For Quick Alerts
ALLOW NOTIFICATIONS  
For Daily Alerts

ಆರೋಗ್ಯ ವೃದ್ಧಿಸುವ ಆಯುರ್ವೇದದ ಮಾನ್ಸೂನ್‌ ಥೆರಪಿಗಳಿವು

|

ಮಾನ್ಸೂನ್‌ ಎಂದರೆ ಆಯುರ್ವೇದಕ್ಕೆ ತುಂಬಾನೇ ವಿಶೇಷವಾದ ತಿಂಗಳು. ಈ ತಿಂಗಳಿನಲ್ಲಿ ದೇಹ ಹಾಗೂ ಮನಸ್ಸಿಗೆ ಹುರುಪು ನೀಡುವ ಕೆಲವೊಂದು ಚಿಕಿತ್ಸಾ ಪದ್ಧತಿ ಅನುಸರಿಸಲಾಗುವುದು.

ಮಳೆಗಾಲದಲ್ಲಿ ಸೂರ್ಯನ ಕಿರಣಗಳನ್ನು ಕಾಣುವುದೇ ಅಪರೂಪವಾಗುವುದು, ದೇಹದಲ್ಲಿ ರೋಗ ನಿರೋಧಕ ಶಕ್ತಿಯೂ ಕಡಿಮೆಯಾಗಿರುತ್ತದೆ. ಈ ಸಮಯದಲ್ಲಿ ಮಾನ್ಸೂನ್‌ ಥೆರಪಿ ಮಾಡಿದರೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದು, ಮನಸ್ಸು ಚೇತರಿಸುವುದು.

ಮಾನ್ಸೂನ್‌ ಥೆರಪಿ ಎಂದರೆ ಮಳೆಗಾಲಕ್ಕೆ ಸೂಕ್ತವಾದ ಆಹಾರ ಸೇವನೆ ಜೊತೆಗೆ ಕೆಲವೊಂದು ಚಿಕಿತ್ಸೆ ಪಡೆಯುವುದು. ಮಳೆಗಾಲದಲ್ಲಿ ಆಹಾರಶೈಲಿ ಹೇಗಿರಬೇಕು, ಮಳೆಗಾಲಕ್ಕಾಗಿಯೇ ಆಯುರ್ವೇದದಲ್ಲಿರುವ ಚಿಕಿತ್ಸೆಗಳೇನು ಎಂದು ನೋಡೋಣ ಬನ್ನಿ:

ಆಹಾರ ಪದ್ಧತಿ

ಆಹಾರ ಪದ್ಧತಿ

ಮಳೆಗಾಲದಲ್ಲಿ ಜೀರ್ಣಶಕ್ತಿ ಕಡಿಮೆ ಇರುವುದರಿಂದ ಸುಲಭವಾಗಿ ಜೀರ್ಣವಾಗುವ ಆಹಾರಗಳನ್ನು ಸೇವಿಸಬೇಕು. ಮದ್ದಿನ ಗಂಜಿ ಮಾಡಿ ಸೇವಿಸಬೇಕು, ಅಡುಗೆಯಲ್ಲಿ ತೆಂಗಿನ ಕಾಯಿ ಬಳಸಬೇಕು.

ಇನ್ನು ಮಳೆಗಾಲದಲ್ಲಿ ನುಗ್ಗೆಕಾಯಿ ಸೊಪ್ಪು ತಿನ್ನಬಾರದು ಎಂದು ಹೇಳಲಾಗುವುದು. ಅತ್ಯಧಿಕ ಮಳೆಯಿಂದ ಸೊಪ್ಪಿನಲ್ಲಿ ವಿಟಮಿನ್ ಎ ಕಡಿಮೆಯಾಗುವುದು ಅಲ್ಲದೆ ಸೊಪ್ಪಿಗೆ ಕಹಿ ಕೂಡ ಅಧಿಕವಿರುತ್ತದೆ, ಆದ್ದರಿಂದ ಮಳೆಗಾಲದಲ್ಲಿ ನುಗ್ಗೆ ಸೊಪ್ಪು ತಿನ್ನಬಾರದು. ಪಾಲಾಕ್‌ ಸೊಪ್ಪು ತಿನ್ನಬಹುದು.

