರಗಡೆ ಹೋಗುವಾಗ ಮಾಸ್ಕ್‌ ಧರಿಸಿ, ಕೈಗಳಿಗೆ ಸ್ಯಾನಿಟೈಸರ್ ಹಾಕುತ್ತಾ ಇರಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಮನೆಗೆ ಬಂದ ಮೇಲೆ ಕೈಗಳನ್ನು ತೊಳೆಯಿರಿ, ಬಟ್ಟೆ ಮಾಸ್ಕ್‌ ಆದರೆ ತೊಳೆದು ಹಾಕಿ.

ಲಸಿಕೆ ಪಡೆದವರೂ ಕೋವಿಡ್‌ 19 ಹರಡುತ್ತಾರೆ

ಲಸಿಕೆ ಪಡೆದವರೂ ಕೋವಿಡ್‌ 19 ಹರಡುತ್ತಾರೆ

ಮೇಲೆ ಹೇಳಿದಂತೆ ರೂಪಾಂತರ ವೈರಸ್‌ ಎರಡು ಲಸಿಕೆ ಪಡೆದವರಲ್ಲೂ ಕಂಡು ಬರುತ್ತಿದೆ. ಇವರಲ್ಲಿ ರೋಗ ಲಕ್ಷಣಗಳು ಅಷ್ಟೇನು ಗಂಭೀರವಾಗಿರದಿದ್ದರೆ ಹೊರಗಡೆ ಓಡಾಡಿ ಹೆಚ್ಚು ಜನರಿಗೆ ರೋಗ ಹರಡುವ ಸಾಧ್ಯತೆ ಇದೆ. ಆದ್ದರಿಂದ ಲಸಿಕೆ ಪಡೆದವರು ಏನಾದರೂ ಆರೋಗ್ಯ ಸಮಸ್ಯೆ ಕಾಣಿಸಿದರೆ ಹೊರಗಡೆ ಓಡಾಡಬೇಡಿ, ಮನೆಯಲ್ಲೇ ಇದ್ದು, ಕೋವಿಡ್ 19 ಪರೀಕ್ಷೆ ಮಾಡಿಸಿ.

ಲಸಿಕೆ ಪಡೆದವರಿಗೆ ಕ್ವಾರಂಟೈನ್ ಅಗ್ಯತವಿಲ್ಲವೇ?

ಲಸಿಕೆ ಪಡೆದವರಿಗೆ ಕ್ವಾರಂಟೈನ್ ಅಗ್ಯತವಿಲ್ಲವೇ?

ಕೆಲವು ದೇಶಗಳಲ್ಲಿ ಈ ನಿಯಮಗಳಿಗೆ, ಆದರೆ ಭಾರತದಲ್ಲಿ ಇಲ್ಲ, ಲಸಿಕೆ ಪಡೆದವರಿಗೆ ರೋಗ ನಿರೋಧಕ ಶಕ್ತಿ ಹೆಚ್ಚುವುದು, ಆದರೆ ಇವರಿಗೆ ಕೋವಿಡ್‌ 19 ತಗುಲುವುದೇ ಇಲ್ಲ ಎಂದು ಭಾವಿಸುವುದು ತಪ್ಪು. ಹೊರ ದೇಶಗಳಿಗೆ ಹೋಗಿ ಬಂದಾಗ ಸ್ವಲ್ಪ ದಿನ ಓಡಾಡದೇ ಮನೆಯಲ್ಲೇ ಇದ್ದರೆ ಒಳ್ಳೆಯದು. ಲಸಿಕೆ ಪಡೆದವರಿಗೆ ಕ್ವಾರಂಟೈನ್‌ ನಿಯಮಗಳು ತುಂಬಾ ಬಿಗಿಯಾಗಿ ಇಲ್ಲದಿದ್ದರೂ ಕೆಲವು ದಿನ ನಿಮ್ಮ ಆರೋಗ್ಯದ ಕಡೆ ಗಮನ ನೀಡುವುದು ಒಳ್ಳೆಯದು. ಒಂದು ವೇಳೆ ಏನಾದರೂ ರೋಗ ಲಕ್ಷಣಗಳು ಕಂಡು ಬಂದರೆ ಕೂಡಲೇ ಪರೀಕ್ಷೆ ಮಾಡಿಸಿ.

