For Quick Alerts
ALLOW NOTIFICATIONS  
For Daily Alerts

ಮಳೆಗಾಲದಲ್ಲಿ ಬೆಳಿಗ್ಗೆ ಎದ್ದು ಕುಡಿಯಲೇಬೇಕಾದ ಐದು ಪಾನೀಯಗಳು

|

ಹೊರಗೆ ಸುರಿಯುವ ಮಳೆಯಿಂದ ಬೆಳಿಗ್ಗೆ ಹಾಸಿಗೆ ಬಿಟ್ಟು ಏಳಲು ಯಾರಿಗೂ ಮನಸಾಗುವುದಿಲ್ಲ. ಜಡ, ಸುಸ್ತು, ಉದಾಸೀನತೆಯು ಮಳೆಗಾಲದ ಜೊತೆಗೆ ಬರುವ ಇತರ ಕೊಡುಗೆಗಳಾಗಿವೆ. ಆದರೆ ಬೆಳಿಗ್ಗೆ ಎದ್ದು ಕೆಲವೊಂದು ಪಾನೀಯಗಳನ್ನು ಕುಡಿಯುವುದರಿಂದ ಈ ಎಲ್ಲಾ ಮಳೆಗಾಲದ ಜಡತ್ವವನ್ನು ದೂರಮಾಡಿ, ದಿನವಿಡೀ ಫ್ರೆಶ್ ಆಗಿ ಇರಬಹುದು.

ಸರಿಯಾದ ಪಾನೀಯವು ನಿಮ್ಮ ದೇಹವನ್ನು ಹೈಡ್ರೇಟ್ ಮಾಡುವುದಲ್ಲದೇ, ಶಕ್ತಿಯನ್ನು ನೀಡುತ್ತದೆ ಜೊತೆಗೆ ನಿಮ್ಮ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುವತ್ತದೆ. ಆದ್ದರಿಂದ ಪ್ರತಿದಿನ ಕುಡಿಯುವ ಟೀ, ಕಾಫಿ ಬದಲಿಗೆ ಈ ಆರೋಗ್ಯಕರ ಪಾನೀಯಗಳಿಂದ ನಿಮ್ಮ ದಿನವನ್ನು ಪ್ರಾರಂಭಿಸಿ.

ಮಳೆಗಾಲದಲ್ಲಿ ನೀವು ಸೇವಿಸಬಹುದಾದ ಕೆಲವು ಆರೋಗ್ಯಕರ ಪಾನೀಯಗಳನ್ನು ಈ ಕೆಳಗೆ ನೀಡಲಾಗಿದೆ:

1. ನಿಂಬೆ ಸೇರಿಸಿದ ಬಿಸಿ ನೀರು:

1. ನಿಂಬೆ ಸೇರಿಸಿದ ಬಿಸಿ ನೀರು:

ಇದು ಕೇವಲ ಮಳೆಗಾಲಕ್ಕೆ ಮಾತ್ರ ಸೂಕ್ತವಲ್ಲ. ಯಾವುದೇ ಕಾಲವಾದರೂ, ಬೆಳಿಗ್ಗೆ ಎದ್ದು ನಿಂಬೆ ಬೆರೆಸಿದ ನೀರನ್ನು ಕುಡಿಯುವುದು ಆರೋಗ್ಯಕ್ಕೆ ಉತ್ತಮ. ಒಂದೆರಡು ಹನಿ ನಿಂಬೆ ರಸ ಬೆರೆಸಿದ ನೀರು ಕುಡಿಯುವುದು ಆರೋಗ್ಯವನ್ನು ಸುಧಾರಿಸುವ ಜೊತೆಗೆ ದಿನವನ್ನು ಪ್ರಾರಂಭಿಸಲು ಕೈಗೆಟುಕುವ ಅತ್ಯಂತ ನೈಸರ್ಗಿಕ ಮತ್ತು ಸರಳವಾದ ಮಾರ್ಗವಾಗಿದೆ.ಇದು ನಿಮ್ಮಲ್ಲಿರುವ ಕಲ್ಮಶಗಳನ್ನು ಹೊರಹಾಕಲು ಸಹಾಯ ಮಾಡುವುದು.

2. ಸ್ಟ್ರಾಬೆರಿ ಸ್ಮೂಥಿ:

2. ಸ್ಟ್ರಾಬೆರಿ ಸ್ಮೂಥಿ:

ಸರಳವಾದ ಸ್ಟ್ರಾಬೆರಿ ಸ್ಮೂಥಿಯು ಬೆಳಗಿನ ಪಾನೀಯವಾಗಿ ಸೇವಿಸಲು ಉತ್ತಮ ಆಯ್ಕೆಯಾಗಿದೆ. ಇದು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುವ ಜೊತೆಗೆ, ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸಿದ್ಧಪಡಿಸುವ ಉತ್ತಮ ಮಾರ್ಗವಾಗಿದೆ. ಈ ಮೂಲಕ ನೀವು ದಿನವಿಡೀ ಉತ್ತಮವಾಗಿ ಆಹಾರವನ್ನು ಸೇವಿಸಬಹುದು.

