For Quick Alerts
ALLOW NOTIFICATIONS  
For Daily Alerts

ಇನ್ನು ಮುಂದೆ ಹೂಕೋಸಿನ ಎಲೆಗಳನ್ನ ಎಸೆಯಬೇಡಿ, ಅದರಲ್ಲಿದೆ ಅದ್ಭುತ ಆರೋಗ್ಯ ವೃದ್ಧಿಸುವ ಶಕ್ತಿ!

|

ಹೂಕೋಸು ಅಥವಾ ಕಾಲಿ ಫ್ಲವರ್ ಯಾರು ತಿಂದಿಲ್ಲ ಹೇಳಿ? ಇದ್ರಿಂದ ತಯಾರು ಮಾಡುವ ಗೋಬಿಮಂಚೂರಿ ಎಲ್ಲರಿಗೂ ಚಿರಪರಿಚಿತ ಆಗಿರುವುದರಿಂದ, ಹೆಚ್ಚಿನವರು ಹೂಕೋಸನ್ನ ಗೋಬಿ ಅಂತಾನೇ ಕರೆಯುವುದು. ಸಾಮಾನ್ಯವಾಗಿ ಹೂಕೋಸಿನಿಂದ ಏನಾದರೂ ಖಾದ್ಯ ತಯಾರಿಸುವಾಗ ಅದರ ಹೊರಗಿರುವ ಎಲೆಯನ್ನು ಎಸೆದು, ಒಳಗಿರುವ ಬಿಳಿಬಣ್ಣದ ಹೂವನ್ನಷ್ಟೇ ಬಳಕೆಮಾಡುತ್ತೇವೆ.

ಆದರೆ, ನಾವು ಎಸೆಯುವ ಈ ಹೂಕೇಸಿನ ಎಲೆಗಳು ಬಹಳಷ್ಟು ಪೌಷ್ಟಿಕವಾಗಿದ್ದು, ಉತ್ತಮ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಹಾಗಾದರೆ ಅವುಗಳಾವುವು ಎಂಬುದನ್ನು ನೋಡೋಣ.

ಹೂಕೋಸಿನ ಎಲೆಗಳಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

1.ಮಕ್ಕಳ ಸೂಕ್ತ ಬೆಳವಣಿಗೆಗೆ ಸಹಾಯ:

1.ಮಕ್ಕಳ ಸೂಕ್ತ ಬೆಳವಣಿಗೆಗೆ ಸಹಾಯ:

ಹೂಕೋಸು ಎಲೆಗಳಲ್ಲಿ ಕ್ಯಾಲ್ಸಿಯಂ ಮತ್ತು ಕಬ್ಬಿಣದಂತಹ ಪ್ರೋಟೀನ್ಗಳು ಮತ್ತು ಖನಿಜಾಂಶಗಳು ಹೆಚ್ಚಾಗಿರುತ್ತವೆ. ಇದು ಮಕ್ಕಳ ಸೂಕ್ತ ಬೆಳವಣಿಗೆಗೆ ಮುಖ್ಯವಾಗಿದೆ. ಹೂಕೋಸಿನ ಎಲೆಗಳನ್ನು ದಿನನಿತ್ಯ ಸೇವಿಸಿದಾಗ ಅಪೌಷ್ಟಿಕತೆಯ ಸಮಸ್ಯೆಯಿರುವ ಮಕ್ಕಳಿಗೆ ಅತ್ಯಂತ ಉಪಯುಕ್ತವಾಗಿದೆ. ಇದು ಅವರ ಎತ್ತರ, ತೂಕ ಮತ್ತು ಹಿಮೋಗ್ಲೋಬಿನ್ ಹೆಚ್ಚಳಕ್ಕೆ ಸಹಾಯ ಮಾಡುತ್ತದೆ.

2. ಪೋಷಕಾಂಶಗಳ ಕೊರತೆ ನಿವಾರಣೆ:

2. ಪೋಷಕಾಂಶಗಳ ಕೊರತೆ ನಿವಾರಣೆ:

