For Quick Alerts
ALLOW NOTIFICATIONS  
For Daily Alerts

ಕೊರೋನಾ ವಿರುದ್ಧ ಹೋರಾಡಲು ದ್ವಿದಳ ಧಾನ್ಯಗಳು ಹೇಗೆ ಸಹಾಯ ಮಾಡುತ್ತವೆ ಗೊತ್ತಾ?

|

ಭಾರತೀಯ ಪಾಕಪದ್ಧತಿಯನ್ನು ವಿಶ್ವದ ಅತ್ಯಂತ ಪೌಷ್ಠಿಕಾಂಶಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಸದ್ಯ ಇರುವ ಕೊರೋನಾ ಕಾಲದಲ್ಲಿ ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ಪಡೆಯುವುದು ಕಷ್ಟಕರವಾಗುತ್ತಿದೆ. ಆದ್ದರಿಂದ ನಾವು ಸಂಪೂರ್ಣ ಪೋಷಣೆಗಾಗಿ ದ್ವಿದಳ ಧಾನ್ಯಗಳನ್ನು ಅವಲಂಬಿಸಬಹುದು. ಅವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಆದ್ದರಿಂದ ನಿಮ್ಮ ಆಹಾರಕ್ರಮಕ್ಕೆ ಸೇರಿಸಬೇಕಾದ ದ್ವಿದಳ ಧಾನ್ಯಗಳು ಹಾಗೂ ಅದರ ಆರೋಗ್ಯ ಪ್ರಯೋಜನಗಳ ಬಗ್ಗೆ ಈ ಲೇಖನದಲ್ಲಿ ಹೇಳಿದ್ದೇವೆ.

ನಿಮ್ಮ ಆಹಾರದಲ್ಲಿ ದ್ವಿದಳ ಧಾನ್ಯಗಳನ್ನು ಏಕೆ ಸೇರಿಸಬೇಕು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ದ್ವಿದಳ ಧಾನ್ಯಗಳ ಆರೋಗ್ಯ ಪ್ರಯೋಜನಗಳು:

ದ್ವಿದಳ ಧಾನ್ಯಗಳ ಆರೋಗ್ಯ ಪ್ರಯೋಜನಗಳು:

ದ್ವಿದಳ ಧಾನ್ಯಗಳಲ್ಲಿ ಕಬ್ಬಿಣ, ಸತು, ಜೀವಸತ್ವಗಳು, ಸೆಲೆನಿಯಮ್ ಮತ್ತು ಅಗತ್ಯವಾದ ಅಮೈನೋ ಆಮ್ಲಗಳಾದ ಲೈಸೀನ್ ಇದ್ದು, ಇದು ಕ್ಯಾಲ್ಸಿಯಂ ಹೀರಿಕೊಳ್ಳುವಿಕೆಗೆ ಸಹಾಯ ಮಾಡುತ್ತದೆ ಮತ್ತು ಹಸಿವನ್ನು ನಿಯಂತ್ರಿಸುತ್ತದೆ. ಆದ್ದರಿಂದ ನಿಮ್ಮ ಆಹಾರದಲ್ಲಿ ದ್ವಿದಳ ಧಾನ್ಯಗಳನ್ನು ಈಗಿನಿಂದಲೇ ಸೇರಿಸಲು ಪ್ರಾರಂಭಿಸಿ.

ಬೇಳೆಕಾಳುಗಳನ್ನು ಬೇಸಿಗೆ ಕಾಲದಲ್ಲಿ ಏಕೆ ಸೇವಿಸಬೇಕು?

ಬೇಳೆಕಾಳುಗಳನ್ನು ಬೇಸಿಗೆ ಕಾಲದಲ್ಲಿ ಏಕೆ ಸೇವಿಸಬೇಕು?

