For Quick Alerts
ALLOW NOTIFICATIONS  
For Daily Alerts

ಕೊರೊನಾ ಚೇತರಿಕೆ ಬಳಿಕ, ಹಲ್ಲಿಗೆ ಸಂಬಂಧಿಸಿದಂತೆ ಕಂಡುಬರುವ ಬ್ಲಾಕ್ ಫಂಗಸ್ ಆರಂಭಿಕ ಲಕ್ಷಣಗಳಾವುವು?

|

ಕೊರೊನಾದ ಬೆನ್ನಲ್ಲೇ ಸದ್ಯ ದೇಶವನ್ನು ಕಾಡುತ್ತಿರುವ ಸಾಂಕ್ರಾಮಿಕ ಅಂದ್ರೆ ಬ್ಲಾಕ್ ಫಂಗಸ್ ಅಥವಾ ಮ್ಯೂಕಾರ್ಮೈಕೋಸಿಸ್. ಅಬ್ಬಾ, ಕೊರೊನಾದಿಂದ ಹೇಗೋ ಬಚಾವ್ ಆಗಿ ಬಂದೆವು ಎಂದು ಉಸಿರುಬಿಡುವ ಹೊತ್ತಿಗೆ ನಾನಾ ತರಹದ ಫಂಗಸ್ ಗಳ ಕಾಟ ಕೊರೊನಾ ಸೋಂಕಿತರನ್ನ ಹಾಗೂ ಚೇತರಿಸಿಕೊಂಡವರನ್ನ ಕಾಡುತ್ತಿದೆ. ಹಾಗಾದರೆ ಇದಕ್ಕೆ ಕಾರಣವೇನು? ಕೊರೊನಾ ಚೇತರಿಸಿಕೊಂಡರಲ್ಲಿ ಕಂಡುಬರುವ ಬ್ಲಾಕ್ ಫಂಗಸ್ ಲಕ್ಷಣಗಳೇನು? ಅದಕ್ಕೆ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳೇನು ಎಂಬುದನ್ನು ಇಲ್ಲಿ ವಿವರಿಸಲಾಗಿದೆ.

ಕೊರೊನಾದಿಂದ ಚೇತರಿಸಿಕೊಂಡವರಲ್ಲಿ ಮ್ಯೂಕೋರ್ಮೈಕೋಸಿಸ್ ಪ್ರಕರಣಗಳು ಹೆಚ್ಚಾಗಲು ಕಾರಣವೇನು? :

ಕೊರೊನಾದಿಂದ ಚೇತರಿಸಿಕೊಂಡವರಲ್ಲಿ ಮ್ಯೂಕೋರ್ಮೈಕೋಸಿಸ್ ಪ್ರಕರಣಗಳು ಹೆಚ್ಚಾಗಲು ಕಾರಣವೇನು? :

ಮ್ಯೂಕೋರ್ಮೈಕೋಸಿಸ್ ಅಥವಾ ಈ ಬ್ಲಾಕ್ ಫಂಗಸ್ ಹೊಸ ಸೋಂಕು ಅಲ್ಲ, ಈ ಹಿಂದೆಯೇ ಇತ್ತು. ಆದರೆ ಕೊರೊನಾ ಚಿಕಿತ್ಸೆಯ ಸಮಯದಲ್ಲಿ ಸ್ಟೀರಾಯ್ಡ್ ಗಳ ಅಸಮರ್ಪಕ ಬಳಕೆ, ದೀರ್ಘಕಾಲ ಐಸಿಯುನಲ್ಲಿರುವುದು ಮತ್ತು ಅನಿಯಂತ್ರಿತ ಮಧುಮೇಹ ಸೇರಿದಂತೆ ಇತರ ಆರೋಗ್ಯ ಸಮಸ್ಯೆಗಳು ಸೇರಿದಂತೆ ರೋಗನಿರೋಧಕ ಸಮಸ್ಯೆಗಳಿಂದ ಬಳಲುತ್ತಿರುವವರರು ಈ ಸಮಸ್ಯೆಗೆ ಹೆಚ್ಚು ತುತ್ತಾಗುವಂತೆ ಮಾಡುತ್ತದೆ.

