For Quick Alerts
ALLOW NOTIFICATIONS  
For Daily Alerts

ಮೂತ್ರ ವಿಸರ್ಜನೆ ಬಳಿಕ ಉರಿ ಅನುಭವ: ಕಾರಣವೇನು, ಚಿಕಿತ್ಸೆಯೇನು?

|

ಮಹಿಳೆಯರಿಗೆ ಮೂತ್ರ ಸೋಂಕು (UTI)ಎಂಬುವುದು ಸಾಮಾನ್ಯವಾಗಿ ಕಾಡುವ ಸಮಸ್ಯೆಯಾಗಿದೆ. ಗಾಯ ಅಥವಾ ಸೋಂಕಿನ ಕಾರಣದಿಂದಾಗಿ ಹೆಚ್ಚಾಗಿ ಈ ರೀತಿಯ ಸಮಸ್ಯೆ ಉಂಟಾಗುವುದು. ಸಾಮಾನ್ಯವಾಗಿ ಮೂತ್ರ ಸೋಂಕು ಈ ಕಾರಣಗಳಿಂದಾಗಿ ಉಂಟಾಗುವುದು
* ಲೈಂಗಿಕ ಸೋಂಕು (STI)
* ಮೂತ್ರ ನಾಳಕ್ಕೆ ಹಾನಿಯುಂಟಾಗಿದ್ದರೆ
* ಊತ
* ಸರ್ಜರಿ
* ಇತ್ತೀಚೆಗೆ ಕ್ಯಾಥೆಟರ್‌ ಬಳಸಿದ್ದರೆ

ಮೂತ್ರ ಸೋಂಕು ಉಂಟಾಗಿದ್ದರೆ ಉರಿ ಮೂತ್ರದ ಜೊತೆಗೆ ಮೂತ್ರ ವಿಸರ್ಜನೆ ಕಡಿಮೆಯಾಗುವುದು. ಈ ರೀತಿಯ ಸಮಸ್ಯೆ ಗಾಯ ಒಣಗಿದಾಗ ಅಥವಾ ಮೂತ್ರ ಸೋಂಕಿಗೆ ಔಷಧ ತೆಗೆದುಕೊಂಡಾಗ ಕಡಿಮೆಯಾಗುವುದು.

ಈ ಕಾರಣಗಳಿಂದಲೂ ಮೂತ್ರ ಉರಿ ಉಂಟಾಗುವುದು

ಈ ಕಾರಣಗಳಿಂದಲೂ ಮೂತ್ರ ಉರಿ ಉಂಟಾಗುವುದು

* ಮೂತ್ರವನ್ನು ತುಂಬಾ ಸಮಯ ತಡೆ ಹಿಡಿದಾಗ: ಮೂತ್ರ ವಿಸರ್ಜನೆಗೆ ಹೋಗದೆ ತುಂಬಾ ಸಮಯ ತಡೆ ಹಿಡಿದರೆ ಮೂತ್ರ ವಿಸರ್ಜನೆ ಬಳಿಕ ಉರಿ ಉಂಟಾಗುವುದು.

* ಸಾಕಷ್ಟು ನೀರು ಕುಡಿಯದಿದ್ದರೆ: ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯದಿದ್ದರೆ ದೇಹದಲ್ಲಿ ಕಶ್ಮಲ ಹಾಗೇ ಉಳಿದು ಮೂತ್ರ ವಿಸರ್ಜನೆ ಮಾಡಿದ ಬಳಿಕ ಉರಿ ಉಂಟಾಗುವುದು.

ಈ ಕಾರಣಗಳಿಂದ ಉರಿ ಮೂತ್ರ ಸಮಸ್ಯೆ ಉಂಟಾದರೆ ಸಾಕಷ್ಟು ನೀರು ಕುಡಿದರೆ ಸರಿಯಾಗುವುದು. ದಿನಾ ಅಥವಾ 3-4 ಬಾರಿ ಎಳನೀರು ಕುಡಿಯುವುದರಿಂದ ಈ ಸಮಸ್ಯೆ ತಡೆಗಟ್ಟಬಹುದು.

ಆದರೆ ಈ ಕೆಳಗಿನ ಕಾರಣಗಳಿಂದಾದರೆ ಉರಿ ಮೂತ್ರ ಸಮಸ್ಯೆ ಸುಲಭದಲ್ಲಿ ಹೋಗುವುದಿಲ್ಲ, ಈ ರೀತಿ ಉಂಟಾದಾಗ ಸೂಕ್ತ ವೈದ್ಯರಿಗೆ ತೋರಿಸಿ ಚಿಕಿತ್ಸೆ ಪಡೆಯಿರಿ:

