For Quick Alerts
ALLOW NOTIFICATIONS  
For Daily Alerts

ಆರೋಗ್ಯ ಚೆನ್ನಾಗಿರ್ಬೇಕಾ, ಹಾಗಾದ್ರೆ ಈ ಆಯುರ್ವೇದ ಗಿಡಮೂಲಕೆಗಳು ಆಹಾರದಲ್ಲಿರಲಿ

|

ಇಂದಿನ ಜೀವನಶೈಲಿಯಲ್ಲಿ ಆರೋಗ್ಯಯುತ ಜೀವನ ನಡೆಸುವುದು ಬಹಳ ಕಷ್ಟ. ಮನೆಯಿಂದ ಕೆಲಸ ಮಾಡುವುದು, ಒಂದೇ ಸ್ಥಳದಲ್ಲಿ ಕುಳಿತು ಗಂಟೆಗಟ್ಟಲೆ ಸಮಯ ಕಳೆಯುವುದು, ಯಾವುದೇ ದೈಹಿಕ ಚಟುವಟಿಕೆಯಲ್ಲಿ ತೊಡಗದೇ ಇರುವುದು ಇಂತಹ ಅನಾರೋಗ್ಯಕರ ಅಭ್ಯಾಸಗಳಿಂದ ನಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಹಾನಿಯುಂಟಾಗುತ್ತಿದೆ. ಇದರಿಂದ ಪಾರಾಗಲು ಆಯುರ್ವೇದ ಗಿಡಮೂಲಿಕೆಗಳು ಸಹಾಯ ಮಾಡಲಿವೆ ಎಂಬುದು ನಿಮಗೆ ತಿಳಿದಿದೆಯೇ?

ಹೌದು, ಆಯುರ್ವೇದ ಗಿಡಮೂಲಿಕೆಗಳು ನಮ್ಮ ಆರೋಗ್ಯಕ್ಕೆ ಅದ್ಭುತಗಳನ್ನು ಮಾಡಬಲ್ಲವು. ದಿನನಿತ್ಯ ಬಳಸುವ ಕೆಲವೊಂದು ಗಿಡಮೂಲಿಕೆಗಳು ಬಹಳಷ್ಟು ಸಾಮಾನ್ಯ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ಅವುಗಳಾವುವು ಎಂಬುದನ್ನು ಇಲ್ಲಿ ನೋಡೋಣ.

ಆರೋಗ್ಯ ಚೆನ್ನಾಗಿರಲು ನಿಮ್ಮ ಆಹಾರದಲ್ಲಿ ಸೇರಿಸಬೇಕಾದ ಗಿಡಮೂಲಿಕೆಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:

1. ಸೋಂಪು ಬೀಜ:

1. ಸೋಂಪು ಬೀಜ:

ಸೋಂಪು ಭಾರತೀಯರ ಅಡುಗೆಮನೆಯಲ್ಲಿ ಸುಲಭವಾಗಿ ಕಂಡುಬರುತ್ತವೆ. ಇವುಗಳನ್ನು ಆಹಾರ ಸೇವನೆಯ ನಂತರ ಬಾಯಿಯ ಫ್ರೆಶ್‌ನೆಸ್ ಹಾಗೂ ಉತ್ತಮ ಜೀರ್ಣಕ್ರಿಯೆಗಾಗಿ ಬಳಸುತ್ತೇವೆ. ಆದರೆ ಈ ಬೀಜಗಳು ಬ್ಯಾಕ್ಟೀರಿಯಾ ವಿರೋಧಿ ಪರಿಣಾಮಗಳನ್ನು ಹೊಂದಿವೆ ಎಂದು ನಿಮಗೆ ತಿಳಿದಿದೆಯೇ? ಊಟದ ನಂತರ ಮಾತ್ರವಲ್ಲದೇ, ಅವುಗಳನ್ನು ಇತರ ಹಲವು ವಿಧಗಳಲ್ಲಿ ಸೇವಿಸಬಹುದು. ನಮ್ಮ ಸಾಮಾನ್ಯ ಖಾದ್ಯಗಳ ತಯಾರಿಕೆಯಲ್ಲಿ ಸೋಂಪನ್ನು ಸೇರಿಸುವುದು ಒಳ್ಳೆಯದು.

