For Quick Alerts
ALLOW NOTIFICATIONS  
For Daily Alerts

ನವರಾತ್ರಿ: ಪ್ರತಿಯೊಬ್ಬ ಹೆಣ್ಣಿಗೂ ಅನ್ವಯಿಸುವ 9 ಕಟುಸತ್ಯ ಹೇಳಿದ ಸೆಲೆಬ್ರಿಟಿ ನ್ಯೂಟ್ರಿಷಿಯನ್ ರುಜುತಾ ದ್ವಿವೇಕರ್

|

ನವರಾತ್ರಿ ಸಮಯದಲ್ಲಿ ಸ್ತ್ರೀ ಶಕ್ತಿ ಸ್ವರೂಪಿಗಳಾದ ದುರ್ಗೆಯನ್ನು ಪೂಜಿಸುತ್ತೇವೆ. ದುರ್ಗೆ ದೇವಿ ನಿಮ್ಮೆಲ್ಲರಿಗೂ ಸಕಲ ಐಶ್ವರ್ಯ, ಆರೋಗ್ಯ ನೀಡಿ ಕರುಣಿಸಲಿ. ನಾವು ಈ ಲೇಖನದಲ್ಲಿ ಪ್ರಸಿದ್ಧ ಸೆಲೆಬ್ರಿಟಿ ನ್ಯೂಟ್ರಿಷಿಯನ್ ಆಗಿರು ರುಜುತಾ ದ್ವಿವೇಕರ್ ಸ್ತ್ರೀಯರಿಗೆ ಕೆಲವೊಂದು ಕಟು ಸತ್ಯಗಳ ಬಗ್ಗೆ ವಿವರಿಸಲಿದ್ದೇವೆ.

ಸ್ತ್ರೀ ಅಂದರೆ ಒಂದು ಅಗಾಧವಾದ ಶಕ್ತಿ. ಅವಳು ಮನಸ್ಸು ಮಾಡಿದರೆಯಾವುದೂ ಅಸಾಧ್ಯವಿಲ್ಲ. ಒಂದು ಮನೆಯಲ್ಲಿ ಶಾಂತ, ನೆಮ್ಮದಿ ನೆಲೆಸುವುದೇ ಸ್ತ್ರೀಯಿಂದ. ಸ್ತ್ರೀಯಲ್ಲಿ ಒಳ್ಳೆಯ ಗುಣಗಳಿದ್ದರೆ ಆ ಮನೆ ನಂದನವಾಗಿರುತ್ತೆ. ಹೆಣ್ಣಾಗಿ ಹುಟ್ಟಿ ಬೆಳೆದು ಮದುವೆಯಾಗಿ ಬೇರೆ ಮನೆಗೆ ಹೋದ ಮೇಲೆ ಎಷ್ಟೋ ಸ್ತ್ರೀಯರು ತಮ್ಮ ಅಸ್ತಿತ್ವ, ತಮ್ಮ ಆಸೆ ಎಲ್ಲವನ್ನೂ ಮರೆತು ಮಾಡುತ್ತಾರೆ. ಸದಾ ಮನೆ, ಗಂಡ, ಮಕ್ಕಳು ಅಂತ ಚಿಂತಿಸುತ್ತಾ ತಮ್ಮನ್ನೇ ತಾವು ಮರೆತು ಬಿಡುತ್ತಾರೆ.

ಕೆಲವರು ತಮ್ಮ ಮೇಲೆ ಶೋಷಣೆಯಾಗುತ್ತಿದ್ದರೂ ಪ್ರತಿಕ್ರಿಯಿಸುವುದಿಲ್ಲ. ಇನ್ನು ಕೆಲವರು ನಾನು ದಪ್ಪಗಿದ್ದೇನೆ, ಚೆನ್ನಾಗಿಲ್ಲ ಎಂದು ಕೊರಗುತ್ತಾರೆ, ಆದರೆ ರುಜುತಾ ದ್ವಿವೇಕರ್‌ ಹೇಳಿರುವ ಈ ಕಟು ಸತ್ಯಾಂಶಗಳು ನಮಗೊಂದು ನವಚೈತನ್ಯ ತುಂಬುವುದರಲ್ಲಿ ನೋ ಡೌಟ್. ಒಬ್ಬ ಹೆಣ್ಣಾಗಿ ಹೇಗೆ ಬದುಕಬೇಕು ಎಂಬ ಕಟು ಸತ್ಯಗಳನ್ನು ತಿಳಿಸುವ ಪ್ರಯತ್ನ ಮಾಡಿದ್ದಾರೆ, ಅವರು ಹೇಳಿರುವ ಪ್ರತಿಯೊಂದು ಅಂಶ ಎಲ್ಲರಿಗೂ ಅನ್ವಯಿಸುತ್ತದೆ. ಅವರು ಏನು ಹೇಳಿದ್ದಾರೆ ಎಂದು ನೋಡೋಣ ಬನ್ನಿ:

