For Quick Alerts
ALLOW NOTIFICATIONS  
For Daily Alerts

ಯಾವುದೇ ಹವಾಮಾನ ಇರಲಿ ಅದನ್ನು ನಿಭಾಯಿಸಲು ಉಸಿರಾಟದ ಈ 3 ತಂತ್ರಗಳು ಅನುಸರಿಸಿ!

|

ಉಸಿರಾಟ ಅನ್ನುವುದು ಎಲ್ಲರಿಗೂ ಮುಖ್ಯ. ಉಸಿರು ನಿಂತರೆ ಜೀವಕ್ಕೆ ಕುತ್ತು. ಪ್ರಾಣ ಪಕ್ಷಿಯೇ ಹಾರಿ ಹೋಗುತ್ತದೆ. ಹೀಗಾಗಿ ಸರಿಯಾದ ಉಸಿರಾಟ ನಡೆಸುವುದು ಅತೀ ಮುಖ್ಯ. ನಾವು ತೆಗೆದುಕೊಳ್ಳುವ ಉಸಿರು ದೇಹದೊಳಗೆ ಸಂಚರಿಸಿ ಹಲವು ಕ್ರಿಯೆಗಳಿಗೆ ಸಹಾಯ ಮಾಡುತ್ತದೆ. ಹೀಗಾಗಿ ಉಸಿರಾಟ ಎನ್ನುವುದು ಮನುಷ್ಯನ ಜೀವನದಲ್ಲಿ ಪ್ರಾಮುಖ್ಯತೆ ಪಡೆದಿದೆ. ಇನ್ನು ಇಂದಿನ ಜಗತ್ತಿನಲ್ಲಿ ಹವಾಮಾನ ವೈಪರಿತ್ಯಗಳು ಸಂಭವಿಸುತ್ತಿದೆ. ಸಡನ್ ಕ್ಲೈಮ್ಯಾಟ್ ಚೇಂಜ್ ನಂತಹ ಘಟನೆಗಳು ನಡೆಯುತ್ತಿದೆ.

123

ಪ್ರಾಚೀನ ಕಾಲಕ್ಕೆ ಹೋಲಿಸಿದರೆ ಅಭಿವೃದ್ಧಿಗಳಿಂದಾಗಿ ಹವಾಮಾನ ಬದಲಾಗುತ್ತಿದೆ. ವಿವಿಧ ಕಾರ್ಖಾನೆಗಳಿಂದ ಉಂಟಾಗುತ್ತಿರುವ ವಾಯು ಮಾಲಿನ್ಯವು ಹೆಚ್ಚುತ್ತಿದೆ. ಇದರಿಂದಾಗಿ ಊಸಿರಾಟದ ತೊಂದರೆಗಳು ಮನುಷ್ಯನಿಗೆ ಸಂಭವಿಸುತ್ತಿದೆ. ಬೇಸಿಗೆಗಾಲದಲ್ಲಿ ತೀವ್ರ ತರದ ಬಿಸಿಲಿನಿಂದ ಉಸಿರಾಟಕ್ಕೆ ಸಮಸ್ಯೆ ಆಗುತ್ತಿದೆ. ಇನ್ನು ಚಳಿಗಾಲದಲ್ಲಿನ ಹವಾಮಾನ ವೈಪರಿತ್ಯದಿಂದ ಕೆಲ ಮನುಷ್ಯರಿಗೆ ಉಸಿರಾಟದ ತೊಂದರೆ ಉಂಟಾಗುತ್ತಿದ್ದು, ಇದರಿಂದ ಅಸ್ತಮಾ, ಸೈನಸ್ ನಂತಹ ರೋಗಗಳು ಅಂಟಿಕೊಳ್ಳುತ್ತಿದೆ.

