For Quick Alerts
ALLOW NOTIFICATIONS  
For Daily Alerts

ನೀವು ನಂಬಿಕೊಂಡಂತೆ ಸ್ತನಗಳು ಜೋತು ಬೀಳುವುದು ಈ ಕಾರಣಗಳಿಗೆ ಅಲ್ಲವೇ ಅಲ್ಲ..

|

ಊಹೆ ಮಾಡುವುದು ಮಾನವ ಸ್ವಭಾವ. ಆದರೆ ಈ ಊಹೆಗಳು ಮುಂದೆ ಹಲವಾರು ತಪ್ಪುಕಲ್ಪನೆಗಳಿಗೆ ಕಾರಣವಾಗುತ್ತವೆ ಇದು ಒಳ್ಳೆಯ ಸಂಕೇತವಲ್ಲ ಏಕೆಂದರೆ ಇದು ಪ್ರತಿಕೂಲ ಪರಿಣಾಮಗಳಿಗೆ ದಾರಿಮಾಡಿಕೊಡಬಹುದು. ಇದೇ ರೀತಿ ಸ್ತನಗಳು ಜೋತು ಬೀಳುವ ಬಗ್ಗೆ ಜನರು ಸಾಕಷ್ಟು ತಪ್ಪುಕಲ್ಪನೆಗಳನ್ನು ಹೊಂದಿದ್ದಾರೆ, ಅದನ್ನು ನಿಜವೆಂದು ನಂಬಿಕೊಂಡು ಸಾಗುತ್ತಿದ್ದಾರೆ. ಹಾಗಾದರೆ ಸ್ತನ ಜೋತುಬೀಳುವ ಕುರಿತು ಇರುವ ಆ ತಪ್ಪುಕಲ್ಪನೆ ಅಥವಾ ಅಪನಂಬಿಕೆಗಳಾವುವು ಎಂಬುದನ್ನು ಇಲ್ಲಿ ನೋಡೋಣ.

ಸ್ತನ ಜೋತುಬೀಳುವುದರ ಕುರಿತು ಇರುವ ಅಪನಂಬಿಕೆಗಳನ್ನು ಈ ಕೆಳಗೆ ನೀಡಲಾಗಿದೆ:

ಸ್ತನ ಜೋತು ಬೀಳಲು ನಿಜವಾದ ಕಾರಣವೇನು?:

ಸ್ತನ ಜೋತು ಬೀಳುವಿಕೆ ಪುರಾಣಗಳನ್ನು ಭೇದಿಸುವ ಮೊದಲು ಸ್ತನಗಳು ಕುಗ್ಗಿವಿಕೆಯ ಹಿಂದಿನ ನಿಜವಾದ ಕಾರಣ ಏನು ಎಂಬುದನ್ನು ತಿಳಿದುಕೊಳ್ಳುವ ಅವಶ್ಯಕತೆಯಿದೆ. ಇದಕ್ಕೆ ಕಾರಣವೇನೆಂದರೆ, ನಿಮ್ಮ ಸ್ತನಗಳ ಅಸ್ಥಿರಜ್ಜುಗಳು ಮತ್ತು ಸಂಯೋಜಕ ಅಂಗಾಂಶವು ಸಮಯ ಹೋದಂತೆ ಅಂದರೆ ವಯಸ್ಸಾದಂತೆ ವಿಸ್ತಾರಗೊಳ್ಳುತ್ತಾ ಹೋಗುತ್ತದೆ. ಇದರಿಂದ ಜೋತುಬೀಳಲು ಪ್ರಾರಂಭವಾಗುತ್ತದೆ. ಇದೊಂದು ನೈಸರ್ಗಿಕ ಪ್ರಕ್ರಿಯೆಯಾಗಿದ್ದು, ವಯಸ್ಸು ಮತ್ತು ಗುರುತ್ವಾಕರ್ಷಣೆಯಿಂದಾಗಿ ಸಂಭವಿಸುತ್ತದೆ, ಇದನ್ನು ನಿಮ್ಮ ಕೈಯಿಂದ ನಿಯಂತ್ರಿಸಲು ಸಾಧ್ಯವಿಲ್ಲ.

