Just In
Don't Miss
- Automobiles
ಮ್ಯಾಗ್ನೈಟ್ ಕಾರು ಮಾದರಿಯಲ್ಲಿ ಪ್ರಮುಖ ವೆರಿಯೆಂಟ್ಗಳನ್ನು ತೆಗೆದುಹಾಕಿದ ನಿಸ್ಸಾನ್
- Technology
ಶಿಯೋಮಿ 12S ಸರಣಿಯಲ್ಲಿ ಮೂರು ಹೊಸ ಸ್ಮಾರ್ಟ್ಫೋನ್ಗಳ ಅನಾವರಣ!
- News
ಪಿಎಸ್ಐ ಹಗರಣ: ಬೊಮ್ಮಾಯಿ ರಾಜೀನಾಮೆಗೆ ರಾಹುಲ್ ಗಾಂಧಿ ಒತ್ತಾಯ
- Education
Mysore University Recruitment 2022 : ಜ್ಯೂನಿಯರ್ ರಿಸರ್ಚ್ ಫೆಲೋ ಹುದ್ದೆಗಳಿಗೆ ಅರ್ಜಿ ಆಹ್ವಾನ
- Sports
IND vs ENG 5ನೇ ಟೆಸ್ಟ್: 'ಚೀರಿಯೋ ವಿರಾಟ್'; ಇಂಗ್ಲೆಂಡ್ ಪ್ರೇಕ್ಷಕರಿಂದ ಕೊಹ್ಲಿಗೆ ಅವಮಾನ
- Finance
ಷೇರು ಪೇಟೆ ಶುಭಾರಂಭ: ಮತ್ತೆ ಎಲ್ಐಸಿ ಸ್ಟಾಕ್ ಜಿಗಿತ
- Movies
HR ಆಗಿ ಕೆಲಸ ಮಾಡಿದ್ದ ಪವಿತ್ರಾ ಲೋಕೇಶ್: ಹೀರೊಯಿನ್ ಆಗಲಿಲ್ಲ ಯಾಕೆ?
- Travel
ಪಶ್ಚಿಮಘಟ್ಟಗಳಲ್ಲಿ ಮಾನ್ಸೂನ್ ನಲ್ಲಿ ಅನ್ವೇಷಿಸಬಹುದಾದ ಸ್ಥಳಗಳು
ದೇಹದಲ್ಲಿ ಕೊಬ್ಬಿನಂಶ ಹೆಚ್ಚಾದರೆ ಕಣ್ಣಿನಲ್ಲಿ ಹೀಗೂ ಆಗಬಹುದು ನೋಡಿ..! ದೃಷ್ಟಿಯ ಸಮಸ್ಯೆಗೂ ಕಾರಣವಾಗುತ್ತೆ ಕೊಲೆಸ್ಟ್ರಾಲ್
ದೇಹದಲ್ಲಿ ಅನಗತ್ಯ ಕೊಬ್ಬಿನಾಂಶವು ಹೆಚ್ಚಾದರೆ ದೇಹದ ಇತರ ಭಾಗದಲ್ಲಿ ಸೇರಿಕೊಂಡು ತೂಕ ಹೆಚ್ಚಾಗುವುದರ ಜೊತೆಗೆ ಕಣ್ಣಿನ ಸಮಸ್ಯೆಗೂ ಕಾರಣವಾಗುತ್ತದೆ ಎನ್ನುವುದು ನಿಮಗೆ ಗೊತ್ತಿದೆಯಾ, ದೇಹವು ಸರಿಯಾಗಿ ಕಾರ್ಯ ನಿರ್ವಹಿಸಲು ಕೊಬ್ಬಿನಂಶ ಬೇಕೆ ಬೇಕು. ಆದರೂ ಹೆಚ್ಚಿನ ಕೊಬ್ಬು ಗಂಭೀರವಾದ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗುತ್ತದೆ. ಹೃದಯದ ಸಮಸ್ಯೆಯಿಂದ ಹಿಡಿದು ಪಾರ್ಶ್ವವಾಯು ಸಮಸ್ಯೆಯವರೆಗೂ ಅಧಿಕ ಕೊಲೆಸ್ಟ್ರಾಲ್ ನಮ್ಮ ಪ್ರಾಣಕ್ಕೆ ಕಂಟಕವಾಗಬಹುದು. ಇದರ ಪ್ರಭಾವ ಕಣ್ಣಿನ ಆರೋಗ್ಯದ ಮೇಲೂ ಹೊರತಾಗಿಲ್ಲ.
