For Quick Alerts
ALLOW NOTIFICATIONS  
For Daily Alerts

ಈ ಪ್ರಾಣಯಾಮ ತಪ್ಪದೇ ಮಾಡಿದರೆ ಸಾಕು, ಅಧಿಕ ರಕ್ತದೊತ್ತಡಕ್ಕೆ ಬೈಬೈ ಹೇಳಬಹುದು..!

|

ಇಂದಿನ ನಮ್ಮ ಬದಲಾದ ಜೀವನಶೈಲಿಯಿಂದ ಕಂಡುಬರುತ್ತಿರುವ ಸಮಸ್ಯೆಗಳು ಹತ್ತು ಹಲವು. ಅದರಲ್ಲೂ ರಕ್ತದೊತ್ತಡ, ಹೃದಯದ ಸಮಸ್ಯೆಗಳು ಸಾಮಾನ್ಯವಾಗಿಬಿಟ್ಟಿದೆ. ಹಿಂದೆ ಮುಪ್ಪು ಆವರಿಸಿದಾಗ ಬರುವ ಖಾಯಿಲೆಯೇ ರಕ್ತದೊತ್ತಡ ಎನ್ನಲಾಗುತ್ತಿತ್ತು. ಆದರೆ ಈಗಿನ ಕಾಲದಲ್ಲಿ ಯುವ ಜನರಲ್ಲೇ ಹೈಪರ್‌ಟೆನ್ಷನ್‌ ಅಂದರೆ ಅಧಿಕ ರಕ್ತದೊತ್ತಡ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದೆ. ಇದಕ್ಕೆಲ್ಲಾ ಕಾರಣ ನಮ್ಮ ಅನಾರೋಗ್ಯಕರ ದಿನಚರಿ ಎಂದರೆ ತಪ್ಪಾಗಲಾರದು.

blood pressure

ಬಿಪಿ ಇದೆ ಎಂದರೆ ಅಯ್ಯೋ.. ಇದೊಂದು ದೊಡ್ಡ ಸಮಸ್ಯೆ ಎನ್ನುವವರಿಗೆ, ಅಧಿಕ ರಕ್ತದೊತ್ತಡ ಇದೆ ಎಂದರೆ ಅದಕ್ಕಿಂತ ದೊಡ್ಡ ಸಮಸ್ಯೆ ಇರಲಾರದು. ಯಾಕೆಂದರೆ ಇದು ಹೃದ್ರೋಗದ ಸಮಸ್ಯೆಗಳನ್ನು ಉಂಟು ಮಾಡಬಹುದು. ಅನಿಯಂತ್ರಿತ ಅಧಿಕ ರಕ್ತದೊತ್ತಡವು ಹೃದಯಾಘಾತ, ಪಾರ್ಶ್ವವಾಯು ಸೇರಿದಂತೆ ಹಲವು ಗಂಭೀರ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಅಧಿಕ ರಕ್ತದೊತ್ತಡವನ್ನು ನಿರ್ವಹಿಸುವುದು ಹೇಗೆ ಎನ್ನುವುದಾದರೆ, ಉತ್ತರ ನಮ್ಮಲ್ಲೇ ಇದೆ. ಹೇಗೆಂದರೆ ದಿನಚರಿಯಲ್ಲಿನ ಬದಲಾವಣೆಯ ಜೊತೆಗೆ ಯೋಗ, ದೈಹಿಕ ವ್ಯಾಯಾಮ, ಧ್ಯಾನದಂತಹ ಮನಸ್ಸನ್ನು ಲಯದಲ್ಲಿಡುವಂತಹ ಚಟುವಟಿಕೆಗಳು. ಔಷಧ ರಹಿತವಾಗಿ ನೈಸರ್ಗಿಕವಾಗಿ ರೋಗಗಳನ್ನು ಗುಣಪಡಿಸುವ ವಿಧಾನವೆಂದರೆ ಯೋಗ, ಅದರಲ್ಲೂ ಪ್ರಾಣಾಯಾಮಗಳು ಮನಸ್ಸಿಗೆ ವಿಶ್ರಾಂತಿಯನ್ನು ನೀಡುವುದರ ಜೊತೆಗೆ ಶಕ್ತಿಯನ್ನು ಸಮತೋಲನಗೊಳಿಸಲು ಮತ್ತು ಉಸಿರಾಟವನ್ನು ಕ್ರಮಬದ್ಧಗೊಳಿಸಲು ಸಹಾಯ ಮಾಡುತ್ತದೆ.

ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುವ ಉಸಿರಾಟದ ವ್ಯಾಯಾಮಗಳ ವಿವರ ಈ ಕೆಳಗಿದೆ ನೋಡಿ

೧ ಅನುಲೋಮ ವಿಲೋಮ ಪ್ರಾಣಾಯಾಮ

೧ ಅನುಲೋಮ ವಿಲೋಮ ಪ್ರಾಣಾಯಾಮ

ಅನುಲೋಮ ವಿಲೋಮವು ಪ್ರಮುಖವಾದ ಪ್ರಾಣಾಯಾಮದ ವಿಧ., ಇದು ಬಹು ಪ್ರಯೋಜನಗಳನ್ನು ಹೊಂದಿದೆ. ದೇಹದಲ್ಲಿನ ಸಿಂಪಥೆಟಿಕ್‌ ಮತ್ತು ಪ್ಯಾರಾಸಿಂಪಥೆಟಿಕ್ ನರ ವ್ಯವಸ್ಥೆಗಳನ್ನು ಸಮತೋಲನಗೊಳಿಸುವ ಮೂಲಕ ನರಮಂಡಲವನ್ನು ಶಾಂತಗೊಳಿಸಲು ಇದು ಸಹಾಯ ಮಾಡುತ್ತದೆ. ಇದು ಉಸಿರಾಟವನ್ನು ಕ್ರಮಬದ್ಧಗೊಳಿಸುತ್ತದೆ ಮತ್ತು ಸ್ವನಿಯಂತ್ರಿತ ನರಮಂಡಲದ ಕೆಲಸವನ್ನು ಸುಗಮಗೊಳಿಸುತ್ತದೆ ಮತ್ತು ಆದ್ದರಿಂದ ರಕ್ತದೊತ್ತಡ, ಆತಂಕ, ಖಿನ್ನತೆ, ಮೈಗ್ರೇನ್ ಸಮಸ್ಯೆಗಳಿಗೆ ಮತ್ತು ಉತ್ತಮ ಆರೋಗ್ಯಕ್ಕಾಗಿ ಅನುಲೋಮ ವಿಲೋಮ ಪ್ರಾಣಾಯಾಮವನ್ನು ಮಾಡುವಂತೆ ಸಲಹೆ ನೀಡುತ್ತಾರೆ.

ಮಾಡುವ ವಿಧಾನ

*ಯಾವುದೇ ಧ್ಯಾನ ಭಂಗಿಯಲ್ಲಿ ಕುಳಿತುಕೊಳ್ಳಿ ಮತ್ತು ಬೆನ್ನುಮೂಳೆ ಮತ್ತು ಬೆನ್ನು ನೇರವಾಗಿರಲಿ, ಭುಜಗಳನ್ನು ಸಡಿಲಗೊಳಿಸಿ

*ಕಣ್ಣುಗಳನ್ನು ಮುಚ್ಚಿ ಮತ್ತು ಕೆಲವು ಆಳವಾದ ಉಸಿರಾಟಗಳನ್ನು ಗಮನಿಸಿ

*ಈಗ ಎರಡೂ ಮೂಗಿನ ಹೊಳ್ಳೆಗಳಿಂದ ಆಳವಾಗಿ ಉಸಿರಾಡಿ

* ಪ್ರಾಣಾಯಾಮ ಮುದ್ರೆಯನ್ನು ಅಳವಡಿಸಿಕೊಳ್ಳಿ ಮತ್ತು ನಿಮ್ಮ ಬಲ ಮೂಗಿನ ಹೊಳ್ಳೆಯನ್ನು ಮುಚ್ಚಿ ಮತ್ತು ಎಡ ಮೂಗಿನ ಹೊಳ್ಳೆಯ ಮೂಲಕ ಉಸಿರಾಟ ಮಾಡಿ.

