Just In
- 1 hr ago
ಈ ಪ್ರಾಯಾಣಾಮ ತಪ್ಪದೇ ಮಾಡಿದರೆ ಸಾಕು, ಅಧಿಕ ರಕ್ತದೊತ್ತಡಕ್ಕೆ ಬೈಬೈ ಹೇಳಬಹುದು..!
- 3 hrs ago
ಒಂದೇ ದಿನದಲ್ಲಿ ಬಂದಿದೆ ವಟ ಸಾವಿತ್ರಿ ವ್ರತ ಹಾಗೂ ಶನಿ ಜಯಂತಿ: ಈ ಕಾಕತಾಳೀಯಗಳು ಸಂಭವಿಸಲಿದೆ
- 6 hrs ago
ಇತ್ತೀಚೆಗಷ್ಟೇ ಟೈಪ್ 2 ಮಧುಮೇಹ ಕಾಣಿಸಿಕೊಂಡಿದ್ದರೆ ಗುಣಪಡಿಸುವುದು ಹೇಗೆ?
- 9 hrs ago
Today Rashi Bhavishya: ಬುಧವಾರದ ದಿನ ಭವಿಷ್ಯ: ವೃಷಭ, ಕುಂಭ, ಮೀನ ರಾಶಿಯವರಿಗೆ ಒತ್ತಡವೇ ಸಮಸ್ಯೆ, ಎಚ್ಚರ
Don't Miss
- News
ವಿಜಯೇಂದ್ರಗೆ ಟಿಕೆಟ್ ನಕಾರ; ಬಿಜೆಪಿಗೆ ತಿರುಗುಬಾಣ ಎಂದ ಕುಮಾರಸ್ವಾಮಿ
- Sports
RCB vs LSG: ಎಲಿಮಿನೇಟರ್ ಪಂದ್ಯದಲ್ಲಿ ಈ ಮೈಲಿಗಲ್ಲುಗಳ ಮೇಲೆ ಕೊಹ್ಲಿ, ರಾಹುಲ್, ಸಿರಾಜ್ ಕಣ್ಣು
- Movies
41 ದಿನದಲ್ಲಿ ಇಷ್ಟೊಂದು ಇಳಿಕೆ ಕಂಡೇ ಇಲ್ಲ: 'ಕೆಜಿಎಫ್ 2' ಕಲೆಕ್ಷನ್ ಡ್ರಾಪ್ ಆಗಿದ್ದೇಕೆ?
- Automobiles
ಹೊಸ ಇವಿ ನೀತಿ: ರಾಜಸ್ತಾನದಲ್ಲಿ ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ಭರ್ಜರಿ ಸಬ್ಸಡಿ!
- Education
KLE Society Recruitment 2022 : 14 ಪ್ರಾಧ್ಯಾಪಕ ಮತ್ತು ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ದಾವೋಸ್: ರೆನ್ಯೂ ಪವರ್ನಿಂದ ರಾಜ್ಯದಲ್ಲಿ 50 ಸಾವಿರ ಕೋಟಿ ರೂ. ಹೂಡಿಕೆ ಒಪ್ಪಂದ
- Technology
ಸ್ಪೈಸ್ಜೆಟ್ ಸಿಸ್ಟಂಗಳ ಮೇಲೆ ರಾನ್ಸಮ್ವೇರ್ ಅಟ್ಯಾಕ್!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕೊರೊನಾವೈರಸ್: ಒಮಿಕ್ರಾನ್‌ನ ಈ 3 ಪ್ರಮುಖ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಲೇಬೇಡಿ
ಭಾರತದಲ್ಲಿ ಕೊರೊನಾ ಕೇಸ್ ಮಿತಿ ಮೀರಿ ಹೆಚ್ಚಳವಾಗುತ್ತಿದೆ. ಒಂದು ಕಡೆ ಡೆಲ್ಟಾ ರೂಪಾಂತರ ಹೆಚ್ಚಾಗಿ ಕಂಡು ಬರುತ್ತಿದ್ದರೆ, ಅದರ ಜೊತೆಗೆ ಒಮಿಕ್ರಾನ್ ಸೋಂಕಿತರ ಸಂಖ್ಯೆ ದಿನದಿಂದ-ದಿನಕ್ಕೆ ಹೆಚ್ಚಾಗುತ್ತಿದೆ. ಇಂದಿನ ಅಂಕಿ ಅಂಶದವರೆಗೆ ನೋಡಿದಾಗ ಭಾರತದಲ್ಲಿ ಒಮಿಕ್ರಾನ್ ಸೋಂಕುತರ ಸಂಖ್ಯೆ 4, 461 ದಾಟಿದೆ. ಈ ರೂಪಾಂತರ ವೇಗವಾಗಿ ಹರಡುವುದಾದರೂ ಇದುವರೆಗೆ ಮಾರಾಣಾಂತಿಕವಾಗಿಲ್ಲ, ಆದರೆ ಕೇಸ್‌ಗಳು ಹೆಚ್ಚಾಗುತ್ತಿದ್ದಂತೆ ಪರಿಸ್ಥಿತಿ ಗಂಭೀರವಾಗಬಹುದೇ ಎಂಬ ಆತಂಕ ಎದುರಾಗಿದೆ.
