For Quick Alerts
ALLOW NOTIFICATIONS  
For Daily Alerts

ಮನೆಮದ್ದು: ಅಡುಗೆ ಮನೆಯಲ್ಲಿರುವ ಈ ಬೀಜಗಳ ಸೇವನೆ ಮಧುಮೇಹ ನಿಯಂತ್ರಿಸಬಲ್ಲದು ಗೊತ್ತಾ..?

|

ರುಚಿಯಲ್ಲಿ ಕಹಿಯಾದರೂ ಉತ್ತಮ ಆರೋಗ್ಯಕ್ಕೆ ಇದು ಅದ್ಭುತವಾದ ಮನೆಮದ್ದು, ಕಿಚನ್‌ನಲ್ಲಿ ಅಡುಗೆಯ ರುಚಿ ಹೆಚ್ಚಿಸುವ ಈ ಬೀಜಗಳ ಆರೋಗ್ಯಕರ ಪ್ರಯೋಜನಗಳ ಬಗ್ಗೆ ಈ ಲೇಖನದಲ್ಲಿ ಹೇಳ ಹೊರಟ್ಟಿದ್ದೇವೆ. ಆ ಬೀಜಗಳು ಯಾವುದೆಂದರೆ ಮೆಂತ್ಯ ಹಾಗೂ ಕಲೋಂಜಿ.

ಇತ್ತೀಚೆಗಂತೂ ಮಧುಮೇಹ ಸಾಮಾನ್ಯವಾಗಿ ಬಿಟ್ಟಿದೆ, ಹೀಗಿದ್ದಾಗ ಇವರೆಡೂ ಬೀಜಗಳು ಎಷ್ಟು ಪ್ರಯೋಜನಕಾರಿ ಎಂದರೆ, ಮಧುಮೇಹ ನಿಯಂತ್ರಿಸುವ ಅತ್ಯುತ್ತಮ ಮನೆ ಮದ್ದು ಎಂದೂ ಕೂಡಾ ಕರೆಯಲ್ಪಟ್ಟಿದೆ ಮಾತ್ರವಲ್ಲ ಇವೆರಡೂ ಹೃದಯ ಸಮಸ್ಯೆಗಳಿಗೂ ಪರಿಹಾರ ನೀಡುತ್ತವೆ. ಹಾಗಾಗಿ ಆಯುರ್ವೇದ ಚಿಕಿತ್ಸೆಯಲ್ಲೂ ಮೆಂತ್ಯ ಮತ್ತು ಕಲೋಂಜಿ ಎರಡನ್ನೂ ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.

kalonji and fenugreek seeds

ಕಪ್ಪು ಜೀರಿಗೆ ಅಥವಾ ಕಾಳ ಜೀರಿಗೆ ಎಂದು ಕರೆಯಲ್ಪಡುವ ಕಲೋಂಜಿ ಹಾಗೂ ಮೆಂತ್ಯ ಕೂದಲು ಹಾಗೂ ಚರ್ಮದ ಸಮಸ್ಯೆಗಳನ್ನೂ ನಿವಾರಿಸುವುದು. ರಕ್ತದಲ್ಲಿನ ಸಕ್ಕರೆಯ ಮಟ್ಟ, ರಕ್ತದೊತ್ತಡ, ಯೂರಿಕ್ ಆಸಿಡ್ ಮಟ್ಟವನ್ನು ನಿಯಂತ್ರಿಸುವುದು, ರಕ್ತಹೀನತೆಯ ಚಿಕಿತ್ಸೆ ಮತ್ತು ಕೂದಲು ಉದುರುವಿಕೆಯನ್ನು ತಡೆಯುವವರೆಗೆ ಅನೇಕ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಮೆಂತ್ಯವನ್ನು ಪ್ರಾಚೀನ ಕಾಲದಿಂದಲೂ ಔಷಧೀಯ ಉದ್ದೇಶಗಳಿಗಾಗಿ ಬಳಸಲಾಗುತ್ತಿದೆ.ಅದಲ್ಲದೇ ಕಾಳಜೀರಿಗೆಯ ಕಷಾಯವನ್ನು ಕರಾವಳಿಯ ಕಡೆ ಹಸಿ ಬಾಣಂತಿಗೆ ಕುಡಿಸದೆ ಬಿಡುವವರಿಲ್ಲ.

