For Quick Alerts
ALLOW NOTIFICATIONS  
For Daily Alerts

ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದಾಗುತ್ತೆ ಈ ಅದ್ಭುತ ಬದಲಾವಣೆ!

|

ನೀರು ಸಕಲ ಜೀವ ಚರಾಚರಗಳಿಗೆ ಬಹು ಮುಖ್ಯ. ನೀರಿಲ್ಲದೆ ಈ ಜಗತ್ತಿನಲ್ಲಿ ಯಾವ ಜೀವಿಯೂ ಬದುಕಲು ಸಾಧ್ಯವಿಲ್ಲ. ಅದು ಸಸ್ಯ ಸಂಕುಲ ಅಥವಾ ಪ್ರಾಣಿ ಸಂಕುಲವೇ ಆಗಿರಲಿ, ನೀರು ಬೇಕೆ ಬೇಕು. ನಾವು ಆರೋಗ್ಯವಾಗಿರಲು ಪ್ರತಿ ದಿನ ಕನಿಷ್ಟ 2ಲೀಟರ್ ನೀರು ಕುಡಿಯಬೇಕು. ಕುಡಿಯುವ ನೀರಿನ ಪ್ರಮಾಣ ವಾತಾವರಣಕ್ಕೆ ಅನುಗುಣವಾಗಿ ಹೆಚ್ಚಾಗಬಹುದೇ ಹೊರತು ಕಡಿಮೆಯಾಗಲ್ಲ.

ಬಾಯಾರಿಕೆಯಾದಾಗ, ಖಾರ ಪದಾರ್ಥಗಳನ್ನು ಸೇವಿಸಿದಾಗ, ದಣಿದಾಗ ನೀರಿನ ಅವಶ್ಯಕತೆ ಮಮನದಟ್ಟಾಗುತ್ತದೆ. ದೇಹ ಕೇಳುವುದಕ್ಕೂ ಮೊದಲೇ ನೀರು ಕುಡಿದರೆ ಹಲವು ಪ್ರಯೋಜನಗಳಿವೆ. ಅದರಲ್ಲೂ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿದರೆ ಹಲವು ಪ್ರಯೋಜನಗಳಿವೆ.

ಬೆಳಗ್ಗೆ ಎದ್ದಾಗ ದೆಹಕ್ಕೆ ಹೆಚ್ಚು ನೀರಿನ ಅವಶ್ಯಕತೆ ಇದೆ. ಕಾರಣ ರಾತ್ರಿ ಮಲಗಿದೆ ಮೇಲೆ ದೇಹಕ್ಕೆ ನೀರು ಪೂರೈಕೆಯಾಗಿರುವುದಿಲ್ಲ. 6 ರಿಂದ 8 ಗಂಟೆ ನೀರಿಲ್ಲದೆ ದೇಹ ನಿರ್ಜಲೀಕರಣವಾಗಬಲ್ಲದು. ಹೀಗಾಗಿ ಬೆಳಗ್ಗೆ ಎದ್ದು ಖಾಲೆ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ಆಗುವ ಪ್ರಯೋಜನಗಳು ಈ ಕೆಳಗಿನಂತಿವೆ.

ತೂಕ ಇಳಿಕೆಗೆ ಸಹಕಾರಿ

ತೂಕ ಇಳಿಕೆಗೆ ಸಹಕಾರಿ

ನೀರು ಬೊಚ್ಚು ಕರಗಿಸಲುು ತುಂಬಾ ಸಹಕಾರಿಯಾಗಿದೆ. ಖಾಲಿ ಹೊಟ್ಟೆಯಲ್ಲಿ ನೀರನ್ನು ಕುಡಿದಾಗ ಚಯಪಚಯ ಕ್ರಿಯೆ ಉತ್ತಮವಾಗಿ ನಡೆಯುತ್ತದೆ. ಇದರಿಂದಾಗಿ ತೂಕ ಇಳಿಕೆ ಉಂಟಾಗುವುದು. ಅರ್ಧ ಲೀಟರ್ ನೀರು ಕುಡಿಯುವುದರಿಂದ ಶೇಕಡಾ 30 ರಷ್ಟು ಚಯಪಚಯ ಕ್ರಿಯೆ ಉತ್ತಮವಾಗುವುದು ಎಂದು ಅಧ್ಯಯನ ಹೇಳುತ್ತದೆ.

ದೇಹದಲ್ಲಿನ ಬೇಡದ ರಾಸಾಯನಿಕಗಳನ್ನು ಹೊರಹಾಕಲು ಸಹಾಯ

ದೇಹದಲ್ಲಿನ ಬೇಡದ ರಾಸಾಯನಿಕಗಳನ್ನು ಹೊರಹಾಕಲು ಸಹಾಯ

ಬೆಳಗ್ಗೆ ಖಾಲೆ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ದೇಹದಲ್ಲಿನ ಬೇಡದ ರಾಸಾಯನಿಕಗಳನ್ನು ಮಲ ಮತ್ತು ಮೂತ್ರದ ಮೂಲಕ ಹೊರಹಾಕಲು ನೆರವಾಗುತ್ತದೆ. ಡ್ನಿ ಆರೋಗ್ಯವೂ ಉತ್ತಮವಾಗುವುದರ ಜೊತೆಗೆ ದೇಹದಲ್ಲಿ ರಕ್ತ ಸಂಚಲನವೂ ಸುಗಮವಾಗಲಿದೆ.