ಹೀಗಾಗಿ ಚಳಿಗಾಲದ ಸಮಯದಲ್ಲಿ ಉಸಿರಾಟದ ವ್ಯವಸ್ಥೆಯನ್ನು ಸರಿಯಾಗಿ ಇಟ್ಟುಕೊಳ್ಳಬೇಕಾಗುತ್ತದೆ. ಹಾಗಾದರೆ ನಮ್ಮ ಉಸಿರಾಟದ ವ್ಯವಸ್ಥೆಯನ್ನು ನಾವು ಹೇಗೆ ಆರೋಗ್ಯವಾಗಿ ಇಟ್ಟುಕೊಳ್ಳಬೇಕು..? ಉಸಿರಾಟದ ಯಾವುದೇ ಸಮಸ್ಯೆ ಬರದಂತೆ ನೋಡಿಕೊಳ್ಳುವುದು ಹೇಗೆ..? ಅದಕ್ಕಿರುವ ತಂತ್ರಗಳು ಏನು..? ಈ ತಂತ್ರಗಳನ್ನು ಪಾಲನೆ ಮಾಡಿದರೆ ಏನಾಗುತ್ತದೆ ಅನ್ನುವುದನ್ನು ನಾವು ನಿಮಗೆ ಹೇಳಿ ಕೊಡುತ್ತೇವೆ.

1. ನಾಡಿ ಶೋಧನಾ ಪ್ರಾಣಾಯಾಮ

1. ನಾಡಿ ಶೋಧನಾ ಪ್ರಾಣಾಯಾಮ

ಮೂಗಿನ ಹೊಳ್ಳೆ ಉಸಿರಾಟ ಪ್ರಕ್ರಿಯೆ ಬಹಳ ಸರಳ ಮತ್ತು ಸುಂದರವಾದ ಉಸಿರಾಟ ಪ್ರಕ್ರಿಯೆಯಾಗಿದೆ. ಇದನ್ನು ಕೆಲವು ನಿಮಿಷಗಳ ಕಾಲ ಅಭ್ಯಾಸ ಮಾಡಿವುದರಿಂದ ನಮ್ಮ ಮನಸ್ಸು ಶಾಂತವಾಗಿ ಉಲ್ಲಾಸಭರಿತವಾಗಿರುತ್ತದೆ. ಈ ಪ್ರಕ್ರಿಯೆ ಒತ್ತಡ ಮತ್ತು ಆಯಾಸವನ್ನು ದೂರ ಮಾಡಲು ಸಹಕರಿಸುತ್ತದೆ. ಅಲ್ಲದೇ ಅತ್ಯುತ್ತಮ ಉಸಿರಾಟಕ್ಕೆ ಸಹಾಯ ಮಾಡುತ್ತದೆ. ದೇಹದಲ್ಲಿ ಮುಚ್ಚಿರುವ ನಾಡಿಯನ್ನು ತೆರೆದು ಮನಸ್ಸಿಗೆ ಹೆಚ್ಚಿನ ನೆಮ್ಮದಿ ಸಿಗಲು ಸಹಕರಿಸುತ್ತದೆ. ಈ ಪ್ರಕ್ರಿಯೆಯನ್ನು ಅನುಲೋಮ ವಿಲೋಮ ಪ್ರಾಣಾಯಾಮ ಎಂದು ಕೂಡ ಕರೆಯುತ್ತೇವೆ.

ಮಾಡುವುದು ಹೇಗೆ..?