ಬ್ಲೇಡರ್ ಸಿಂಡ್ರೋಮ್

ಬ್ಲೇಡರ್ ಸಿಂಡ್ರೋಮ್

ಬ್ಲೇಡರ್‌ ಸಮಸ್ಯೆ ಇರುವವರಿಗೆ ಆಗಾಗ ಮೂತ್ರ ವಿಸರ್ಜನೆಗೆ ಹೋಗಬೇಕೆಂದು ಅನಿಸುವುದು, ಆದರೆ ಮೂತ್ರ ವಿಸರ್ಜನೆ ಮಾಡುವಾಗ ಅಥವಾ ಬಳಿಕ ಉರಿ-ಉರಿ ಅನಿಸುವುದು. ಈ ಸಮಸ್ಯೆ ತುಂಬಾ ಸಮಯದವರೆಗೆ ಕಾಡಬಹುದು, ಪೆಲ್ವಿಕ್ ಬಳಿ ನೋವುಂಟು ಮಾಡಬಹುದು. ಸೆಕ್ಸ್ ಮಾಡುವಾಗಲೂ ನೋವುಂಟು ಮಾಡಬಹುದು. ಸದ್ಯಕ್ಕೆ ಬ್ಲೇಡರ್ ಸಿಂಡ್ರೋಮ್‌ಗೆ ಯಾವುದೇ ಚಿಕಿತ್ಸೆಯಿಲ್ಲ, ಆದರೆ ರೋಗ ಲಕ್ಷಣ ಕಡಿಮೆಯಾಗಲು ಚಿಕಿತ್ಸೆ ನೀಡಲಾಗುವುದು. ಇದಕ್ಕೆ ಫಿಸಿಕಲ್ ಥೆರಪಿ, ಬ್ಲೇಡರ್ ಟ್ರೈಯನಿಂಗ್, ಜೀವನಶೈಲಿಯಲ್ಲಿ ಬದಲಾವಣೆ, ಧ್ಯಾನ ಇವೆಲ್ಲಾ ರೋಗ ಲಕ್ಷಣಗಳು ಕಡಿಮೆಯಾಗಲು ಸಹಾಯ ಮಾಡುತ್ತೆ.

ಪ್ರೊಸ್ಟಟೈಟಿಸ್

ಪ್ರೊಸ್ಟಟೈಟಿಸ್

ಈ ಸಮಸ್ಯೆ ಪುರುಷರಲ್ಲಿ ಕಂಡು ಬರುವುದು. ಯಾವುದೇ ಗಾಯ ಅಥವಾ ಸೋಂಕುನಿಂದಾಗಿ ಪ್ರೊಸ್ಟೇಟ್‌ ಸುತ್ತ ಊತ ಉಂಟಾಗಿ ಅದರಿಂದ ನರಗಳಿಗೆ ಹಾನಿಯುಂಟಾಗಿ ತುಂಬಾ ನೋವುಂಟಾಗುವುದು. ಈ ರೀತಿಯ ಸಮಸ್ಯೆ ಉಂಟಾದಾಗ ಆ್ಯಂಟಿಬಯೋಟಿಕ್ಸ್ ನೀಡಲಾಗುವುದು. ಔಷಧಗಳು ಹಾಗೂ ಪ್ರೊಸ್ಟೇಟಿಕ್ ಮಸಾಜ್ ಮೂಲಕ ಆ ಭಾಗದ ನೀರನ್ನು ಹೊರ ತೆಗೆದು ಒತ್ತಡ ಕಡಿಮೆ ಮಾಡಲಾಗುವುದು.

ಕಿಡ್ನಿಯಲ್ಲಿ ಕಲ್ಲುಂಟಾದಾಗ

ಕಿಡ್ನಿಯಲ್ಲಿ ಕಲ್ಲುಂಟಾದಾಗ

ಕಿಡ್ನಿಯಲ್ಲಿ ಕಲ್ಲುಂಟಾದಾಗ ಕೂಡ ಮೂತ್ರ ವಿಸರ್ಜನೆ ಬಳಿಕ ಉರಿ ಉಂಟಾಗುವುದು. ಕಿಡ್ನಿಯಲ್ಲಿನ ಕಲ್ಲು ಮೂತ್ರ ನಾಳಗಳನ್ನು ಮುಚ್ಚಿದಾಗ ಮೂತ್ರ ವಿಸರ್ಜನೆಗೆ ತೊಂದರೆ ಉಂಟಾಗುವುದು. ಈ ರೀತಿ ಕಿಡ್ನಿ ಸ್ಟೋನ್‌ ಉಂಟಾದಾಗ ಇತರ ಲಕ್ಷಣಗಳೆಂದರೆ ಬೆನ್ನು ನೋವು, ತಲೆ ಸುತ್ತು, ವಾಂತಿ, ಮೂತ್ರ ವಿಸರ್ಜನೆ ಮಾಡುವಾಗ ಕೆಟ್ಟ ವಾಸನೆ ಬೀರುವುದು. ಕಿಡ್ನಿಯಲ್ಲಿ ಕಲ್ಲು ಬರಲು ಪ್ರಮುಖ ಕಾರಣ ತುಂಬಾ ಉಪ್ಪು ಹಾಗೂ ಸಕ್ಕರೆ ಸೇವನೆ, ಸಾಕಷ್ಟು ನೀರು ಕುಡಿಯದಿರುವುದು. ಯಾರು ತುಂಬಾ ನೀರು ಕುಡಿಯುತ್ತಾರೋ ಅವರಲ್ಲಿ ಈ ರೀತಿಯ ಸಮಸ್ಯೆ ಉಂಟಾಗುವುದಿಲ್ಲ. ಕಿಡ್ನಿ ಸ್ಟೋನ್‌ ದೊಡ್ಡದಾದರೆ ಸರ್ಜರಿ ಮಾಡಬೇಕಾಗುವುದು.

