For Quick Alerts
ALLOW NOTIFICATIONS  
For Daily Alerts

ನೆಲದ ಮೇಲೆ ಸುಖಾಸನದಲ್ಲಿ ಕುಳಿತು ಊಟ ಮಾಡುವುದರ ಉಪಯೋಗಗಳು

|

ಎಲ್ಲರಿಗೂ ಆರೋಗ್ಯವಾಗಿರಬೇಕೆಂಬ ಹಂಬಲವೇನೊ ಇರುತ್ತದೆ. ಆದರೆ ಕ್ಷಣಿಕ ಸುಖ-ಭೋಗಕ್ಕೆ ಹಾತೊರೆದು ನಮ್ಮ ಆರೋಗ್ಯಕ್ಕೆ ನಾವೇ ಮುಳ್ಳಾಗುತ್ತೇವೆ. ಉದಾಹರಣೆಗೆ, ಸುಖಾಸನ ಕುಳಿತು ಊಟ ಮಾಡುವ ಪದ್ಧತಿ ತಲೆತಲಾಂತರದಿಂದ ನಡೆದುಕೊಂಡು ಬಂದಿದೆ. ನಾವುಗಳು ಅದನ್ನು ಬಿಟ್ಟು ಡೈನಿಂಗ್ ಟೇಬಲ್ ಮೇಲೆ ಆರಾಮಾಗಿ ಕುಳಿತು ಊಟ ಮಾಡುವ ದುರಭ್ಯಾಸಕ್ಕೆ ಮಾರು ಹೋಗಿದ್ದೇವೆ.

Benefits of eating food while sitting cross legged on the floor

"ಊಟ ಬಲ್ಲವನಿಗೆ ರೋಗವಿಲ್ಲ" ಎಂಬ ಮಾತು ಎಷ್ಟು ಸತ್ಯವೋ "ಸುಖಾಸನದಲ್ಲಿ ಕುಳಿತು ಊಟ ಮಾಡುವವನಿಗೂ ರೋಗವಿಲ್ಲ" ಎಂಬ ವ್ಯಾಖ್ಯಾನ ಉತ್ಪ್ರೇಕ್ಷೆಯೇನಲ್ಲ.

ನೆಲದ ಮೇಲೆ ಸುಖಾಸನದಲ್ಲಿ ಕುಳಿತು ಊಟ ಮಾಡುವುದರ ಲಾಭಗಳೇನೆಂದು ಮುಂದೆ ನೋಡೋಣ:

1. ಸುಖಾಸನದ ಮಹತ್ವ

1. ಸುಖಾಸನದ ಮಹತ್ವ

ಆಯುರ್ವೇದಿಕ್ ಡಾಕ್ಟರ್ ಡಿಂಪಲ್ ಜಂಗ್ದ, ಸುಖಾಸನದಲ್ಲಿ ಕುಳಿತು ಊಟ ಮಾಡುವುದರಿಂದ ನಮ್ಮ ಜೀರ್ಣಾಂಗ ವ್ಯವಸ್ಥೆಯಲ್ಲಿ ಗಮನಾರ್ಹವಾದ ಬದಲಾವಣೆಗಳನ್ನು ಕಾಣಬಹುದು, ಇದರ ಹಿಂದೆ ವೈಜ್ಞಾನಿಕ ಮತ್ತು ಅರ್ಥಬದ್ಧವಾದ ಕಾರಣಗಳಿವೆ ಎನ್ನುತ್ತಾರೆ. 'ಸುಖ' ಎಂದರೆ ಆರಾಮವಾಗಿ/ ಸಮಾಧಾನವಾಗಿ, 'ಆಸನ'ಎಂದರೆ ಭಂಗಿ ಎಂದರ್ಥ. ಈ ಆಸನದಿಂದ ಮನಸ್ಸು ಮತ್ತು ದೇಹ ಎರಡೂ ಸಮಾಧಾನವಾಗಿ ಸುಖವಾಗಿರುತ್ತದೆ ಎಂದು ಅರ್ಥೈಸಿಕೊಳ್ಳಬಹುದು. ಮೆದುಳು ಶಾಂತವಾಗಿದ್ದಾಗ ನಾವು ವಿವೇಚನೆಯುಳ್ಳ ಆಹಾರ ಕ್ರಮದ ಕಡೆ ಗಮನ ಹರಿಸಲು ಸಾಧ್ಯ. ಆಗ ಮಾತ್ರ ನಮ್ಮಲ್ಲಿ ಪಚನ ಶಕ್ತಿ ಹೆಚ್ಚಿಸುತ್ತದೆ ಪೋಷಕಾಂಶಗಳನ್ನು ರಕ್ತಗತ ಮಾಡಿಕೊಳ್ಳುವ ಸಾಮರ್ಥ್ಯ ಉಂಟಾಗುವುದು.