ಸ್ತನಗಳ ಜೋತು ಬೀಳುವಿಕೆಯ ಕುರಿತು ಜನರು ಹೊಂದಿರುವ ಕೆಲವು ಅಪನಂಬಿಕೆಗಳು:

ಸ್ತನಗಳ ಜೋತು ಬೀಳುವಿಕೆಯ ಕುರಿತು ಜನರು ಹೊಂದಿರುವ ಕೆಲವು ಅಪನಂಬಿಕೆಗಳು:

ಬ್ರಾ ಧರಿಸುವುದರಿಂದ ಸ್ತನಗಳು ಜೋತುಬೀಳುವುದಿಲ್ಲ:

ಇದೊಂದು ತಪ್ಪು ಕಲ್ಪನೆಯಾಗಿದ್ದು, ನೀವು ತಕ್ಷಣ ಇದನ್ನು ನಂಬುವುದನ್ನು ನಿಲ್ಲಿಸಬೇಕು. ಮೇಲೆಯೇ ತಿಳಿಸಿದಂತೆ ಸ್ತನ ಜೋತು ಬೀಳಲು ಕಾರಣ ನಿಮ್ಮ ನಿಯಂತ್ರಣದಲ್ಲಿಲ್ಲದ ವಯಸ್ಸು. ಬ್ರಾವು ಕೇವಲ ಸ್ತನಗಳನ್ನು ಹಿಡಿದಿಟ್ಟುಕೊಳ್ಳುತ್ತದೆ ಜೊತೆಗೆ ಅವುಗಳಿಗೆ ಆಕಾರವನ್ನು ನೀಡುತ್ತದೆ ಆದರೆ ಇದು ಜೋತು ಬೀಳುವಿಕೆಯನ್ನು ತಡೆಯಲು ಸಾಧ್ಯವಿಲ್ಲ, ಇದು ನೈಸರ್ಗಿಕ ಕ್ರಿಯೆಯಾಗಿದೆ.

ಕೇವಲ ದೊಡ್ಡ ಸ್ತನಗಳು ಮಾತ್ರ ಜೋತುಬೀಳುತ್ತವೆ:

ಕೇವಲ ದೊಡ್ಡ ಸ್ತನಗಳು ಮಾತ್ರ ಜೋತುಬೀಳುತ್ತವೆ:

ಇದು ಕೂಡ ಅಷ್ಟೇ ಯಾವುದೇ ಕಾರಣಕ್ಕೂ ನಿಜವಲ್ಲ. ಇದೊಂದು ಸಾಮಾನ್ಯ ತಪ್ಪು ಕಲ್ಪನೆಯಾಗಿದ್ದು, ನಿಮ್ಮ ಸ್ತನಗಳ ಗಾತ್ರವು ಜೋತುವಿಕೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಅವು ಗಾತ್ರದಲ್ಲಿ ದೊಡ್ಡದಾಗಿರುವುದರಿಂದ ಜೋತು ಬಿದ್ದಂತೆ ಕಾಣಿಸಬಹುದು, ಆದರೆ ಇದು ಹೆಚ್ಚಿನ ಅಂಗಾಂಶಗಳನ್ನು ಹೊಂದಿರುವುದರಿಂದ ಜೋತು ಬೀಳುತ್ತದೆ. ಮತ್ತೊಂದೆಡೆ, ಸಣ್ಣ ಸ್ತನಗಳು ಗೋಚರಿಸುವಂತೆ ಜೋತು ಬೀಳದೇ ಇರಬಹುದು ಆದರೆ ಅವು ಕೂಡ ಅದೇ ದರದಲ್ಲಿ ಕುಸಿದಿರುತ್ತವೆ. ಆದರೆ ಗಾತ್ರದ ವ್ಯತ್ಯಾಸದಿಂದ ಸರಿಯಾಗಿ ಕಾಣಿಸುವುದಿಲ್ಲ ಅಷ್ಟೇ.

ಎದೆಹಾಲು ನೀಡುವುದು ಜೋತು ಬೀಳಲು ಕಾರಣವಾಗುತ್ತದೆ:

ಎದೆಹಾಲು ನೀಡುವುದು ಜೋತು ಬೀಳಲು ಕಾರಣವಾಗುತ್ತದೆ:

