For Quick Alerts
ALLOW NOTIFICATIONS  
For Daily Alerts

ನಿಮ್ಮ ಈ ಐದು ಸಾಮಾನ್ಯ ಅಭ್ಯಾಸಗಳು ಕರೋನಾ ಸೋಂಕನ್ನು ಹೆಚ್ಚಿಸುತ್ತವೆ !

|

ಕೊರೋನಾ ವೈರಸ್ ನ ಎರಡನೇ ಅಲೆಯು ಅಪಾಯಕಾರಿ ಮಟ್ಟವನ್ನು ಮೀರುತ್ತಿದೆ. ಪ್ರತಿದಿನ ದೇಶಾದ್ಯಂತ ಸಾವಿರಾರು ಪ್ರಕರಣಗಳು ಕಂಡುಬರುತ್ತಿವೆ. ಇದೀಗ ಕೋವಿಡ್ 19 ರ ಬಗ್ಗೆ ಎಲ್ಲರ ಮನಸ್ಸಿನಲ್ಲಿ ಭಯ ಮೂಡುತ್ತಿದೆ. ಆದರೆ ಕಷ್ಟದ ಸಮಯದಲ್ಲಿ ಈ ಭಯವನ್ನು ನಿವಾರಿಸಲು, ನೀವು ಕೆಲವೊಂದು ಅಭ್ಯಾಸಗಳನ್ನು ದೂರಮಾಡಬೇಕು. ಇದರಿಂದ ನಿಮ್ಮ ರೋಗನಿರೋಧಕ ಶಕ್ತಿ ಬಲವಾಗುತ್ತದೆ ಜೊತೆಗೆ ಸೋಂಕಿನ ಅಪಾಯ ಕಡಿಮೆಯಾಗುತ್ತದೆ. ಹಾಗಾದರೆ ಈ ಕೆಲವು ಸಾಮಾನ್ಯ ಅಭ್ಯಾಸಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

ಕೊರೋನಾ ಸೋಂಕನ್ನು ಹೆಚ್ಚಿಸುವ ಸಾಮಾನ್ಯ ಅಭ್ಯಾಸಗಳನ್ನು ಈ ಕೆಳಗೆ ನೀಡಲಾಗಿದೆ:

ಹೊರಗಿನಿಂದ ಬಂದ ನಂತರ ಕೈ ತೊಳೆಯದಿರುವುದು:

ಹೊರಗಿನಿಂದ ಬಂದ ನಂತರ ಕೈ ತೊಳೆಯದಿರುವುದು:

ನೀವು ಮಾರುಕಟ್ಟೆಗೆ ಹೋಗಿದ್ದರೆ, ಅಲ್ಲಿಂದ ಬಂದ ನಂತರ ಕೈ ತೊಳೆಯಿರಿ. ಕೈ ತೊಳೆಯದಿರುವ ಜನರು ಕರೋನದ ಅಪಾಯವನ್ನು ಹೆಚ್ಚು ಎದುರಿಸುತ್ತಾರೆ. ಮಾರುಕಟ್ಟೆಯಲ್ಲಿ, ಯಾವುದಾದರೂ ಸರಕುಗಳನ್ನು ಸ್ಪರ್ಶಿಸುವಾಗ ಅಥವಾ ಜನರೊಂದಿಗೆ ಸಂಪರ್ಕಕ್ಕೆ ಬಂದಾಗ ಸೋಂಕು ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ ಹೊರಗೆ ಹೋಗಿ ಬಂದ ನಮತರ ಕೈ ತೊಳೆಯಲು ಮರೆಯದಿರಿ.

ಪ್ಯಾಕೆಟ್ ಅನ್ನು ಬಾಯಿಯಿಂದ ತೆರೆಯುವುದು:

ಪ್ಯಾಕೆಟ್ ಅನ್ನು ಬಾಯಿಯಿಂದ ತೆರೆಯುವುದು:

ಸಾಮಾನ್ಯವಾಗಿ ಇದು ಕೆಲವು ಜನರ ಅಭ್ಯಾಸವಾಗಿದ್ದು, ಕೈಯಿಂದ ಪ್ಯಾಕೆಟ್ ತೆಗೆಯುವ ಬದಲು, ಅವರು ಪ್ಯಾಕೆಟ್ ಅನ್ನು ಬಾಯಿಯ ಮೂಲಕ ತೆರೆಯುತ್ತಾರೆ. ಇದರಿಂದ ಸಹ ಕರೋನಾ ಸೋಂಕು ಹರುಡುತ್ತದೆ. ಏಕೆಂದರೆ ಆ ಪ್ಯಾಕೆಟ್ ಯಾವ ವ್ಯಕ್ತಿಯ ಕೈಯಿಂದ ಹಾದುಹೋಗಿದೆ ಎಂದು ನಿಮಗೆ ತಿಳಿದಿರುವುದಿಲ್ಲ. ಒಂದು ವೇಳೆ ಸೋಂಕಿತ ಅದನ್ನು ಮುಟ್ಟಿದ್ದರೆ ನೀವು ಬಾಯಿ ಮೂಲಕ ಪ್ಯಾಕೆಟ್ ತೆರೆದಾಗ ವೈರಸ್ ನಿಮ್ಮ ದೇಹ ಸೇರುತ್ತದೆ.