ಈ ಕರಿ ಜೀರಿಗೆ ಮತ್ತು ಮೆಂತ್ಯದ ಬೀಜವನ್ನು ನೀರಿನಲ್ಲಿ ಹಾಕಿ ಕುಡಿದರೆ ಒಳ್ಳೆಯದು ಎನ್ನುತ್ತಾರೆ. ಇದು ಅನೇಕ ರೋಗಗಳಿಂದ ನಮ್ಮನ್ನು ರಕ್ಷಿಸುತ್ತವೆ. ಇಂತಹ ಪ್ರಯೋಜನಕಾರಿ ಬೀಜವನ್ನು ಹೇಗೆ ಸೇವಿಸಿದರೆ ಒಳ್ಳೆಯದು, ಇದರಿಂದಾಗುವ ಪ್ರಯೋಜನಗಳೇನು ಎನ್ನುವ ಕುರಿತಾದ ವಿವರವಾದ ಮಾಹಿತಿ ಈ ಕೆಳಗಿದೆ ನೋಡಿ.

ಮೆಂತ್ಯ ಮತ್ತು ಕಲೋಂಜಿಯ ಸೇವನೆ ಹೇಗೆ

ಮೆಂತ್ಯ ಮತ್ತು ಕಲೋಂಜಿಯ ಸೇವನೆ ಹೇಗೆ

ಮೊದಲನೆಯದಾಗಿ, ನೀವು ಮೆಂತ್ಯ ಮತ್ತು ಕಲೋಂಜಿ ಬೀಜಗಳನ್ನು ಸಮ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು. ಈಗ ಅವುಗಳನ್ನು 1 ಲೋಟ ನೀರಿಗೆ ಹಾಕಿ ಕುದಿಸಿ ಮತ್ತು ರುಚಿಗೆ ನಿಂಬೆ, ಶುಂಠಿ ಅಥವಾ ಜೇನುತುಪ್ಪವನ್ನು ಸೇರಿಸಿ ನಂತರ ಕುಡಿಯಿರಿ. ನೀವು ನೀರನ್ನು ಸೋಸಿ ಕುಡಿಯಬೇಕು. ಇದನ್ನು ಸೇವಿಸುವ ಇನ್ನೊಂದು ವಿಧಾನವೆಂದರೆ ಎರಡೂ ಬೀಜಗಳನ್ನು ಸಮನಾಗಿ ತೆಗೆದುಕೊಂಡು ರಾತ್ರಿಯಿಡೀ ನೀರಿನಲ್ಲಿ ನೆನೆಸಿ. ಬೆಳಿಗ್ಗೆ ನೀರನ್ನು ಸೋಸಿಕೊಂಡು ಕುಡಿಯಿರಿ. ಪ್ರತಿನಿತ್ಯ ಈ ನೀರನ್ನು ಕುಡಿಯುವುದರಿಂದ ಮಧುಮೇಹ ನಿಯಂತ್ರಣವಾಗುತ್ತದೆ ಮತ್ತು ತೂಕವೂ ಕಡಿಮೆಯಾಗುತ್ತದೆ.

ನಿಮ್ಮ ದೇಹಕ್ಕೆ ಸ್ವಲ್ಪ ಕೊಲೆಸ್ಟ್ರಾಲ್ ಅಗತ್ಯವಿರುವಾಗ, ಹೆಚ್ಚಿನ ಪ್ರಮಾಣದಲ್ಲಿ ನಿಮ್ಮ ರಕ್ತದಲ್ಲಿ ಸಂಗ್ರಹವಾಗಬಹುದು ಮತ್ತು ನಿಮ್ಮ ಹೃದಯ ಕಾಯಿಲೆಯ ಅಪಾಯವನ್ನು ಹೆಚ್ಚಿಸಬಹುದು. ಮಧುಮೇಹ ಹೊಂದಿರುವ 57 ಜನರ ಮೇಲೆ ಮಾಡಿದ ಅಧ್ಯಯನದಂರೆ ಒಂದು ವರ್ಷದವರೆಗೆ ಕಲೋಂಜಿಯನ್ನು ಸೇವಿಸಿರುವುದರಿಂದ ಒಟ್ಟು ಮತ್ತು ಎಲ್‌ಡಿಎಲ್ ಕೊಲೆಸ್ಟ್ರಾಲ್ ಕಡಿಮೆಯಾಗಿದೆ ಎಂದು ತೋರಿಸಿದೆ, ಇವೆಲ್ಲವೂ ಎಚ್‌ಡಿಎಲ್ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ ಎನ್ನುವ ಅಂಶ ಕಂಡುಬಂದಿದೆ.