ದೇಹದಲ್ಲಿ ಅನಾರೋಗ್ಯ ಲಕ್ಷಣಗಳು ಅಥವಾ ಅನಾರೋಗ್ಯ ಸಂಭವಿಸಿದಾಗ ಮೊದಲು ತಿಳಿಯುವುದೇ ನಮ್ಮ ಕಣ್ಣು ಅಥವಾ ಮುಖದ ಮೂಲಕ. ಇದರಂತೆ ಅಧಿಕ ಕೊಲೆಸ್ಟ್ರಾಲ್ ರಕ್ತನಾಳಗಳಲ್ಲಿ ಸೇರಿಕೊಂಡರೆ ಜೀವಕ್ಕೆ ಅಪಾಯ ಖಂಡಿತಾ.
ಹೆಚ್ಚಾದ ಕೊಬ್ಬಿನಂಶವನ್ನು ಸೂಚಿಸುವ ಲಕ್ಷಣವೆಂದರೆ ಅದು ಕಣ್ಣಿನ ತೇಲುವಿಕೆ ಅಂದರೆ ಐ ಪ್ಲೋಟಿಂಗ್ ಕೂಡಾ ಆಗಿರುತ್ತದೆ. ಏನಿದು ಐ ಫ್ಲೋಟಿಂಗ್, ಇದರಿಂದ ಕಣ್ಣಿನ ಆರೋಗ್ಯಕ್ಕೆ ಅಪಾಯವಿದೆಯಾ, ಇದಕ್ಕೆ ಪರಿಹಾರ ಏನೇನು ಎನ್ನುವುದನ್ನು ಈ ಕೆಳಗೆ ವಿವರಿಸಲಾಗಿದೆ ನೋಡಿ.

ಕಣ್ಣಿನ ತೇಲುವಿಕೆ ಅಥವಾ ಐ ಫ್ಲೋಟರ್ಸ್ ಎಂದರೆ
ಕೆಲವರಿಗೆ ಆಗಾಗ ಕಣ್ಣಿನಲ್ಲಿ ಏನೋ ಚಲಿಸಿದಂತಾಗುವುದು, ಕಣ್ಣು ಮಂಜಾದಂತೆ ಅಥವಾ ಕಂದು ಅಥವಾ ಬೂದು ಬಣ್ಣದ ಜೇಡರ ಬಲೆಯಂತೆ ಇರುವ ರಚನೆ ಇರುವುದನ್ನು ಕಾಣಬಹುದು ಇದನ್ನೇ ಐ ಫ್ಲೋಟರ್ಸ್ ಎಂದು ಕರೆಯುತ್ತಾರೆ. ಇದು ಕಪ್ಪು ಕಲೆಗಳ ರೂಪದಲ್ಲೂ ಗೋಚರಿಸುತ್ತದೆ. ಈ ರೇಖೆಗಳು ಅಥವಾ ಕಲೆಗಳು ರೆಟಿನಾದ ಅಭಿದಮನಿ ಮುಚ್ಚುವಿಕೆಯ ಲಕ್ಷಣಗಳಾಗಿವೆ.