ಬೆನ್ನು ಮತ್ತು ಕತ್ತು ನೇರವಾಗಿಟ್ಟು ಆರಾಮವಾಗಿ ಕುಳಿತುಕೊಳ್ಳಬೇಕು. ಭುಜಗಳು ಸಡಿಲವಾಗಿರಬೇಕು, ಮುಖದಲ್ಲಿ ಮಂದವಾದ ಮುಗುಳ್ನಗೆ ಇರಬೇಕು. ಬಳಿಕ ಎಡ ಕೈಯನ್ನು ಎಡ ಮೊಣಕಾಲಿನ ಮೇಲಿಡಬೇಕು. ಅಂಗೈ ಮೇಲ್ಮುಖವಾಗಿ ಚಿನ್ಮುದ್ರೆಯಲ್ಲಿರಬೇಕು. ಬಲ ಕೈಯ ತೋರುಬೆರಳು ಮತ್ತು ಮಧ್ಯದ ಬೆರಳಿನ ತುದಿಯನ್ನು ಹುಬ್ಬಿನ ಮಧ್ಯದಲ್ಲಿರುವ ಸ್ಥಳದಲ್ಲಿ ಹಗುರವಾಗಿ ಇರಿಸಬೇಕು. ಉಂಗುರ ಬೆರಳು ಮತ್ತು ಕಿರು ಬೆರಳು ಮೂಗಿನ ಎಡಭಾಗದ ಹೊಳ್ಳೆಯ ಮೇಲೆ ಮತ್ತು ಹೆಬ್ಬೆರಳು ಮೂಗಿನ ಬಲ ಹೊಳ್ಳೆಯ ಮೇಲಿರಬೇಕು ಉಂಗುರ ಬೆರಳು ಮತ್ತು ಕಿರುಬೆರಳು ಎಡ ಮೂಗಿನ ಹೊಳ್ಳೆ ಮುಚ್ಚಲು ಮತ್ತು ತೆರೆಯಲು ಉಪಯೋಗಿಸಬೇಕು. ಹೆಬ್ಬೆರಳಿನಿಂದ ಬಲ ಮೂಗಿನ ಹೊಳ್ಳೆಯನ್ನು ಹಗುರವಾಗಿ ಮುಚ್ಚಿ. ಎಡ ಒಳ್ಳೆಯಿಂದ ದೀರ್ಘವಾದ ಉಸಿರನ್ನು ತೆಗೆದು ಕೊಳ್ಳಬೇಕು. ಕಿರುಬೆರಳು ಮತ್ತು ಉಂಗುರ ಬೆರಳಿನ ತುದಿಯಿಂದ ಎಡಹೊಳ್ಳೆಯನ್ನು ಹಗುರವಾಗಿ ಮುಚ್ಚಿ ಬಲ ಹೊಳ್ಳೆಯ ಮೇಲಿರುವ ಹೆಬ್ಬರಳನ್ನು ಸಡಿಲಿಸಿ ನಿಧಾನವಾಗಿ ಉಸಿರನ್ನು ಹೊರಹಾಕಬೇಕು. ಹೀಗೆ ವಿರುದ್ಧವಾಗಿಯೂ ಮಾಡಬೇಕು. ಹೀಗೆ ಮಾಡುವ ವಿಧಾನವನ್ನು ನಾಡಿ ಶೋಧನಾ ಪ್ರಾಣಾಯಾಮ ಎಂದು ಕರೆಯುತ್ತಾರೆ. ಹೀಗೆ 9 ಸುತ್ತುಗಳನ್ನು ಮಾಡಿದರೆ ನಿಮ್ಮ ಉಸಿರಾಟದ ಸಮಸ್ಯೆ, ಹೃದಯದ ಸಮಸ್ಯೆ ನೂರಕ್ಕೆ ನೂರು ಸರಿಯಾಗುತ್ತದೆ.

ಇದರಿಂದ ಏನಾಗುತ್ತದೆ?

ಈ ನಾಡಿ ಶೋಧನಾ ಪ್ರಾಣಾಯಾಮದಿಂದ ಮನಸ್ಸು ಮತ್ತು ದೇಹದಲ್ಲಿ ತುಂಬಿರುವ ಒತ್ತಡ ನಿವಾರಣೆ ಆಗುತ್ತದೆ. ನಾಡಿ ಮತ್ತು ಸೂಕ್ಷ್ಮ ಚೈತನ್ಯ ನಾಳವನ್ನು ಶುದ್ಧೀಕರಿಸಿ ಸಮತೋಲನದಲ್ಲಿ ಇರಿಸಲು ಸಹಾಯ ಮಾಡುತ್ತದೆ. ಇದರಿಂದ ನಮ್ಮ ಶರೀರದಲ್ಲಿ ಪ್ರಾಣ ಅಥವಾ ಉಸಿರಾಟ ಅಥವಾ ಜೀವಶಕ್ತಿ ಸರಾಗವಾಗಿ ಹರಿಯುತ್ತದೆ. ದೇಹದ ಉಷ್ಣತೆಯನ್ನು ಕಾಪಾಡುತ್ತದೆ.ಮನಸ್ಸನ್ನು ಕೇಂದ್ರೀಕರಿಸಲು ಮತ್ತು ಶಾಂತವಾಗಿರಿಸಲು ಇರುವ ಅತ್ಯುತ್ತಮವಾದ ಉಸಿರಾಟದ ಪ್ರಕ್ರಿಯೆ ಇದಾಗಿದೆ.

