For Quick Alerts
ALLOW NOTIFICATIONS  
For Daily Alerts

ಮಲಬದ್ಧತೆ ನಿವಾರಿಸಲು ಈ ಹಣ್ಣಿನ ಜ್ಯೂಸ್‌ಗಳೇ ಬೆಸ್ಟ್‌ ಮೆಡಿಸಿನ್‌

|

ನಾವು ಸೇವಿಸಿದ ಅಹಾರ ಜೀರ್ಣಗೊಂಡ ಬಳಿಕ ಉಳಿದ ತ್ಯಾಜ್ಯಗಳು ಆಗಾಗ ವಿಸರ್ಜಿಸಬೇಕಾಗುತ್ತದೆ. ಯಾವಾಗ ಈ ತ್ಯಾಜ್ಯಗಳು ಹೆಚ್ಚಾಗಿ ಸಂಗ್ರಗೊಂಡು ಆಹಾರ ಚಲನೆಯನ್ನು ನಿಧಾನಗೊಳಿಸುವುದು ಮತ್ತು ಮಲವಿಸರ್ಜನೆ ಅತಿ ಕಷ್ಟಕರವಾಗುತ್ತದೆಯೋ ಇದನ್ನು ಮಲಬದ್ದತೆ ಎಂದು ಕರೆಯಬಹುದು. ಆದರೆ ಇದೇನೂ ಮಾರಣಾಂತಿಕ ಸ್ಥಿತಿಯಲ್ಲ ಮತ್ತು ಜೀವನಶೈಲಿಯ ಬದಲಾವಣೆಗಳನ್ನು ಮಾಡುವ ಮೂಲಕ ಸೂಕ್ತ ಚಿಕಿತ್ಸೆ ನೀಡಬಹುದು.

Best Juices to Relieve Constipation

ವಿರೇಚಕಗಳು ಅಥವಾ ಗಟ್ಟಿಯಾದ ಮಲಗಳನ್ನು ಮೆದುಮಾಡುವ ಮಾಡುವ ಮೂಲಕ ಸುಲಭ ವಿಸರ್ಜನೆಗೆ ಸಹಾಯ ಮಾಡುತ್ತವೆ, ಆದರೆ ಈ ಪರಿಹಾರವು ಅಲ್ಪಾವಧಿಯದ್ದಾಗಿದೆ, ಮತ್ತು ಕೆಲವು ಅಡ್ಡಪರಿಣಾಮಗಳೂ ಇರಬಹುದು. ಈ ಸಮಸ್ಯೆಗೆ ಚಿಕಿತ್ಸೆ ನೀಡಲು ನೀವು ಕೆಲವು ಮನೆಮದ್ದುಗಳನ್ನು ಪ್ರಯತ್ನಿಸಬಹುದು. ಇಂದಿನ ಲೇಖನದಲ್ಲಿ, ಮಲಬದ್ಧತೆಗೆ ಸೂಕ್ತವಾದ ಜ್ಯೂಸ್ ಗಳು, ಸೇವಿಸಬೇಕಾದ್ ಅಪ್ರಮಾಣ ಮತ್ತು ಪ್ರಯೋಜನಗಳ ಬಗ್ಗೆ ವಿವರಣೆಯನ್ನು ನೀಡಲಾಗಿದೆ.