1. ವಯಸ್ಸಾಗುತ್ತಿದೆಯೇ, ಅದೊಂದು ಉಡುಗೊರೆ ಸ್ವೀಕರಿಸಿ

1. ವಯಸ್ಸಾಗುತ್ತಿದೆಯೇ, ಅದೊಂದು ಉಡುಗೊರೆ ಸ್ವೀಕರಿಸಿ

ಕೆಲವರಿಗೆ ಯಾವಾಗಲೂ ಯೌವನದಿಂದ ಇರಬೇಕೆಂಬ ಭ್ರಮೆ. ಮುಖದಲ್ಲಿ ಒಂದೆರಡು ನೆರಿಗೆ ಬಿದ್ದರೆ ನನಗೆ ವಯಸ್ಸಾಯ್ತು ಎಂಬ ಆತಂಕ. ಅವೆಲ್ಲಾ ಬಿಡಿ, ವಯಸ್ಸಾಗುತ್ತಿದೆಯೇ? ಅದೊಂದು ಗಿಫ್ಟ್ , ಸ್ವೀಕರಿಸಿ,ಖುಷಿಯಾಗಿರುವುದನ್ನು ಕಲಿಯಬೇಕು. ಎಲ್ಲಾ ವಯಸ್ಸಿನಲ್ಲೂ ಅದರದ್ದೇ ಆದ ಸೌಂದರ್ಯ ಇರುತ್ತೆ, ಪಕ್ವತೆ ಇರುತ್ತೆ ಎಂಬುವುದನ್ನು ಮರೆಯದಿರಿ.

2. ಸೌಂದರ್ಯ ಎಂಬುವುದು ಎಲ್ಲಾ ಸೈಜ್‌ನವರಲ್ಲೂ ಇರತ್ತದೆ

2. ಸೌಂದರ್ಯ ಎಂಬುವುದು ಎಲ್ಲಾ ಸೈಜ್‌ನವರಲ್ಲೂ ಇರತ್ತದೆ

ತೆಳ್ಳಗೆ ಬಳಕುವ ಬಳ್ಳಿಯಂತಿರಬೇಕು ಅಂದರೆ ಮಾತ್ರ ಸೌಂದರ್ಯ ಎಂದು ಭಾವಿಸಬೇಡಿ, ಎಲ್ಲಾ ಸೈಜ್‌ನಲ್ಲೂ ಸೌಂದರ್ಯ ಇರುತ್ತೆ, ಮೊದಲು ನಿಮ್ಮ ದೇಹವನ್ನು ನೀವು ಪ್ರೀತಿಸಿ, ಕೀಳೆರಿಮೆ ಬೇಡ್ವೆ ಬೇಡ.

3.ಯಾರಿಗೆ ಆಹಾರವನ್ನು ಎಂಜಾಯ್‌ ಮಾಡಲು ಸಾಧ್ಯವೋ ಅಂತ ಮಹಿಳೆಯರ ಸ್ನೇಹಿತರಾಗಿ

3.ಯಾರಿಗೆ ಆಹಾರವನ್ನು ಎಂಜಾಯ್‌ ಮಾಡಲು ಸಾಧ್ಯವೋ ಅಂತ ಮಹಿಳೆಯರ ಸ್ನೇಹಿತರಾಗಿ

ಆಹಾರವನ್ನು ಎಂಜಾಯ್‌ ಮಾಡಿ ಸವಿಯಬೇಕು, ಯಾರು ಆಹಾರ ತಿನ್ನಲು ಇಷ್ಟಪಡುತ್ತಾರೋ ಅವರ ಜೊತೆ ಸ್ನೇಹ ಮಾಡಿದರೆ ನೀವು ಖುಷಿಯಾಗಿ ಇರುವಿರಿ.

 4. ವಾರಕ್ಕೊಮ್ಮೆ ನಿಮಗಾಗಿ ಆಹಾರ ಸೇವಿಸಿ

4. ವಾರಕ್ಕೊಮ್ಮೆ ನಿಮಗಾಗಿ ಆಹಾರ ಸೇವಿಸಿ

ಅಡುಗೆ ಮಾಡುವಾಗ ಗಂಡನಿಗೆ ಆ ಫುಡ್ ಇಷ್ಟ, ಮಕ್ಕಳಿಗೆ ಈ ಫುಡ್‌ ಇಷ್ಟ ಎಂದು ಅವರ ಇಷ್ಟದ ಅಡುಗೆಗಳನ್ನೇ ಮಾಡುತ್ತಾರೆ. ಆದರೆ ತಮ್ಮ ಇಷ್ಟದ ಅಡುಗೆ ಬಗ್ಗೆ ಯೋಚಿಸುದೇ ಇಲ್ಲ, ಕೆಲವೊಮ್ಮೆ ತಮಗೆ ಇಷ್ಟವಿರುವ ಆಹಾರ ಮನೆಯವರಿಗೆ ಇಷ್ಟವಿಲ್ಲದಿದ್ದರೆ ಮಾಡುವುದೇ ಇಲ್ಲ. ವಾರಕ್ಕೊಮ್ಮೆ ನಿಮ್ಮ ಇಷ್ಟದ ಅಡುಗೆ ಮಾಡಿ.