ಅಲ್ಲದೆ ಹೊಸ ಕೋವಿಡ್ 19 ರೂಪಾಂತರ ಹೆಚ್ಚು ಗಂಭೀರ ಪರಿಣಾಮ ಬೀರಲ್ಲ ಎಂದು ಜನರು ಕೂಡ ನಿರ್ಲಕ್ಷ್ಯ ತೋರುತ್ತಿದ್ದಾರೆ, ಕೋವಿಡ್ 19 ತಗುಲಿ ಕೆಮ್ಮು ಕಾಣಿಸಿಕೊಂಡಿದ್ದರೆ ಅದು ಸಾಮಾನ್ಯ ಕೆಮ್ಮುವಾಗಿರಬಹುದು ಎಂದು ಟೆಸ್ಟ್ ಮಾಡಿಸದೆ ಓಡಾಡುತ್ತಾ ಸೋಂಕನ್ನು ಹರಡುತ್ತಿದ್ದಾರೆ. ಒಮಿಕ್ರಾನ್ ಲಸಿಕೆ ಪಡೆಯವರಿಗೆ ಅಥವಾ ದುರ್ಬಲ ರೋಗ ನಿರೋಧಕ ಶಕ್ತಿ ಇರುವವರಿಗೆ ಹರಡಿದರೆ ಅವರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು. ಆದ್ದರಿಂದ ಕೋವಿಡ್ 19 ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬೇಡಿ.
ಅದರಲ್ಲೂ ಒಮಿಕ್ರಾನ್‌ನ ಈ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಲೇಬೇಡಿ...

ಒಮಿಕ್ರಾನ್ ಲಕ್ಷಣಗಳೇನು?
ಯುಎಸ್ ಸೆಂಟರ್ ಫಾರ್ ಡಿಸೀಜ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಈ ಕುರಿತು ನಡೆಸಿದ ಅಧ್ಯಯನದಲ್ಲಿ ತಿಳಿದು ಒಮಿಕ್ರಾನ್ ಸಾಮಾನ್ಯ ಲಕ್ಷಣಗಳು
* ಕೆಮ್ಮು
* ತಲೆಸುತ್ತು
* ಶೀತ
* ಮೂಗು ಕಟ್ಟಿ ಉಸಿರಾಡಲು ಕಷ್ಟವಾಗುವುದು
ಈ ರೀತಿಯ ಲಕ್ಷಣಗಳು ಕಂಡು ಬಂದರೆ ಕೋವಿಡ್ 19 ಪರೀಕ್ಷೆ ಮಾಡಿಸುವುದು ಒಳ್ಳೆಯದು
* ಸಣ್ಣ ಜ್ವರ
* ಗಂಟಲು ಕೆರೆತ
* ಮೈಕೈ ನೋವು
* ರಾತ್ರಿಯಲ್ಲಿ ಮೈ ಬೆವರುವುದು
* ಮೂಗಿಗೆ ವಾಸನೆ ತಿಳಿಯದಿರುವುದು
* ನಾಲಗೆಗೆ ರುಚಿ ಗೊತ್ತಾಗದಿರುವುದು
ಇವೆಲ್ಲಾ ಒಮಿಕ್ರಾನ್ ಸೋಂಕು ತಗುಲಿದೆ ಎಂದು ಸೂಚಿಸುವ ಲಕ್ಷಣಗಳಾಗಿವೆ.