ಮೆಂತ್ಯ ಮತ್ತು ಕಲೋಂಜಿಯಲ್ಲಿನ ಪೋಷಕಾಂಶಗಳು

ಮೆಂತ್ಯ ಮತ್ತು ಕಲೋಂಜಿಯಲ್ಲಿನ ಪೋಷಕಾಂಶಗಳು

ಮೆಂತ್ಯ ಮತ್ತು ಕಲೋಂಜಿಯಲ್ಲಿ ಪೋಷಕಾಂಶಗಳು ಸಮೃದ್ಧವಾಗಿವೆ. ಮೆಂತ್ಯದಲ್ಲಿ ಆಹಾರದ ಫೈಬರ್, ಪ್ರೊಟೀನ್, ಫೋಲೇಟ್, ಕ್ಯಾಲ್ಸಿಯಂ ಮತ್ತು ಕಬ್ಬಿಣದಲ್ಲಿ ಅಧಿಕವಾಗಿದೆ. ಇದರ ಜೊತೆಗೆ, ಮೆಂತ್ಯ ಬೀಜಗಳು ಮೆಗ್ನೀಸಿಯಮ್, ಪೊಟ್ಯಾಸಿಯಮ್, ರಂಜಕ ಮತ್ತು ಸೋಡಿಯಂನ ಉತ್ತಮ ಮೂಲವಾಗಿದೆ. ಇದಲ್ಲದೆ, ಕಲೋಂಜಿಯಲ್ಲಿ ವಿಟಮಿನ್‌ಗಳು, ಫೈಬರ್, ಕ್ಯಾಲ್ಸಿಯಂ, ಖನಿಜಗಳು ಮತ್ತು ಪ್ರೋಟೀನ್‌ಗಳು ಅಧಿಕವಾಗಿವೆ. ಮೆಂತ್ಯ ಮತ್ತು ಕಲೋಂಜಿ ಬೀಜಗಳು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ, ಜೊತೆಗೆ ಚರ್ಮ ಮತ್ತು ಕೂದಲಿಗೆ ಪ್ರಯೋಜನಕಾರಿಯಾಗಿದೆ.

ಅಧ್ಯಯನದ ಪ್ರಕಾರ ಕರಿ ಜೀರಿಗೆಯಲ್ಲಿನ ಉತ್ಕರ್ಷಣ ನಿರೋಧಕಗಳು ಕ್ಯಾನ್ಸರ್, ಮಧುಮೇಹ, ಹೃದ್ರೋಗ ಮತ್ತು ಸ್ಥೂಲಕಾಯತೆ ಸೇರಿದಂತೆ ಹಲವಾರು ರೀತಿಯ ದೀರ್ಘಕಾಲದ ಪರಿಸ್ಥಿತಿಗಳ ವಿರುದ್ಧ ರಕ್ಷಿಸುತ್ತದೆ. ಅಲ್ಲದೇ ಕಿವಿಯ ಸೋಂಕಿನಿಂದ ನ್ಯುಮೋನಿಯಾದವರೆಗೆ ಅಪಾಯಕಾರಿ ಸೋಂಕುಗಳಿಗೆ ಕಾರಣವಾಗುವ ಬ್ಯಾಕ್ಟೀರಿಯಾವನ್ನು ನಿವಾರಿಸುವ ಶಕ್ತಿ ಕರಿಜೀರಿಗೆ ಅಥವಾ ಕಲೋಂಜಿಗೆ ಇದೆ ಎನ್ನಲಾಗುತ್ತಿದೆ.