2. ಹೊಟ್ಟೆಯ ಉಸಿರಾಟ

2. ಹೊಟ್ಟೆಯ ಉಸಿರಾಟ

ಹೊಟ್ಟೆಯ ಉಸಿರಾಟ ಇದೊಂದು ಉಸಿರಾಟದ ಅತ್ಯುತ್ತಮ ವಿಧಾನ ಆಗಿದೆ. ಈ ರೀತಿಯ ಉಸಿರಾಟ ನಡೆಸುವುದರಿಂದ ನಮ್ಮ ದೇಹದಲ್ಲಿ ಸಂಪೂರ್ಣವಾಗಿ ಉಸಿರಾಟ ನಡೆಯುತ್ತದೆ. ಅಲ್ಲದೇ ಉಸಿರಾಟ ಮುಂದಿನ ದಿನಗಳಲ್ಲಿ ಉತ್ತಮವಾಗುತ್ತದೆ.

ಮಾಡುವುದು ಹೇಗೆ..?

ಹೊಟ್ಟೆಯಿಂದ ಉಸಿರಾಡಲು, ಮೊದಲು ನೆಲದ ಮೇಲೆ ಅಥವಾ ಬೆಡ್ ನ ಮೇಲೆ ನೀವು ಮಲಗ ಬೇಕು. ನಂತರ ನಿಮ್ಮ ಎರಡು ಕೈಗಳ ಪೈಕಿ ಒಂದನ್ನು ನಿಮ್ಮ ಹೊಟ್ಟೆಯ ಮೇಲೆ ಇರಿಸಿಕೊಳ್ಳಬೇಕು. ನಂತರ ಮತ್ತೊಂದು ಕೈಯನ್ನು ಎದೆಯ ಮೇಲೆ ಇರಿಸಬೇಕು. ಬಳಿಕ ಹೊಟ್ಟೆಯಿಂದ ಉಸಿರಾಟ ನಡೆಸುವ ಹಾಗೇ ಮೂಗಿನಿಂದ ಆಳವಾದ ಉಸಿರನ್ನು ತೆಗೆದುಕೊಳ್ಳಬೇಕು ಮತ್ತು ಇದು ಹೊಟ್ಟೆಯನ್ನು ವಿಸ್ತರಿಸುವಾಗ ಶ್ವಾಸಕೋಶದಲ್ಲಿ ಗಾಳಿಯನ್ನು ತುಂಬಿಸಬೇಕು. ಈ ಸಮಯದಲ್ಲಿ, ಕೆಲವು ಸೆಕೆಂಡುಗಳ ಕಾಲ ಉಸಿರಾಟವನ್ನು ಹಿಡಿದುಕೊಳ್ಳಬೇಕು ಮತ್ತು ಬಾಯಿಯ ಮೂಲಕ ನಿಧಾನವಾಗಿ ಉಸಿರಾಟವನ್ನು ಬಿಡಬೇಕು.. ಇದರೊಂದಿಗೆ, ಶ್ವಾಸಕೋಶದಲ್ಲಿ ತುಂಬಿದ ಗಾಳಿಯನ್ನು ಹೊರಗಿನ ಕಡೆಗೆ ತೆಗೆದುಹಾಕಬೇಕು. ದಿನಕ್ಕೆ ಕನಿಷ್ಠ 10 ನಿಮಿಷಗಳ ಕಾಲ ಈ ವ್ಯಾಯಾಮ ಮಾಡುವುದರಿಂದ ಉಸಿರಾಟದ ಸಮಸ್ಯೆ ದೂರವಾಗುತ್ತದೆ.

ಪ್ರಯೋಜನ ಏನು..?