ಸುಖ ಚಿಕಿತ್ಸೆ

ಸುಖ ಚಿಕಿತ್ಸೆ

ಆಯುರ್ವೇದದಲ್ಲಿ ಮಳೆಗಾಲದಲ್ಲಿ ಅದರಲ್ಲೂ ಆಟಿ ತಿಂಗಳಿನಲ್ಲಿ ಸುಖ ಚಿಕಿತ್ಸೆ ತೆಗೆದುಕೊಂಡರೆ ಒಳ್ಳೆಯದು ಎಂದು ಹೇಳಲಾಗಿದೆ. ಇದೊಂದಿ ಸ್ಪಾ ವಿಧಾನವಾಗಿದ್ದು ಕೆಲವು ದಿನಗಳವರೆಗೆ ಇದನ್ನು ತೆಗೆದುಕೊಳ್ಳಬೇಕು. ಈ ಚಿಕಿತ್ಸೆ ಪಡೆದರೆ ದೇಹದಲ್ಲಿರುವ ಕಶ್ಮಲವನ್ನು ಸಂಪೂರ್ಣವಾಗಿ ಹೊರ ಹಾಕಬಹುದು, ಬಳಲಿದ ನರಗಳಲ್ಲಿ ಚೇತರಿಕೆ ಕಂಡು ಬರುವುದು, ಸ್ಟಾಮಿನಾ ಅಧಿಕವಾಗುವುದು. ಸುಖ ಚಿಕಿತ್ಸೆಯನ್ನು ಕಡಿಮೆಯೆಂದರೂ 7 ದಿನಗಳವರೆಗೆ ಪಡೆದುಕೊಳ್ಳಬೇಕು

ಫೀಲ್‌ ಗುಡ್ ಅಥವಾ ಸುಖಾನುಭವದ ಚಿಕಿತ್ಸೆ

ಫೀಲ್‌ ಗುಡ್ ಅಥವಾ ಸುಖಾನುಭವದ ಚಿಕಿತ್ಸೆ

ಇದನ್ನು ತಜ್ಞರ ಮಾರ್ಗದರ್ಶನದಲ್ಲಿ ನೀಡಲಾಗುವುದು, ಇದು ದೇಹದಲ್ಲಿರುವ ಕಶ್ಮಲಗಳನ್ನು ಹೊರಹಕುವ ವಿಧಾನವಾಗಿದೆ. ಈ ಚಿಕಿತ್ಸೆ ಪಡೆದ ಬಳಿಕ ದೇಹದಲ್ಲಿ ನವೋಲ್ಲಾಸ ಮೂಡುವುದು.

ತೈಲ ಮಸಾಜ್‌

ತೈಲ ಮಸಾಜ್‌

ಇದು ತ್ವಚೆ ಸೌಂದರ್ಯ ಹೆಚ್ಚಿಸುವುದು ಮಾತ್ರವಲ್ಲ ಮನಸ್ಸಿಗೂ ತುಂಬಾ ರಿಲ್ಯಾಕ್ಸ್ ಅನಿಸುವುದು. ಇದರಲ್ಲಿ ಸ್ಟೀಮ್ ಬಾತ್‌ ತೆಗೆದುಕೊಳ್ಳಬಹುದು. ಇದರಿಂದ ರಕ್ತ ಸಂಚಾರ ಉತ್ತಮವಾಗುವುದು, ಸ್ನಾಯುಗಳು ಬಿಗಿಯಾಗುವುದು, ಸಂದುಗಳಿಗೆ ಒಳ್ಳೆಯದು, ತ್ವಚೆ ಮೃದುವಾಗುವುದು ಅಲ್ಲದೆ ನಿದ್ರಾಹೀನತೆ ಸಮಸ್ಯೆ ಇದ್ದರೆ ಅದು ಕೂಡ ದೂರವಾಗುವುದು.

ಪಂಚಕರ್ಮ

ಪಂಚಕರ್ಮ

ಐದು ಬಗೆಯ ಚಿಕಿತ್ಸೆಯ ಮೂಲಕ ದೇಹವನ್ನು ಶುದ್ಧ ಮಾಡುವ ಚಿಕಿತ್ಸಾ ವಿಧಾನ ಇದಾಗಿದೆ. ಇದು ದೇಹದಲ್ಲಿರುವ ಬೇಡದ ರಾಸಾಯನಿಕಗಳು, ವಿಷಕಾರಕ ಅಂಶಗಳನ್ನು ಹೊರ ಹಾಕುತ್ತದೆ. ನಮ್ಮ ಶರೀರದಲ್ಲಿ ತ್ರಿದೋಷಗಳಾದ ವತ, ಪಿತ್ತ, ಕಫ ಹೆಚ್ಚಾದಾಗ ವ್ಯಾಧಿ ಉಂಟಾಗುವುದು. ಅದನ್ನು ತಡೆಗಟ್ಟಲು ಹಾಗೂ ದೇಹದ ಧಾತುಗಳನ್ನು (ರಸ, ರಕ್ತ, ಮಾಂಸ, ಮೇದ, ಅಸ್ಥಿ, ಮಜ್ಞಾ, ಶುಕ್ರ) ಬಲಿಷ್ಠಪಡಿಸಲು ಪಂಚಕರ್ಮ ಚಿಕಿತ್ಸೆ ಸಹಕಾರಿಯಾಗಿದೆ.

English summary

Ayurveda Monsoon Therapy For Health And Rejuvenation In Kannada

Ayurveda monsoon therapy for health and rejuvenation, read on...
Story first published: Monday, June 21, 2021, 16:36 [IST]
X
Desktop Bottom Promotion