For Quick Alerts
ALLOW NOTIFICATIONS  
For Daily Alerts

ಮುಟ್ಟಿನ ಸಮಯದಲ್ಲಿ ಮೊಸರು ತಿನ್ನಬಹುದೇ?

|

ಮಹಿಳೆಯರಿಗೆ ತಿಂಗಳ ಆ ದಿನಗಳು ತುಂಬಾನೇ ಕಿರಿಕಿರಿ ಅನಿಸುವುದು, ಕಿಬ್ಬೊಟ್ಟೆ ನೋವು, ಹೊಟ್ಟೆ ಉಬ್ಬಿದಂತೆ ಅನಿಸುವುದು, ಮೂಡ್‌ ಬದಲಾವಣೆ, ಕೆಲವೊಮ್ಮೆ ಅಧಿಕ ರಕ್ತಸ್ರಾವ ಇವೆಲ್ಲಾ ತುಂಬಾನೇ ಕಿರಿಕಿರಿ ಅನಿಸುವುದು. ಈ ಸಮಯದಲ್ಲಿ ಕೆಲವೊಂದು ಆಹಾರಗಳನ್ನು ತಿನ್ನದಿರುವುದು ಒಳ್ಳೆಯದು. ಉದಾಹರಣೆಗೆ ಮೊಟ್ಟೆ, ಹುಳಿ. ಹುಳಿ ರಕ್ತಸ್ರಾವ ಹೆಚ್ಚಿಸುತ್ತದೆ, ಮೊಟ್ಟೆ ತಿಂದರೆ ಕೆಟ್ಟ ವಾಸನೆ ಬೀರುವುದು, ಇನ್ನು ಕೆಲವೊಂದು ಆಹಾರಗಳು ಹೊಟ್ಟೆ ನೋವು ಕಡಿಮೆ ಮಾಡುವುದು ಉದಾಹರಣೆಗೆ ಜೀರಿಗೆ ನೀರು, ಎಳನೀರು. ಹೊಟ್ಟೆ ನೋವು ಇದ್ದರೆ ಇವುಗಳನ್ನು ಸೇವಿಸಿದರೆ ಸಾಕು ಕಡಿಮೆಯಾಗುವುದು.

ಹಾಗಾಗಿ ಮುಟ್ಟಿನ ಸಮಯದಲ್ಲಿ ಯಾವ ಆಹಾರ ತಿನ್ನಬೇಕು, ಯಾವುದು ತಿನ್ನಬಾರದು ಎಂದು ತಿಳಿದುಕೊಂಡರೆ ಒಳ್ಳೆಯದು. ನಾವಿಲ್ಲಿ ಮುಟ್ಟಿನ ಸಮಯದಲ್ಲಿ ಮೊಸರು ಸೇವನೆ ಮಾಡಬಹುದೇ, ಇಲ್ಲವೇ ಎಂಬುವುದರ ಬಗ್ಗೆ ಮಾಹಿತಿ ನೀಡಿದ್ದೇವೆ ನೋಡಿ:

ಮುಟ್ಟಿನ ಸಮಯದಲ್ಲಿ ಮೊಸರು ತಿನ್ನಬಹುದೇ?

ಮುಟ್ಟಿನ ಸಮಯದಲ್ಲಿ ಮೊಸರು ತಿನ್ನಬಹುದೇ?

ಮುಟ್ಟಿನ ಮಸಯದಲ್ಲಿ ನೀವು ಮೊಸರನ್ನು ತಿನ್ನಬಹುದು. ಮೊಸರಿನಲ್ಲಿ ಕ್ಯಾಲ್ಸಿಯಂ ಅಧಿಕವಿದ್ದು ಇದು ನಿಮ್ಮ ದೇಹವನ್ನು ಬಲಪಡಿಸುತ್ತೆ, ಅಲ್ಲದೆ ಜೀರ್ಣಕ್ರಿಯೆಗೆ ತುಂಬಾನೇ ಒಳ್ಳೆಯದು. ಮುಟ್ಟಿನ ಸಮಯದಲ್ಲಿ ಮೊಸರು ತಿಂದರೆ ಸ್ನಾಯು ಸೆಳೆತ ಕಡಿಮೆಯಾಗುವುದು ಹಾಗೂ ಒತ್ತಡ, ಆತಂಕ ಕಡಿಮೆಯಾಗುವುದು.