* ಬಲ ಮೂಗಿನ ಹೊಳ್ಳೆ ಮುಚ್ಚಿ, ಎಡ ಮೂಗಿನ ಹೊಳ್ಳೆಯಿಂದ 4 ಎಣಿಕೆಗಳವರೆಗೆ ಆಳವಾಗಿ ಉಸಿರಾಟ ಮಾಡಿ.

* ನಂತರ ಎಡ ಮೂಗಿನ ಹೊಳ್ಳೆಯನ್ನು ಮುಚ್ಚಿ ಮತ್ತು ಬಲ ಮೂಗಿನ ಹೊಳ್ಳೆಯ ಮೂಲಕ 6 ಎಣಿಕೆಗಳವರೆಗೆ ಉಸಿರಾಟ ಕ್ರಿಯೆ ಮುಂದುವರೆಸಿ.

* ಬಲ ಮೂಗಿನ ಹೊಳ್ಳೆಯಿಂದ 4 ಎಣಿಕೆಗಳವರೆಗೆ ಮತ್ತೆ ಉಸಿರಾಟವನ್ನು ಮಾಡಿ.

* ಬಲ ಮೂಗಿನ ಹೊಳ್ಳೆಯನ್ನು ಮುಚ್ಚಿ ಮತ್ತು ಎಡ ಮೂಗಿನಿಂದ ಮತ್ತೆ 6 ಎಣಿಕೆಗಳವರೆಗೆ ಉಸಿರಾಟ ಕ್ರಿಯೆ ಮಾಡಿ.

ಇದು ನಾಡಿಶುಧಿ ಪ್ರಾಣಾಯಾಮದ ಒಂದು ಸುತ್ತನ್ನು ಪೂರ್ಣಗೊಳಿಸುತ್ತದೆ. ಎಡದಿಂದ ಬಲಕ್ಕೆ ಮತ್ತು ಬಲದಿಂದ ಎಡಕ್ಕೆ ಉಸಿರಾಟದ ಈ ಅಭ್ಯಾಸವನ್ನು ಆರಂಭದಲ್ಲಿ ನಾಲ್ಕು ಸುತ್ತು ಮಾಡಿ, ನಂತರ 9 ಸುತ್ತುಗಳವರೆಗೆ ಮುಂದುವರಿಸಿ.

ಚಂದ್ರಭೇದನ ಪ್ರಾಣಾಯಾಮ

ಚಂದ್ರಭೇದನ ಪ್ರಾಣಾಯಾಮ

ಇದು ಚಂದ್ರನಾಡಿಗೆ ಸಂಬಂಧಿಸಿದ ಪ್ರಾಣಾಯಾಮಗಳಲ್ಲಿ ಒಂದಾಗಿದೆ. ಚಂದ್ರನು ತಂಪಿನ ಸಂಕೇತವಾಗಿದೆ, ಆದ್ದರಿಂದ ಈ ಪ್ರಾಣಾಯಾಮವನ್ನು ಮಾಡುವುದರಿಂದ ನಮ್ಮ ದೇಹವು ತಂಪಾಗಿರುತ್ತದೆ. ದೇಹವನ್ನು ತಂಪಾಗಿಸಲು ಅತ್ಯುತ್ತಮ ಮತ್ತು ಪರಿಣಾಮಕಾರಿ ಉಸಿರಾಟದ ಪ್ರಕ್ರಿಯೆಯೇ ಚಂದ್ರಭೇದನ ಪ್ರಾಣಾಯಾಮ.

