For Quick Alerts
ALLOW NOTIFICATIONS  
For Daily Alerts

ಪಿರಿಯಡ್ಸ್ ಸಮಯದಲ್ಲಿ ಹೋಳಿಯಾಡಬಹುದೇ?

|

ಈ ವರ್ಷ ಮಾರ್ಚ್ 8ರಂದು ಹೋಳಿ ಹಬ್ಬವನ್ನು ಆಚರಿಸಲಾಗುವುದು. ಹೋಳಿ ಎಂದರೆ ರಂಗಿನ ಹಬ್ಬ, ಈ ದಿನದಂದು ಪರಸ್ಪರ ರಂಗು-ರಂಗಿನ ಬಣ್ಣ ಎರಚಾಡುತ್ತಾ ನಲಿದು ಸಂಭ್ರಮಿಸುವ ದಿನ.

Can We Play Holi During Periods

ಈ ಸಂತೋಷದ ದಿನವನ್ನು ಸೂಪರ್‌ ಆಗಿ ಸೆಲೆಬ್ರೇಟ್ ಮಾಡಬೇಕು, ಬಣ್ಣದ ಓಕುಳಿಯಲ್ಲಿ ಮಿಂದು ಏಳಬೇಕು ಎಂದು ಬಯಸಿರುವಾಗ ಪಿರಿಯಡ್ಸ್ ಅಥವಾ ಮುಟ್ಟಾದಾಗ ಗಾಳಿಯೂದಿದ ಬಲೂನ್‌ ಟಪ್‌ ಅಂತ ಒಡೆದಂತೆ ನಿರಾಸೆಯಾಗುವುದು.

ಮಹಿಳೆಯರು ಮುಟ್ಟಾದಾಗ ಹೋಳಿಯಾಡಬಹುದೇ? ಎಂಬ ಪ್ರಶ್ನೆ ಕೆಲವರಲ್ಲಿ ಇರುತ್ತದೆ. ಖಂಡಿತ ಆಡಬಹುದು, ಆದರೆ ಆ ಸಮಯದಲ್ಲಿ ಬಣ್ಣದ ನೀರಿನಲ್ಲಿ ಕುಣಿದು ಕುಪ್ಪಳಿಸುವಾಗ ಎಲ್ಲಿ ರಕ್ತ ಕಲೆ ಕಾಣುವುದೋ ಅಥವಾ ಪ್ಯಾಡ್‌ ಜಾರುವುದೋ ಎಂಬ ಭಯ ಉಂಟಾಗುವುದು. ಆದ್ದರಿಂದ ಹಿಂಜರಿದು ಬಿಡುತ್ತಾರೆ. ಹೋಳಿಯಾಡಬೇಕೆಂಬ ಆಸೆಗೆ ನಿರಾಸೆ ಉಂಟಾಗುವುದು.

ಈ ಹೋಳಿಗೆ ಮುಟ್ಟಿನ ಕಿರಿಕಿರಿಯಿಲ್ಲದೆ ಹೋಳಿ ಸಂಭ್ರಮಿಸಲು ಬಯಸುವುದಾದರೆ ಈ ಟಿಪ್ಸ್ ಖಂಡಿತ ನಿಮಗೆ ಸಹಕಾರಿ:

1. ಮೊದಲೇ ಪ್ಲ್ಯಾನ್‌ ಮಾಡಿ

1. ಮೊದಲೇ ಪ್ಲ್ಯಾನ್‌ ಮಾಡಿ

ನೀವು ಹೋಳಿಯಾಡುವಾಗ ಯಾವ ಬಟ್ಟೆ ಧರಿಸಬೇಕೆಂದು ಮೊದಲೇ ಪ್ಲ್ಯಾನ್ ಮಾಡಿ. ಹೋಳಿಯಾಡುವಾಗ ಎಕ್ಸ್ಟ್ರಾ ಬಟ್ಟೆ, ಪ್ಯಾಡ್‌, ಒಳ ಉಡುಪು ಇವುಗಳನ್ನು ಒಂದು ಬ್ಯಾಗ್‌ನಲ್ಲಿ ಕೊಂಡೊಯ್ಯಿರಿ. ನೀವು ಮನೆಯಲ್ಲಿ ಹೋಳಿಯಾಡುವುದಾದರೆ ಒಕೆ ಇಲ್ಲದಿದ್ದರೆ ಹೋಳಿಯಾಡುವ ಜಾಗದಲ್ಲಿ ರೆಸ್ಟೋರೂಂ ಇದೆಯೇ ಎಂದು ನೋಡಿ.

2. ಟ್ಯಾಂಫೂನ್‌ ಬಳಸಿ

2. ಟ್ಯಾಂಫೂನ್‌ ಬಳಸಿ

ಟ್ಯಾಂಫೂನ್‌ ಅಥವಾ ಮೆನ್‌ಸ್ಟ್ರಲ್‌ ಕಪ್ ಬಳಸಿ. ಇದರಿಂದ ಯಾವುದೇ ಕಿರಿಕಿರಿಯಿಲ್ಲದೆ ಹೋಳಿ ಆಚರಣೆ ಮಾಡಬಹುದು.