5. ನಿಮ್ಮನ್ನು ಆರೈಕೆ ಮಾಡಿ

5. ನಿಮ್ಮನ್ನು ಆರೈಕೆ ಮಾಡಿ

ನಿಮ್ಮನ್ನು ಆರೈಕೆ ಮಾಡುವುದು ಎಂದರೆ ಪೆಡಿಕ್ಯೂರ್, ಮೆನಿಕ್ಯೂರ್ ಮಾಡುವುದಲ್ಲ, ನಿಮಗೆ ರೆಸ್ಟ್‌ ಬೇಕೆನಿಸಿದಾಗ ತಗೆಯಿರಿ. ಕೆಲಸ ತುಂಬಾ ಇದೆ ಅಂತ ಮಾಡುತ್ತಲೇ ಇರಬೇಡಿ.

6.ಹಣವನ್ನು ಗಳಿಸುವುದು ಹೇಗೆ ಎಂದು ಕಲಿಯಿರಿ

6.ಹಣವನ್ನು ಗಳಿಸುವುದು ಹೇಗೆ ಎಂದು ಕಲಿಯಿರಿ

ಆರ್ಥಿಕ ತಿಳುವಳಿಕೆ ಬೇಕು. ಹಣವನ್ನು ಹೇಗೆ ನಿಭಾಯಿಸುವುದು ಹಾಗೂ ಹಣವನ್ನು ಗಳಿಸುವುದು ಹೇಗೆ ಎಂದು ಕಲಿಯುವುದು ತುಂಬಾ ಮಹತ್ವವಾದ ಕಲೆ.

7. ಚೆನ್ನಾಗಿ ನಿದ್ದೆ ಮಾಡಿ

7. ಚೆನ್ನಾಗಿ ನಿದ್ದೆ ಮಾಡಿ

ಯಾರಿಗೂ, ಯಾವುದಕ್ಕೂ ನಿಮ್ಮ ನಿದ್ದೆಯನ್ನು ದೂರ ಮಾಡಬೇಡಿ. ನಿಮ್ಮ ನಿದ್ದೆಯನ್ನು ಸರಿಯಾಗಿ ಮಾಡಿ.

8. ಸೆಕ್ಸ್ ಬಗ್ಗೆ ಕೀಲೆರಿಮೆ ಬೇಡ

8. ಸೆಕ್ಸ್ ಬಗ್ಗೆ ಕೀಲೆರಿಮೆ ಬೇಡ

ಸೆಕ್ಸ್ ಎಂಬುವುದು ಕೂಡ ತುಂಬಾ ಮುಖ್ಯ, ಇದರ ಬಗ್ಗೆ ಕೀಲೆರಿಮೆ ಬೇಡ. ನಿಮ್ಮ ಪ್ರಮುಖ್ಯ ಅವಶ್ಯಕತೆಯನ್ನು ತ್ಯಾಗ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ. ನಿಮ್ಮ ಆಸಕ್ತಿ, ತೃಪ್ತಿ ಬಗ್ಗೆ ಸಂಗಾತಿ ಜೊತೆ ಮುಕ್ತವಾಗಿ ಮಾತನಾಡ.

9.ಹೇಳಬೇಕಾದ ನೋಎನ್ನಬೇಡಿ

9.ಹೇಳಬೇಕಾದ ನೋಎನ್ನಬೇಡಿ

ಬೇಡ ಎನ್ನುವ ಕಡೆ ಬೇಡ ಎಂದು ಹೇಳಿ. ನೋ ಎಂಬುವುದು ತಂಬಾ ಪವರ್‌ಫುಲ್‌, ಹೇಳಬೇಕೆನಿಸಿದ ಕಡೆ ದೈರ್ಯವಾಗಿ ಹೇಳಿ.

English summary

Celebrity nutritionist Rujuta Diwekar says 9 Hard Truth For Women In Navratri in kannada

9 Hard Truth For Women In Navratri shared by Celebrity nutritionist Rujuta Diwekar in kannada,
Story first published: Tuesday, October 4, 2022, 21:00 [IST]
X
Desktop Bottom Promotion