ಈ ಉಸಿರಾಟ ಹೊಟ್ಟೆಯ ಭಾಗದಿಂದ ನಡೆಸುವುದರಿಂದ ಶ್ವಾಸಕೋಶಕ್ಕೆ ಅತ್ಯುತ್ತಮ ಗಾಳಿ ಸಿಗುತ್ತದೆ. ಇದರಿಂದಾಗಿ ನಿಮ್ಮ ಉಸಿರಾಟದ ಸಾಮರ್ಥ್ಯ ಹೆಚ್ಚುತ್ತದೆ. ಎಷ್ಟೇ ಓಡಿದರು, ನಡೆದರು ನಿಮಗೆ ಉಸಿರಾಟದ ತೊಂದರೆ ಬರುವುದಿಲ್ಲ. ಅಲ್ಲದೇ ಹೊಟ್ಟೆ ಮತ್ತು ಶ್ವಾಸಕೋಶ ಶುದ್ಧವಾಗಿರುತ್ತದೆ.

3. ಉಜ್ಜಯಿ ಪ್ರಾಣಾಯಾಮ

3. ಉಜ್ಜಯಿ ಪ್ರಾಣಾಯಾಮ

ಉಜ್ಜಯಿ ಪ್ರಾಣಾಯಾಮ ಅಥವಾ ಓಶನ್ ಬ್ರೀಥಿಂಗ್ ಅತ್ಯುತ್ತಮ ಪ್ರಾಣಾಯಾಮ ವಿಧವಾಗಿದೆ. ಇದರಲ್ಲಿ ಶ್ವಾಸವನ್ನು ಜೋರಾಗಿ ತೆಗೆದು ಕೊಂಡು ಹೊರಹಾಕುವುದರಿಂದ ದೇಹದಲ್ಲಿರುವ ಕಲ್ಮಶಗಳನ್ನು ಹೊರಹಾಕಬಹುದು. ಇದು ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ ಹಾಗೂ ಸವಿನಿದ್ದೆ ಬರುವಂತೆ ಮಾಡುತ್ತದೆ. ಬಿಪಿ, ಥೈರಾಯ್ಡ್ ಸಮಸ್ಯೆ ಇರುವವರು ಈ ವ್ಯಾಯಾಮ ಮಾಡುವುದು ಒಳ್ಳೆಯದು.

ಮಾಡುವುದು ಹೇಗೆ?

ಮೊದಲು ಸುಖಾಸನದಲ್ಲಿ ಕುಳಿತುಕೊಳ್ಳಬೇಕು. ಮೊದಲು ಒಂದು ನಿಮಿಷ ನಿಧಾನವಾಗಿ ಉಸಿರಾಡಿ ಮೈ ಮನಸ್ಸನ್ನು ಶಾಂತಗೊಳಿಸಬೇಕು. ಬಳಿಕ ಮೂಗಿನ ಎರಡು ಹೊಳ್ಳೆಗಳಲ್ಲಿ ರೇಚಕ ಮಾಡಿ ಆಮೇಲೆ ಪೂರಕ ಮಾಡಬೇಕು. ಈಗ ನಾಸಿಕ ಮುದ್ರೆಯಿಂದ ಎರಡು ಹೊಳ್ಳೆಗಳನ್ನು ಮುಚ್ಚಿ ಜಾಲಂಧರ ಬಂಧ ಮಾಡಿ. ಇದು ಪ್ರಾಣವಾಯು ಮೇಲೆ ಬರದಂತೆ ತಡೆಯಬೇಕು. ಈಗ ತಕ್ಷ ಣ ಮೂಲಬಂಧ ಮಾಡಬೇಕು ಇದನ್ನು ಅಂತರ ಕುಂಬಕ ಎಂದು ಕರೆಯಲಾಗುತ್ತದೆ. ಇದೇ ಸ್ಥಿತಿಯಲ್ಲಿ ಹತ್ತು ಸೆಕೆಂಡುಗಳ ಕಾಲ ಇರಬೇಕು. ಆಮೇಲೆ ಜಾಲಂಧರ ಬಂಧವನ್ನು ಬಿಟ್ಟು ಎಡಗಡೆಯ ಮೂಗಿನ ಹೊಳ್ಳೆಯಿಂದ ಉಸಿರನ್ನು ಬಿಡಿ. ತಕ್ಷಣ ಉಡ್ಡೀಯಾನ ಬಂಧ ಮಾಡಿ. ಪುನಃ ಮೂಗಿನ ಎರಡೂ ಹೊಳ್ಳೆಗಳಿಂದ ಉಸಿರು ತೆಗೆದುಕೊಂಡು ಮೂಗು ಮುಚ್ಚಿ. ಜಾಲಂಧರ ಬಂಧ ಮಾಡಿ ತಕ್ಷ ಣ ಮೂಲಬಂಧ ಮಾಡಿ. ಈ ಸ್ಥಿತಿಯಲ್ಲಿ ಹತ್ತು ಸೆಕೆಂಡುಗಳ ಕಾಲವಿರಬೇಕು. ಆಮೇಲೆ ಜಾಲಂಧರ ಬಂಧ ಬಿಟ್ಟು ಎಡಗಡೆಯ ಹೊಳ್ಳೆಯಿಂದ ಉಸಿರು ಬಿಡಿ. ಅಂದರೆ ಒಂದು ಮೂಗನ್ನು ಬಂದ್ ಮಾಡಿ ಮತ್ತೊಂದು ಮೂಗಿನಲ್ಲಿ ಉಸಿರಾಟ ನಡೆಸುವ ಪ್ರಕ್ರಿಯೆಯಾಗಿದೆ.