3. ಪ್ಯಾಡ್‌ ಬಳಸುವುದಾದರೆ ಸರಿಯಾದ ಗಾತ್ರದ ಪ್ಯಾಡ್‌ ಬಳಸಿ

3. ಪ್ಯಾಡ್‌ ಬಳಸುವುದಾದರೆ ಸರಿಯಾದ ಗಾತ್ರದ ಪ್ಯಾಡ್‌ ಬಳಸಿ

ಸೈಜ್‌ ಸರಿಯಾದ ಗಾತ್ರದಲ್ಲಿ ಇಲ್ಲದಿದ್ದರೆ ಪ್ಯಾಡ್‌ ಜರಬಹುದು, ಆದ್ದರಿಂದ ಸರಿಯಾ ಗಾತ್ರದ ಪ್ಯಾಡ್‌ ಧರಿಸಿ, ಎರಡು ಪ್ಯಾಂಟೀಸ್ ಧರಿಸಿ. ಇದರಿಂದ ಪ್ಯಾಡ್‌ ಜಾರುತ್ತೆ ಎಂಬ ಭಯವಿರುವುದಿಲ್ಲ. ಅಲ್ಲದೆ ಬೇನೆ ಒಣಗುವ ಬಟ್ಟೆ ಧರಿಸಿ.

4. ತುಂಬಾ ರಾಸಾಯನಿಕವಿರುವ ಬಣ್ಣಗಳಲ್ಲಿ ಆಡಬೇಡಿ

4. ತುಂಬಾ ರಾಸಾಯನಿಕವಿರುವ ಬಣ್ಣಗಳಲ್ಲಿ ಆಡಬೇಡಿ

ನೈಸರ್ಗಿಕ ಬಣ್ಣಗಳಲ್ಲಿ ಹೋಳಿಯಾಡಿ, ಮುಟ್ಟಿನ ಸಮಯದಲ್ಲಿ ದೇಹ ಸ್ವಲ್ಪ ಸೂಕ್ಷ್ಮವಿರುತ್ತೆ, ಅಲರ್ಜಿ ಉಂಟಾಗಬಹುದು.

5. ದೇಹದಲ್ಲಿ ನೀರಿನಂಶ ಕಾಪಾಡಿ

5. ದೇಹದಲ್ಲಿ ನೀರಿನಂಶ ಕಾಪಾಡಿ

ಹೋಳಿಯಾಡುವುದರಿಮದ ದೇಹದಲ್ಲಿ ನೀರಿನಂಶ ಕಡಿಮೆಯಾಗುವುದು, ಇದರಿಂದ ಕಿಬ್ಬೊಟಟೆ ನೋವು ಹೆಚ್ಚುವುದು, ಆದ್ದರಿಂದ ಸಾಕಷ್ಟು ನೀರು ಕುಡಿಯಿರಿ, ಅಲ್ಲದೆ ಈ ಸಮಯದಲ್ಲಿ ತುಂಬಾ ಹುಳಿ ಅಥವಾ ಖಾರದ ಪದಾರ್ಥಗಳನ್ನು ತಿನ್ನಬೇಡಿ.

6. ಹದ ಬಿಸಿ ನೀರಿನಲ್ಲಿ ಸ್ನಾನ ಮಾಡಿ

6. ಹದ ಬಿಸಿ ನೀರಿನಲ್ಲಿ ಸ್ನಾನ ಮಾಡಿ

ಹೋಳಿಯಾಡಿದ ಮೇಲೆ ತಕ್ಷಣವೇ ಹದ ಬಿಸಿ ನೀರಿನಲ್ಲಿ ಸ್ನಾನ ಬಟ್ಟೆ ಒಣ ಬಟ್ಟೆ ಧರಿಸಿ, ಆಗ ಫ್ರೆಷ್ ಅನಿಸುವುದು, ಅಲ್ಲದೆ ಬಿಸಿ ನೀರಿನಲ್ಲಿ ಸ್ನಾನ ಮಾಡುವುದರಿಂದ ಸೋಂಕಿನ ಅಪಾಯ ಕಡಿಮೆ.

ತ್ವಚೆ ರಕ್ಷಣೆ ಮಾಡಿದಂತಾಗುವುದು, ಬಿಸಿ ನೀರಿನಲ್ಲಿ ಸ್ನಾನ ಮಾಡಿದ ನಂತರ ಮಾಯಿಶ್ಚರೈಸರ್ ಹಚ್ಚಿ.

English summary

Can We Play Holi During Periods

Can we play holi during periods, here is tips, read on...
X
Desktop Bottom Promotion