ಈ ಸೋಂಕಿನ ಅತ್ಯಂತ ವಿಶಿಷ್ಟ ಲಕ್ಷಣ ಅಂದರೆ ಮುಖದ ಮೇಲೆ ಕಪ್ಪು ಕ್ರಸ್ಟ್ ಗಳ ರಚನೆ, ಭಾಗಶಃ ಪಾರ್ಶ್ವವಾಯು, ಊತ, ನಿರಂತರ ತಲೆನೋವು, ದವಡೆ ನೋವು. ಇದಲ್ಲದೇ ಕೆಲವು ಹಲ್ಲಿನ ಸೋಂಕಿಗೆ ಸಂಬಂಧಿಸಿದಂತಹ ಆರಂಭಿಕ ಲಕ್ಷಣಗಳು ಇರಬಹುದು. ಇದಕ್ಕೆ ಕೊರೊನಾ ಚೇತರಿಕೆ ಬಳಿಕ ಬಾಯಿಯ ನೈರ್ಮಲ್ಯ ಕಾಪಾಡುವುದು ತುಂಬಾ ಮುಖ್ಯ.

ಬ್ಲಾಕ್ ಫಂಗಸ್ ನ ಆರಂಭಿಕ ಲಕ್ಷಣಗಳನ್ನು ಗುರುತಿಸುವುದರಿಂದ ಅಪಾಯವನ್ನು ತಡೆಯಬಹುದೇ?:

ಬ್ಲಾಕ್ ಫಂಗಸ್ ನ ಆರಂಭಿಕ ಲಕ್ಷಣಗಳನ್ನು ಗುರುತಿಸುವುದರಿಂದ ಅಪಾಯವನ್ನು ತಡೆಯಬಹುದೇ?:

ತಜ್ಞರ ಪ್ರಕಾರ, ಆರಂಭಿಕ ಲಕ್ಷಣಗಳನ್ನು ಗುರುತಿಸುವುದರಿಂದ ಅಪಾಯ ಕಡಿಮೆ ಮಾಡಬಹುದು. ಆದ್ದರಿಂದ ಕೋವಿಡ್ ನಿಂದ ಚೇತರಿಸಿಕೊಂಡಿರುವವರು ಆ ವಾರಗಳ ಕಾಲ ಜಾಗರೂಕರಾಗಿರಬೇಕು. ಹಲ್ಲುಗಳ ಸಮಸ್ಯೆಯಿಂದ ಬಳಲುತ್ತಿರುವವರು ಅತ್ಯಂತ ಎಚ್ಚರಿಕೆಯಿಂದ ಇರಬೇಕು. ಈ ಸೋಂಕು ಮೆದುಳು ಮತ್ತು ಮುಖದ ಪ್ರಮುಖ ಸ್ನಾಯುಗಳನ್ನು ದಾಟಿ ಹೋದರೆ ಅಪಾಯಕಾರಿಯಾಗುವ ಸಾಧ್ಯತೆ ಇದೆ. ಆದರೆ ಅದು ಹರಡುವ ಪ್ರಾಥಮಿಕ ವಿಧಾನಗಳಾದ ದವಡೆಯ ಮೂಲೆ ಮತ್ತು ಬಾಯಿ ಒಳಗೆ ನೈರ್ಮಲ್ಯ ಕಾಪಾಡಬೇಕು. ಇದರಿಂದ ಅಪಾಯದ ಮಟ್ಟವನ್ನು ಕಡಿಮೆ ಮಾಡಬಹುದು.