ಮಲಬದ್ಧತೆಗೆ ಜ್ಯೂಸ್ ಅಥವಾ ಹಣ್ಣಿನ ರಸಗಳನ್ನು ಏಕೆ ಕುಡಿಯಬೇಕು

ಮಲಬದ್ಧತೆಗೆ ಜ್ಯೂಸ್ ಅಥವಾ ಹಣ್ಣಿನ ರಸಗಳನ್ನು ಏಕೆ ಕುಡಿಯಬೇಕು

ಹಣ್ಣಿನ ರಸಗಳಲ್ಲಿ ಜೀವಸತ್ವಗಳು, ಖನಿಜಗಳು ಮತ್ತು ಮುಖ್ಯವಾಗಿ ಕರಗುವ ಮತ್ತು ಕರಗದ ನಾರಿನಂಶಗಳು ಹೆಚ್ಚಿನ ಪ್ರಮಾಣದಲ್ಲಿರುತ್ತವೆ ಮತ್ತು ಹೆಚ್ಚಿನ ನೀರಿನ ಅಂಶವನ್ನೂ ಹೊಂದಿರುತ್ತದೆ. ಇವೆಲ್ಲವೂ ದೇಹಕ್ಕೆ ಅಗತ್ಯವಾದ ಪೋಷಣೆ ಮತ್ತು ನೀರನ್ನು ಒದಗಿಸುತ್ತವೆ ಹಾಗೂ ವಿಶೇಷವಾಗಿ ಜೀರ್ಣಕ್ರಿಯೆಗೆ ನೆರವಾಗಲು ಅಗತ್ಯ ಪ್ರಮಾಣದ ನಾರಿನಂಶವನ್ನೂ ಒದಗಿಸಬಹುದು.

ಕರಗುವ ನಾರು ಮಲದಲ್ಲಿನ ನೀರನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಅದನ್ನು ಮೃದುಗೊಳಿಸುತ್ತದೆ. ಇದು ಕರುಳಿನಲ್ಲಿ ಆಹಾರದ ಚಲನೆ ಉತ್ತಮಗೊಳ್ಳಲು ಸಹಾಯ ಮಾಡುತ್ತದೆ. ಕರಗದ ನಾರು ತ್ಯಾಜ್ಯವನ್ನು ಅಂಟಾಗದಂತೆ ತಡೆಯುತ್ತದೆ, ಇದು ಕರುಳಿನ ಚಲನೆಯನ್ನು ವೇಗಗೊಳಿಸುತ್ತದೆ. ಅಮೇರಿಕನ್ ಡಯೆಟಿಕ್ ಅಸೋಸಿಯೇಷನ್ ​​ಪ್ರಕಾರ, ನಾರಿನಂಶದ ಸೇವನೆಯು ವಯಸ್ಕರಿಗೆ ದಿನಕ್ಕೆ 20-35 ಗ್ರಾಂ ಮತ್ತು ಮಕ್ಕಳಿಗೆ ದಿನಕ್ಕೆ 5 ಗ್ರಾಂ ಅಗತ್ಯವಾಗಿದೆ.

ಹಣ್ಣಿನ ರಸಗಳಲ್ಲಿ ಇರುವ ಕಾರ್ಬೋಹೈಡ್ರೇಟ್ ಸೋರ್ಬಿಟೋಲ್ ಹಾಗೂ ಕರಗದ ಮತ್ತು ಕರಗುವ ನಾರಿನಂಶಗಳು, ವಿಶೇಷವಾಗಿ ಮಕ್ಕಳಲ್ಲಿ ಕರುಳಿನಲ್ಲಿ ಆಹಾರದ ಚಲನೆಯನ್ನು ಶೀಘ್ರಗೊಳಿಸಲು ಸಹಾಯ ಮಾಡುತ್ತದೆ.

ಮಲಬದ್ಧತೆಗೆ ಚಿಕಿತ್ಸೆ ನೀಡಲು ಮನೆಯಲ್ಲಿ ತಯಾರಿಸಿದ 7 ರಸಗಳು

1. ಮಲಬದ್ಧತೆಗೆ ಸೇಬಿನ ರಸ

1. ಮಲಬದ್ಧತೆಗೆ ಸೇಬಿನ ರಸ

ತಯಾರಿಸುವ ವಿಧಾನ

ಒಂದು ಸೇಬನ್ನು ಕತ್ತರಿಸಿ ಬ್ಲೆಂಡರಿನಲ್ಲಿ ಅರೆಯಿರಿ.

ನೀರು ಸೇರಿಸಿ ಮತ್ತು ಕೆಲವು ಕ್ಷಣಗಳವರೆಗೆ ಮಿಕ್ಸಿಯಲ್ಲಿ ಗೊಟಾಯಿಸಿ.