ಮೆಂತ್ಯ ಮತ್ತು ಕಲೋಂಜಿ ಸೇವನೆಯಿಂದಾಗುವ ಪ್ರಯೋಜನಗಳು

ಉತ್ತಮ ಜೀರ್ಣಕ್ರಿಯೆಗೆ ಸಹಕಾರಿ

ಮೆಂತ್ಯ ಮತ್ತು ಕಲೋಂಜಿ ಸೇವನೆಯಿಂದ ಜೀರ್ಣಕ್ರಿಯೆ ಬಲಗೊಳ್ಳುತ್ತದೆ. ಗ್ಯಾಸ್ ಸಮಸ್ಯೆ, ಹೊಟ್ಟೆ ಉಬ್ಬುವುದು ಅಥವಾ ಹೊಟ್ಟೆ ನೋವು ಇರುವವರು ಮೆಂತ್ಯ ಮತ್ತು ಕರಿಜೀರಿಗೆಯ ಬೀಜಗಳನ್ನು ಸೇವಿಸಬೇಕು. ಇದು ಕರುಳನ್ನು ಶುದ್ಧೀಕರಿಸುತ್ತದೆ ಮತ್ತು ಮಲಬದ್ಧತೆಗೂ ಪರಿಹಾರವನ್ನು ನೀಡುತ್ತದೆ. ಇದನ್ನು ತಿನ್ನುವುದರಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ.

ಯಕೃತ್ತಿನ ಆರೋಗ್ಯ

ಮೆಂತ್ಯ ಮತ್ತು ಕಲೋಂಜಿಯನ್ನು ಸೇವಿಸುವುದರಿಂದ ಯಕೃತ್ತು ಕೂಡ ಸದೃಢವಾಗುತ್ತದೆ. ಇದರಿಂದ ಯಕೃತ್ತಿನ ಅನಾರೋಗ್ಯವನ್ನು ತಪ್ಪಿಸಬಹುದು. ಇದಲ್ಲದೆ, ಇದು ಫ್ಯಾಟಿ ಲಿವರ್‌ ಸಮಸ್ಯೆ ಬಾರದಂತೆ ಸುರಕ್ಷಿತವಾಗಿರಲು ಸಹಾಯ ಮಾಡುತ್ತದೆ. ಮೆಂತ್ಯ ಮತ್ತು ಕಲೋಂಜಿಯನ್ನು ಒಟ್ಟಿಗೆ ತಿನ್ನುವುದರಿಂದ ಚಯಾಪಚಯ ಕ್ರಿಯೆಯೂ ಉತ್ತಮವಾಗಿರುತ್ತದೆ.

ಮಧುಮೇಹ ನಿಯಂತ್ರಣ

ಮೆಂತ್ಯ ಬೀಜಗಳು ಮತ್ತು ಕಲೋಂಜಿ ಬೀಜಗಳು ಮಧುಮೇಹದಲ್ಲಿ ಪ್ರಯೋಜನಕಾರಿ. ಅವುಗಳ ಸೇವನೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ ಮತ್ತು ಇನ್ಸುಲಿನ್ ಪ್ರತಿರೋಧವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮೆಂತ್ಯ ಮತ್ತು ಕಲೋಂಜಿ ತಿನ್ನುವುದು ಮೇದೋಜ್ಜೀರಕ ಗ್ರಂಥಿಯಲ್ಲಿನ ಬೀಟಾ-ಸೆಲ್ ಕಾರ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಚರ್ಮ ಮತ್ತು ಕೂದಲಿನ ಆರೋಗ್ಯ