ಕೆಲವೊಮ್ಮೆ ಉರಿ ಮೂತ್ರದ ಜೊತೆಗೆ ಈ ರೀತಿಯ ಲಕ್ಷಣಗಳೂ ಕಂಡು ಬರುವುದು

ಕೆಲವೊಮ್ಮೆ ಉರಿ ಮೂತ್ರದ ಜೊತೆಗೆ ಈ ರೀತಿಯ ಲಕ್ಷಣಗಳೂ ಕಂಡು ಬರುವುದು

* ಆಗಾಗ ಮೂತ್ರ ವಿಸರ್ಜನೆಗೆ ಹೋಗಬೇಕೆನಿಸುವುದು

* ಕಿಡ್ನಿ, ಬ್ಲೇಡರ್‌, ಮೂತ್ರ ನಾಳದಲ್ಲಿ ನೋವು

* ಕಡಿಮೆ ಮೂತ್ರ ಹೋಗುವುದು

* ತಕ್ಷಣ ಮೂತ್ರ ಮಾಡಬೇಕೆನಿಸುವುದು

* ತುರಿಕೆ ಅಥವಾ ಕಿರಿಕಿರಿ

ನೀವು ವೈದ್ಯರನ್ನು ಭೇಟಿಯಾದಾಗ ಈ ಲಕ್ಷಣಗಳಿದ್ದರೆ ಅದನ್ನೂ ತಿಳಿಸಿ.

ಚಿಕಿತ್ಸೆಯೇನು?

ಚಿಕಿತ್ಸೆಯೇನು?

* ಸಾಕಷ್ಟು ನೀರು ಕುಡಿಯುವುದು

* ಮದ್ಯ ಹಾಗೂ ಕೆಫೀನ್ ವಸ್ತುಗಳಿಂದ ದೂರವಿರುವುದು

* ಸೋಡಿಯಂ ಬೈಕಾರ್ಬೋನೇಟ್‌ ಅಥವಾ ಪೊಟಾಷ್ಯಿಯಂ ಇರುವ ಪಾನೀಯಗಳ ಸೇವನೆ

* ibuprofen ತೆಗೆದುಕೊಳ್ಳಿ

* ಸಡಿಲವಾದ ಬಟ್ಟೆ ಧರಿಸಿ

* ಮೂತ್ರವನ್ನು ತಡೆಹಿಡಿಯಬೇಡಿ.

ಯಾವಾಗ ವೈದ್ಯರಿಗೆ ತೋರಿಸಬೇಕು

ಯಾವಾಗ ವೈದ್ಯರಿಗೆ ತೋರಿಸಬೇಕು

* ಮೂತ್ರದಲ್ಲಿ ರಕ್ತ ಕಂಡು ಬಂದರೆ

* ಜ್ವರವಿದ್ದರೆ

* ತುಂಬಾ ಬೆನ್ನು ನೋವು

ಇವೆಲ್ಲಾ ಕಿಡ್ನಿ ಸ್ಟೋನ್‌ ತುಂಬಾ ತುಂಬಾ ಗಂಭೀರವಾಗಿದೆ ಎಂದು ತೋರಿಸುವ ಲಕ್ಷಣವಾಗಿದೆ.

ಕೊನೆಯದಾಗಿ: ಮೂತ್ರ ವಿಸರ್ಜನೆ ಬಳಿಕ ಉರಿ -ಉರಿಯಾದರೆ ಮೂತ್ರ ಸೋಂಕು ಆದರೆ ಔಷಧಿ ತೆಗೆದುಕೊಂಡಾಗ ಒಂದೆರಡು ದಿನದಲ್ಲಿ ಹೋಗುತ್ತೆ, ಆದರೆ ನೋವು ಕಡಿಮೆಯಾಗದಿದ್ದರೆ ನೀವು ವೈದ್ಯರನ್ನು ಭೇಟಿಯಾಗಿ ಇತರ ಆರೋಗ್ಯ ಸಮಸ್ಯೆ ಇದೆಯೇ ಎಂದು ಪರೀಕ್ಷಿಸುವುದು ಒಳ್ಳೆಯದು.

English summary

Burning Feeling After Urination Causes, Symptoms, Diagnosis, Risks And Treatment in kannada

Burning feeling after urination causes, symptoms, diagnosis, risks and treatment in kannada, read on...
Story first published: Tuesday, September 21, 2021, 16:46 [IST]
X
Desktop Bottom Promotion