For Quick Alerts
ALLOW NOTIFICATIONS  
For Daily Alerts

ಮಹಿಳೆಯರೇ, ಸ್ತನ ಕ್ಯಾನ್ಸರ್ ನಿಂದ ಪಾರಾಗಲು ಇವುಗಳನ್ನು ತಪ್ಪದೇ ಪಾಲಿಸಿ

|

ನಮ್ಮ ದೇಶದ ಮಹಿಳೆಯರನ್ನು ಸಾಮಾನ್ಯವಾಗಿ ಕಾಡುವ ಸಮಸ್ಯೆ ಎಂದರೆ ಸ್ತನ ಕ್ಯಾನ್ಸರ್. ಇತ್ತೀಚಿನ ದಿನಗಳಲ್ಲಿ ಈ ಕುರಿತು ಅಲ್ಲಲ್ಲಿ ಜಾಗೃತಿ ಮೂಡಿಸುತ್ತಿರುವುದರಿಂದ, ಜನರು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದ್ದಾರೆ. ಆದರೆ ಸ್ತನ ಕ್ಯಾನ್ಸರ್ ಬರದಂತೆ ನಮ್ಮನ್ನು ನಾವು ಕಾಪಾಡಿಕೊಳ್ಳುವುದು ತುಂಬಾ ಮುಖ್ಯ. ಅದಕ್ಕಾಗಿ ಆರೋಗ್ಯಕರ ಆಹಾರ, ನಿಯಮಿತ ವ್ಯಾಯಾಮ ಸೇರಿದಂತೆ ನಾನಾ ಅಭ್ಯಾಸಗಳನ್ನು ಬೆಳೆಸಿಕೊಳ್ಳಬೇಕು.

ಆದ್ದರಿಂದ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ಕ್ಯಾನ್ಸರ್ ಬರುವ ಸಾಧ್ಯತೆಯನ್ನು ಕಡಿಮೆ ಮಾಡುವ ಕೆಲವು ವಿಧಾನಗಳನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ.

ಸ್ತನ ಕ್ಯಾನ್ಸರ್ ನಿಂದ ರಕ್ಷಣೆ ಪಡೆಯಲು ನಾವು ಮಾಡಬೇಕಾಗಿರುವ ಅತೀ ಮುಖ್ಯ ಅಂಶಗಳನ್ನು ಈ ಕೆಳಗೆ ನೀಡಲಾಗಿದೆ:

ಮಾಯಿಶ್ಚರೈಸ್ ಮಾಡಿ:

ಮಾಯಿಶ್ಚರೈಸ್ ಮಾಡಿ:

ಸ್ತನವು ತುಂಬಾ ತೆಳುವಾದ ಚರ್ಮದಿಂದ ಕೂಡಿದ್ದು, ತುಂಬಾ ಸೂಕ್ಷ್ಮವಾಗಿರುತ್ತದೆ. ಆದ್ದರಿಂದ, ಅದಕ್ಕೆ ಹೆಚ್ಚುವರಿ ರಕ್ಷಣೆ ಮತ್ತು ಲೋಷನ್ ಅಗತ್ಯವಿದೆ. ಅದಕ್ಕಾಗಿ ನಿಮ್ಮ ಸ್ತನ ಪ್ರದೇಶವನ್ನು ಪ್ರತಿದಿನ ತೇವಗೊಳಿಸುವುದು ಬಹಳ ಮುಖ್ಯ. ಸ್ತನಕ್ಕೆ ಮಾಯಿಶ್ಚರೈಸರ್ ದಪ್ಪವಾಗಿ ಹಚ್ಚುವುದರಿಂದ ಶುಷ್ಕತೆ ಮತ್ತು ನೋವಿನಿಂದ ನಿಮಗೆ ರಕ್ಷಣೆ ಸಿಗುವುದು. ಯಾವುದಾದರೂ ಮಾಯಿಶ್ಚರೈಸರ್ ಕ್ರೀಮ್ ಹಚ್ಚಿದ ನಂತರ ಯಾವುದೇ ಅಲರ್ಜಿ ಅಥವಾ ಕೆಂಪು ಗುಳ್ಳೆಗಳು ಕಂಡರೆ, ಅದನ್ನು ತಕ್ಷಣ ಬದಲಾಯಿಸಿ ಏಕೆಂದರೆ ಅದು ನಿಮ್ಮ ಚರ್ಮಕ್ಕೆ ಸೂಕ್ತವಲ್ಲ ಎಂದರ್ಥ.