ಹುಳಿ ಪದಾರ್ಥಗಳನ್ನು ಮುಟ್ಟಿನ ಸಮಯದಲ್ಲಿ ತಿನ್ನಬಾರದು ಎಂದು ಹೇಳಲಾಗುವುದು, ಆದರೆ ಮೊಸರು ಸೇವನೆ ಮಾಡಬಹುದು, ಇದು ಹೊಟ್ಟೆಯ ಆರೋಗ್ಯಕ್ಕೆ ಒಳ್ಲೆಯದು, ಮುಟ್ಟಿನ ಸಮಯದಲ್ಲಿ ಹೊಟ್ಟೆ ಉಬ್ಬುವುದು, ಮಲಬದ್ಧತೆ ಸಮಸ್ಯೆ ಉಂಟಾಗುತ್ತಿದ್ದರೆ ಮೊಸರು ಸೇವಿಸಿ.

ಮೊಸರು ಸೇವಿಸಲು ಇಷ್ಟಪಡದಿದ್ದರೆ ಲಸ್ಸಿ ಮಾಡಿ ಅಥವಾ ಮಜ್ಜಿಗೆ ಮಾಡಿ ಕುಡಿಯಬಹುದು.

ರಾತ್ರಿ ಹೊತ್ತಿನಲ್ಲಿ ಮೊಸರು ಸೇವಿಸಬಾರದು ಏಕೆ?

ರಾತ್ರಿ ಹೊತ್ತಿನಲ್ಲಿ ಮೊಸರು ಸೇವಿಸಬಾರದು ಏಕೆ?

ಮೊಸರನ್ನು ಹಗಲು ಹೊತ್ತಿನಲ್ಲಿ ಯಾವಾಗ ಬೇಕಾದರೂ ಸೇವಿಸಬಹುದು, ಆದರೆ ರಾತ್ರಿ ಹೊತ್ತಿನಲ್ಲಿ ಸೇವಿಸಬೇಡಿ. ರಾತ್ರಿ ಹೊತ್ತಿನಲ್ಲಿ ಸೇವಿಸಿದರೆ ಕಫದ ಸಮಸ್ಯೆ ಹೆಚ್ಚುವುದು. ಅಸ್ತಮಾ ಇರುವವರು ನೊಸರು ಸೇವಿಸಬೇಡಿ.

ರಾತ್ರಿ ಹೊತ್ತಿನಲ್ಲಿ ಮೊಸರು ಸೇವಿಸುವುದಾದರೆ ಹೇಗೆ ಸೇವಿಸಬೇಕೆ?

ಏನೂ ಆರೋಗ್ಯ ಸಮಸ್ಯೆ ಇಲ್ಲದಿದ್ದರೆ ರಾತ್ರಿ ಹೊತ್ತಿನಲ್ಲಿ ಮೊಸರು ಸೇವಿಸಬಹುದು, ಸೇವಿಸುವುದಾದರೆ ಅದರಲ್ಲಿ ಸ್ವಲ್ಪ ಮೆಂತೆ ಪುಡಿ, ಕಾಳು ಮೆಣಸಿನ ಪುಡಿ ಸೇರಿಸಿ ಸೇವಿಸಿ.

ಮುಟ್ಟಿನ ಸಮಯದಲ್ಲಿ ಯಾವ ಬಗೆಯ ಆಹಾರ ಸೇವನೆ ಒಳ್ಳೆಯದಲ್ಲ?

ಮುಟ್ಟಿನ ಸಮಯದಲ್ಲಿ ಯಾವ ಬಗೆಯ ಆಹಾರ ಸೇವನೆ ಒಳ್ಳೆಯದಲ್ಲ?

* ತುಂಬಾ ಖಾರ ಪದಾರ್ಥಗಳಿಂದ ದೂರವಿರಿ

* ತುಂಬಾ ಉಪ್ಪಿನ ಪದಾರ್ಥಗಳನ್ನು ಸೇವಿಸಬೇಡಿ

* ಕಾಫಿ ಕುಡಿಯಬೇಡಿ

* ಸಂಸ್ಕರಿಸಿದ ಆಹಾರ, ಕೊಬ್ಬಿನಂಶ ಇರುವ ಆಹಾರಗಳನ್ನು ದೂರವಿಡಿ

* ಮದ್ಯ ಸೇವಿಸಬೇಡಿ

English summary

Can We Eat Curd During Periods In Kannada

Can We Eat Curd During Periods In Kannada, Read on...
Story first published: Monday, January 31, 2022, 12:22 [IST]
X
Desktop Bottom Promotion