2. ನೆಲ್ಲಿಕಾಯಿ:

2. ನೆಲ್ಲಿಕಾಯಿ:

ನೆಲ್ಲಿಕಾಯಿಯು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದ್ದು, ನಿಮ್ಮ ಕೂದಲಿನಿಂದ ಚರ್ಮದ ಆರೋಗ್ಯದವರೆಗೆ, ಅದ್ಭುತಗಳನ್ನು ಮಾಡಬಹುದು. ಇದು ನಿಮ್ಮ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ ಜೊತೆಗೆ ದೃಷ್ಟಿ ಸುಧಾರಿಸುವಲ್ಲಿ ಪರಿಣಾಮಕಾರಿಯಾಗಿದೆ. ನೆಲ್ಲಿಕಾಯಿ ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ ಏಕೆಂದರೆ ಇದು ವಿಟಮಿನ್ ಸಿ ಯ ಸಮೃದ್ಧ ಮೂಲವಾಗಿದೆ. ಜೊತೆಗೆ ಯಕೃತ್ತಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಸಹ ನಿವಾರಿಸಿ, ದೈನಂದಿನ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ನಿಮ್ಮ ಆಹಾರದಲ್ಲಿ ನೆಲ್ಲಿಕಾಯಿ ಜ್ಯೂಸ್, ಹಸಿ ನೆಲ್ಲಿಕಾಯಿ, ನೆಲ್ಲಿ ಡಿಟಾಕ್ಸ್ ವಾಟರ್ ಹೀಗೆ ಹಲವು ರೀತಿಯಲ್ಲಿ ಸೇರಿಸಬಹುದು.

3. ಏಲಕ್ಕಿ:

3. ಏಲಕ್ಕಿ:

ಏಲಕ್ಕಿ ನಮ್ಮ ಅಡುಗೆಮನೆಯಲ್ಲಿ ಬಳಸುವ ಇನ್ನೊಂದು ಸಾಮಾನ್ಯ ಮಸಾಲೆಯಾಗಿದ್ದು, ಕೆಮ್ಮು ಮತ್ತು ನೆಗಡಿಗೆ ಏಲಕ್ಕಿ ಸಾಕಷ್ಟು ಪ್ರಯೋಜನಕಾರಿ. ಚಹಾ ಮತ್ತು ಇತರ ಪಾಕವಿಧಾನಗಳ ತಯಾರಿಕೆಯಲ್ಲಿ ಇದನ್ನು ಸಾಮಾನ್ಯವಾಗಿ ಪುಡಿ ರೂಪದಲ್ಲಿ ಬಳಸಲಾಗುತ್ತದೆ. ಆದರೆ ಏಲಕ್ಕಿ ಎಣ್ಣೆಯ ಬಗ್ಗೆ ನೀವು ಕೇಳಿದ್ದೀರಾ? ಏಲಕ್ಕಿ ಎಣ್ಣೆಯು ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳನ್ನು ಕೊಲ್ಲಲು ಸಹಾಯ ಮಾಡುತ್ತದೆ. ನಿಮ್ಮ ದಿನನಿತ್ಯದ ಆಹಾರದಲ್ಲಿ ಏಲಕ್ಕಿಯನ್ನು ಸೇವಿಸುವುದರಿಂದ ನಿಮ್ಮ ಹೃದಯದ ಕಾರ್ಯವು ಸುಧಾರಿಸುತ್ತದೆ ಮತ್ತು ಒಸಡಿಗೆ ಸಂಬಂಧಿಸಿದ ರೋಗಗಳನ್ನು ಗುಣಪಡಿಸುತ್ತದೆ.