ಮಾಡುವ ವಿಧಾನ

* ಯಾವುದೇ ಧ್ಯಾನ ಭಂಗಿಯಲ್ಲಿ ಕುಳಿತುಕೊಳ್ಳಿ ಮತ್ತು ಬೆನ್ನುಮೂಳೆ ಮತ್ತು ಬೆನ್ನು ನೇರವಾಗಿರಲಿ ಭುಜಗಳನ್ನು ಸಡಿಲಗೊಳಿಸಿ

* ಕಣ್ಣುಗಳನ್ನು ಮುಚ್ಚಿ ಮತ್ತು ಉಸಿರಾಟದ ಮೇಲೆ ನಿಮ್ಮ ಗಮನವಿರಲಿ.

* ಪ್ರಾಣಾಯಾಮ ಮುದ್ರೆಯನ್ನು ಅಳವಡಿಸಿಕೊಳ್ಳಿ ಮತ್ತು ಹೆಬ್ಬೆರಳಿನಿಂದ ಬಲ ಮೂಗಿನ ಹೊಳ್ಳೆಯನ್ನು ಮುಚ್ಚಿ

* ಎಡ ಮೂಗಿನ ಹೊಳ್ಳೆಯಿಂದ ಆಳವಾಗಿ ಉಸಿರಾಡಿ ಮತ್ತು ಎಡ ಮೂಗಿನ ಹೊಳ್ಳೆಯನ್ನು ಉಂಗುರದ ಬೆರಳಿನಿಂದ ಮುಚ್ಚಿ

* ಬಲ ಮೂಗಿನ ಹೊಳ್ಳೆಯ ಮೂಲಕ ಸಂಪೂರ್ಣವಾಗಿ ಉಸಿರನ್ನು ಬಿಡಿ, ಇದನ್ನು ಆರಂಭದಲ್ಲಿ ನಾಲ್ಕು ಸುತ್ತುಗಳನ್ನು ಮಾಡಿ.

ಇದು ಚಂದ್ರಭೇದನ ಪ್ರಾಣಾಯಾಮದ ಒಂದು ಸುತ್ತನ್ನು ಪೂರ್ಣಗೊಳಿಸುತ್ತದ. ಗರಿಷ್ಠ ಪ್ರಯೋಜನಗಳಿಗಾಗಿ ಚಂದ್ರ ಭೇದನ ಪ್ರಾಣಾಯಾಮವನ್ನು 15-20 ಸುತ್ತುಗಳವರೆಗೆ ಮಾಡಿ.

ಶೀತಲಿ ಪ್ರಾಣಾಯಾಮ

ಶೀತಲಿ ಪ್ರಾಣಾಯಾಮ

ಶೀತಲಿ ಪ್ರಾಣಾಯಾಮವು ಶಾಂತಗೊಳಿಸುವ ಮತ್ತು ತಂಪಾಗಿಸುವ ಪರಿಣಾಮಕ್ಕೆ ಹೆಸರುವಾಸಿಯಾಗಿದೆ. ಇದು ದೇಹದ ಉಷ್ಣತೆಯನ್ನು ತ್ವರಿತವಾಗಿ ಕಡಿಮೆ ಮಾಡುತ್ತದೆ ಮತ್ತು ನರಮಂಡಲವನ್ನು ಶಾಂತಗೊಳಿಸುತ್ತದೆ

ಮಾಡುವ ವಿಧಾನ

* ಯಾವುದೇ ಧ್ಯಾನ ಭಂಗಿಯಲ್ಲಿ ಕುಳಿತುಕೊಳ್ಳಿ ಮತ್ತು ಬೆನ್ನುಮೂಳೆ ಮತ್ತು ಬೆನ್ನು ನೇರವಾಗಿರಲಿ,ಭುಜಗಳನ್ನು ಸಡಿಲಗೊಳಿಸಿ