ರೆಟಿನಾ, ನಮ್ಮ ಕಣ್ಣಿನ ಹಿಂಭಾಗದಲ್ಲಿರುವ ಒಂದು ಬೆಳಕಿನ-ಸೂಕ್ಷ್ಮ ಅಂಗಾಂಶ, ರೆಟಿನಾದ ಅಪಧಮನಿ ಮತ್ತು ಅಭಿಧಮನಿ ಮೂಲಕ ಕಣ್ಣಿಗೆ ಬೇಕಾಗುವ ರಕ್ತ ಪೂರೈಕೆಯನ್ನು ಪಡೆಯುತ್ತದೆ. ರಕ್ತನಾಳವು ನಿರ್ಬಂಧಿಸಲ್ಪಟ್ಟಾಗ, ಅದನ್ನು ರೆಟಿನಾದ ಅಭಿಧಮನಿ ಮುಚ್ಚುವಿಕೆ ಎಂದು ಕರೆಯಲಾಗುತ್ತದೆ. ರಕ್ತನಾಳವನ್ನು ನಿರ್ಬಂಧಿಸಿದಾಗ, ರಕ್ತ ಮತ್ತು ದ್ರವವು ರೆಟಿನಾದಲ್ಲಿ ಚೆಲ್ಲುತ್ತದೆ. ಇದು ಸಂಭವಿಸಿದಾಗ, ಮ್ಯಾಕುಲಾ ಎಂದು ಕರೆಯಲ್ಪಡುವ ರೆಟಿನಾದ ಪ್ರದೇಶವು ಊದಿಕೊಳ್ಳಬಹುದು. ಊತವು ನಿಮ್ಮ ಕೇಂದ್ರ ದೃಷ್ಟಿಯ ಮೇಲೆ ಪರಿಣಾಮ ಬೀರುತ್ತದೆ.
ಅಕ್ಷಿಪಟಲದ ಅಭಿಧಮನಿ ಮುಚ್ಚುವಿಕೆ ಹೊಂದಿರುವ ಜನರಲ್ಲಿ ಅಧಿಕ ಕೊಲೆಸ್ಟ್ರಾಲ್ ಸಾಮಾನ್ಯವಾಗಿದೆ. ಅಕ್ಷಿಪಟಲದ ಅಭಿಧಮನಿ ಮುಚ್ಚುವಿಕೆಯ ಇತರ ಲಕ್ಷಣಗಳೆಂದರೆ ಒಂದು ಕಣ್ಣಿನಲ್ಲಿ ದೃಷ್ಟಿ ಬದಲಾವಣೆ, ಒಂದು ಕಣ್ಣಿನಲ್ಲಿ ದೃಷ್ಟಿ ಮಂದವಾಗುವುದು ಮತ್ತು ಪೀಡಿತ ಕಣ್ಣಿನಲ್ಲಿ ನೋವು.