ಇದರಿಂದ ಪ್ರಯೋಜನ!

ಇದರಿಂದ ದೇಹದ ಒಳಗಡೆ ಉಷ್ಣತೆ ಹೆಚ್ಚಾಗುವುದರಿಂದ ಬಿಗಿಯಾದ ಸ್ನಾಯುಗಳನ್ನು ಸಡಿಲವಾಗಿಸುತ್ತದೆ. ಇದರಿಂದ ಸ್ಟ್ರೆಚ್ ಮಾಡುವಾಗ ದೇಹಕ್ಕೆ ಅನುಕೂಲವಾಗುವುದು. ಅಲ್ಲದೆ ಶ್ವಾಸವನ್ನು ಜೋರಾಗಿ ತೆಗೆದು ಕೊಂಡು ಹೊರಹಾಕುವುದರಿಂದ ದೇಹದಲ್ಲಿರುವ ಕಶ್ಮಲಗಳನ್ನು ಹೊರಹಾಕಬಹುದಾಗಿದೆ. ಇದು ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ ಹಾಗೂ ಒಳ್ಳೆ ನಿದ್ದೆ ಬರುವಂತೆ ಮಾಡುತ್ತದೆ. ಅಲ್ಲದೇ ಬಿಪಿ, ಥೈರಾಯ್ಡ್ ಸಮಸ್ಯೆ ಇರುವವರು ಈ ವ್ಯಾಯಾಮ ಮಾಡುವುದು ಒಳ್ಳೆಯದು.

ಉಸಿರಾಟದ ತೊಂದರೆ ಈಗ ಅನೇಕರನ್ನು ಬಾಧಿಸುತ್ತಿದೆ. ಧೂಮಪಾನ, ಮಾಲಿನ್ಯ , ಸ್ಥೂಲಕಾಯ ಅಥವಾ ವ್ಯಾಯಾಮ ಮಾಡದೇ ಇರವುದು, ಅತಿಯಾದ ವ್ಯಾಯಾಮ, ಅಸ್ತಮಾ, ರಕ್ತಹೀನತೆ, ಹೃದ್ರೋಗ ಅಥವಾ ಶ್ವಾಸಕೋಶದ ಕಾಯಿಲೆ ಇತ್ಯಾದಿಗಳಿಂದ ಉಸಿರಾಟದ ತೊಂದರೆ ಇತ್ತೀಚಿನ ದಿನಗಳಲ್ಲಿ ಅನೇಕ ಜನರಲ್ಲಿ ತುಂಬಾ ಸಾಮಾನ್ಯವಾಗಿದೆ., ಹೀಗಾಗಿ ಈ ತಂತ್ರಗಳನ್ನು ಬಳಸಿ ಉಸಿರಾಟ ವ್ಯವಸ್ಥೆಯನ್ನು ಆರೋಗ್ಯವಾಗಿ ಇಡಬಹುದು.

English summary

Breathing Techniques to Cope with Any Weather in kannada

Here we are discussing about Breathing Techniques to Cope with Any Weather in kannada. Read more.
X
Desktop Bottom Promotion