For Quick Alerts
ALLOW NOTIFICATIONS  
For Daily Alerts

ಈ ಆಯುರ್ವೇದ ವಸ್ತುಗಳನ್ನು ಸೇವಿಸುತ್ತಿದ್ದರೆ ಕಾಯಿಲೆ ದೂರ

|

ಆಯುರ್ವೇದವನ್ನು ಒಂದು ಬಗೆಯ ನೈಸರ್ಗಿಕವಾದ ಔಷಧ ಪದ್ಧತಿ ಎಂದು ಹೇಳುವುದಕ್ಕಿಂತ, ಅದನ್ನು ಆರೋಗ್ಯಕರ ಜೀವನಶೈಲಿ ಎಂದೇ ಹೇಳಬಹುದು. ಆಯುರ್ವೇದ ಔಷಧಗಳನ್ನು ಗಿಡಮೂಲಿಕೆಗಳಿಂದ ತಯಾರಿಸಿ ನೀಡಲಾಗುವುದು. ಈ ವಸ್ತುಗಳು ಆರೋಗ್ಯ ಸಮಸ್ಯೆಯನ್ನು ನಿವಾರಿಸುವುದು ಮಾತ್ರವಲ್ಲ ಇದರಿಂದ ದೇಹದ ಆರೋಗ್ಯಕ್ಕೆ ಅನೇಕ ಆರೋಗ್ಯಕರ ಗುಣಗಳು ಸಿಗುವುದು.

Ayurvedic Ingredients To Add Your Diet For Better Health

ಇನ್ನು ಆಯುರ್ವೇದಲ್ಲಿ ಕೆಲವೊಂದು ಗಿಡಮೂಲಿಕೆಗಳನ್ನು ದಿನನಿತ್ಯ ಬಳಸುವುದರಿಂದ ತುಂಬಾ ಪ್ರಯೋಜನಗಳಿವೆ. ಅವುಗಳ ಬಗ್ಗೆ ಈ ಲೇಖನದಲ್ಲಿ ಹೇಳಲಾಗಿದೆ ನೋಡಿ:

1.ತ್ರಿಫಲಾ ಚೂರ್ಣ

1.ತ್ರಿಫಲಾ ಚೂರ್ಣ

ತ್ರಿಫಲ ಚೂರ್ಣವನ್ನು ಬೆಟ್ಟದ ನೆಲ್ಲಿಕಾಯಿ, ತಾರೇಕಾಯಿ,ಕರಕಕಾಯಿ ಸೇರಿಸಿ ತಯಾರಿಸಲಾಗುವುದು. ಇದು ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು ಹಾಗೂ ಸಂಧು ನೋವು ಕೂಡ ಕಡಿಮೆ ಮಾಡುವುದು. ಅಲ್ಲದೆ ಇದು ಬಾಯಿಯ ಆರೋಗ್ಯಕ್ಕೂ ಒಳ್ಳೆಯದು ಎಂದು ಸಂಶೋಧನೆಗಳು ಹೇಳಿವೆ. ಈ ತ್ರಿಫಲ ಚೂರ್ಣ ಪಿತ್ತ, ಕಫ ಮುಂತಾದ ಸಮಸ್ಯೆ ನಿವಾರಿಸುತ್ತದೆ ಅಲ್ಲದೆ ಮಧುಮೇಹ, ಆಕ್ಸಿಡೇಟಿವ್ ಒತ್ತಡ, ಉರಿಯೂತ ಈ ಸಮಸ್ಯೆಯೂ ತಡೆಗಟ್ಟುತ್ತದೆ.

ತಿಫಲ ಚೂರ್ಣವನ್ನು 1-5ಗ್ರಾಂವರೆಗೆ ತೆಗೆದುಕೊಳ್ಳಬಹುದು. ರಾತ್ರಿ ಹೊತ್ತು ಹಾಲು ಅಥವಾ ಜೇನು ತುಪ್ಪದ ಜೊತೆ ತೆಗೆದುಕೊಳ್ಳಬಹುದು.

 2. ಅರಿಶಿಣ

2. ಅರಿಶಿಣ

ಅರಿಶಿಣವನ್ನು ನಾವು ಅಡುಗೆಗಳಲ್ಲಿ ಬಳಸುತ್ತೇವೆ. ಜೊತೆಗೆ ದಿನದಲ್ಲಿ ಒಂದು ಲೋಟ ನೀರಿಗೆ ಸ್ವಲ್ಪ ಅರಿಶಿಣ ಹಾಕಿ ಕುಡಿಯುವುದು ತುಂಬಾನೇ ಒಳ್ಳೆಯದು. ಇದರಲ್ಲಿ ಸೋಂಕು ನಿವಾರಕ ಗುಣದ ಜೊತೆಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು ಹಾಗೂ ಉರಿಯೂತ ಸಮಸ್ಯೆ ಕಡಿಮೆಮಾಡುತ್ತದೆ, ತ್ವಚೆ ಹೊಳಪು ಹೆಚ್ಚಿಸುತ್ತದೆ.

