For Quick Alerts
ALLOW NOTIFICATIONS  
For Daily Alerts

ಸಂಗಾತಿಯ ಪಕ್ಕದಲ್ಲಿ ಮಲಗೋದ್ರಿಂದ ಇಷ್ಟೆಲ್ಲಾ ಆರೋಗ್ಯಕ್ಕೆ ಪ್ರಯೋಜನವಿದೆಯಂತೆ ನೋಡಿ..

|

ಸಂಗಾತಿಯ ಸಾಮಿಪ್ಯವೆಂದರೆ ಅದೊಂಥರಾ ಮನಸ್ಸಿಗೆ ನಿರಾಳವಾದ ಅನುಭವ. ಸಹಜವಾಗಿಯೇ ಸಂಬಂಧದಲ್ಲಿರುವಾಗ ಸಂಗಾತಿಗಳಿಬ್ಬರೂ ಜೊತೆಯಾಗಿ ಕೆಲಸ ಮಾಡಲು ಸಂತೋಷಪಡುತ್ತಾರೆ. ಕಾಳಜಿ ವಹಿಸುವ ಸಂಗಾತಿಯು ಪಕ್ಕದಲ್ಲೇ ಇದ್ದರೆ ದೇಹದಲ್ಲಿ ಮನಸ್ಸಿನಲ್ಲಿ ಉತ್ಸಾಹವಿರುತ್ತದೆ. ಅವರೊಂದಿಗಿರುವ ಪ್ರತಿಯೊಂದು ಕ್ಷಣವೂ ಕೂಡಾ ಖುಷಿಯ ಕ್ಷಣಗಳಾಗಿರುತ್ತದೆ. ಕೆಲವೊಂದು ಅಧ್ಯಯನದ ಪ್ರಕಾರ ಸಂಗಾತಿಯು ಪಕ್ಕದಲ್ಲಿ ಮಲಗಿದರೆ ಆಳವಾದ ನಿದ್ರೆಗೆ ಒಳಗಾಗುತ್ತಾರಂತೆ. ಇಲ್ಲವಾದರೆ ಅಭದ್ರತೆ, ಭಯದಿಂದಾಗಿ ನಿದ್ದೆಗೆ ಅಡ್ಡಿಯಾಗುತ್ತದೆ ಎನ್ನುತ್ತದೆ ಇದು.ಇಷ್ಟು ಮಾತ್ರವಲ್ಲ ಸಂಗಾತಿಯ ಪಕ್ಕ ಮಲಗಿದರೆ ಇನ್ನೂ ಹಲವು ಪ್ರಯೋಜನಗಳಿವೆ ಎನ್ನುತ್ತಾರೆ ವಿಜ್ಞಾನಿಗಳು..ಅದೇನು ಎನ್ನುವುದನ್ನು ಇಲ್ಲಿ ವಿವರಿಸಲಾಗಿದೆ.

ನೆಮ್ಮದಿಯ ನಿದ್ದೆ

ನೆಮ್ಮದಿಯ ನಿದ್ದೆ

ಒಬ್ಬ ವ್ಯಕ್ತಿಯ ಮನಸ್ಸಿನಲ್ಲಿ ತೃಪ್ತಿ, ಸಂತೋಷವಿದ್ದರೆ ಆತ ನೆಮ್ಮದಿಯಾಗಿ ನಿದ್ದೆ ಮಾಡುತ್ತಾನೆ. ಮತ್ತೊಂದೆಡೆ ನಿಮ್ಮ ಬಗ್ಗೆ ಕಾಳಜಿ ವಹಿಸುವ, ಪ್ರೀತಿಸುವ ಸಂಗಾತಿಯ ಪಕ್ಕದಲ್ಲಿ ಮಲಗಿದರೆ ದೇಹವನ್ನು ಪುನಃಶ್ಚೈತನ್ಯಗೊಳಿಸುವ ನಿದ್ದೆಯನ್ನು ಪಡೆಯುತ್ತೀರಿ ಎಂದು ಸಂಶೋಧನೆಯು ವಿವರಿಸಿದೆ. ಗಾಢವಾದ, ಆಳವಾದ ನಿದ್ದೆ ಬರುವುದು ಜೀವನದಲ್ಲಿ ಸುರಕ್ಷತೆಯ ಭಾವವಿದ್ದಾಗ ಮಾತ್ರ. ಸಂಗಾತಿಯ ಸಾಮಿಪ್ಯದಿಂದ ನೀವು ಸುರಕ್ಷತೆಯನ್ನು ಅನುಭವಿಸಿದರೆ ಗಾಢವಾದ ನಿದ್ದೆಗೆ ಜಾರುವುದಂತೂ ಖಚಿತ.

