For Quick Alerts
ALLOW NOTIFICATIONS  
For Daily Alerts

ಶಿರೋಧರ: ಈ ಆಯುರ್ವೇದ ಚಿಕಿತ್ಸೆಯಿಂದ ದೊರೆಯುವ ಪ್ರಯೋಜನಗಳು

|

ಶಿರೋಧರ ಆಯುರ್ವೇದ ಚಿಕಿತ್ಸೆಯ ಒಂದು ವಿಧಾನವಾಗಿದೆ. ಶಿರೋ ಧರ ಎಂಬುವುದು ಸಂಸ್ಕೃತ ಪದವಾಗಿದ್ದು ಶಿರೋ ಅಂದರೆ ತಲೆ ಧರ ಅಂದ್ರೆ ಹರೆಯುವುದು. ಆಯುರ್ವೇದದಲ್ಲಿ ಹಣೆಯ ಮೇಲೆ ಎಣ್ಣೆ, ಹಾಲು, ಮೊಸರು ಅಥವಾ ನೀರು ಹಾಕಿ ಮಾಡುವ ಚಿಕಿತ್ಸಾ ವಿಧಾನವಾಗಿದೆ.

ಇದನ್ನು ಆಯುರ್ವೇದದಲ್ಲಿ ಸಾವಿರಾರು ವರ್ಷಗಳ ಹಿಂದಿನಿಂದಲೂ ಮಾಡುತ್ತಿದ್ದು ದೇಹದಲ್ಲಿನ ದೋಷ ನಿವಾರಣೆಗೆ ಸಹಕಾರಿಯಾಗಿದೆ.

ಶಿರೋಧರಾ ಚಿಕಿತ್ಸೆಯಲ್ಲಿ ಒಂದು ನಿರ್ಧಿಷ್ಟ ಎತ್ತರದಿಂದ ಎಣ್ಣೆ, ಹಾಲು, ಮೊಸರು ಅಥವಾ ತುಪ್ಪ ಇವುಗಳನ್ನು ಹಣೆಯ ಮೇಲೆ ಬೀಳುವಂತೆ ಮಾಡಲಾಗುವುದು. ನೆತ್ತಿಯ ನಡುಭಾಗ ( ಮೂರನೇಯ ಕಣ್ಣಿನ ಭಾಗದಲ್ಲಿ) ಬಿದ್ದು ತಲೆಗೆ ಹರಿಯಬೇಕು.

ಈ ಚಿಕಿತ್ಸೆ ಪಡೆಯುವುದರಿಂದ ದೊರೆಯುವ ಪ್ರಯೋಜನಗಳು ಅನೇಕ

ಈ ಚಿಕಿತ್ಸೆ ಪಡೆಯುವುದರಿಂದ ದೊರೆಯುವ ಪ್ರಯೋಜನಗಳು ಅನೇಕ

* ಶಿರೋಧರ ಚಿಕಿತ್ಸೆ ಪಡೆದರೆ ತುಂಬಾ ಆರಾಮ ಅನಿಸುವುದು, ಮನಸ್ಸು ಹಾಗೂ ದೇಹಕ್ಕೆ ಆರಾಮ ಅನಿಸುವುದು, ದೇಹದಲ್ಲಿ ಲವಲವಿಕೆ ಮೂಡುವುದು. ಜೊತೆಗೆ ಈ ಪ್ರಯೋಜನಗಳು ದೊರೆಯುವುದು

* ಜ್ಞಾಪಕ ಶಕ್ತಿ ಹೆಚ್ಚುವುದು

* ದೇಹಕ್ಕೆ ಶಕ್ತಿ ದೊರೆಯುವುದು

* ಏಕಾಗ್ರತೆ ಹೆಚ್ಚುವುದು

* ಅನೇಕ ಕಣ್ಣಿನ ಸಮಸ್ಯೆಕ್ಕೆ ಉತ್ತಮ ಪರಿಹಾರ

* ತಲೆ ಹಾಗೂ ಮೆದುಳಿನಲ್ಲಿ ಉತ್ತಮ ರಕ್ತ ಸಂಚಾರಕ್ಕೆ ಸಹಕಾರಿ

* ಕಿವಿ ಚೆನ್ನಾಗಿ ಕೇಳುವುದು, ಮೂಗಿನ ಸಮಸ್ಯೆ ದೂರವಾಗುವುದು

* ತುಂಬಾ ಸಮಯದಿಂದ ಕಾಡುತ್ತಿರುವ ತಲೆನೋವು, ಮೈಗ್ರೇನ್‌ ದೂರವಾಗುವುದು

* ಮಾನಸಿಕ ಒತ್ತಡ ಕಡಿಮೆಯಾಗುವುದು

ಇದನ್ನು ಹೇಗೆ ಮಾಡಲಾಗುವುದು?