4. ಅರಿಶಿನ:

4. ಅರಿಶಿನ:

ಅರಿಶಿನವು ಔಷಧೀಯ ಗುಣವನ್ನು ಹೊಂದಿದ್ದು ಅದು ಒಳಗಿನಿಂದ ಮತ್ತು ಹೊರಗಿನಿಂದ ಗುಣವಾಗಲು ಸಹಾಯ ಮಾಡುತ್ತದೆ. ಇದು ಕೀಲು ನೋವು, ಉರಿಯೂತ, ತಲೆನೋವು, ವಿಶೇಷವಾಗಿ ಮೈಗ್ರೇನ್ ನಿವಾರಿಸಲು ಸಹಾಯ ಮಾಡುತ್ತದೆ. ಇದು ನೈಸರ್ಗಿಕ ರಕ್ತ ಶುದ್ಧೀಕರಣವಾಗಿಯೂ ಕೆಲಸ ಮಾಡುತ್ತದೆ. ನಿಮಗೆ ಜ್ವರವಿದ್ದಲ್ಲಿ ಅರಿಶಿನ ಹಾಲನ್ನು ಸೇವಿಸಬಹುದು. ಜೊತೆಗೆ ಅರಿಶಿನ ರೋಗನಿರೋಧಕ ಶಕ್ತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ಇದು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಪ್ರಯೋಜನವನ್ನು ನೀಡುತ್ತದೆ.

5. ದಾಲ್ಚಿನ್ನಿ:

5. ದಾಲ್ಚಿನ್ನಿ:

ದಾಲ್ಚಿನ್ನಿ ಬ್ಯಾಕ್ಟೀರಿಯಾ ವಿರೋಧಿ ಮತ್ತು ಶಿಲೀಂಧ್ರ ವಿರೋಧಿ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಇದರ ಅದ್ಭುತ ಗುಣಗಳು ಆಕ್ಸಿಡೇಟಿವ್ ಹಾನಿಯನ್ನು ತಡೆಯುತ್ತದೆ. ದಾಲ್ಚಿನ್ನಿ ಸಾಮಾನ್ಯವಾಗಿ ಬೇರುಗಳು ಮತ್ತು ಪುಡಿ ರೂಪದಲ್ಲಿ ಕಂಡುಬರುತ್ತದೆ. ಇದು ನಿಮ್ಮ ಚಯಾಪಚಯ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಹಾಗೂ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುವುದರ ಜೊತೆಗೆ ರಕ್ತದ ಹರಿವನ್ನು ಹೆಚ್ಚಿಸುತ್ತದೆ. ದಾಲ್ಚಿನ್ನಿಯನ್ನ ಸಾಮಾನ್ಯವಾಗಿ ಗಾಳಿಯಾಡದ ಡಬ್ಬದಲ್ಲಿ ಇರಿಸಿದರೆ 9-12 ತಿಂಗಳುಗಳವರೆಗೆ ಇರುತ್ತದೆ. ನಿಮ್ಮ ಆಹಾರದಲ್ಲಿ ಯಾವಾಗಲೂ ತಾಜಾ ದಾಲ್ಚಿನ್ನಿ ಸೇರಿಸಲು ಪ್ರಯತ್ನಿಸಿ ಏಕೆಂದರೆ ಅದು ಎಷ್ಟು ತಾಜಾವಾಗಿರುತ್ತದೆಯೋ, ಅಷ್ಟು ಆರೋಗ್ಯಕ್ಕೆ ಒಳ್ಳೆಯದು.

English summary

Ayurvedic Herbs to Start Consuming For Wellness If Working From Home in Kannada

Here we talking about Ayurvedic Herbs to Start Consuming For Wellness If Working From Home in Kannada, read on
Story first published: Saturday, October 16, 2021, 10:57 [IST]
X
Desktop Bottom Promotion