ನಮ್ಮಲ್ಲಿ ಹೆಚ್ಚಿನವರು, ಸೂಕ್ಷ್ಮ ಪೋಷಕಾಂಶಗಳ ಕೊರತೆಯಿಂದ ಬಳಲುತ್ತಿದ್ದಾರೆ. ನಮ್ಮ ಕಳಪೆ ಆಹಾರ ಪದ್ಧತಿ, ಕಬ್ಬಿಣ, ಕ್ಯಾಲ್ಸಿಯಂ ಮತ್ತು ವಿಟಮಿನ್‌ಗಳ ಕಾರಣದಿಂದಾಗಿ, ಉತ್ತಮವಾದ ಕುಟುಂಬಗಳ ಮಕ್ಕಳು ಮತ್ತು ವಯಸ್ಕರಲ್ಲಿ ಕೂಡ ಈ ಕೊರತೆಗಳು ಆಗಾಗ್ಗೆ ಕಂಡುಬರುತ್ತವೆ. ಇಂದಿನ ಜಗತ್ತಿನಲ್ಲಿ, ನಾವು ಹೆಚ್ಚಾಗಿ ಸಂಸ್ಕರಿಸಿದ ಮತ್ತು ತ್ವರಿತ ಆಹಾರಗಳ ಮೇಲೆ ಅವಲಂಬಿತರಾಗಿದ್ದೇವೆ, ಅವು ರುಚಿಕರವಾಗಿರುತ್ತವೆ, ನಮ್ಮ ಹಸಿವನ್ನು ಪೂರೈಸುತ್ತವೆ ಮತ್ತು ಕೊಬ್ಬು, ಕಾರ್ಬೋಹೈಡ್ರೇಟ್‌ಗಳು ಮತ್ತು ಪ್ರೋಟೀನ್‌ನಂತಹ ಮ್ಯಾಕ್ರೋನ್ಯೂಟ್ರಿಯಂಟ್‌ಗಳನ್ನು ಒದಗಿಸುತ್ತವೆ, ಆದರೆ ಫೈಬರ್, ವಿಟಮಿನ್ ಮತ್ತು ಖನಿಜಗಳ ಕೊರತೆಯನ್ನು ಹೊಂದಿರುತ್ತದೆ. ಇದನ್ನು ಹೋಗಲಾಡಿದಲು ಸಹಕಾರಿ.

3. ರಕ್ತಹೀನತೆ ತಡೆಯಲು:

3. ರಕ್ತಹೀನತೆ ತಡೆಯಲು:

ಹೂಕೋಸು ಎಲೆಯು ಕಬ್ಬಿಣದ ಉತ್ತಮ ಮೂಲವಾಗಿದ್ದು, ಮಕ್ಕಳು, ಹದಿಹರೆಯದ ಹುಡುಗಿಯರು ಮತ್ತು ಮಹಿಳೆಯರಲ್ಲಿ ರಕ್ತಹೀನತೆಯನ್ನು ತಡೆಗಟ್ಟಲು ಮತ್ತು ಚಿಕಿತ್ಸೆ ನೀಡಲು ಉತ್ತಮ ಆಯ್ಕೆಯಾಗಿದೆ. ರಕ್ತಹೀನತೆಯ ಚಿಕಿತ್ಸೆಯಲ್ಲಿ ಹೂಕೋಸಿನ ಎಲೆ ಸಹಾಯ ಮಾಡುತ್ತದೆ ಎಂದು ಅನೇಕ ವೈಜ್ಞಾನಿಕ ಅಧ್ಯಯನಗಳು ತೋರಿಸಿವೆ.

4. ಕಣ್ಣಿನ ಆರೋಗ್ಯಕ್ಕಾಗಿ:

4. ಕಣ್ಣಿನ ಆರೋಗ್ಯಕ್ಕಾಗಿ:

ನಮ್ಮ ದೇಶದಲ್ಲಿ, ವಿಟಮಿನ್ ಎ ಕೊರತೆ (VAD) ಆರೋಗ್ಯ ಸಮಸ್ಯೆಯಾಗಿದೆ. ಪ್ರಪಂಚದಾದ್ಯಂತ 5.2 ಮಿಲಿಯನ್ ಮಕ್ಕಳು ಮತ್ತು 9.8 ಮಿಲಿಯನ್ ಗರ್ಭಿಣಿಯರ ಮೇಲೆ ಇರುಳು ಕುರುಡುತನವು ಪರಿಣಾಮ ಬೀರಿದೆ. ಹೂಕೋಸು ಎಲೆಗಳು ಸೀರಮ್ ರೆಟಿನಾಲ್ ಮಟ್ಟವನ್ನು ಪರಿಣಾಮಕಾರಿಯಾಗಿ ಹೆಚ್ಚಿಸಿ, ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ಇರುಳುಕುರುಡುತನವನ್ನು ತಡೆಯಲು ಪ್ರಯೋಜನಕಾರಿಯಾಗಿದೆ.

5. ದೀರ್ಘಕಾಲದ ಅಪಾಯ ಕಡಿಮೆಮಾಡುವುದು:

5. ದೀರ್ಘಕಾಲದ ಅಪಾಯ ಕಡಿಮೆಮಾಡುವುದು:

ಹೂಕೋಸು ಎಲೆಯಲ್ಲಿ ಉತ್ಕರ್ಷಣ ನಿರೋಧಕಗಳು ಅಧಿಕವಾಗಿರುವುದರಿಂದ, ಇದು ನಮ್ಮನ್ನು ಸ್ವತಂತ್ರ ರಾಡಿಕಲ್ ಹಾನಿ ಮತ್ತು ಆಕ್ಸಿಡೇಟಿವ್ ಒತ್ತಡದಿಂದ ರಕ್ಷಿಸುತ್ತದೆ, ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