ಮೆಂತ್ಯ ಮತ್ತು ಕಲೋಂಜಿ ಬೀಜಗಳು ಕೂದಲು ಮತ್ತು ಚರ್ಮಕ್ಕೆ ತುಂಬಾ ಪ್ರಯೋಜನಕಾರಿ. ಅವುಗಳನ್ನು ಸೇವಿಸುವುದರಿಂದ, ದೇಹವು ಸಮೃದ್ಧವಾದ ಪ್ರೋಟೀನ್ಗಳು, ವಿಟಮಿನ್‌ಗಳು ಮತ್ತು ಇತರ ಪೋಷಕಾಂಶಗಳನ್ನು ಪಡೆಯುತ್ತದೆ. ಇದರಿಂದಾಗಿ ಕೂದಲು ಸದೃಢವಾಗುವುದಲ್ಲದೇ ಮತ್ತು ಕೂದಲೂ ಬೆಳೆಯುತ್ತದೆ. ಇದರೊಂದಿಗೆ ಮೆಂತ್ಯವು ಕೂದಲಿನ ಅಕಾಲಿಕ ನೆರೆಯಾಗುವುದನ್ನು ಅಲ್ಲದೇ ಈ ಎರಡೂ ವಸ್ತುಗಳು ತ್ವಚೆಯನ್ನು ಉತ್ತಮಗೊಳಿಸುತ್ತದೆ.

ಕ್ಯಾನ್ಸರ್‌ ದೂರ

ಮೆಂತ್ಯ ಮತ್ತು ಕಲೋಂಜಿಯನ್ನು ಒಟ್ಟಿಗೆ ಸೇವಿಸುವುದರಿಂದ ಕ್ಯಾನ್ಸರ್‌ನಂತಹ ರೋಗಗಳೂ ದೂರವಾಗುತ್ತವೆ. ಇದು ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿದೆ, ಇದು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಕಲೋಂಜಿಯಲ್ಲಿ ಆಂಟಿ ಆಕ್ಸಿಡೆಂಟ್‌ಗಳು ಅಧಿಕವಾಗಿರುತ್ತದೆ, ಇದು ಕ್ಯಾನ್ಸರ್‌ನಂತಹ ರೋಗಗಳ ಬೆಳವಣಿಗೆಗೆ ಕಾರಣವಾಗುವ ಹಾನಿಕಾರಕ ಸ್ವತಂತ್ರ ರಾಡಿಕಲ್‌ಗಳನ್ನು ತಟಸ್ಥಗೊಳಿಸಲು ಸಹಾಯ ಮಾಡುತ್ತದೆ.

ಅದಲ್ಲದೇ ನರಶೂಲೆ, ಪಾರ್ಶ್ವವಾಯು, ಮಲಬದ್ಧತೆ, ಹೊಟ್ಟೆ ನೋವು, ಉಬ್ಬುವುದು, ಬೆನ್ನುನೋವಿನಿಂದ ದೇಹದ ಯಾವುದೇ ಭಾಗದಲ್ಲಿ ನೋವು, ಮೊಣಕಾಲು ಕೀಲು ನೋವಿನಿಂದ ಸ್ನಾಯು ಸೆಳೆತದಂತಹ ವಾತದ ಅಸ್ವಸ್ಥತೆಗಳ ಚಿಕಿತ್ಸೆಯಲ್ಲಿ ಮೆಂತ್ಯವನ್ನು ಬಳಸಲಾಗುತ್ತದೆ. ಹಾಗಾಗಿ ಉತ್ತಮ ಆರೋಗ್ಯಕ್ಕಾಗಿ ಈ ಎರಡು ಬೀಜಗಳನ್ನು ನಿಮ್ಮ ಡಯಟ್‌ನಲ್ಲಿ ತಪ್ಪದೇ ಸೇರಿಸಿಕೊಳ್ಳಿ. ಇವೆರಡರ ಸೇವನೆಯು ಅನಾರೋಗ್ಯದಿಂದ ನಮ್ಮನ್ನು ದೂರವಿಡುತ್ತದೆ. ಆದರೆ ಕೆಲವೊಮ್ಮೆ ಸಮಸ್ಯೆಗಳು ಉಲ್ಬಣಗೊಂಡರೆ ವೈದ್ಯರನ್ನು ಭೇಟಿ ಮಾಡುವುದನ್ನು ಮಾತ್ರ ಮರೆಯದಿರಿ.

ಪಾರ್ಶ್ವವಾಯು, ಮಲಬದ್ಧತೆ

English summary

Benefits of kalonji and fenugreek seeds water in kannada

know the amazing benefits of drinking fenugreek seeds and kalonji seeds water in kannada
Story first published: Thursday, May 26, 2022, 22:34 [IST]
X
Desktop Bottom Promotion