ಬೇಸಿಗೆಯಲ್ಲಿ ನಿಮ್ಮ ದೈನಂದಿನ ಆಹಾರಕ್ರಮಕ್ಕೆ ಉದ್ದು, ಬೇಳೆ ಮತ್ತು ಹೆಸರು ಕಾಳನ್ನು ಸೇರಿಸಲು ತಜ್ಞರು ಸೂಚಿಸುತ್ತಾರೆ. ಏಕೆಂದರೆ ಅವು ಜೀರ್ಣಿಸಿಕೊಳ್ಳಲು ಸುಲಭವಾಗಿರುತ್ತವೆ. ಜೊತೆಗೆ ಅವುಗಳು ಜೀವಸತ್ವ ಮತ್ತು ಖನಿಜಗಳಿಂದ ಸಮೃದ್ಧವಾಗಿವೆ. ಈ ದ್ವಿದಳ ಧಾನ್ಯಗಳು ರೋಗ ನಿರೋಧಕ ಶಕ್ತಿಯನ್ನು ನಿರ್ಮಿಸುವಲ್ಲಿ ಹೆಚ್ಚು ಪರಿಣಾಮಕಾರಿಯಾಗಿವೆ.

ಯಾರು ಹೆಚ್ಚು ದ್ವಿದಳ ಧಾನ್ಯಗಳನ್ನು ತಿನ್ನಬೇಕು?:

ಯಾರು ಹೆಚ್ಚು ದ್ವಿದಳ ಧಾನ್ಯಗಳನ್ನು ತಿನ್ನಬೇಕು?:

ತಜ್ಞರ ಪ್ರಕಾರ, ಕೋವಿಡ್ ನಿಂದ ಬಳಲುತ್ತಿರುವ ಜನರು ಖಂಡಿತವಾಗಿಯೂ ಹೆಚ್ಚು ಅಥವಾ ದ್ವಿದಳ ಧಾನ್ಯಗಳನ್ನು ಸೇವಿಸಬೇಕು ಏಕೆಂದರೆ ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಕೂದಲು ಉದುರುವುದು, ಪಿಸಿಒಡಿಗಳು, ಉಬ್ಬುವಿಕೆ, ಒತ್ತಡ ಮತ್ತು ನಿದ್ರಾಹೀನತೆಯಿಂದ ಬಳಲುತ್ತಿರುವ ಜನರು ಹೆಚ್ಚು ಬೇಳೆ ಮತ್ತು ದ್ವಿದಳ ಧಾನ್ಯಗಳನ್ನು ಸೇವಿಸಬೇಕು. ನೀವು ಹೆಚ್ಚಿನ ಇನ್ಸುಲಿನ್ ಮಟ್ಟವನ್ನು ಹೊಂದಿದ್ದರೆ, ದ್ವಿದಳ ಧಾನ್ಯಗಳು ಅದನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.

ದ್ವಿದಳ ಧಾನ್ಯಗಳ ಸೇವನೆಯನ್ನು ಹೆಚ್ಚಿಸುವುದು ಹೇಗೆ?:

ದ್ವಿದಳ ಧಾನ್ಯಗಳ ಸೇವನೆಯನ್ನು ಹೆಚ್ಚಿಸುವುದು ಹೇಗೆ?:

ದ್ವಿದಳ ಧಾನ್ಯಗಳನ್ನು ದೊಡ್ಡ ಪ್ರಮಾಣದಲ್ಲಿ ನೆನೆಸಿಡಬೇಕು. ಆಗ ಅವುಗಳು ಮೆಳಕೆಯೊಡೆಯುತ್ತದೆ. ನಂತರ ಅವುಗಳನ್ನು ಈ ಕೆಳಗಿನ ವಿಧಾನಗಳಲ್ಲಿ ಬಳಸಬಹುದು.

- ಉಪಾಹಾರಕ್ಕಾಗಿ ದೋಸೆ

- ಅವುಗಳಿಂದ ದಾಲ್ ತಯಾರಿಸಿ, ಅನ್ನದೊಂದಿಗೆ ಸೇವಿಸಿ

- ಚಾಟ್ ಐಟಂ ಆಗಿ ಸೇವಿಸಬಹುದು

- ರೊಟ್ಟಿ, ಅನ್ನದೊಂದಿಗೆ ದಾಲ್ ಆಗಿ ಸೇವಿಸಿ

English summary

Benefits Of Indian Dals And How They Can Help Against COVID-19 in Kannada

Here we talking about Benefits Of Indian Dals And How They Can Help Against COVID-19 in Kannada, read on
X
Desktop Bottom Promotion