ಕಣ್ಣಿನ ತೇಲುವಿಕೆಯ ಲಕ್ಷಣಗಳು
ಕಣ್ಣಿನಲ್ಲಿ ಕಾಣಿಸುವಂತಹ ಎಲ್ಲಾ ಲಕ್ಷಣಗಳನ್ನು ಐ ಫ್ಲೋಟರ್ಸ್ ಎನ್ನಲಾಗುವುದಿಲ್ಲ. ಫ್ಲೋಟರ್ಗಳನ್ನು ಗುರುತಿಸಲು ಸಹಾಯ ಮಾಡುವ ಕೆಲವು ಚಿಹ್ನೆಗಳು ಮತ್ತು ರೋಗಲಕ್ಷಣಗಳಿವೆ. ಫ್ಲೋಟರ್ಗಳು ಸಣ್ಣ ಗೆರೆಗಳು, ಉಂಗುರಗಳ ರೀತಿಯ ರಚನೆ, ಜೇಡರ ಬಲೆಯ ಆಕಾರಗಳು ಅಥವಾ ಇತರ ಯಾವುದೇ ವಿವಿಧ ಆಕಾರಗಳ ರೂಪದಲ್ಲಿ ಇರುತ್ತವೆ ಕೆಲವೊಮ್ಮೆ ಇದು ನೂಲಿನ ಎಳೆಗಳಂತೆ ಕಾಣಿಸಬಹುದು, ಇದು ಉಬ್ಬಿದಂತಿರುತ್ತದೆ ಮತ್ತು ಬಹುತೇಕ ಪಾರದರ್ಶಕವಾಗಿರುತ್ತದೆ. ಅದು ನಿಮ್ಮ ಕಣ್ಣುಗಳು ಚಲಿಸುವಾಗ ಚಲಿಸುವ ಕಪ್ಪು ಕಲೆಗಳು ಅಥವಾ ಕಲೆಗಳ ರೂಪದಲ್ಲಿ ಕಾಣಬಹುದು. ಐ ಫ್ಲೋಟರ್ಗಳು ಸಾಮಾನ್ಯವಾಗಿ ಪರದೆಗಳು, ನೀಲಿ ಆಕಾಶ ಅಥವಾ ಬಿಳಿ ಗೋಡೆಯಂತಹ ಪ್ರಕಾಶಮಾನವಾದ ಬೆಳಕಿಗೆ ಗೋಚರಿಸುತ್ತದೆ. ಈ ಫ್ಲೋಟರ್ಗಳ ತೀವ್ರತೆ, ಗಾತ್ರ ಮತ್ತು ಆಕಾರವು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ.

ಹೀಗಿದ್ದರೆ ವೈದ್ಯರನ್ನು ಭೇಟಿ ಮಾಡುವುದು ಅಗತ್ಯ
ಸಾಮಾನ್ಯಕ್ಕಿಂತ ಹೆಚ್ಚು ಕಣ್ಣಿನ ತೇಲುವಿಕೆ, ಕಣ್ಣಿನಲ್ಲಿ ಬೆಳಕು ಅಥವಾ ನಿಮ್ಮ ದೃಷ್ಟಿಯ ಯಾವುದೇ ಭಾಗದಲ್ಲಿ ಕತ್ತಲೆ ಕಂಡುಬಂದರೆ, ವೈದ್ಯರನ್ನು ಭೇಟಿ ಮಾಡುವುದು ಅತ್ಯಗತ್ಯ, ಐ ಫ್ಲೋಟರ್ಗಳು ಹೆಚ್ಚಿನ ಕೊಲೆಸ್ಟ್ರಾಲ್ನ ಲಕ್ಷಣವೇ ಎನ್ನುವುದನ್ನು ಕಂಡುಕೊಳ್ಳುವುದು ಮುಖ್ಯ ಯಾಕೆಂದರೆ ಇತರ ಕಾರಣಗಳಿಂದಲೂ ಇದು ಉಂಟಾಗಬಹುದು. ಐ ಫ್ಲೋಟರ್ಗಳು ಸಾಮಾನ್ಯವಾಗಿ ವಯಸ್ಸಾದಾಗಲೂ ಉಂಟಾಗಬಹುದು ಅಥವಾ ಇತರ ಕಾಯಿಲೆಗಳ ಪರಿಣಾಮವಾಗಿಯೂ ಉಂಟಾಗಬಹುದು.