 3. ಜೀರಿಗೆ

3. ಜೀರಿಗೆ

ಜೀರಿಗೆಯನ್ನು ನಿಮ್ಮ ಆಹಾರಕ್ರಮದಲ್ಲಿ ಬಳಸಿ. ದಿನದಲ್ಲಿ ಒಂದರಿಮದ ಎರಡು ಲೋಟ ಜೀರಿಗೆ ನೀರು ಕುಡಿಯಿರಿ. ಇದು ಹೊಟ್ಟೆ ಆರೋಗ್ಯ ವೃದ್ಧಿಸುತ್ತದೆ ಅಲ್ಲದೆ ಟೈಪ್‌ 2 ಮಧುಮೇಹದ ಅಪಾಯವನ್ನು ಕಡಿಮೆಮಾಡುತ್ತದೆ. ಇನ್ನು ಹೊಟ್ಟೆ ಉಬ್ಬುವುದು, ಅಜೀರ್ಣ ಈ ಸಮಸ್ಯೆ ಇರಲ್ಲ.

4. ಏಲಕ್ಕಿ

4. ಏಲಕ್ಕಿ

ಏಲಕ್ಕಿ ರಕ್ತಸಂಚಲನಕ್ಕೆ ತುಂಬಾನೇ ಸಹಕಾರಿ ಅಲ್ಲದೆ ಇದು ರಕ್ತದಲ್ಲಿ ಸಕ್ಕರೆಯಂಶವನ್ನು ಕೂಡ ನಿಯಂತ್ರಣದಲ್ಲಿ ಇಡುತ್ತದೆ, ಆದ್ದರಿಂದ ಮಧುಮೇಹಿಗಳಿಗೆ ಏಲಕ್ಕಿ ತುಂಬಾನೇ ಒಳ್ಳೆಯದು. ಇನ್ನು ಕೆಲವರಿಗೆ ಬಾಯು ದುರ್ನಾತ ಬೀರುತ್ತದೆ ಅಂಥವರು ಒಂದು ಕಾಳು ಏಲಕ್ಕಿ ಬಾಯಿಗೆ ಹಾಕಿ ಜಗಿಯುವುದು ಒಳ್ಳೆಯದು.

ಸೂಚನೆ: ದಿನದಲ್ಲಿ ಒಂದು ಏಲಕ್ಕಿ ಅಷ್ಟೇ ಬಳಸುವುದು, ಇಲ್ಲದಿದ್ದರೆ ಉಷ್ಣವಾಗುವುದು.

5. ಬ್ರಾಹ್ಮಿ

5. ಬ್ರಾಹ್ಮಿ

ಬ್ರಾಹ್ಮಿ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಒಳ್ಳೆಯದು. ಇದು ಮಕ್ಕಳಲ್ಲಿ ಜ್ಞಾಪಕ ಶಕ್ತಿ ಹೆಚ್ಚಲು ಕೂಡ ತುಂಬಾನೇ ಸಹಕಾರಿ. ಅಲ್ಲದೆ ಬ್ರಾಹ್ಮಿಗೆ ಮಾನಸಿಕ ಒತ್ತಡವನ್ನು ನಿಯಂತ್ರಿಸುವ ಶಕ್ತಿ ಇದೆ. ಇದು ದೇಹವನ್ನು ತಂಪಾಗಿ ಇಡುತ್ತದೆ. ದಿನಾ ಒಂದು ಅಥವಾಎರಡು ಎಲೆ ಬ್ರಾಹ್ಮಿ ಎಲೆ ಬಾಯಿಗೆ ಹಾಕಿ ಜಗಿಯಬಹುದು, ಇಲ್ಲಾ ಬ್ರಾಹ್ಮಿ ಪುಡಿ ಬಳಸಬಹುದು.

 6. ಅಶ್ವಗಂಧ

6. ಅಶ್ವಗಂಧ

ಅಶ್ವಗಂಧವನ್ನು ಆಯುರ್ವೇದಲ್ಲಿ ತುಂಬಾ ಬಳಸಲಾಗುವುದು.ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು ಮಾತ್ರವಲ್ಲ ಸೌಂದರ್ಯ ವೃದ್ಧಿಗೂ ಸಹಕಾರಿ. ದಿನಾ ಅಶ್ವಗಂಧ ಬಳಸುತ್ತಿದ್ದರೆ ಮುಖದಲ್ಲಿ ಯೌವನ ಕಳೆ ಮಧ್ಯವಯಸ್ಸು ದಾಟಿದರೂ ಮಾಸುವುದಿಲ್ಲ. ಒಂದು ಲೋಟ ನೀರಿಗೆ ಅರ್ಧ ಚಮಚ ಅಶ್ವಗಂಧದ ಪುಡಿ ಹಾಕಿ ಬಳಸಬಹುದು.