6.ಉತ್ತಮ ಮೂಳೆಗಾಗಿ:

6.ಉತ್ತಮ ಮೂಳೆಗಾಗಿ:

ಹೂಕೋಸಿನ ಎಲೆಯಲ್ಲಿ ಹೆಚ್ಚಿನ ಕ್ಯಾಲ್ಸಿಯಂ ಇದ್ದು, ಮಧ್ಯವಯಸ್ಕ ಮತ್ತು ಮುಟ್ಟುನಿಂತ ಮಹಿಳೆಯರಿಗೆ ಇದು ಪ್ರಯೋಜನಕಾರಿಯಾಗಿದೆ. ಹೆಚ್ಚಿನ ಕ್ಯಾಲ್ಸಿಯಂ ಅಂಶದಿಂದಾಗಿ, ಈ ಸೊಪ್ಪುಗಳು ಆಸ್ಟಿಯೊಪೊರೋಸಿಸ್ ಮತ್ತು ಇತರ ಮೂಳೆ ಸಂಬಂಧಿತ ಅಸ್ವಸ್ಥತೆಗಳನ್ನು ತಡೆಯುವ ಸಾಮರ್ಥ್ಯವನ್ನು ಹೊಂದಿವೆ.

FAQ's
  • ಹೂಕೋಸನ್ನು ಸರಿಯಾಗಿ ಸ್ವಚ್ಛಗೊಳಿಸುವುದು ಹೇಗೆ?

    ಮೊದಲು ಹರಿಯುವ ನೀರಿನಡಿಯಲ್ಲಿ ಹೂಕೋಸ ಹಿಡಿಯಿರಿ. ನಂತರ ಉಪ್ಪು ಹಾಕಿರುವ ಬೆಚ್ಚಗಿನ ನೀರಿನಲ್ಲಿ ಮುಳುಗಿಸಿ. ನಂತರ ಕತ್ತರಿಸಿ, ಕತ್ತರಿಸಿದ ಗೋಬಿಯನ್ನು 2-3 ಚಮಚ ನಿಂಬೆ ರಸ/ ವಿನೆಗರ್ ಸೇರಿಸಿದ ನೀರಿನಲ್ಲಿ ಹಾಕಿಡಿ.

  • ಹೂಕೋಸು ತಿನ್ನುವುವುದರಿಂದ ಏನು ಪ್ರಯೋಜನ?

    ಹೂಕೋಸು ಒಂದು ಕ್ರೂಸಿಫೆರಸ್ ತರಕಾರಿಯಾಗಿದ್ದು, ಇದು ನೈಸರ್ಗಿಕವಾಗಿ ಫೈಬರ್ ಮತ್ತು ಬಿ-ವಿಟಮಿನ್ ಗಳನ್ನು ಹೊಂದಿರುತ್ತದೆ. ಇದು ಉತ್ಕರ್ಷಣ ನಿರೋಧಕಗಳು ಮತ್ತು ಫೈಟೊನ್ಯೂಟ್ರಿಯಂಟ್‌ಗಳನ್ನು ಒದಗಿಸಿ, ಕ್ಯಾನ್ಸರ್‌ನಿಂದ ರಕ್ಷಿಸುತ್ತದೆ. ಜೊತೆಗೆ ತೂಕ ನಷ್ಟ ಮತ್ತು ಜೀರ್ಣಕ್ರಿಯೆಯನ್ನು ಹೆಚ್ಚಿಸಲು ಫೈಬರ್ ಅನ್ನು ಒಳಗೊಂಡಿದ್ದು, ಸ್ಮರಣಶಕ್ತಿಗೆ ಅಗತ್ಯವಾದ ಕೋಲೀನ್ ಮತ್ತು ಇತರ ಹಲವು ಪ್ರಮುಖ ಪೋಷಕಾಂಶಗಳು ಇದರಲ್ಲಿದೆ.

  • ಅತಿಯಾದ ಹೂಕೋಸು ಸೇವನೆ ಆರೋಗ್ಯಕ್ಕೆ ಹಾನಿಕಾರಕವೇ?

    ಎಲ್ಲರ ಜೀರ್ಣಶಕ್ತಿ ಭಿನ್ನವಾಗಿದ್ದರೂ, ಹೆಚ್ಚು ಹೂಕೋಸು ತಿನ್ನುವುದರಿಂದ ಅನಿಲ ಮತ್ತು ಉಬ್ಬುವಿಕೆಗೆ ಕಾರಣವಾಗಬಹುದು. ಅದಕ್ಕಾಗಿ ಸಾಕಷ್ಟು ನೀರು ಕುಡಿಯುವುದನ್ನು ಮರೆಯಬೇಡಿ.

English summary

Cauliflower Leaves Nutrition and Health Benefits in Kannada

Here we talking about Cauliflower Leaves Nutrition and Health Benefits in Kannada, read on
Story first published: Monday, September 13, 2021, 17:24 [IST]
X
Desktop Bottom Promotion