ಕೊರೊನಾ ಚೇತರಿಕೆ ಬಳಿಕ ಬ್ಲಾಕ್ ಫಂಗಸ್ ಆರಂಭಿಕ ಲಕ್ಷಣಗಳು ಈ ಕೆಳಗಿವೆ:

ಕೊರೊನಾ ಚೇತರಿಕೆ ಬಳಿಕ ಬ್ಲಾಕ್ ಫಂಗಸ್ ಆರಂಭಿಕ ಲಕ್ಷಣಗಳು ಈ ಕೆಳಗಿವೆ:

ಹಲ್ಲಿನ ಸ್ಥಾನ ಬದಲಾವಣೆ:

ಹೌದು, ಯಾವುದಾದರೂ ಗಾಯ ಅಥವಾ ಸೋಂಕಿನಿಂದ ಹಲ್ಲುಗಳ ಸ್ಥಾನ ಬದಲಾಗಬಹುದು ಅಂದರೆ ಸ್ವಲ್ಪ ಆಚೆ ಇಚೆ ಆಗಬಹುದು ಅಥವಾ ಹಲ್ಲುಗಳು ಸಡಿಲಗೊಳ್ಳಬಹುದು. ನೀವು ಕೋವಿಡ್ ಸೋಂಕಿನ ನಂತರ ಯಾವುದೇ ರೀತಿಯ ಸ್ಥಳಾಂತರ ಆಗಿರುವುದನ್ನು ಗಮನಿಸಿದರೆ, ಇದು ಮೂಳೆ ಸವೆರುವುದನ್ನು ಸೂಚಿಸುತ್ತದೆ. ಇದರ ಪರಿಣಾಮವಾಗಿ ಶಿಲೀಂಧ್ರಗಳ ದಾಳಿಯಾಗುವುದು.

ನಾಲಿಗೆಯ ಬಣ್ಣ:

ನಾಲಿಗೆಯ ಬಣ್ಣ:

ಬಾಯಿಯ ಒಳಗೆ ಮತ್ತು ನಾಲಗೆಯ ಮೇಲೆ ಕಪ್ಪು ಬಣ್ಣವನ್ನು ಕಾಣಬಹುದು. ಆದ್ದರಿಂದ ಅವುಗಳನ್ನು ಲಘುವಾಗಿ ಪರಿಗಣಿಸಬೇಡಿ.

ವಸಡುಗಳ ಬಾವು:

ವಸಡುಗಳ ಬಾವು:

ಹಲ್ಲಿನಲ್ಲಿ ಹುಣ್ಣುಗಳು ಮತ್ತು ವಸಡಿನಲ್ಲಿ ಸೋಂಕುಗಳು ಮ್ಯೂಕೋರ್ಮೈಕೋಸಿಸ್ನ ಆರಂಭಿಕ ಗುರುತುಗಳಾಗಿರಬಹುದು. ಒಸಡುಗಳು ಹಲ್ಲುಗಳಿಂದ ದೂರ ಸರಿದು ಸಮಸ್ಯೆಗಳನ್ನು ಉಂಟುಮಾಡುವಾಗ ಇದನ್ನು ಹೆಚ್ಚಾಗಿ ಬಿಳಿ ಉಬ್ಬು, ಕೀವು ಅಥವಾ ನೋವಿನಿಂದ ಕೂಡಿದ ವಸಡುಗಳು ಉಂಟಾಗಬಹುದು. ಈ ಹಲ್ಲಿನ ಸಮಸ್ಯೆಯನ್ನು ಗುರುತಿಸುವ ಮತ್ತೊಂದು ಪ್ರಮುಖ ಮಾರ್ಗವೆಂದರೆ ನೋವು. ಯಾವುದೇ ರೀತಿಯ ಹಲ್ಲಿನ ಬಾವುಗಳಿಂದ ಉಂಟಾಗುವ ನೋವು ತೀಕ್ಷ್ಣ ಮತ್ತು ಕಠಿಣವಾಗಿರುತ್ತದೆ.