ಹೊಟ್ಟೆ ಆರೋಗ್ಯ ವೃದ್ಧಿಸುತ್ತದೆ

ಹೊಟ್ಟೆ ಆರೋಗ್ಯ ವೃದ್ಧಿಸುತ್ತದೆ

ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ಜೀರ್ಣ ಕ್ರಿಯೆ ಚೆನ್ನಾಗಿ ನಡೆಯುತ್ತಿದೆ. ಇದರಿಂದಾಗಿ ಅಜೀರ್ಣ, ಮಲಬದ್ದತೆ ಮುಂತಾದ ಸಮಸ್ಯೆ ಕಾಡುವುದಿಲ್ಲ. ದೇಹದ ತೂಕ ಸಮತೋಲನದಲ್ಲಿ ಇರಲು ಹಾಗೂ ಆರೋಗ್ಯದ ದೃಷ್ಟಿಯಿಂದ ಜೀರ್ಣಕ್ರಿಯೆ ಸರಿಯಾಗಿ ನಡೆಯುವುದು ಅವಶ್ಯಕ.

ಕ್ಯಾಲರಿ ತೆಗೆದುಕೊಳ್ಳುವುದು ಕಡಿಮೆಯಾಗುವುದು

ಕ್ಯಾಲರಿ ತೆಗೆದುಕೊಳ್ಳುವುದು ಕಡಿಮೆಯಾಗುವುದು

ಬೆಳಗ್ಗೆ ತಿಂಡಿ ಮಾಡುವು ಅರ್ಧ ಗಂಟೆ ಮೊದಲು ಅರ್ಧ ಲೀಟರ್ ನೀರು ಕುಡಿದರೆ ಹೊಟ್ಟೆ ತುಂಬಿದ ಅನುಭವ ಉಂಟಾಗುವುದು. ಇದರಿಂದ ಆಹಾರ ತೆಗೆದುಕೊಳ್ಳುವ ಪ್ರಮಾಣ ಕಡಿಮೆಯಾಗುತ್ತದೆ. ಹೀಗಾಗಿ ದೇಹದಲ್ಲಿ ಕ್ಯಾಲರಿ ಕಡಿಮೆ ಸೇರುತ್ತದೆ. ಇದು ದೇಹದ ತೂಕವನ್ನು ಹತೋಟಿಯಲ್ಲಿಡುತ್ತದೆ.

ಮೆದುಳು ಚುರುಗೊಳಿಸುತ್ತದೆ

ಮೆದುಳು ಚುರುಗೊಳಿಸುತ್ತದೆ

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರ ಮತ್ತೊಂದು ಪ್ರಯೋಜನ ಎಂದರೆ ಮೆದುಳು ಚುರುಕಾಗುವುದು. ಇದರಿಂದ ಮರೆವು, ಅಲ್ಜೈಮರ್ಸ್ ಸಮಸ್ಯೆ ಕಾಡುವುದಿಲ್ಲ. ಅಲ್ಲದೆ ಹೊಸ ವಿಷಯ ಹಾಗೂ ವಿಚಾರಗಳನ್ನು ಬೇಗ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ.

ರೋಗ ನಿರೋಧ ಶಕ್ತಿ ಹೆಚ್ಚುವುದು

ರೋಗ ನಿರೋಧ ಶಕ್ತಿ ಹೆಚ್ಚುವುದು

ಬೆಳಗ್ಗೆ ಎದ್ದು ನೀರು ಕುಡಿಯುವುದರಿಂದ ದೇಹದಲ್ಲಿನ ಬೇಡದ ರಾಸಾಯನಿಕಗಳನ್ನು ಹೊರಹಾಕುವ ಮೂಲಕ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಇದರಿಂದ ದೇಹವೂ ಹಾನಿಕಾರ ಬ್ಯಾಕ್ಟೀರಿಯಾ ವಿರುದ್ದ ಹೋರಾಡುವ ಸಾಮರ್ಥ್ಯ ಬೆಳೆಸುತ್ತದೆ.

ತಲೆನೋವು ಸಮಸ್ಯೆಗೆ ಮುಕ್ತಿ

ತಲೆನೋವು ಸಮಸ್ಯೆಗೆ ಮುಕ್ತಿ

ನಿರ್ಜಲೀಕರಣದಿಂದ ತಲೆನೋವು, ಮೈಗ್ರೈನ್ ಸಮಸ್ಯೆಗಳು ತಲೆದೋರುತ್ತದೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ತೆನೋವು, ಮೈಗ್ರೈನ್ ಸಮಸ್ಯೆಗೆ ಮುಕ್ತಿ ಸಿಗಲಿದೆ.

ದೇಹದೊಳಗಿನ ಅಂಗಗಳನ್ನು ಆರೋಗ್ಯವಾಗಿಡುತ್ತದೆ

ದೇಹದೊಳಗಿನ ಅಂಗಗಳನ್ನು ಆರೋಗ್ಯವಾಗಿಡುತ್ತದೆ

ಬೆಳಗಿನ ಖಾಲಿ ಹೊಟ್ಟೆಯಲ್ಲಿ ನೀರು ದೇಹ ಸೇರಿದರೆ, ದೇಹದೊಳಗಿನ ಎಲ್ಲಾ ಅಂಗಗಳು ಸರಿಯಾಗಿ ಕಾರ್ಯನಿರ್ವಹಿಸುತ್ತದೆ. ಜೊತೆಗೆ ದೇಹದಲ್ಲಿ ನೀರಿನ ಪ್ರಮಾಣ ಸರಿಯಾಗಿಡಲು ಸಹಕಾರಿಯಾಗಿದೆ.

English summary

Benefits Of Drinking Water On An Empty Stomach

so drinking a glass of water is a faster way to rehydrate your body after you wake up. Apart from this, there are other benefits to drinking water in the morning. Let's read on to know about them.
X
Desktop Bottom Promotion