ಕೆಲ ರೋಗಿಗಳಲ್ಲಿ ವಾಂತಿ, ಹೊಟ್ಟೆ ಹಾಳಾಗುವುದು ಈ ರೀತಿಯ ಲಕ್ಷಣಗಳೂ ಕಂಡು ಬರುವುದು.

ಒಮಿಕ್ರಾನ್-ಗಂಟಲು ಕೆರೆತ
ಪ್ರಾರಂಭದಿಂದಲೇ ಕಂಡು ಬರುತ್ತಿರುವ ಒಮಿಕ್ರಾನ್‌ನ ಪ್ರಮುಖ ಲಕ್ಷಣವೆಂದರೆ ಗಂಟಲು ಕೆರೆತ, ಜೊತೆಗೆ ನೋವು ಇರುತ್ತದೆ, ಕೆಲವರಿಗೆ ಇದರ ಜೊತೆಗೆ ಸ್ವಲ್ಪ ಮೈ ಬಿಸಿಯಿರುತ್ತದೆ. ಈ ರೀತಿಯ ಲಕ್ಷಣಗಳು ಕಂಡು ಬಂದರೆ ಕೆಲವೊಮ್ಮೆ ತನ್ನಿಂದ ತಾನೇ ಗುಣಮುಖರಾಗಬಹುದು.

ತಲೆನೋವು
ತಲೆನೋವು ಅನೇಕ ಕಾರಣಗಳಿಂದ ಬರಬಹುದು. ಆದರೆ ಕೋವಿಡ್ 19ನ ಇತರ ಲಕ್ಷಣಗಳೊಂದಿಗೆ ತಲೆನೋವು ಕೂಡ ಕಂಡು ಬಂದರೆ ಕೋವಿಡ್ 19 ಪರೀಕ್ಷೆ ಮಾಡಿಸಿ.

ಶೀತ
ಈ ಚಳಿಗಾಲದಲ್ಲಿ ಶೀತ ಸಾಮಾನ್ಯವಾಗಿ ಕಂಡು ಬರುವುದು. ಆದರೆ ಕೋವಿಡ್ 19 ಸೋಂಕು ತಗುಲಿದಾಗ ಕೂಡ ಶೀತ ಕಂಡು ಬರುವುದು. ಶೀತ ಜೊತೆಗೆ ಸಣ್ಣದಾಗಿ ಜ್ವರ ಕಾಣಿಸಿದರೆ ಕೋವಿಡ್ 19 ಪರೀಕ್ಷೆ ಮಾಡಿಸಿ.
ಪರೀಕ್ಷೆ ಶೀಘ್ರವಾಗಿ ಮಾಡಿಸಿ
ಕೆಲವರು ಕಾಯಿಲೆ ಲಕ್ಷಣಗಳು ಕಂಡು ಬಂದರೆ ಪರೀಕ್ಷೆ ಮಾಡಿಸಲು ಹೋಗಲು ಹಿಂದೇಟು ಹಾಕುತ್ತಾರೆ, ಆದರೆ ರೊಗ ಲಕ್ಷಣಗಳು ಲ್ಬಣವಾದಾಗ ಪರೀಕ್ಷೆ ಮಾಡಿಸುತ್ತಾರೆ, ಅಷ್ಟೊತ್ತಿಗೆ ಅವರಿಂದ ಇನ್ನೊಂದಿಷ್ಟು ಜನರಿಗೆ ಸೋಂಕು ಹರಡಿರುತ್ತದೆ, ಅಲ್ಲದೆ ರೋಗ ಸ್ಥಿತಿ ಉಲ್ಬಣವಾದರೆ ಚೇತರಿಸಿಕೊಳ್ಳಲು ತಡವಾಗುವುದು. ಆದ್ದರಿಂದ ಕೋವಿಡ್ 19 ಲಕ್ಷಣಗಳು ಕಂಡು ಬಂದ ಕೂಡಲೇ ಪರೀಕ್ಷೆ ಮಾಡಿಸಿ, ನಿಮ್ಮವರನ್ನು ರಕ್ಷಿಸಿ, ನೀವೂ ಬೇಗನೆ ಚೇತರಿಸಿಕೊಳ್ಳಿ.