 7. ತುಪ್ಪ

7. ತುಪ್ಪ

ತುಪ್ಪದಲ್ಲಿ ಕೊಬ್ಬಿನಂಶವಿದೆ ಎಂದು ಕೆಲವರು ಬಳಸುವುದಿಲ್ಲ. ಆದರೆ ತುಪ್ಪದಲ್ಲಿರುವ ಕೊಬ್ಬಿನಂಶ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.ಇದು ಆಹಾರದಲ್ಲಿರುವ ಗ್ಲೈಸೆಮಿಕ್‌ ಇಂಡೆಕ್ಸ್ ಕಡಿಮೆ ಮಾಡುವುದರಿಂದ ರಕ್ತದಲ್ಲಿ ಸಕ್ಕರೆಯಂಶ ಹೆಚ್ಚುವುದಿಲ್ಲ. ತುಪ್ಪ ಜ್ಞಾಪಕ ಶಕ್ತಿಗೂ ಒಳ್ಳೆಯದು, ತ್ವಚೆ ಹಾಗೂ ಕೂದಲಿನ ಸೌಂದರ್ಯ ಹೆಚ್ಚಿಸುತ್ತದೆ.

8. ನೆಲ್ಲಿಕಾಯಿ

8. ನೆಲ್ಲಿಕಾಯಿ

ನೆಲ್ಲಿಕಾಯಿಯಲ್ಲಿ ವಿಟಮಿನ್‌ ಸಿ ಅಧಿಕವಿದೆ. ದಿನದಲ್ಲಿ ಒಂದರಿಂದ ಎರಡು ನೆಲ್ಲಿಕಾಯಿ ತಿಂದರೆ ನಿಮ್ಮ ಒಟ್ಟು ಮೊತ್ತ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇದು ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ, ಕೂದಲಿನ ಪೋಷಣೆ ಮಾಡುತ್ತದೆ. ನೆಲ್ಲಿಕಾಯಿ ಬದಲಿಗೆ ನೆಲ್ಲಿಕಾಯಿ ಜ್ಯೂಸ್‌ ಕೂಡ ಬಳಸಬಹುದು.

9.ಕಹಿಬೇವು

9.ಕಹಿಬೇವು

ಕಹಿಬೇವಿನಲ್ಲಿ ಬ್ಯಾಕ್ಟಿರಿಯಾಗಳ ವಿರುದ್ಧ ಹೋರಾಡುವ ಗುಣವಿದೆ. ಇದು ರಕ್ತವನ್ನು ಕೂಡ ಶುದ್ಧೀಕರಿಸುತ್ತದೆ. ಕಾಲಿನ ಸಂಧುಗಳಲ್ಲಿ ನೋವು ಇದ್ದರೆ ಅದು ಕೂಡ ಕಡಿಮೆಯಾಗುವುದು. ದಿನದಲ್ಲಿ ಕಹಿಬೇವಿನ ಒಂದು ಎಲೆ ತಿಂದರೆ ಸಾಕು.

10. ಶತಾವರಿ

10. ಶತಾವರಿ

ಶತಾವರಿ ಮಹಿಳೆಯರಿಗಂತೂ ತುಂಬಾನೇ ಒಳ್ಳೆಯದು. ಅದರಲ್ಲಿ ಎದೆ ಹಾಲುಣಿಸುವ ತಾಯಂದಿರಿಗೆ ತುಂಬಾನೇ ಒಳ್ಳೆಯದು. ಇದನ್ನು ಸೇವಿಸುವುದರಿಂದ ಎದೆ ಹಾಲಿನ ಉತ್ಪತ್ತಿ ಅಧಿಕವಾಗುವುದು. ಅಲ್ಲದೆ ಇದನ್ನು ಪ್ರತಿನಿತ್ಯ ತೆಗೆದುಕೊಳ್ಳುವುದರಿಂದ ಸಂತಾನೋತ್ಪತ್ತಿ ಸಾಮಾರ್ಥ್ಯ ಅಧಿಕವಾಗುವುದು.

English summary

Ayurvedic Ingredients To Add Your Diet For Better Health

If you start habit of having these Ayurvedic ingredients in your diet can boost immunity and will get amazing health benefits, have a look.
X
Desktop Bottom Promotion