2. ಒತ್ತಡವನ್ನು ದೂರ ಮಾಡುತ್ತದೆ/ ವಿಸರ್ಜನೆಗೆ ಸಹಕಾರಿ

2. ಒತ್ತಡವನ್ನು ದೂರ ಮಾಡುತ್ತದೆ/ ವಿಸರ್ಜನೆಗೆ ಸಹಕಾರಿ

ಸುಖಾಸನದ ಭಂಗಿ ಏಕಾಗ್ರತೆಯನ್ನು ಹೆಚ್ಚಿಸಿ ಮಾನಸಿಕ ಒತ್ತಡವನ್ನು ನಿವಾರಿಸುತ್ತದೆ.

ನೆಲದ ಮೇಲೆ ಕುಳಿತು ತಿನ್ನುವಾಗ, ತಿನ್ನಲು ತಟ್ಟೆಯ ಕಡೆಗೆ ವಾಲ ಬೇಕಾಗಿ ಬರುತ್ತದೆ. ಹೀಗೆ ಮುಂದಕ್ಕೆ ಬಾಗುವುದು ಹಿಂದಕ್ಕೆ ಬರುವುದರ ಮರುಕಳಿಕೆಯ ಕ್ರಮದಿಂದ ಕಿಬ್ಬೊಟ್ಟೆಯ ಸ್ನಾಯುಗಳು ನಿರಂತರವಾಗಿ ಕಾರ್ಯ ವಹಿಸುತ್ತದೆ. ಇದರಿಂದ ವಿಸರ್ಜನಾ ವ್ಯವಸ್ಥೆಯು ಸುಸ್ಥಿತಿಯಲ್ಲಿದ್ದು ವಿಸರ್ಜನೆಗೆ ಸಹಾಯವಾಗುತ್ತದೆ.

3. ಹೃದಯಕ್ಕೂ ಸಹಕಾರಿ

3. ಹೃದಯಕ್ಕೂ ಸಹಕಾರಿ

ಹೀಗೆ ಕುಳಿತು ತಿನ್ನುವದರ ಹಿಂದೆ ಎಷ್ಟೆಲ್ಲಾ ಪ್ರಯೋಜನಗಳು ಅಡಗಿದೆ ನೋಡಿ! ಈ ಭಂಗಿಯಲ್ಲಿ ದೇಹದ ಕೆಳಗಿನ ಭಾಗವು ವಿರಾಮದ ಸ್ಥಿತಿ ದೊರಕುವುದರಿಂದ ಆ ಭಾಗಗಳಿಗೆ ರಕ್ತವನ್ನು ಪಂಪ್ ಮಾಡಲು ಹೃದಯಕ್ಕೆ ಹೆಚ್ಚಿನ ಒತ್ತಡ ಬೀಳುವುದಿಲ್ಲ ಹೀಗಾಗಿ,ದೇಹದಲ್ಲಿ ರಕ್ತದ ಪರಿಚಲನೆಯು ಹೆಚ್ಚಾಗುತ್ತದೆ.

4. ಪಚನ ಶಕ್ತಿಯನ್ನು ವೃದ್ಧಿಸುತ್ತದೆ

4. ಪಚನ ಶಕ್ತಿಯನ್ನು ವೃದ್ಧಿಸುತ್ತದೆ

ಕಿಬ್ಬೊಟ್ಟೆಯ ಕಡೆಗೆ ರಕ್ತ ಸಂಚಾರ ಹೆಚ್ಚಾಗುವುದರಿಂದ ಪಚನ ಶಕ್ತಿಯಲ್ಲಿ ಸಾಮರ್ಥ್ಯತೆ ಹೆಚ್ಚಾಗುತ್ತದೆ.

ಪೋಷಕಾಂಶಗಳನ್ನು ದೇಹಕ್ಕೆ ವಿಲೀನ ಗೊಳಿಸಿಕೊಳ್ಳಲು ಸಹಾಯವಾಗುತ್ತದೆ

ವಿಟಮಿನ್ ಬಿ12, ವಿಟಮಿನ್ ಡಿ, ಹಿಮೋಗ್ಲೋಬಿನ್ ಮುಂತಾದವುಗಳನ್ನು ರಕ್ತಗತಗೊಳಿಸಿಕೊಳ್ಳಲು ಪೂರಕವಾಗಿರುತ್ತದೆ ಎನ್ನುತ್ತಾರೆ ಆಹಾರ ತಜ್ಞರು.