ರಕ್ಷಣೆಯ ಭಾವನೆ

ರಕ್ಷಣೆಯ ಭಾವನೆ

ನಾವು ಚಿಕ್ಕವರಿದ್ದಾಗ, ಬಾಲ್ಯದಲ್ಲಿ ಗಾಢವಾದ ನಿದ್ದೆ ಮಾಡುವುದಿದೆ. ಯಾಕೆಂದರೆ ಪೋಷಕರು ನಮ್ಮೊಂದಿಗಿದ್ದಾರೆ, ನಾವು ಭಯಪಡದೇ ಸುರಕ್ಷಿತವಾಗಿ ನಿದ್ದೆ ಮಾಡಬಹುದು ಎನ್ನುವ ಭಾವನೆಯಿರುತ್ತದೆ. ಮುಂದೆ ವಯಸ್ಕರಾದಾಗ ಪ್ರೀತಿಯ ಸಂಗಾತಿಯ ಮೇಲೆ ಅವಲಂಬಿತರಾಗುತ್ತೇವೆ. ಅವರು ನಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ, ಕಾಳಜಿ ವಹಿಸುತ್ತಾರೆ ಎನ್ನುವ ನಂಬಿಕೆಯಿರುತ್ತದೆ. ಜೊತೆಗೆ ಸಂಗಾತಿಯೂ ಕೂಡಾ ಎಲ್ಲಾ ವಿಚಾರದಲ್ಲೂ ಬೆಂಬಲ ಒಂದು ರೀತಿಯ ಭದ್ರತೆಯ ಭಾವನೆಯನ್ನು ಹೊಂದಿದ್ದಾಗ ಅವರೊಂದಿಗೆ ಮಲಗಿದಾಗ ಉತ್ತಮ ನಿದ್ದೆ ಮಾಡುತ್ತೇವೆ.

ಒತ್ತಡವೂ ಮಾಯ

ಒತ್ತಡವೂ ಮಾಯ

ಪಿಟ್ಸ್‌ಬರ್ಗ್‌ ವಿಶ್ವವಿದ್ಯಾನಿಲಯವು ಕೈಗೊಂಡ ಅಧ್ಯಯನದ ಪ್ರಕಾರ ''ನೀವು ಪ್ರೀತಿಸುವವರ ಪಕ್ಕದಲ್ಲಿ ಮಲಗಿದಾಗ ನಿಮ್ಮ ಒತ್ತಡದ ಮಟ್ಟ ಮತ್ತು ಆತಂಕವು ಪರಿಣಾಮಕಾರಿಯಾಗಿ ಕಡಿಮೆಯಾಗುತ್ತದೆ ಎನ್ನುತ್ತದೆ. ಇದು ಜೀರ್ಣಕಾರಿ ಸಮಸ್ಯೆ ಮತ್ತು ಹೃದಯದ ಖಾಯಿಲೆಗಳ ಅಪಾಯವನ್ನು ಕೂಡಾ ತಗ್ಗಿಸುತ್ತದೆ.

ಅಕ್ಸಿಟೋಸಿನ್‌ ಹಾರ್ಮೋನ್‌ ಹೆಚ್ಚಳ

ಅಕ್ಸಿಟೋಸಿನ್‌ ಹಾರ್ಮೋನ್‌ ಹೆಚ್ಚಳ

ಸಂಗಾತಿಯ ಪಕ್ಕ ಮಲಗುವುದು ನಿದ್ರಾಹೀನತೆಯನ್ನೂ ನಿವಾರಿಸುತ್ತದೆ ಜೊತೆಗೆ ಇದು ಆಕ್ಸಿಟೋಸಿನ್‌ ಹಾರ್ಮೋನ್‌ನಲ್ಲಿ ಹೆಚ್ಚಳವನ್ನುಂಟು ಮಾಡುತ್ತದೆ. ಈ ಹಾರ್ಮೋನ್‌ ಬಲವಾದ ಬಂಧವನ್ನು ಮತ್ತು ಲೈಂಗಿಕ ಚಟುವಟಿಕೆಯನ್ನು ಪ್ರಚೋದಿಸುವ ಹಾರ್ಮೋನ್‌ ಆಗಿದೆ. ಹಾಗಾಗಿ ಜೊತೆಗೆ ಮಲಗುವುದು ನಿಮ್ಮಿಬ್ಬರ ಬಾಂಧವ್ಯವನ್ನು, ಪ್ರೀತಿಯನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ.