ರಸವನ್ನು ದೊಟ್ಟ ಪಾತ್ರೆಗೆ ಸುರಿಯಿರಿ.

ಜೀರಿಗೆಯ ಪುಡಿ ಬೆರೆಸಿ ಕುಡಿಯಿರಿ.

ಇದು ಹೇಗೆ ಕಾರ್ಯನಿರ್ವಹಿಸುತ್ತದೆ?

ಸೇಬುಗಳಲ್ಲಿ ಕರಗುವ ನಾರು, ಖನಿಜಗಳು ಮತ್ತು ಜೀವಸತ್ವಗಳು ಸಮೃದ್ಧವಾಗಿವೆ. ಸೇಬನ್ನು ಒಟ್ಟಾರೆಯಾಗಿ ಅಥವಾ ರಸ ರೂಪದಲ್ಲಿ ಹೊಂದಿರುವುದು ಮಲಬದ್ಧತೆಯನ್ನು ತಡೆಯಲು ಸಹಾಯ ಮಾಡುತ್ತದೆ.

ದೊಡ್ಡ ಜೀರಿಗೆಯ ಬೀಜದ ಪುಡಿಯಲ್ಲಿ ಕರಗದ ನಾರಿನಂಶವಿದೆ. ಇದು ಮಲದಲ್ಲಿ ನೀರನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ, ಮೃದುವಾದ ಮಲ ಕರುಳಿನ ಚಲನೆಯನ್ನು ಸುಲಭಗೊಳಿಸುತ್ತದೆ ಮತ್ತು ಮಲಬದ್ಧತೆಯನ್ನು ತಡೆಯುತ್ತದೆ

2. ಮಲಬದ್ದತೆ ಎದುರಾದರೆ ದ್ರಾಕ್ಷಿರಸ ಸೇವಿಸಿ

2. ಮಲಬದ್ದತೆ ಎದುರಾದರೆ ದ್ರಾಕ್ಷಿರಸ ಸೇವಿಸಿ

ತಯಾರಿಸುವ ವಿಧಾನ:

ದ್ರಾಕ್ಷಿಗಳನ್ನು ತೊಟ್ಟಿನಿಂದ ಬೇರ್ಪಡಿಸಿ ಚೆನ್ನಾಗಿ ತೊಳೆದುಕೊಳ್ಳಿ.

ಜ್ಯೂಸರ್ ನಲ್ಲಿ ದ್ರಾಕ್ಷಿ, ಶುಂಠಿ ಮತ್ತು ನೀರನ್ನು ಸೇರಿಸಿ.

ಚೆನ್ನಾಗಿ ಗೊಟಾಯಿಸಿ ನೀಡಿ. ಅದನ್ನು ಸೋಸದೇ ಕುಡಿಯಿರಿ.

ಅಗತ್ಯವಿರುವಷ್ಟು ಕಪ್ಪು ಉಪ್ಪನ್ನು ಹಾಕಿ.

ಇದು ಹೇಗೆ ಕಾರ್ಯನಿರ್ವಹಿಸುತ್ತದೆ?

ದ್ರಾಕ್ಷಿಯಲ್ಲಿಯೂ ಬಹುತೇಕ ಅಂಶ ನೀರಿನಿಂದ ಕೂಡಿದೆ ಹಾಗೂ ಸಾಕಷ್ಟು ಕರಗುವ ನಾರಿನಂಶವೂ ಇದೆ. ಇದು ದೇಹದ ತೇವಾಂಶದ ಕೊರತೆಯನ್ನು ನೀಗಿಸುತ್ತದೆ ಹಾಗೂ ಮಲವನ್ನು ವಿಸರ್ಜನೆಗೆ ಸುಲಭವಾಗಿಸುತ್ತವೆ.