ಮಸಾಜ್:

ಮಸಾಜ್:

ಹಲವಾರು ದುಗ್ಧರಸ ಗ್ರಂಥಿಗಳು ನಿಮ್ಮ ಸ್ತನದ ಸುತ್ತಲೂ ದ್ರವಗಳನ್ನು ಸೃಷ್ಟಿ ಮಾಡುತ್ತವೆ, ಈ ದ್ರವವನ್ನು ದುಗ್ಧರಸ ಎಂದು ಕರೆಯಲಾಗುತ್ತದೆ, ಇದು ಅನಾರೋಗ್ಯದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ನೀವು ಸ್ತನದ ಸುತ್ತಲೂ ಮಸಾಜ್ ಮಾಡುವುದರಿಂದ ಒತ್ತಡ ನಿವಾರಣೆಯಗುವುದು ಜೊತೆಗೆ ತಟಸ್ಥವಾಗಿದ್ದ ಎಲ್ಲಾ ದ್ರವಗಳು ನಿರಾಳವಾಗಲು ಸಹಾಯ ಮಾಡುತ್ತದೆ. ಸ್ತನಕ್ಕೆ ಲೋಷನ್ ಹಚ್ಚಿ ಮತ್ತು ಕೆಲವು ನಿಮಿಷಗಳ ಕಾಲ ಮಸಾಜ್ ಮಾಡಿ. ಹೀಗೆ ಮಾಡುವುದರಿಂದ ಸ್ತನಕ್ಕೆ ವಿಶ್ರಾಂತಿ ಸಿಗುವುದರ ಜೊತೆಗೆ ಉಸಿರಾಡಲು ಸಹಾಯ ಆಗುವುದು.

ವಿಟಮಿನ್ ಅಂಶವನ್ನು ಹೆಚ್ಚಿಸಿ:

ವಿಟಮಿನ್ ಅಂಶವನ್ನು ಹೆಚ್ಚಿಸಿ:

ವಿಟಮಿನ್ ಡಿ ಕೊರತೆಯಿಂದಾಗಿ ಬಹಳಷ್ಟು ಮಹಿಳೆಯರು ಸ್ತನ ಕ್ಯಾನ್ಸರ್‌ಗೆ ತುತ್ತಾಗುತ್ತಾರೆ ಎಂದು ಅಧ್ಯಯನಗಳು ತೋರಿಸಿವೆ. ಸಂಶೋಧನೆಗಳ ಪ್ರಕಾರ, ವಿಟಮಿನ್ ಡಿ ಹೆಚ್ಚಳವು ಸ್ತನ ಕ್ಯಾನ್ಸರ್ ಬಂದರೂ ಸಹ ಬದುಕುಳಿಯುವಿಕೆಯ ಪ್ರಮಾಣವನ್ನು ಹೆಚ್ಚಿಸುತ್ತದೆ. ಆದ್ದರಿಂದ ವಿಟಮಿನ್ ಡಿ ಸಮೃದ್ಧವಾಗಿರುವ ಆಹಾರವನ್ನು ತೆಗೆದುಕೊಳ್ಳಿ, ಜೊತೆಗೆ ಸೂರ್ಯನಿಂದ ಸಿಗುವ ನೈಸರ್ಗಿಕ ವಿಟಮಿನ್ ಡಿಯನ್ನು ಸಾಕಷ್ಟು ಬಳಸಿಕೊಳ್ಳಿ, ಇದು ಒಟ್ಟಾರೆ ಆರೋಗ್ಯಕ್ಕೂ ಒಳ್ಳೆಯದು.