5. ತೂಕ ಇಳಿಸಿಕೊಳ್ಳಲು ಸಹಕಾರಿ

5. ತೂಕ ಇಳಿಸಿಕೊಳ್ಳಲು ಸಹಕಾರಿ

ಪಚನ ಶಕ್ತಿಯನ್ನು ಹೆಚ್ಚಿಸುವುದರಿಂದ, ಹಸಿವು ಎಂದು ಸುಮ್ಮನೆ ಮನಬಂದಂತೆ ತಿನ್ನುವ ದುರಭ್ಯಾಸದಿಂದ ಪಾರು ಮಾಡುವುದಲ್ಲದೆ ಅತಿ ಹೆಚ್ಚು ಪ್ರಮಾಣದ ಆಹಾರ ತೆಗೆದುಕೊಳ್ಳುವುದನ್ನು ತಪ್ಪಿಸುತ್ತದೆ. ಹೀಗಾಗಿ ತೂಕ ಇಳಿಸಿಕೊಳ್ಳುವಲ್ಲಿ ಗಮನಾರ್ಹ ಬದಲಾವಣೆಯನ್ನು ಕಾಣಬಹುದಾಗಿದೆ.

6. ದೇಹದ ಅನೇಕ ಅಂಗಾಂಗಳಿಗೂ ಪ್ರಯೋಜನಕಾರಿ

6. ದೇಹದ ಅನೇಕ ಅಂಗಾಂಗಳಿಗೂ ಪ್ರಯೋಜನಕಾರಿ

ಈ ಆಸನವು ಯಕೃತ್ತು, ಹೊಟ್ಟೆ, ಪಿತ್ತಕೋಶದ ಸ್ನಾಯುಗಳನ್ನು ಹಿಂಡುವುದರಿಂದ ಅಗತ್ಯವಾದ ಜೀರ್ಣಕಾರಿ ರಸವನ್ನು ಉತ್ಪತ್ತಿ ಮಾಡುತ್ತದೆ ಮತ್ತು ಶ್ರೋಣಿಯ/ಪೆಲ್ವಿಕ್ ಭಾಗವನ್ನು ಗಟ್ಟಿಗೊಳಿಸುತ್ತದೆ.

7. ಕೀಲು ನೋವಿಗೂ ಈ ಭಂಗಿ ಉಪಯುಕ್ತ

7. ಕೀಲು ನೋವಿಗೂ ಈ ಭಂಗಿ ಉಪಯುಕ್ತ

ಈ ಭಂಗಿಯಲ್ಲಿ ಮೊಣಕಾಲುಗಳಿಗೂ ಉತ್ತಮ ವ್ಯಾಯಾಮವಾಗುತ್ತದೆ. ಕೀಲು ನೋವಿನಿಂದ ಉಪಶಮನ ದೊರುಕುತ್ತದೆ.

ಅಷ್ಟೇ ಅಲ್ಲದೆ, ನಮ್ಮ ದೇಹದ ಚಲನೆ, ಹೊಂದಿಕೊಳ್ಳುವ ಕ್ಷಮತೆ, ದೃಢತೆಯನ್ನು ಹೆಚ್ಚಿಸುವ ಸಾಮರ್ಥ್ಯ ಈ ಆಸನಕ್ಕೆ ಇದೆ.

ಆರೋಗ್ಯಕ್ಕಾಗಿ ಹಿಂದಿನವರು ನಡೆದು ಬಂದ ಹಾದಿಯಲ್ಲಿ ನಾವೂ ನಡೆಯುವುದು ಅಷ್ಟು ಕಷ್ಟದ ಮಾತೇನಲ್ಲ. ಇಂದಿನಿಂದ ಸುಖಾಸನದಲ್ಲಿ ಕುಳಿತು ಊಟ ಮಾಡೋಣವೇ?

"ಚಿಕ್ಕ ಬದಲಾವಣೆ- ದೊಡ್ಡ ಸುಧಾರಣೆ" ಏಕಾಗಬಾರದು ಅಲ್ಲವೇ?

English summary

Benefits of Sitting Cross Legged on the Floor while Eating in Kannada

Here we are discussing about the benefits of eating food while sitting cross legged on the floor. Read more.
X
Desktop Bottom Promotion