ದ್ರಾಕ್ಷಿಯಲ್ಲಿರುವ ಸಾರ್ಬಿಟಾಲ್ ಎಂಬ ಸಕ್ಕರೆ ಆಲ್ಕೋಹಾಲ್ ಹೆಚ್ಚು ನೀರಿನಂಶವನ್ನು ಹಿಡಿದಿಟ್ಟುಕೊಳ್ಳುತ್ತದೆ ಹಾಗೂ ಮಲವಿಸರ್ಜನೆಗೆ ಕಾರಣವಾಗುತ್ತದೆ. ಈ ಮೂಲಕ ಸುಲಭವಾಗಿ ಮಲಬದ್ದತೆಗೆ ಪರಿಹಾರ ಕಂಡುಕೊಳ್ಳಬಹುದು.

3. ಕಿತ್ತಳೆಯ ರಸ

3. ಕಿತ್ತಳೆಯ ರಸ

ತಯಾರಿಸುವ ವಿಧಾನ:

ಕಿತ್ತಳೆಯ ತೊಳೆಗಳನ್ನು ಬ್ಲೆಂಡರಿನಲ್ಲಿ ಹಾಕಿ ಚೆನ್ನಾಗಿ ಗೊಟಾಯಿಸಿ

ಕಪ್ಪು ಕಾಳುಮೆಣಸಿನ ಪುಡಿ ಬೆರೆಸಿ ಮಿಶ್ರಣ ಮಾಡಿ.

ಇದನ್ನು ಸೋಸುವ ಅಗತ್ಯವಿಲ್ಲ, ಆದರೆ ಕೆಲವರಿಗೆ ಇಷ್ಟವಾಗದೇ ಹೋಗಬಹುದು. ಈ ವ್ಯಕ್ತಿಗಳು ಈ ನೀರನ್ನು ಸೋಸಿಯೇ ಕುಡಿಯಬೇಕು.

ಇದು ಹೇಗೆ ಕಾರ್ಯನಿರ್ವಹಿಸುತ್ತದೆ?

ಕಿತ್ತಳೆ ಹಣ್ಣು ವಿಟಮಿನ್ ಸಿ, ಖನಿಜಗಳು ಮತ್ತು ಆಹಾರದ ನಾರಿನಂಶದ ಸಮೃದ್ಧ ಮೂಲವಾಗಿದೆ (9).

ಆಹಾರದಲ್ಲಿರುವ ನಾರಿನಂಶ ನೀರನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಮಲಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಸೇರಿಕೊಳ್ಳುತ್ತದೆ. ತನ್ಮೂಲಕ ಕರುಳಿನಲ್ಲಿ ಆಹಾರದ ಚಲನೆಯನ್ನು ಉತ್ತಮಗೊಳಿಸುತ್ತದೆ.

4. ಮರಸೇಬು ಹಣ್ಣಿನ ಜ್ಯೂಸ್ (pears juice)

4. ಮರಸೇಬು ಹಣ್ಣಿನ ಜ್ಯೂಸ್ (pears juice)

ತಯಾರಿಸುವ ವಿಧಾನ:

ದೊಡ್ಡ ತುಂಡುಗಳಾಗಿ ಕತ್ತರಿಸಿ ಬ್ಲೆಂಡರಿನಲ್ಲಿ ಹಾಕಿ ಚೆನ್ನಾಗಿ ಗೊಟಾಯಿಸಿ.

ಬಳಿಕ ಜಗ್ ಗೆ ಸುರಿಯಿರಿ

ಇದಕ್ಕೆ ಒಂದು ಲಿಂಬೆಯ ರಸ ಮತ್ತು ಕೊಂಚವೇ ಕಪ್ಪು ಉಪ್ಪು ಬೆರೆಸಿ.

ಇದನ್ನು ಸೋಸದೇ ಹಾಗೇ ಕುಡಿಯಿರಿ.

ಇದು ಹೇಗೆ ಕಾರ್ಯನಿರ್ವಹಿಸುತ್ತದೆ?