ದವಡೆ ಮೂಳೆಯ ಸುತ್ತ ನೋವು:

ದವಡೆ ಮೂಳೆಯ ಸುತ್ತ ನೋವು:

ಮ್ಯೂಕೋರ್ಮೈಕೋಸಿಸ್ನಿಂದ ಬಳಲುತ್ತಿರುವ ಜನರು, ಆರಂಭಿಕ ಹಂತಗಳಲ್ಲಿ ಮೇಲಿನ ದವಡೆಯ ಮೂಳೆ ಮತ್ತು ಬಾಯಿಯ ಸುತ್ತಲೂ ನೋವನ್ನು ಅನುಭವಿಸಬಹುದು. ದವಡೆಗಳ ಸುತ್ತ, ಹಣೆ ಮತ್ತು ಕಣ್ಣುಗಳ ಸುತ್ತಲೂ ಗಮನಾರ್ಹವಾದ, ದೀರ್ಘಕಾಲದ ನೋವನ್ನು ನೀವು ಗಮನಿಸಲು ಪ್ರಾರಂಭಿಸಿದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ.

ಕೆನ್ನೆ/ಬಾಯಿಯ ಮರಗಟ್ಟುವಿಕೆ:

ಕೆನ್ನೆ/ಬಾಯಿಯ ಮರಗಟ್ಟುವಿಕೆ:

ಒಂದು ಬದಿಯಲ್ಲಿ ಬಾಯಿ ಅಥವಾ ಕೆನ್ನೆಗಳ ಸುತ್ತಲೂ ಮರಗಟ್ಟುವಿಕೆ ಅನುಭವವೂ ಸಹ ಗಮನ ಕೊಡಬೇಕಾದ ಒಂದು ಚಿಹ್ನೆಯಾಗಿರಬಹುದು. ಒಂದು ಬದಿ ಊತ ಮತ್ತು ಪಾರ್ಶ್ವವಾಯು ಬ್ಲಾಕ್ ಫಂಗಸ್ ನ ಆರಂಭಿಕ ಲಕ್ಷಣಗಲಾಗಿರಬಹುದು.

ಸೋಂಕಿನ ಸಾಧ್ಯತೆಯನ್ನು ಕಡಿಮೆ ಮಾಡಲು ಯಾವ ಹಲ್ಲಿನ ನೈರ್ಮಲ್ಯ ಸಲಹೆಗಳು ಸಹಾಯ ಮಾಡುತ್ತವೆ?:

ಸೋಂಕಿನ ಸಾಧ್ಯತೆಯನ್ನು ಕಡಿಮೆ ಮಾಡಲು ಯಾವ ಹಲ್ಲಿನ ನೈರ್ಮಲ್ಯ ಸಲಹೆಗಳು ಸಹಾಯ ಮಾಡುತ್ತವೆ?:

ಬಾಯಿಯ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಶಿಲೀಂಧ್ರಗಳ ಸೋಂಕು ಮತ್ತು ತೊಡಕುಗಳ ಅಪಾಯವನ್ನು ಕಡಿಮೆ ಮಾಡುವುದಲ್ಲದೇ, ಇನ್ನೂ ಅನೇಕ ಸೋಂಕುಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಹಲ್ಲುಜ್ಜುವ ಬ್ರಷ್ ಗಳು, ಗಮ್ ಕ್ಲೀನರ್ ಗಳನ್ನು ಸೋಂಕುರಹಿತಗೊಳಿಸುವುದು ಮತ್ತು ಉತ್ತಮ-ಗುಣಮಟ್ಟದ ಮೌತ್‌ವಾಶ್‌ನೊಂದಿಗೆ ಆಗಾಗ್ಗೆ ಬಾಯಿ ಮುಕ್ಕಳಿಸುವುದು ಮಾಡಬೇಕು.

English summary

Coronavirus Black Fungus Risk: Signs Of Dental Infection Patients Post Covid-19 Recovery

Here we talking about Coronavirus Black Fungus Risk: Signs Of Dental Infection Patients Post Covid-19 Recovery, read on
Story first published: Thursday, June 3, 2021, 16:37 [IST]
X
Desktop Bottom Promotion