* ಕಣ್ಣುಗಳನ್ನು ಮುಚ್ಚಿ ಮತ್ತು ಕೆಲವು ಆಳವಾದ ಉಸಿರಾಟಗಳನ್ನು ಗಮನಿಸಿ

* ನಾಲಗೆಯನ್ನು ಸುರುಳಿಯಾಕಾರ ಮಾಡಿ ಬಾಯಿಯ ಮೂಲಕ ಆಳವಾಗಿ ಉಸಿರಾಡಿ

ತುಟಿಗಳನ್ನು ಮುಚ್ಚಿ ಮತ್ತು ಬಲ ಮೂಗಿನ ಹೊಳ್ಳೆಯ ಉಸಿರನ್ನು ಬಿಡಿ.

*ಇದು ಒಂದು ಸುತ್ತನ್ನು ಪೂರ್ಣಗೊಳಿಸುತ್ತದೆ ಮತ್ತು ಹೀಗೆ 10-15 ಸುತ್ತಿನವರೆಗೂ ಈ ಕ್ರಿಯೆಯನ್ನು ಪುನರಾವರ್ತಿಸಿ.

ಭ್ರಮರಿ ಪ್ರಾಣಾಯಾಮ

ಭ್ರಮರಿ ಪ್ರಾಣಾಯಾಮ

ಭ್ರಮರಿ ಪ್ರಾಣಾಯಾಮವು ಮತ್ತೊಂದು ಪರಿಣಾಮಕಾರಿ ಉಸಿರಾಟದ ಅಭ್ಯಾಸವಾಗಿದ್ದು ಅದು ನರಮಂಡಲವನ್ನು ಶಾಂತಗೊಳಿಸಲು, ದೇಹ ಮತ್ತು ಮನಸ್ಸಿಗೆ ವಿಶ್ರಾಂತಿ ನೀಡಲು ಸಹಾಯ ಮಾಡುತ್ತದೆ ಮತ್ತು ಒತ್ತಡವನ್ನು ನಿರ್ವಹಿಸಲು ಮತ್ತು ಉತ್ತಮ ನಿದ್ರೆಯನ್ನು ಉಂಟುಮಾಡಲು ಸಹಾಯ ಮಾಡುತ್ತದೆ. ವಿಶೇಷವಾಗಿ ಮೆದುಳು ಮತ್ತು ಹಣೆಯ ಸುತ್ತಲೂ ಇರುವ ನರದ ಮೇಲಿನ ಒತ್ತಡಗಳನ್ನು ಶಮನಗೊಳಿಸುತ್ತದೆ. ಗುನುಗುವ ಧ್ವನಿ ಕಂಪನಗಳು ನೈಸರ್ಗಿಕವಾಗಿ ಶಾಂತಗೊಳಿಸುವ ಪರಿಣಾಮವನ್ನು ಹೊಂದಿವೆ. ಭ್ರಮರಿ ಅಂದರೆ ದುಂಬಿ. ಈ ಪ್ರಾಣಾಯಾಮ ಮಾಡುವಾಗ ಜೇನುನೊಣದಂತೆ ಶಬ್ದ ಮಾಡುವುದರಿಂದ ಈ ಪ್ರಾಣಾಯಾಮಕ್ಕೆ ಭ್ರಮರಿ ಪ್ರಾಣಾಯಾಮ ಎಂಬ ಹೆಸರಿಡಲಾಗಿದೆ.

ಮಾಡುವ ವಿಧಾನ

* ಯಾವುದೇ ಧ್ಯಾನ ಭಂಗಿಯಲ್ಲಿ ಕುಳಿತುಕೊಳ್ಳಿ ಮತ್ತು ಬೆನ್ನುಮೂಳೆ ಮತ್ತು ಬೆನ್ನು ನೇರವಾಗಿರಲಿ ಭುಜಗಳನ್ನು ಸಡಿಲಗೊಳಿಸಿ

* ಕಣ್ಣುಗಳನ್ನು ಮುಚ್ಚಿ ಮತ್ತು ಆಳವಾದ ಉಸಿರಾಟವನ್ನು ಗಮನಿಸಿ.