ಮರಸೇಬಿನಲ್ಲಿಯೂ ಉತ್ತಮ ಪ್ರಮಾಣದ ಕರಗುವ ನಾರಿನಂಶವಿದೆ. ಪ್ರೂನ್ಸ್ ಹಣ್ಣುಗಳಲ್ಲಿ ಇರುವುದಕ್ಕಿಂತಲೂ ಹೆಚ್ಚಿನ ಪ್ರಮಾಣದ ಸೋರ್ಬಿಟಾಲ್ ಮರಸೇಬಿನಲ್ಲಿದೆ.

5. ಪ್ರೂನ್ ಜ್ಯೂಸ್

5. ಪ್ರೂನ್ ಜ್ಯೂಸ್

ತಯಾರಿಸುವ ವಿಧಾನ

ಮೊದಲು ಪ್ರೂನ್ ಹಣ್ಣುಗಳನ್ನು ಸುಮಾರು ಐದು ನಿಮಿಷಗಳವರೆಗೆ ಬಿಸಿನೀರಿನಲ್ಲಿ ಇರಿಸಿ.

ಇವು ಮೃದುವದ ಬಳಿಕ ಒಳಗಿನ ಬೀಜಗಳನ್ನು ನಿವಾರಿಸಿ ದೊಡ್ಡ ತುಂಡುಗಳಾಗಿ ಕತ್ತರಿಸಿ ಬ್ಲೆಂಡರಿನಲ್ಲಿ ಹಾಕಿ. ಅಗತ್ಯವಿದ್ದಷ್ಟು ಜೇನು ಮತ್ತು ಜೀರಿಗೆಯ ಪುಡಿಯನ್ನು ಬೆರೆಸಿ ರುಚಿಯನ್ನು ಹೆಚ್ಚಿಸಿ.

ಬಳಿಕ ನೀರು ಸೇರಿಸದೇ ನೇರವಾಗಿ ಕುಡಿಯಿರಿ.

ಇದು ಹೇಗೆ ಕಾರ್ಯನಿರ್ವಹಿಸುತ್ತದೆ?

ಪ್ರೂನ್ಸ್ ಹಣ್ಣುಗಳಲ್ಲಿ ಕರಗುವ ಆಹಾರದ ಫೈಬರ್ ಮತ್ತು ಸೋರ್ಬಿಟೋಲ್ ಇವೆ. ಇವು ಕರುಳಿನಲ್ಲಿ ಆಹಾರದ ಚಲನೆಯನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ.

ಜೀರಿಗೆ ಉತ್ತಮ ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ರಸದ ರುಚಿ ಮತ್ತು ಪರಿಮಳವನ್ನೂ ಹೆಚ್ಚಿಸುತ್ತದೆ (12).

6. ಚೆರ್ರಿ ಹಣ್ಣುಗಳ ಜ್ಯೂಸ್

6. ಚೆರ್ರಿ ಹಣ್ಣುಗಳ ಜ್ಯೂಸ್

ತಯಾರಿಸುವ ವಿಧಾನ:

ಈ ಹಣ್ಣುಗಳನ್ನುಕೊಂಚ ಹೊತ್ತು ನೆನೆಸಿಟ್ಟು ಬಳಿಕ ಒಣಗಿನ ಬೀಜಗಳನ್ನು ನಿವಾರಿಸಿ.

ಈ ತಿರುಳನ್ನು ಬ್ಲೆಂಡರಿನೊಳಕ್ಕೆ ಹಾಕಿ ಗೊಟಾಯಿಸಿ. ಅಗತ್ಯವಿದ್ದಷ್ಟು ನೀರು ಬೆರೆಸಿ. ಜೊತೆಗೇ ಇದಕ್ಕೆ ಕೊಂಚವೇ ಕಪ್ಪು ಉಪ್ಪು ಬೆರೆಸಿ ಸೇವಿಸಿ.

ಇದು ಹೇಗೆ ಕಾರ್ಯನಿರ್ವಹಿಸುತ್ತದೆ?