3. ತೆಂಗಿನ ನೀರು:

3. ತೆಂಗಿನ ನೀರು:

ತೆಂಗಿನ ನೀರು ಅತ್ಯಂತ ಪೌಷ್ಠಿಕಾಂಶಯುಕ್ತ ಪಾನೀಯಗಳಲ್ಲಿ ಒಂದಾಗಿದೆ. ನಿಮ್ಮ ದೇಹದ ಕಳೆದುಕೊಂಡ ಪೋಷಕಾಂಶಗಳನ್ನು ಮರಳಿ ತುಂಬಿಸುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಕೆಟ್ಟ ಕೊಲೆಸ್ಟ್ರಾಲ್ ಅನ್ನು ತೆಗದುಹಾಕುತ್ತದೆ. ಅಲ್ಲದೇ, ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ. ಗರ್ಭಿಣಿಯರಿಗೆ ತೆಂಗಿನ ನೀರು ಅಮೃತವಿದ್ದಂತೆ. ನಿಯಮಿತವಾಗಿ ಸೇವಿಸುವುದರಿಂದ ಗರ್ಭಿಣಿಯರ ಆರೋಗ್ಯ ಚೆನ್ನಾಗಿರುತ್ತದೆ.

4. ಪುದೀನೊಂದಿಗೆ ನಿಂಬೆ ಪಾನಕ:

4. ಪುದೀನೊಂದಿಗೆ ನಿಂಬೆ ಪಾನಕ:

ಹವಾಮಾನದಲ್ಲಿನ ಹೆಚ್ಚಿನ ಆರ್ದ್ರತೆಯು ನಿಮ್ಮನ್ನು ತೊಂದರೆಗೆ ಒಳಪಡಿಸಬಹುದು. ನಿಮ್ಮ ದೇಹದಿಂದ ಬೆವರಿನ ರೂಪದಲ್ಲಿ ಹೆಚ್ಚಿನ ಪ್ರಮಾಣದ ನೀರನ್ನು ಸಹ ಕಳೆದುಕೊಳ್ಳಬಹುದು. ನಿಂಬೆ ಪಾನಕದಲ್ಲಿನ ಪೊಟ್ಯಾಸಿಯಮ್ ಅಂಶವು ಕೊಲೆಸ್ಟ್ರಾಲ್ ಮಟ್ಟವನ್ನು ಕಾಪಾಡಿಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ. ಪುದೀನಾ ನಿಮ್ಮ ದೇಹಕ್ಕೆ ರಿಫ್ರೆಶ್ ಅನುಭವ ನೀಡುವುದು.

5. ಜೇನುತುಪ್ಪ ಮತ್ತು ದಾಲ್ಚಿನ್ನಿ ಪಾನೀಯ:

5. ಜೇನುತುಪ್ಪ ಮತ್ತು ದಾಲ್ಚಿನ್ನಿ ಪಾನೀಯ:

ಬಿಸಿನೀರಿಗೆ ಜೇನುತುಪ್ಪ ಮತ್ತು ದಾಲ್ಚಿನ್ನಿ ಸೇರಿಸಿ ಮಾಡಿದ ಪಾನೀಯವು ನಿಮ್ಮ ಮನಸ್ಸಿಗೆ ವಿಶ್ರಾಂತಿ ನೀಡುವುದು ಮಾತ್ರವಲ್ಲದೆ, ಬೆಳಗ್ಗಿನ ಚಟುವಟಿಕೆಗಳೊಂದಿಗೆ ಸಂಬಂಧ ಹೊಂದಿದೆ. ಈ ಸರಳ ಪಾನೀಯವನ್ನು ಕುಡಿಯುವುದರಿಂದ ನರಗಳು ಶಾಂತವಾಗುತ್ತವೆ. ಈ ಮೂಲಕ ನಿಮ್ಮನ್ನು ಒತ್ತಡ ರಹಿತರನ್ನಾಗಿ ಮಾಡಿ, ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಸಹಾಯವಾಗುತ್ತದೆ.

English summary

Beverages You Must Drink During Monsoon in Kannada

Here we talking about Beverages you must drink during monsoon in kannada, read on
Story first published: Wednesday, July 28, 2021, 13:20 [IST]
X
Desktop Bottom Promotion