ಪ್ರಯಾಣ ಮಾಡಬಹುದು

ಪ್ರಯಾಣ ಮಾಡಬಹುದು

ದೇಶದಲ್ಲಿ ಹಾಗೂ ವಿದೇಶಗಳಲ್ಲಿ ಎರಡು ಡೋಸ್‌ ಲಸಿಕೆ ಪಡೆದವರು ಪ್ರಯಾಣ ಮಾಡಲು ಅನುಮತಿ ನೀಡಿದೆ. ಯಾರಲ್ಲಿ ಸಂಪೂರ್ಣ ರೋಗ ನಿರೋಧಕ ಶಕ್ತಿ ಇರುತ್ತದೋ ಅವರು ಕೋವಿಡ್‌ 19 ಹರಡುವ ಸಾಧ್ಯತೆ ಕಡಿಮೆ ಇರುವುದರಿಂದ ಪ್ರಯಾಣ ಸುರಕ್ಷಿತ ಎಂದು ಪರಿಗಣಿಸಲಾಗಿದೆ. ಆದರೆ ಪ್ರಯಾಣದ ವೇಳೆ ಕೊರೊನಾ ಎಲ್ಲಾ ನಿಯಮಗಳನ್ನು ಪಾಲಿಸಬೇಕು.

ಇತರ ಆರೋಗ್ಯ ಸಮಸ್ಯೆ ಇರುವವರು ಲಸಿಕೆ ಪಡೆದರೂ ಸಂಪೂರ್ಣ ಸುರಕ್ಷಿತರಲ್ಲ

ಇತರ ಆರೋಗ್ಯ ಸಮಸ್ಯೆ ಇರುವವರು ಲಸಿಕೆ ಪಡೆದರೂ ಸಂಪೂರ್ಣ ಸುರಕ್ಷಿತರಲ್ಲ

ಇತರ ಆರೋಗ್ಯ ಸಮಸ್ಯೆ ಇರುವವರು ದುರ್ಬಲ ರೋಗ ನಿರೋಧಕ ಶಕ್ತಿ ಹೊಂದಿರುತ್ತಾರೆ. ಅಂಥವರು ಲಸಿಕೆ ಪಡೆದಾಗ ಸ್ವಲ್ಪ ರಕ್ಷಣೆ ಇರುವುದಾದರೂ ಸಂಪೂರ್ಣ ಸುರಕ್ಷಿತರಲ್ಲ. ಏಕೆಂದರೆ ಹೆಚ್ಚಾದ ರೋಗ ನಿರೋಧಕ ಶಕ್ತಿ ತುಂಬಾ ಸಮಯ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ, ಇಂಥವರು ಕೋವಿಡ್‌ 19 ವಿರುದ್ಧ ತುಂಬಾ ಮುನ್ನೆಚ್ಚರಿಕೆವಹಿಸುವುದು ಒಳ್ಳೆಯದು.

ಕೊನೆಯದಾಗಿ: ಕೊರೊನಾ ಲಸಿಕೆಗಳು ನಿಮ್ಮಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿ, ಕೋವಿಡ್‌ 19 ಬರುವುದನ್ನು ತಡೆಗಟ್ಟುವುದು, ಒಂದು ವೇಳೆ ಬಂದ್ರೂ ರೋಗ ಲಕ್ಷಣಗಳು ಗಂಭೀರವಾಗುವುದನ್ನು ತಡೆಗಟ್ಟುತ್ತದೆ ಎಂಬುವುದು ಸಾಬೀತಾಗಿದೆ. ಆದರೆ ಕೊರೊನಾ ಬರುವುದೇ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ, ಆದ್ದರಿಂದ ಹೊರಗಡೆ ಹೋಗುವಾಗ ಮೊದಲು ಎಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿದಂತೆಯೇ ಕೊರೊನಾ ಲಸಿಕೆ ಪಡೆದ ಬಳಿಕವೂ ಪಾಲಿಸಿ.

English summary

Coronavirus vaccination: Things to know if you have been vaccinated recently in kannada

Coronavirus vaccination: Things to know if you have been vaccinated recently in kannada, Read on...
Story first published: Monday, August 16, 2021, 9:06 [IST]
X
Desktop Bottom Promotion