ಇದನ್ನು ಹೇಗೆ ಮಾಡಲಾಗುವುದು?

* ಇದನ್ನು ಆಯುರ್ವೇದ ಪರಿಣಿತರು ಮಾಡುತ್ತಾರೆ. ಈ ಚಿಕಿತ್ಸೆ ಮಾಡುವಾಗ ಬೆನ್ನಿನ ಮೇಲೆ ಮಲಗಿಸಿ ನಿಮಗೆ ಆರಾಮವಾಗಿ ಕಣ್ಣುಚ್ಚಿ ಮಲಗಿ ಎಂದು ಹೇಳುತ್ತಾರೆ.

* ನಂತರ ತಜ್ಞರು ಶಿರೋಧರಕ್ಕೆ ಬಳಸುವ ದ್ರವವನ್ನು ನಿಮ್ಮ ದೇಹದ ಉಷ್ಣತೆಗೆ ಹೊಂದುವಂತೆ ಬಿಸಿ ಮಾಡಿ ನಂತರ ಹಣೆಗೆ ಆ ದ್ರವನ್ನು ಮೆಲ್ಲನೆ ಬಿಡಲಾಗುವುದು. ಇದಕ್ಕೆ ಶಿರೋಧರ ಪಾತ್ರೆ ಬಳಸಲಾಗುವುದು (ಇದರಲ್ಲಿ ಕೆಳಗಡೆ ಒಂದು ರಂಧ್ರವಿರುತ್ತದೆ).ಕಣ್ಣುಗಳ ಮೇಲೆ ಏನಾದರೂ ಚಿಕ್ಕ ಟವಲ್ ಹಾಕುತ್ತಾರೆ. ಈ ಚಿಕಿತ್ಸೆ 30 ರಿಂದ 90 ನಿಮಿಷ ಇರುತ್ತದೆ. ಶಿರೋಧರ ಮೊದಲಿಗೆ ಅಥವಾ ನಂತರ ಮಸಾಜ್ ಕೂಡ ಮಾಡಲಾಗುವುದು.

ಶಿರೋಧರಕ್ಕೆ ಬಳಸುವ ದ್ರವಗಳು

ಶಿರೋಧರಕ್ಕೆ ಬಳಸುವ ದ್ರವಗಳು

* ಸಾಸಿವೆಯೆಣ್ಣೆ

* ತೆಂಗಿನೆಣ್ಣೆ

* ತುಪ್ಪ ಕೆಲವರು ಇವುಗಳನ್ನು ಕೂಡ ಬಳಸುತ್ತಾರೆ

* ನೀರು

* ಎಳನೀರು

* ಹಸುವಿನ ಹಾಲು

* ಮೊಸರು

ಈ ಚಿಕಿತ್ಸೆ ಸುರಕ್ಷತೆವೇ?

ಈ ಚಿಕಿತ್ಸೆ ಸುರಕ್ಷತೆವೇ?

* ಶಿರೋಧರ ಸುಕ್ಷಿತವಾದ ಚಿಕಿತ್ಸೆ ವಿಧಾನವಾಗಿದೆ.

* ಇದರಿಂದ ಯಾವುದೇ ಕಿರಕಿರಿ ಅಥವಾ ಅಡ್ಡಪರಿಣಾಮ ಉಂಟಾಗುವುದಿಲ್ಲ

* ದ್ರವವನ್ನು ಹಣೆಗೆ ಸುರಿಯುವ ಮೊದಲಿಗೆ ಪ್ಯಾಚ್‌ ಟೆಸ್ಟ್ ಮಾಡಲಾಗುವುದು.

* ಇದನ್ನು ಪರಿಣಿತರ ಬಳಿಯಿಂದಷ್ಟೇ ತೆಗೆಯಬೇಕು.

ಕೊನೆಯದಾಗಿ:

ಕೊನೆಯದಾಗಿ:

ಈ ರೀತಿಯ ಆಯುರ್ವೇದ ಚಿಕಿತ್ಸೆ ನಿಮ್ಮ ಮನಸ್ಸು ಹಾಗೂ ದೇಹದ ಒಟ್ಟು ಮೊತ್ತದ ಆರೋಗ್ಯಕ್ಕೆ ತುಂಬಾನೇ ಸಹಕಾರಿ. ನುರಿತ ಪರಿಣಿತರಿಂದ ಈ ಚಿಕಿತ್ಸೆ ಪಡೆಯಿರಿ.

English summary

Ayurvedic Shirodhara Treatment Benefits In kannada

Ayurvedic Shirodhara Treatment benefits in kannada, read on...
Story first published: Saturday, July 10, 2021, 11:40 [IST]
X
Desktop Bottom Promotion