ಈಗ ನಿಮ್ಮ ಎರಡೂ ಕಿವಿಗಳನ್ನು ತೋರು ಬೆರಳಿನಿಂದ ಮುಚ್ಚಿ ಮತ್ತು ಆಳವಾಗಿ ಉಸಿರನ್ನು ತೆಗೆದುಕೊಳ್ಳಿ

ಉಸಿರಾಡುವಾಗ, ನಿಮ್ಮ ಗಂಟಲಿನ ಮಟ್ಟದಿಂದ ಬರುವ ಜೇನುನೊಣದಂತೆ ಗುನುಗುವ ಶಬ್ದವನ್ನು ಮಾಡಿ

ಮೂರರಿಂದ ಐದು ನಿಮಿಷಗಳ ಕಾಲ ಅದೇ ಅಭ್ಯಾಸವನ್ನು ಪುನರಾವರ್ತಿಸಿ ಮತ್ತು ನಂತರ ಕೆಲವು ಸೆಕೆಂಡುಗಳ ಕಾಲ ಧ್ಯಾನ ಮಾಡಿ. ಉಸಿರಾಟದ ಮೇಲೆ ನಿಮ್ಮ ಗಮನವಿರಲಿ.

ಉಸಿರಾಟ ಕ್ರಮಬದ್ಧ

ಉಸಿರಾಟ ಕ್ರಮಬದ್ಧ

ಸ್ವಾಭಾವಿಕವಾಗಿ, ಅಧಿಕ ರಕ್ತದೊತ್ತಡವನ್ನು ಆರೋಗ್ಯಕರ ಮನಸ್ಸು ಮತ್ತು ದೇಹವನ್ನು ಕಾಪಾಡಿಳ್ಳುವುದರ ಮೂಲಕ ನಿಯಂತ್ರಿಸಬಹುದು. ರಕ್ತದೊತ್ತಡ ನಿರ್ವಹಣೆಯಲ್ಲಿ ಧ್ಯಾನ ಮತ್ತು ಉಸಿರಾಟದ ವ್ಯಾಯಾಮಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಪ್ರಾಣಾಯಾಮವು ಶಕ್ತಿಯನ್ನು ಸಮತೋಲನಗೊಳಿಸಲು ಮತ್ತು ಉಸಿರಾಟವನ್ನು ಕ್ರಮಬದ್ಧಗೊಳಿಸಲು ಸಹಾಯ ಮಾಡುತ್ತದೆ. ಹಾಗಾಗಿ ಅಧಿಕ ರಕ್ತದೊತ್ತಡ ಇರುವವರು ಇಂದಿನಿಂದಲೇ ಈ ಪ್ರಾಣಾಯಾಮದ ಅಭ್ಯಾಸವನ್ನು ಶುರು ಮಾಡಿ. ಈ ಸ್ವಾಭಾವಿಕ ಕ್ರಿಯೆಯ ಮೂಲಕ ನಿಮ್ಮ ಮನಸ್ಸನ್ನು ಒತ್ತಡಮುಕ್ತವಾಗಿಸಿದರೆ, ರಕ್ತದೊತ್ತಡ ಸಮಸ್ಯೆಯೂ ದೂರವಾಗುವುದು. ಹೃದಯದ ಆರೋಗ್ಯವೂ ಉತ್ತಮಗೊಳ್ಳುವುದು.

English summary

Breathing Exercises To Manage High Blood Pressure Naturally in kannada

here are the breathing techniques that helps to control hypertension easily.
X
Desktop Bottom Promotion