ಸಾಮಾನ್ಯಕ್ಕಿಂತ ಹೆಚ್ಚು ಕಣ್ಣಿನ ಮೇಲೆ ಗೆರೆ ಅಥವಾ ಬಲೆಯಂತಹ ರಚನೆಗಳು ಕಾಣಿಸಿಕೊಂಡಾಗ, ನಿಮ್ಮ ಕಣ್ಣಿನ ಯಾವುದೇ ಭಾಗದಲ್ಲಿ ಕತ್ತಲೆಯಾಗಿ ಕಾಣುತ್ತಿದೆ ಎಂದು ಅನಿಸಿದಾಗ ಪರೀಕ್ಷೆ ಮಾಡುವುದು ಉತ್ತಮ.ನೀವು ಹೆಚ್ಚಿನ ಕೊಲೆಸ್ಟ್ರಾಲ್ ಹೊಂದಿದ್ದರೆ ಅದನ್ನು ಪರೀಕ್ಷಿಸುವ ಮೂಲಕ ಕಂಡುಹಿಡಿಯುವುದು ಉತ್ತಮ. ಅದು ಕೊಲೆಸ್ಟ್ರಾಲ್ನಿಂದ ಆಗಿದ್ದಲ್ಲಿ ಈ ಕೆಳಗಿನ ಪರಿಹಾರಗಳನ್ನು ತಪ್ಪದೇ ಮಾಡಿ.

ಕೊಲೆಸ್ಟ್ರಾಲ್ ನಿಯಂತ್ರಣ ಹೇಗೆ
ಹೆಚ್ಚಿನ ಕೊಲೆಸ್ಟ್ರಾಲ್ಗೆ ಇತ್ತೀಚಿನ ನಮ್ಮ ಜೀವನಶೈಲಿಯೇ ಕಾರಣವೆನ್ನಬಹುದು. ನಿಮ್ಮ ಜೀವನಶೈಲಿಯ ಅಭ್ಯಾಸವನ್ನು ಬದಲಾಯಿಸುವುದರಿಂದ ಹಿಡಿದು ಔಷಧಿಗಳವರೆಗೆ, ನಿಮ್ಮ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುವ ವಿವಿಧ ಮಾರ್ಗಗಳಿವೆ.
ಹೆಚ್ಚು ಕೊಬ್ಬಿನ ಆಹಾರವನ್ನು ಸೇವಿಸುವುದರಿಂದ ಕೊಲೆಸ್ಟ್ರಾಲ್ ಉಂಟಾಗಬಹುದು, ನಿಮ್ಮ ಆಹಾರವನ್ನು ಆರೋಗ್ಯಕರ ಆಹಾರಕ್ಕೆ ಬದಲಾಯಿಸುವುದರಿಂದ ಅನಗತ್ಯ ಕೊಬ್ಬಿನಂಶದ ಸಂಗ್ರಹಕ್ಕೆ ಕಡಿವಾಣ ಹಾಕಬಹುದು. ಓಟ್ ಮೀಲ್, ಸೇಬು, ಒಣದ್ರಾಕ್ಷಿ ಮತ್ತು ಬೀನ್ಸ್ನಂತಹ ಆಹಾರಗಳಲ್ಲಿ ಫೈಬರ್ ಅಂಶ ಅಧಿಕವಾಗಿರುತ್ತವೆ, ಇದು ನಿಮ್ಮ ದೇಹವು ಕೊಲೆಸ್ಟ್ರಾಲ್ ಅನ್ನು ಹೀರಿಕೊಳ್ಳದಂತೆ ತಡೆಯುತ್ತದೆ.
ದೇಹದಲ್ಲಿನ ಅನಗತ್ಯ ಕೊಬ್ಬಿನಂಶವನ್ನು ಕರಗಿಸಲು ದೈನಂದಿನ ವ್ಯಾಯಾಮವು ದೊಡ್ಡ ಪಾತ್ರವನ್ನು ವಹಿಸುತ್ತದೆ. ಧೂಮಪಾನ ಮತ್ತು ಮದ್ಯಪಾನವನ್ನು ತಪ್ಪಿಸಿ ಮತ್ತು ಒತ್ತಡ ಮುಕ್ತ ಮನೋಭಾವವನ್ನು ಹೊಂದಲು ಪ್ರಯತ್ನಿಸಿ. ಈ ಎಲ್ಲಾ ಬದಲಾವಣೆಗಳು ಆರೋಗ್ಯಕರ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ.