For Quick Alerts
ALLOW NOTIFICATIONS  
For Daily Alerts

ಮಹಿಳೆಯರೇ ಈ ಲಕ್ಷಣಗಳ ನಿರ್ಲಕ್ಷ್ಯ ಬೇಡ, ಕ್ಯಾನ್ಸರ್ ಆಗಿರಬಹುದು!

|

ವಯಸ್ಸಾದಂತೆ ಮಹಿಳೆಯರನ್ನು ಕಾಡುವ ಗಂಭೀರ ಸಮಸ್ಯೆಗಳಲ್ಲಿ ಕ್ಯಾನ್ಸರ್ ಅಗ್ರಸ್ಥಾನದಲ್ಲಿದೆ. ಸ್ತನ ಕ್ಯಾನ್ಸರ್, ಗರ್ಭಕೋಶ ಕ್ಯಾನ್ಸರ್, ಅಂಡಾಶಯ ಕ್ಯಾನ್ಸರ್ ಹೀಗೆ ನಾನಾ ಬಗೆಯ ಕ್ಯಾನ್ಸರ್ ಗಳಿಗೆ ಮಹಿಳೆಯರು ತುತ್ತಾಗುತ್ತಿದ್ದಾರೆ. ಪ್ರತಿಯೊಂದು ಮಹಿಳೆಯು ತನ್ನ ದೇಹದಲ್ಲಾಗುವ ಸಣ್ಣ ಬದಲಾವಣೆಗಳನ್ನು ಗಮನಿಸುತ್ತಲೇ ಇರಬೇಕು. ಏಕೆಂದರೆ ಈ ಬದಲಾವಣೆಗಳು ಕ್ಯಾನ್ಸರ್ ನ ಆರಂಭಿಕ ಲಕ್ಷಣಗಳಾಗಿರಬಹುದು. ಇವುಗಳನ್ನು ಮೊದಲೇ ಗುರುತಿಸಿದರೆ, ಆಗುವ ಅಪಾಯವನ್ನು ತಡೆಯಬಹುದು. ಆದ್ದರಿಂದ ನಿರ್ಲಕ್ಷ್ಯ ಬೇಡ, ಈ ಕೆಳಗಿನ ಲಕ್ಷಣಗಳಿದ್ದರೆ ವೈದ್ಯರನ್ನು ಸಂಪರ್ಕಿಸಿ.

ಪ್ರತಿ ಮಹಿಳೆಯೂ ಗಮನಿಸಬೇಕಾದ ಕ್ಯಾನ್ಸರ್ ಲಕ್ಷಣಗಳು ಇಲ್ಲಿವೆ:

1. ಅಸಹಜ ಯೋನಿ ರಕ್ತಸ್ರಾವ:

1. ಅಸಹಜ ಯೋನಿ ರಕ್ತಸ್ರಾವ:

ಎಂಡೊಮೆಟ್ರಿಯಲ್ ಕ್ಯಾನ್ಸರ್‌ನಿಂದ ಬಳಲುತ್ತಿರುವ 90% ಕ್ಕಿಂತ ಹೆಚ್ಚು ಮಹಿಳೆಯರು ಅನಿಯಮಿತ ರಕ್ತಸ್ರಾವವನ್ನು ಅನುಭವಿಸುತ್ತಾರೆ. ನಿಮಗೆ ಈಗಾಗಲೇ ಮುಟ್ಟು ನಿಂತಿದ್ದರೆ, ಯಾವುದೇ ರಕ್ತಸ್ರಾವವಾದರೂ ಮೌಲ್ಯಮಾಪನ ಮಾಡಬೇಕು. ಋತುಸ್ರಾವ ಆಗುತ್ತಿದ್ದರೆ, ಮುಟ್ಟಿನ ಸಮಯದಲ್ಲಿ ಆಗುವ ಅಧಿಕ ರಕ್ತಸ್ರಾವ ಅಥವಾ ಲೈಂಗಿಕ ಕ್ರಿಯೆಯ ಸಮಯದಲ್ಲಿ ರಕ್ತಸ್ರಾವ ಅನುಭವಿಸಿದರೆ ವೈದ್ಯರನ್ನು ಭೇಟಿ ಮಾಡಿ. ಇದು ಗರ್ಭಕಂಠದ ಅಥವಾ ಯೋನಿ ಕ್ಯಾನ್ಸರ್‌ನ ಸಂಕೇತವೂ ಆಗಿರಬಹುದು.

2. ತೂಕ ನಷ್ಟ:

2. ತೂಕ ನಷ್ಟ:

ನೀವು ಅಧಿಕ ತೂಕ ಅಥವಾ ಬೊಜ್ಜು ಹೊಂದಿದ್ದರೆ, ವ್ಯಾಯಾಮ, ಆರೋಗ್ಯಕರ ಆಹಾರ ಆಯ್ಕೆ ಮಾಡುವ ಮೂಲಕ ತೂಕವನ್ನು ಕಳೆದುಕೊಳ್ಳುವುದರಿಂದ ಕ್ಯಾನ್ಸರ್ ಅಪಾಯವನ್ನು ತಡೆಯಬಹುದು. ಆದರೆ ನಿಮ್ಮ ಆಹಾರ ಅಥವಾ ವ್ಯಾಯಾಮದ ಮಾಡದೇ, ಇದ್ದಕ್ಕಿದ್ದಂತೆ ಹೆಚ್ಚು ತೂಕ ಕಳೆದುಕೊಂಡರೆ, ವೈದ್ಯರನ್ನು ಸಂಪರ್ಕಿಸಿ.

3. ರಕ್ತಸಿಕ್ತ ಯೋನಿ ಡಿಸ್ಚಾರ್ಜ್:

3. ರಕ್ತಸಿಕ್ತ ಯೋನಿ ಡಿಸ್ಚಾರ್ಜ್:

ರಕ್ತಸಿಕ್ತ ಅಥವಾ ವಾಸನೆಯುಕ್ತ ವಿಸರ್ಜನೆ ಸಾಮಾನ್ಯವಾಗಿ ಸೋಂಕಿನ ಸಂಕೇತವಾಗಿದೆ. ಆದರೆ ಕೆಲವೊಮ್ಮೆ, ಇದು ಗರ್ಭಕಂಠದ, ಯೋನಿ ಅಥವಾ ಎಂಡೊಮೆಟ್ರಿಯಲ್ ಕ್ಯಾನ್ಸರ್ನ ಎಚ್ಚರಿಕೆಯ ಸಂಕೇತವಾಗಿದೆ. ಆದ್ದರಿಂದ ಇದು ಆಗಾಗ ನಡೆಯುತ್ತಿದ್ದರೆ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ.

4. ನಿರಂತರ ಆಯಾಸ:

4. ನಿರಂತರ ಆಯಾಸ:

ಬಿಡುವಿಲ್ಲದ ಜೀವನವು ಯಾರಿಗಾದರೂ ಸುಸ್ತನ್ನು ತರಬಹುದು. ಆದರೆ ಹೆಚ್ಚಿನ ಸಂದರ್ಭಗಳಲ್ಲಿ, ಸ್ವಲ್ಪ ವಿಶ್ರಾಂತಿಯು ನಿಮ್ಮ ಆಯಾಸವನ್ನು ನಿವಾರಿಸುತ್ತದೆ. ಆದರೆ ಅದೇ ಅಯಾಸ ನಿಮ್ಮ ಕೆಲಸ ಅಥವಾ ಚಟುವಟಿಕೆಗಳಲ್ಲಿ ಅಡ್ಡಮಾಡುತ್ತಿದ್ದರೆ, ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

5. ಹಸಿವು ಇಲ್ಲದಿರುವುದು:

5. ಹಸಿವು ಇಲ್ಲದಿರುವುದು:

ಹಸಿವೇ ಇಲ್ಲದಿರುವುದು ಅಥವಾ ಸದಾ ಹೊಟ್ಟೆ ತುಂಬಿದಂತೆ ಇದೆಯೇ, ಹಾಗಾದರೆ ಸ್ವಲ್ಪ ಜಾಗರೂಕವಾಗಿರುವುದು ಒಳ್ಳೆಯದು. ಏಕೆಂದರೆ ಹಸಿವಿನ ಬದಲಾವಣೆಗಳು ಅಂಡಾಶಯದ ಕ್ಯಾನ್ಸರ್ ಅಥವಾ ಸಂತಾನೋತ್ಪತ್ತಿ ವ್ಯವಸ್ಥೆಗೆ ಸಂಬಂಧಿಸದ ಇತರ ಕ್ಯಾನ್ಸರ್‌ಗಳ ಲಕ್ಷಣಗಳಾಗಿರಬಹುದು.

6. ಸೊಂಟ ಅಥವಾ ಹೊಟ್ಟೆಯ ಪ್ರದೇಶದಲ್ಲಿ ನೋವು:

6. ಸೊಂಟ ಅಥವಾ ಹೊಟ್ಟೆಯ ಪ್ರದೇಶದಲ್ಲಿ ನೋವು:

ನಡೆಯುತ್ತಿರುವಾಗ ಹೊಟ್ಟೆ ನೋವು ಅಥವಾ ಸೊಂಟದ ಬಳಿ ನೋವಾಗುತ್ತದ್ದರೆ ನಿರ್ಲಕ್ಷ್ಯ ಬೇಡ. ಏಕೆಂದರೆ ಗ್ಯಾಸ್, ಅಜೀರ್ಣ, ಒತ್ತಡ, ಉಬ್ಬುವಿಕೆ ಮತ್ತು ಸೆಳೆತಗಳು ಅಂಡಾಶಯ ಅಥವಾ ಎಂಡೊಮೆಟ್ರಿಯಲ್ ಕ್ಯಾನ್ಸರ್ ಅನ್ನು ಸೂಚಿಸುತ್ತದೆ.

7. ಪದೇ ಪದೇ ಮೂತ್ರವಿಸರ್ಜನೆ:

7. ಪದೇ ಪದೇ ಮೂತ್ರವಿಸರ್ಜನೆ:

ಇದ್ದಕ್ಕಿದ್ದಂತೆ ಯಾವುದೇ ದ್ರವ ಆಹಾರಗಳನ್ನು ಹೆಚ್ಚು ಕುಡಿಯದೇ ಅಥವಾ ಗರ್ಭಿಣಿಯೂ ಇಲ್ಲದೇ, ನೀವು ಪದೇ ಪದೇ ಮೂತ್ರವಿರ್ಸಜನೆ ಅನುಭವಿಸುತ್ತಿದ್ದರೆ, ಎಚ್ಚರವಾಗಿರಿ. ಇದು ಕ್ಯಾನ್ಸರ್ ನ ಲಕ್ಷಣವಾಗಿರಬಹುದು.

8. ನಿರಂತರ ಅಜೀರ್ಣ ಅಥವಾ ವಾಕರಿಕೆ:

8. ನಿರಂತರ ಅಜೀರ್ಣ ಅಥವಾ ವಾಕರಿಕೆ:

ನಿರಂತರ ಅಜೀರ್ಣ ಅಥವಾ ವಾಕರಿಕೆ ಸ್ತ್ರೀರೋಗ ಕ್ಯಾನ್ಸರ್ ಅನ್ನು ಸೂಚಿಸುತ್ತದೆ. ಆದ್ದರಿಂದ ಏನಾದರೂ ತಿನ್ನವಾಗ ವಾಕರಿಕೆ ಅಥವಾ ಅಸಹ್ಯ ಭಾವನೆ ಮೂಡುತ್ತಿದ್ದರೆ ಪರೀಕ್ಷೆ ಮಾಡಿಸಿ.

9. ಸ್ತನಗಳಲ್ಲಿ ಬದಲಾವಣೆಗಳು:

9. ಸ್ತನಗಳಲ್ಲಿ ಬದಲಾವಣೆಗಳು:

ಸ್ನಾನ, ಶೇವಿಂಗ್ ಅಥವಾ ಸ್ಕ್ರಾಚಿಂಗ್‌ನಂತಹ ದಿನನಿತ್ಯದ ಚಟುವಟಿಕೆಗಳಲ್ಲಿ ಹೆಚ್ಚಿನ ಸ್ತನ ಕ್ಯಾನ್ಸರ್‌ಗಳನ್ನು ಮಹಿಳೆಯರೇ ಪತ್ತೆ ಮಾಡುತ್ತಾರೆ. ಸ್ತನ ಅಥವಾ ಕಂಕುಳಿನಡಿಯಲ್ಲಿನ ಗಡ್ಡೆಗಳ ಬಗ್ಗೆ ಎಚ್ಚರದಿಂದಿರಿ. ನಿಮ್ಮ ಸ್ತನಗಳ ಚರ್ಮದ ಬಣ್ಣ ಬದಲಾವಣೆಗಳು, ಸ್ತನಗಳ ನೋಟ ಮೊದಲಾದ ಅಸಹಜತೆಗಳ ಬಗ್ಗೆಯೂ ಗಮನವಿರಲಿ.

ಮೇಲಿನ ಒಂದು ಅಥವಾ ಹೆಚ್ಚಿನ ರೋಗಲಕ್ಷಣಗಳನ್ನು ಹೊಂದಿದ್ದರೆ ನಿಮಗೆ ಕ್ಯಾನ್ಸರ್ ಇದೆ ಎಂದರ್ಥವಲ್ಲ. ಆದರೆ ಅವುಗಳು ಎರಡು ವಾರ ಅಥವಾ ಅದಕ್ಕಿಂತ ಹೆಚ್ಚು ಕಾಲ ಇದ್ದರೆ, ವೈದ್ಯರನ್ನು ಭೇಟಿ ಮಾಡಿ.

FAQ's
  • ಭಾರತೀಯ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುವ ಕ್ಯಾನ್ಸರ್ ಯಾವುದು?

    ಮಹಿಳೆಯರಲ್ಲಿ ಕಂಡುಬರುವ ಕ್ಯಾನ್ಸರ್ ಗಳಲ್ಲಿ ಹೆಚ್ಚಿನ ಪಾಲು ಸ್ತನ ಕ್ಯಾನ್ಸರ್ ದ್ದೇ ಆಗಿರುತ್ತದೆ. ಆದ್ದರಿಂದ ಸ್ತನಗಳಲ್ಲಿ ಗಡ್ಡೆ ರೀತಿಯ ಅನುಭವವಾದರೆ ಅಥವಾ ಅದರ ಬಣ್ಣದಲ್ಲಿ ವ್ಯತ್ಯಾಸದ ಜೊತೆಗೆ ಯಾವುದೇ ಸಣ್ಣ ಬದಲಾವಣೆ ಕಂಡರೂ ವೈದ್ಯರನ್ನು ಸಂಪರ್ಕಿಸಿ.

     

  • ಅತೀ ಹೆಚ್ಚು ಸಾವಿಗೆ ಕಾರಣವಾಗುವ ಕ್ಯಾನ್ಸರ್ ಯಾವುದು?

    ನಮ್ಮ ದೇಶದಲ್ಲಿ ಅತೀ ಹೆಚ್ಚು ಸಾವಿಗೆ ಕಾರಣವಾಗುವ ಕ್ಯಾನ್ಸರ್ ನಲ್ಲಿ ಶ್ವಾಸಕೋಶ ಕ್ಯಾನ್ಸರ್ ಅಗ್ರಸ್ಥಾನದಲ್ಲಿದೆ. ಒಟ್ಟು ಕ್ಯಾನ್ಸರ್ ನಿಂದ ಸಾಯುವವವರಲ್ಲಿ ಸುಮಾರು ಶೇ18ರಷ್ಟು ಜನ ಶ್ವಾಸಕೋಶ ಕ್ಯಾನ್ಸರ್ ನಿಂದ ಸಾವನ್ನಪ್ಪುತ್ತಿದ್ದಾರೆ. ತದನಂತರದಲ್ಲಿ ಲಿವರ್ ಕ್ಯಾನ್ಸರ್ ಅಂದರೆ ಸುಮಾರು ಶೇ9ರಷ್ಟು ಸಾವುಗಳು ವರದಿಯಾಗುತ್ತಿವೆ.

  • ಪ್ರತಿಯೊಂದು ಕ್ಯಾನ್ಸರ್ ನಲ್ಲೂ ಸಾಮಾನ್ಯ ಲಕ್ಷಣ ಯಾವುದು?

    ಯಾವುದೇ ಕ್ಯಾನ್ಸರ್ ಆದರೂ, ಪ್ರತಿಯೊಬ್ಬರಲ್ಲೂ ಕಂಡುಬರುವ ಅತ್ಯಂತ ಸಾಮಾನ್ಯ ಲಕ್ಷಣ ಎಂದರೆ, ನೋವು ಹಾಗೂ ಆಯಾಸ. ಇವುಗಳು ವ್ಯಕ್ತಿಯ ದೈನಂದಿನ ಚಟುವಟಿಕೆಯ ಮೇಲೆ ಸಾಕಷ್ಟು ಅಡ್ಡಿಮಾಡುತ್ತವೆ.

     

English summary

Cancer Symptoms Women shouldn't Ignore in Kannada

The warning signs of gynecologic cancers can be vague and similar to those of other conditions. That's why it’s important to know what to look for.Here we talking about Cancer symptoms women shouldn't ignore in Kannada, read on
Story first published: Friday, September 3, 2021, 17:46 [IST]
X
Desktop Bottom Promotion