ಪದೇ ಪದೇ ಕಣ್ಣುಗಳನ್ನು ಸ್ಪರ್ಶಿಸುವುದು:

ಪದೇ ಪದೇ ಕಣ್ಣುಗಳನ್ನು ಸ್ಪರ್ಶಿಸುವುದು:

ಪದೇ ಪದೇ ಕಣ್ಣುಗಳಿಗೆ ಕೈ ಹಾಕುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಕೆಲಸದ ಮಧ್ಯದಲ್ಲಿ ಪದೇ ಪದೇ ಕಣ್ಣುಗಳನ್ನು ಸ್ಪರ್ಶಿಸುವುದು ಸಹ ಸೋಂಕಿನ ಅಪಾಯವನ್ನುಂಟುಮಾಡುತ್ತದೆ. ನೀವು ಕಣ್ಣನ್ನು ಮುಟ್ಟಿದಾಗ ವೈರಸ್ ನಿಮ್ಮ ಕಣ್ಣಿನ ಮೂಲಕ ದೇಹ ಪ್ರವೇಶಿಸುತ್ತದೆ. ಆದ್ದರಿಂದ ಈ ಅಭ್ಯಾಸವನ್ನು ಬಿಡುವುದು ಒಳ್ಳೆಯದು.

ಸುಮ್ಮನೆ ಹಾಸಿಗೆಯಲ್ಲಿ ಬಿದ್ದಿರುವುದು ಅಥವಾ ಹಗಲಿನಲ್ಲಿ ಚಟುವಟಿಕೆ ಮಾಡದಿರುವುದು:

ಸುಮ್ಮನೆ ಹಾಸಿಗೆಯಲ್ಲಿ ಬಿದ್ದಿರುವುದು ಅಥವಾ ಹಗಲಿನಲ್ಲಿ ಚಟುವಟಿಕೆ ಮಾಡದಿರುವುದು:

ಹಾಸಿಗೆಯಲ್ಲಿ ಕುಳಿತುಕೊಂಡಿರುವಾಗ ಕೆಲಸವನ್ನು ಮಾಡದಿರುವುದು ಅಥವಾ ಯಾವುದೇ ದೈಹಿಕ ಚಟುವಟಿಕೆಯನ್ನು ಮಾಡದಿರುವುದು ಸಹ ಸೋಂಕಿಗೆ ಕಾರಣವಾಗುತ್ತದೆ. ಇದರಿಂದ ನಿಮ್ಮ ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುತ್ತದೆ, ಅದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಕರೋನದ ಅಪಾಯವೂ ಹೆಚ್ಚಾಗುತ್ತದೆ.

ಬೀದಿಬದಿಯ ಆಹಾರ ಸೇವನೆ:

ಬೀದಿಬದಿಯ ಆಹಾರ ಸೇವನೆ:

ನೀವು ಮಾರುಕಟ್ಟೆಯಿಂದ ವಸ್ತುಗಳನ್ನು ತಂದ ಕೂಡಲೇ ಅವುಗಳನ್ನು ನೇರವಾಗಿ ಬಳಸಬೇಡಿ. ನೀವು ತರಕಾರಿಗಳು ಅಥವಾ ಹಣ್ಣುಗಳನ್ನು ಖರೀದಿಸಬಹುದು. ಅವುಗಳನ್ನು ಮೊದಲಿಗೆ ಚೆನ್ನಾಗಿ ತೊಳೆಯಿರಿ. ಜೊತೆಗೆ ಬೀದಿ ಬದಿಯ ತಿಂಡಿ-ತಿನಿಸುಗಳನ್ನು ತಿನ್ನುವುದು ಸಹ ಸೋಂಕಿಗೆ ಕಾರಣವಾಗುತ್ತೆ. ಆದ್ದರಿಂದ ಮಾರುಕಟ್ಟೆಯಿಂದ ಬಂದ ತಕ್ಷಣ ನೀವು ತಂದ ತರಕಾರಿ-ಹಣ್ಣುಗಳ ಜೊತೆಗೆ ನಿಮ್ಮ ಕೈಗಳನ್ನು ತೊಳೆಯುವುದು ತುಂಬಾ ಮುಖ್ಯ.

English summary

Common Habits Than Can Increase Covid-19 Infection in Kannada

Here we talking about Common Habits Than Can Increase Covid-19 Infection in Kannada, read on
Story first published: Wednesday, April 21, 2021, 15:42 [IST]
X
Desktop Bottom Promotion