ರೋಗನಿರೋಧಕ ಶಕ್ತಿಯ ಸುಧಾರಣೆ

ರೋಗನಿರೋಧಕ ಶಕ್ತಿಯ ಸುಧಾರಣೆ

ನಿಮ್ಮ ಪ್ರೀತಿಯ ವ್ಯಕ್ತಿಯೊಂದಿಗೆ ನೀವು ಮಲಗಿದಾಗ, ಪ್ರೀತಿಯನ್ನು ಹಂಚಿಕೊಳ್ಳುವುದು ನಿಮ್ಮ ಆರೋಗ್ಯಕರ ದೇಹಕ್ಕೂ ಉತ್ತಮ. ಪರಸ್ಪರ ಮುದ್ದಾಡುವುದು ಸಹ ಆಕ್ಸಿಟೋಸಿನ್ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕೋಶಗಳನ್ನು ಉತ್ಪಾದಿಸುತ್ತದೆ ಎಂದು ಅಧ್ಯಯನಗಳು ಸಾಬೀತುಪಡಿಸಿದೆ, ಇದು ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ಸಮತೋಲಿತ ಮತ್ತು ಬಲವಾಗಿ ಉಳಿಸಿಕೊಳ್ಳಲು ಕಾರಣವಾಗಿದೆ.

ವಯಸ್ಸಾಗುವುದೂ ನಿಧಾನವಾಗುತ್ತದೆ

ವಯಸ್ಸಾಗುವುದೂ ನಿಧಾನವಾಗುತ್ತದೆ

ನೀವು ವಸ್ಸಾಗಿದ್ದರೂ ಇನ್ನೂ ಯಂಗ್‌ ಆಗಿ ಕಾಣಿಸಿಕೊಳ್ಳಬೇಕೆಂದರೆ ನೀವು ಮೇಕಪ್‌ ಆಗಲಿ, ಮೇಕ್‌ಓವರ್‌ ಮಾಡಿಸಿಕೊಳ್ಳಬೇಕಾಗಿಲ್ಲ. ನಿಮ್ಮ ಪ್ರೀತಿಯ ಸಂಗಾತಿಯೊಂದಿಗೆ ಮಲಗಿದರೆ ಸಾಕು ಎನ್ನುತ್ತದೆ ಸಂಶೋಧನೆ. ನಿಮ್ಮ ಸಂಗಾತಿಯೊಂದಿಗೆ ನೀವು ಅದ್ಭುತ ಸಮಯವನ್ನು ಕಳೆಯುವಾಗ ಮತ್ತು ಪ್ರೀತಿಯಿಂದ ಮುದ್ದಾಡುವುದರಿಂದ ನೀವು ನಿಜವಾಗಿ ಇರುವುದಕ್ಕಿಂತ ಸಂತೋಷವಾಗಿ ಮತ್ತು ಯಂಗ್‌ ಆಗಿ ಕಾಣಲು ಸಹಾಯ ಮಾಡುತ್ತದೆ.ನೀವು ಕಡಿಮೆ ಒತ್ತಡವನ್ನು ಅನುಭವಿಸಿದಾಗ ಮತ್ತು ಶಾಂತಿಯುತವಾಗಿದ್ದಾಗ, ನಿಮ್ಮ ದೇಹವು ಅಂತಿಮವಾಗಿ ನೀವು ನಿಜವಾಗಿರುವುದಕ್ಕಿಂತ ಕಡಿಮೆ ಯೌವನವನ್ನು ಅನುಭವಿಸುತ್ತದೆಯಂತೆ.ಹಾಗಾಗಿ ಯಾರೆಲ್ಲಾ ಸಂಗಾತಿಯೊಂದಿಗೆ ಸಣ್ಣಪುಟ್ಟ ಕಾರಣಕ್ಕೆ ಮುನಿಸಿಕೊಂಡು ತಲೆದಿಂಬು ಅಡ್ಡಲಾಗಿಟ್ಟುಕೊಂಡು ಮಲಗುವುದೋ ಅಥವಾ ಬೇರೆ ಕೋಣೆಯಲ್ಲಿ ಮಲಗುತ್ತೀರೋ, ಈ ಪ್ರಯೋಜನಗಳನ್ನು ತಿಳಿದುಕೊಂಡಾದರೂ ಸಂಗಾತಿಯೊಂದಿಗೆ ಮಲಗಿ, ನೆಮ್ಮದಿಯಾಗಿ ಗಾಢವಾದ ನಿದ್ದೆಯನ್ನು ಮಾಡಿ.

English summary

Benefits of Sleeping Next to your Partner in kannada

here we are discussing about Benefits of Sleeping Next to your Partner in kannada.
X
Desktop Bottom Promotion