ಚೆರ್ರಿ ಹಣ್ಣುಗಳಲ್ಲಿ ಪಾಲಿಫಿನಾಲ್, ನೀರು ಮತ್ತು ಕರಗುವ ಫೈಬರ್ ರುತ್ತವೆ. ಚೆರ್‍ರಿಗಳಲ್ಲಿರುವ ನಾರಿನಂಶವು ಮಲಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಸೇರಿಸಲು ಸಹಾಯ ಮಾಡುತ್ತದೆ ಮತ್ತು ಮಲವಿಸರ್ಜನೆಯನ್ನು ಸುಗಮಗೊಳಿಸುತ್ತದೆ.

7. ಲಿಂಬೆ ಹಣ್ಣು

7. ಲಿಂಬೆ ಹಣ್ಣು

ತಯಾರಿಸುವ ವಿಧಾನ:

ಒಂದೆರಡು ಲಿಂಬೆಯ ರಸವನ್ನು ಹಿಂಡಿ ಕೊಂಚ ಜೇನು, ಜೀರಿಗೆ ಪುಡಿ ಮತ್ತು ಉಗುರುಬೆಚ್ಚನೆಯ ನೀರನ್ನು ಬೆರೆಸಿ ಚೆನ್ನಾಗಿ ಗೊಟಾಯಿಸಿ.

ಬಳಿಕ ಚೆನ್ನಾಗಿ ಕಲಕಿ ನೇರವಾಗಿ ಕುಡಿಯಿರಿ.

ಇದು ಹೇಗೆ ಕಾರ್ಯನಿರ್ವಹಿಸುತ್ತದೆ?

ಲಿಂಬೆಯಲ್ಲಿ ಕರಗುವ ನಾರು ಮತ್ತು ವಿಟಮಿನ್ ಸಿ ಸಮೃದ್ಧವಾಗಿದೆ. ಅವು ಮಲಬದ್ಧತೆಗೆ ಚಿಕಿತ್ಸೆ ನೀಡಲು ಸಹಾಯ ಮಾಡುವುದಲ್ಲದೆ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತವೆ.

ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಡಲು ಜೀರಿಗೆ ಪುಡಿ ಅತ್ಯಂತ ಸಹಾಯಕವಾಗಿದೆ

ನೆನಪಿಡಿ

ಯಾವುದೇ ಪರಿಸ್ಥಿತಿ ವಿಕೋಪಕ್ಕೆ ಮುನ್ನವೇ ತಡೆಗಟ್ಟಲು ಮಲಬದ್ಧತೆಗೆ ಸಾಧ್ಯವಾದಷ್ಟು ಬೇಗ ಚಿಕಿತ್ಸೆ ನೀಡುವುದು ಮುಖ್ಯ. ನಿಮ್ಮ ದೈನಂದಿನ ದಿನಚರಿಯಲ್ಲಿ ಹಣ್ಣುಗಳ ರಸವನ್ನು ಸೇರಿಸುವುದು ಮಲಬದ್ಧತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಅಲ್ಲದೆ, ಹಣ್ಣುಗಳಲ್ಲಿನ ಪೋಷಕಾಂಶಗಳು ಇತರ ಅನೇಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಲೂ ನೆರವಾಗುತ್ತವೆ. ಈ ಯಾವುದೇ ರಸವನ್ನು ನೀವು ಪ್ರಯತ್ನಿಸುವ ಮೊದಲು ಆಹಾರ ತಜ್ಞರನ್ನು ಸಂಪರ್ಕಿಸಿ ಸಲಹೆ ಪಡೆಯುವುದನ್ನು ಖಚಿತಪಡಿಸಿಕೊಳ್ಳಿ.

English summary

Best Juices to Relieve Constipation

Here we are discussing about Best Juices to Relieve Constipation, Laxatives can help relieve the condition, but the relief is short-term, and there may be a few side effects . You can try out some home remedies to treat this problem. In this article, we will discuss homemade juices to treat constipation, their dosage, and benefits. Read more.
X
Desktop Bottom Promotion