ಮತ್ತೊಂದು ಸಾಮಾನ್ಯ ತಪ್ಪುಗ್ರಹಿಕೆಯೆಂದರೆ ಸ್ತನಗಳು ಜೋತುಬೀಳಲು ಕಾರಣ ಸ್ತನ್ಯಪಾನ ಅಥವಾ ಎದೆಹಾಲು ಉಣಿಸುವುದು ಎಂಬುದು. ಆದರೆ ಇದರ ಹಿಂದಿನ ನಿಜವಾದ ಕಾರಣವೆಂದರೆ ಎದೆಹಾಲು ನೀಡುವಾಗ ಸ್ತನಗಳು ದೊಡ್ಡದಾಗುವುದರಿಂದ ಸ್ತನದ ಅಸ್ಥಿರಜ್ಜುಗಳು ಹಿಗ್ಗುತ್ತವೆ. ಗರ್ಭಾವಸ್ಥೆಯ ನಂತರ, ಮಹಿಳೆಯರು ತಮ್ಮ ಸಾಮಾನ್ಯ ಗಾತ್ರಕ್ಕೆ ಮರಳಿದಾಗ, ಅದು ಜೋತು ಬೀಳಲು ಪ್ರಾರಂಭವಾಗುತ್ತದೆ.

ಕೆಲವು ವ್ಯಾಯಾಮಗಳು ಜೋತುಬೀಳುವುದನ್ನು ತಡೆಯಬಹುದು:

ಕೆಲವು ವ್ಯಾಯಾಮಗಳು ಜೋತುಬೀಳುವುದನ್ನು ತಡೆಯಬಹುದು:

ಇದು ಸಂಪೂರ್ಣವಾಗಿ ಸುಳ್ಳು ಏಕೆಂದರೆ ನಮ್ಮ ಸ್ತನಗಳು ಕೊಬ್ಬಿನಿಂದ ಕೂಡಿದೆ ಹೊರತು ಸ್ನಾಯುಗಳಿಂದಲ್ಲ. ಆದ್ದರಿಂದ, ಸ್ತನಗಳನ್ನು ಜೋತು ಬೀಳದಂತೆ ತಡೆಯುವ ಜೊತೆಗೆ ಬಿಗಿಗೊಳಿಸುವ ಅಥವಾ ಟೋನ್ ಮಾಡುವ ಯಾವುದೇ ವ್ಯಾಯಾಮವಿಲ್ಲ. ಅವುಗಳನ್ನು ಬಿಗಿಗೊಳಿಸಲು ನೀವು ಏನೂ ಮಾಡಲಾಗದಿದ್ದರೂ ಸುತ್ತಮುತ್ತಲಿನ ಅಸ್ಥಿರಜ್ಜುಗಳನ್ನು ಬಲಪಡಿಸುವ ಮೂಲಕ ನಿಮ್ಮ ಸ್ತನಗಳನ್ನು ಬಿಗಿಯಾಗಿ ಕಾಣುವ ಕೆಲವು ಎದೆಯ ವ್ಯಾಯಾಮಗಳಿವೆ.

ಹಾಗಾದ್ರೆ ನಿಜ ಯಾವುದು?

ಹಾಗಾದ್ರೆ ನಿಜ ಯಾವುದು?

ಧೂಮಪಾನವು ಸ್ತನಗಳನ್ನು ಜೋತುಬೀಳುವಂತೆ ಮಾಡುತ್ತದೆ:

ಹೌದು, ಇದು ನಿಜ. ಧೂಮಪಾನವು ಅನೇಕ ವಿಧಗಳಲ್ಲಿ ಹಾನಿಕಾರಕವಾಗಿದೆ ಎಂಬುದು ಯಾರಿಗೂ ತಿಳಿದಿರದ ವಿಚಾರವಲ್ಲ. ಆದರೆ ಸ್ತನಗಳನ್ನು ಜೋತು ಬೀಳಿಸುವುದು ಸಹ ಧೂಮಪಾನದ ಋಣಾತ್ಮಕ ಅಂಶಗಳಲ್ಲಿ ಒಂದಾಗಿದೆ ಎಂಬುದನ್ನು ನೀವು ತಿಳಿದಿರಬೇಕು. ಏಕೆಂದರೆ ಧೂಮಪಾನವು ನಿಮ್ಮ ಸ್ತನಗಳಲ್ಲಿನ ಅಂಗಾಂಶಗಳನ್ನು ಒಡೆಯಲು ಕಾರಣವಾಗುತ್ತದೆ. ಇದು ಸ್ತನಗಳು ಜೋತು ಬೀಳಲು ಕಾರಣವಾಗುವ ಪ್ರಮುಖ ಅಪಾಯಕಾರಿ ಅಂಶವಾಗಿದೆ.

English summary

Common Myths about Sagging Breasts Busted in kannada

Here we talking about Common Myths about Sagging Breasts Busted in kannada, read on
X
Desktop Bottom Promotion