For Quick Alerts
ALLOW NOTIFICATIONS  
For Daily Alerts

ಭಾರತದಲ್ಲಿ ಕೊರೊನಾ ಹೆಚ್ಚಳ: ಹೋಂ ಐಸೋಲೇಷನ್‌ಗೆ 2022ರ ಗೈಡ್‌ಲೈನ್ ಹೀಗಿವೆ

|

ಈಗ ಕೊರೊನಾದ್ದೇ ಆರ್ಭಟ, ಭಾರತದಲ್ಲಿ ತುಂಬಾ ವೇಗವಾಗಿ ಕೊರೊನಾ ಹರಡುತ್ತಿದ್ದು ಇಂದು ದೇಶದಲ್ಲಿ 90,928 ಕೇಸ್‌ಗಳು ಪತ್ತೆಯಾಗಿವೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಪತ್ತೆ ಆಸ್ಪತ್ರೆಗಳಲ್ಲಿ ಬೆಡ್‌ಗಾಗಿ ಹಾಹಕಾರ ಎದುರಾಗುವ ಆತಂಕ ಎದುರಾಗಿದೆ. ಕೊರೊನಾ ಲಕ್ಷಣಗಳು ಗಂಭೀರವಾಗಿರದಿದ್ದರೆ ಮನೆಯಲ್ಲಿಯೇ ಐಸೋಲೇಷನ್ ಇದ್ದು ಚಿಕಿತ್ಸೆ ಪಡೆಯಬಹುದಾಗಿದೆ.

ಕೊರೊನಾ ಲಕ್ಷಣಗಳು ಗಂಭೀರವಾಗಿರದಿದ್ದರೆ ಅಥವಾ ಯಾವುದೇ ಲಕ್ಷಣಗಳು ಕಂಡು ಬರದಿರುವ ಕೊರೊನಾ ರೋಗಿಗಳು (asymptomatic Covid-19) ಮನೆಯಲ್ಲಿಯೇ ಚಿಕಿತ್ಸೆ ಪಡೆಯಬಹುದಾಗಿದ್ದು ಈ ಕುರಿತು ಈ ಕೇಂದ್ರ ಸರ್ಕಾರ ಕೆಲವು ಮಾರ್ಗದರ್ಶನಗಳನ್ನು ನೀಡಿದೆ:

ಯಾರು ಹೋಂ ಐಸೋಲೇಷನ್‌ನಲ್ಲಿ ಇರಬಹುದು?

ಯಾರು ಹೋಂ ಐಸೋಲೇಷನ್‌ನಲ್ಲಿ ಇರಬಹುದು?

* ರೋಗಿಗಳು ಅಲ್ಪ ರೋಗ ಲಕ್ಷಣಗಳಿವೆ ಅಥವಾ ರೋಗ ಲಕ್ಷಣಗಳಿಲ್ಲ ಎಂಬುವುದನ್ನು ವೈದ್ಯರೇ ಖಾತರಿಪಡಿಸಬೇಕು

* ಅದಾದ ಬಳಿಕ ಜಿಲ್ಲೆಯ ಕಂಟ್ರೋಲ್ ರೂಂ ಕಾಂಟ್ಯಾಕ್ಟ್ ಅಥವಾ ತಾಲೂಕು ಮಟ್ಟದ ಕಂಟ್ರೋಲ್ ಕಾಂಟ್ಯಾಕ್ಟ್ ಅನ್ನು ಕುಟುಂಬದವರಿಗೆ ನೀಡಲಾಗುವುದು. ಇವರು ಕುಟುಂಬವರಿಗೆ ಸರಿಯಾದ ಮಾಹಿತಿಯನ್ನು ನೀಡುತ್ತಾರೆ. ಯಾವ ಪರೀಕ್ಷೆ ಮಾಡಿಸಬೇಕು, ಯಾವ ಔಷಧಿಗಳನ್ನು ತೆಗೆದುಕೊಳ್ಳಬೇಕು, ಒಂದು ವೇಳೆ ರೋಗ ಲಕ್ಷಣಗಳು ಉಲ್ಬಣವಾದರೆ ಯಾವ ಆಸ್ಪತ್ರೆಗೆ ದಾಖಲಾಗಬಹುದು ಎಂಬೆಲ್ಲಾ ಮಾಹಿತಿಯನ್ನು ನೀಡಲಾಗುವುದು.

* ಐಸೋಲೇಷನ್‌ನಲ್ಲಿ ಇರುವ ರೋಗಿಯ ಮನೆಯಲ್ಲಿ ರೋಗಿಗೆ ಹೋಂ ಐಸೋಲೇಷನ್ ಆಗಲು ಪ್ರಾಥಮಿಕ ಸಂಪರ್ಕಕ್ಕೆ ಬಂದ ಕುಟುಂಬದವರು ಐಸೋಲೇಷನ್ ಆಗಲು ವ್ಯವಸ್ಥೆ ಇರಬೇಕು.