ಸರಿಯಾದ ಬ್ರಾ ಸೈಜ್ ಆರಿಸಿ:

ಸರಿಯಾದ ಬ್ರಾ ಸೈಜ್ ಆರಿಸಿ:

ಸರಿಯಾದ ಗಾತ್ರದ ಬ್ರಾ ಧರಿಸುವುದು ಅತಿಮುಖ್ಯ. ಆದರೆ ಬಹಳಷ್ಟು ಮಹಿಳೆಯರು ಇದರಲ್ಲಿ ತಪ್ಪು ಮಾಡಿ, ತಮ್ಮ ಸ್ತನಕ್ಕೆ ಸರಿಹೊಂದದ ಬ್ರಾ ಧರಿಸುತ್ತಾರೆ ಎಂದು ಅಧ್ಯಯನಗಳು ಹೇಳುತ್ತವೆ. ಸ್ತನ ಅಂಗಾಂಶವು ಸಾಕಷ್ಟು ಬೆಂಬಲ ಮತ್ತು ಫಿಟ್ ಅನ್ನು ಪಡೆಯದಿದ್ದರೆ ವಿಸ್ತಾರಗೊಳ್ಳಲು ಆರಂಭವಾಗುತ್ತದೆ. ಆದ್ದರಿಂದ ಮುಂದಿನ ಬಾರಿ ಬ್ರಾ ಖರೀದಿಸುವಾಗ ನಿಮ್ಮ ಸ್ತನಕ್ಕೆ ಸರಿಹೊಂದುವಂತಹ ಬ್ರಾ ತೆಗೆದುಕೊಳ್ಳಿ. ಒಂದು ವೇಳೆ, ಸ್ಪೋರ್ಟ್ಸ್ ಬ್ರಾ ಧರಿಸುವ ವ್ಯಕ್ತಿಯಾಗಿದ್ದರೆ, ಪ್ರತಿ ಆರು ತಿಂಗಳಿಗೊಮ್ಮೆ ಸ್ಪೋರ್ಟ್ಸ್ ಬ್ರಾಗಳನ್ನು ಬದಲಿಸಿ.

ಪೌಷ್ಟಿಕಾಂಶಭರಿತ ಹಣ್ಣು ಮತ್ತು ತರಕಾರಿಗಳು:

ಪೌಷ್ಟಿಕಾಂಶಭರಿತ ಹಣ್ಣು ಮತ್ತು ತರಕಾರಿಗಳು:

ಉತ್ತಮ ಮತ್ತು ಸಮತೋಲಿತ ಆಹಾರವು ನಿಮ್ಮನ್ನು ಸ್ತನ ಕ್ಯಾನ್ಸರ್‌ನಿಂದ ರಕ್ಷಿಸುತ್ತದೆ. ಪ್ರೋಟೀನ್ ಸಮೃದ್ಧವಾಗಿರುವ ಹಣ್ಣು ಮತ್ತು ತರಕಾರಿಗಳು ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಕಪ್ಪು ದ್ರಾಕ್ಷಿಯು ತುಂಬಾ ಪೌಷ್ಟಿಕವಾಗಿದ್ದು, ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿದೆ. ಜೊತೆಗೆ ಸಂಶೋಧನೆಗಳ ಪ್ರಕಾರ, ಹೆಚ್ಚು ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡರೆ, 10-30% ನಷ್ಟು ಸ್ತನ ಕ್ಯಾನ್ಸರ್ ಕಡಿತಕ್ಕೆ ಕಾರಣವಾಗಬಹುದು.

ಕೊನೆಯದಾಗಿ, ಎಲ್ಲಕ್ಕಿಂತ ಮುಖ್ಯವಾಗಿ ನೀವು ನಿಮ್ಮ ಬಗ್ಗೆ ಕಾಳಜಿ ವಹಿಸಬೇಕು. ಸಾಕಷ್ಟು ನೀರು ಕುಡಿಯಿರಿ, ಆಗಾಗ್ಗೆ ನಿಮ್ಮ ದೇಹವನ್ನು ಪರೀಕ್ಷಿಸಿ ಮತ್ತು ಯಾವುದೇ ಗೊಂದಲಗಳಿದ್ದಲ್ಲಿ, ತಕ್ಷಣ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

English summary

Breast Cancer Prevention : Ways Protect Yourself from Breast Cancer in Kannada

Here we talking about Breast cancer prevention : Ways Protect Yourself from Breast Cancer in Kannada, read on
Story first published: Monday, August 23, 2021, 16:38 [IST]
X
Desktop Bottom Promotion