ಹೋಂ ಐಸೋಲೇಷನ್‌ನಲ್ಲಿ ಇರುವವರ ಆರೈಕೆ

ಹೋಂ ಐಸೋಲೇಷನ್‌ನಲ್ಲಿ ಇರುವವರ ಆರೈಕೆ

* ರೋಗಿಯನ್ನು ಆರೈಕೆ ಮಾಡುವ ವ್ಯಕ್ತಿ ಡಬಲ್ ಡೋಸ್‌ ಲಸಿಕೆ ಪಡೆದಿರಬೇಕು ಹಾಗೂ 24*7 ಲಭ್ಯವಿರಬೇಕು. ರೋಗಿಯನ್ನು ಆರೈಕೆ ಮಾಡುವರು ಹಾಗೂ ಮೆಡಿಕಲ್ ಆಫೀಸರ್

ಕ್ವಾರಂಟೈನ್‌ ಅವಧಿಯಲ್ಲಿ ರೋಗಿಯ ಆರೋಗ್ಯ ಸ್ಥಿತಿಯ ಬಗ್ಗೆ ಮಾಹಿತಿ ನೀಡಬೇಕು.

* 60 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಸೋಂಕು ತಗುಲಿದರೆ ಹಾಗೂ ಇತರ ಆರರೋಗ್ಯ ಸಮಸ್ಯೆ ಅಂದ್ರೆ ಕಿಡ್ನಿ ಸಮಸ್ಯೆ, ಮಧುಮೇಹ, ಶ್ವಾಸಕೋಶದ ಸಮಸ್ಯೆ, ಅಸ್ತಮಾ ಮುಂತಾದ ತೊಂದರೆ ಇರುವವರಿಗೆ ಕೋವಿಡ್ 19 ತಗುಲಿದರೆ ಅವರನ್ನು ಸರಿಯಾಗಿ ಪರೀಕ್ಷೆ ಮಾಡಿದ ಬಳಿಕ ವೈದ್ಯರು ಅನುಮತಿ ನೀಡಿದರೆ ಮಾತ್ರ ಹೋಂ ಐಸೋಲೇಷನ್‌ನಲ್ಲಿ ಇಡಬಹುದು, ಇಲ್ಲದಿದ್ದರೆ ಆಸ್ಪತ್ರೆಗೆ ದಾಖಲಿಸಬೇಕಾಗುತ್ತದೆ.

*ರೋಗ ನಿರೋಧಕ ಶಕ್ತಿ ತುಂಬಾ ಕುಗ್ಗಿಸುವ ಆರೋಗ್ಯ ಸಮಸ್ಯೆ ಇರುವವರಿಗೆ (ಏಡ್ಸ್, ಅಂಗಾಂಗ ಕಸಿ ಮಾಡಿಸಿದವರು, ಕ್ಯಾನ್ಸರ್ ಚಿಕಿತ್ಸೆ ಪಡೆದುಕೊಳ್ಳುತ್ತಿರುವವರು) ಹೋಂ ಐಸೋಲೇಷನ್‌ಗೆ ಅನುಮತಿ ಇಲ್ಲ. ಒಂದು ವೇಳೆ ಹೋಂ ಐಸೋಲೇಷನ್‌ನಲ್ಲಿ ಚಿಕಿತ್ಸೆ ಪಡೆಯುವುದಾದರೆ ಮೆಡಿಕಲ್ ಆಫಿಸರ್ ಅವರು ಅವರನ್ನು ಸಂಪೂರ್ಣವಾಗಿ ಪರೀಕ್ಷಿಸಿದ ಬಳಿಕವಷ್ಟೇ ಅನುಮತಿ ನೀಡಲಾಗುವುದು.

ಯಾವಾಗ ಹೋಂ ಐಸೋಲೇಷನ್ ಕೊನೆಯಾಗಿಸಬಹುದು?

ಯಾವಾಗ ಹೋಂ ಐಸೋಲೇಷನ್ ಕೊನೆಯಾಗಿಸಬಹುದು?

* ಕೋವಿಡ್‌ 19 ಪತ್ತೆಯಾದ 7 ದಿನಗಳ ಬಳಿಕ ಹೋಂ ಐಸೋಲೇಷನ್‌ನಿಂದ ಮುಕ್ತಿ ಪಡೆಯಬಹುದು ಆದರೆ ಆ ರೋಗಿ 3 ದಿನಗಳಿಂದ ಯಾವುದೇ ಜ್ವರ ಅಥವಾ ಇತರ ಕೋವಿಡ್‌ ಲಕ್ಷಣಗಳಿರದಿದ್ದರೆ ಹೋಂ ಐಸೋಲೇಷನ್‌ನಿಂದ ಹೊರಬರಬಹುದು.

* ಹೋಂ ಐಸೋಲೇಷನ್‌ ಆದ ಬಳಿಕ ಮತ್ತೆ ಪರೀಕ್ಷೆ ಮಾಡಬೇಕಾಗಿಲ್ಲ, ಆದರೆ ಮಾಸ್ಕ್‌ ಧರಿಸಬೇಕು.

* ರೋಗ ಲಕ್ಷಣಗಳಿಲ್ಲ ಕೋವಿಡ್ 19 ರೋಗಿಯ ಸಂಪರ್ಕಕ್ಕೆ ಬಂದವರು ಕೋವಿಡ್ 19 ಪರೀಕ್ಷೆ ಮಾಡುವುದಾಗಲಿ, ಮನೆಯಲ್ಲಿ ಕ್ವಾರಂಟೈನ್‌ ಇರುವುದಾಗಲಿ ಮಾಡಬೇಕಾಗಿಲ್ಲ.

English summary

Centre issues new guidelines for home isolation of mild, asymptomatic COVID-19 patients amid Covid Spike

Covid Home Isolation : Union Health Ministry issued revised guidelines for home isolation of mild and asymptomatic Covid-19 patients as Omicron cases surge across India.
Story first published: Thursday, January 6, 2022, 13:27 [IST]
X
Desktop Bottom Promotion