For Quick Alerts
ALLOW NOTIFICATIONS  
For Daily Alerts

ಯುಕೆಯಲ್ಲಿ ಹೆಚ್ಚಾಗುತ್ತಿದೆ ಕೊರೊನಾ AY4.2 : ಲಕ್ಷಣಗಳೇನು, ಲಸಿಕೆ ಪರಿಣಾಮಕಾರಿಯೇ?

|

ಯುಕೆಯಲ್ಲಿ ಇದೀಗ ಹೊಸ ಕೊರೊನಾವೈರಸ್‌ ರೂಪಾಂತರ ಕಂಡು ಬಂದಿದೆ. ಇದನ್ನು ಡೆಲ್ಟಾ ಪ್ಲಸ್ AY4.2 ಕೋವಿಡ್ 19 ರೂಪಾಂತರ ಎಂದು ಗುರುತಿಸಲಾಗಿದೆ. ಯುಕೆಯಲ್ಲಿ ಆಲ್ಪಾ ಬಳಿಕ ಈ ರೂಪಾಂತರ ಹೆಚ್ಚು ಆತಂಕ ಸೃಸ್ಟಿಸಿದೆ.

ay 4.2 delta

ಮೇ 2021ರಲ್ಲಿ ಡೆಲ್ಟಾ ವೈರಸ್‌ ಹೆಚ್ಚಿನ ಸಾವು-ನೋವಿಗೆ ಕಾರಣವಾಗಿತ್ತು. ಜುಲೈ 2021ರಲ್ಲಿ ತಜ್ಞರು AY4.2 ರೂಪಾಂತರ ಪತ್ತೆ ಹಚ್ಚಿದರು. ಅಲ್ಲಿಂತ ಈ ರೂಪಾಂತರ ಕೇಸ್‌ಗಳು ನಿಧಾನಕ್ಕೆ ಹೆಚ್ಚಾಗಲಾರಂಭಿಸಿವೆ. ಆದರೆ ಇದು ವೇಗವಾಗಿ ಹರಡುವುದಿಲ್ಲ ಎಂದು ಹೇಳಲಾಗುತ್ತಿದೆ, ಆದರೆ ಯುಕೆ ಇದರ ಬಗ್ಗೆ ಕೂಲಂಕಷವಾಗಿ ಗಮನಿಸುತ್ತಿದ್ದು ಇದರ ನಿಯಂತ್ರಣಕ್ಕೆ ಎಲ್ಲಾ ಪ್ರಯತ್ನ ಮಾಡುತ್ತಿದೆ.

ಈ ರೂಪಾಂತರ ವೈರಸ್‌ ಅನ್ನು ಲಸಿಕೆ ಪಡೆಯುವ ಮೂಲಕ ಮಣಿಸಬಹುದೇ, ಈ ವೈರಸ್‌ ತಗುಲಿದರೆ ಕಂಡು ಬರುವ ಲಕ್ಷಣಗಳೇನು ಎಂದು ನೋಡೋಣ ಬನ್ನಿ:

AY4.2 ರೂಪಾಂತರ ಲಕ್ಷಣಗಳು

AY4.2 ರೂಪಾಂತರ ಲಕ್ಷಣಗಳು

ಇತರ ಕೊರೊನಾವೈರಸ್‌ ಲಕ್ಷಣಗಳಿಗಿಂತ AY4.2 ರೂಪಾಂತರ ವೈರಸ್‌ ಮನುಷ್ಯರಿಗೆ ತಗುಲಿದರೆ ಪ್ರತ್ಯೇಕ ಲಕ್ಷಣಗಳೇನು ಕಂಡು ಬರುತ್ತಿಲ್ಲ...ಕೊರೊನಾ ವೈರಸ್‌ ತಗುಲಿದರೆ ಕಂಡು ಬರುವ ಪ್ರಮುಖ ಲಕ್ಷಣಗಳೆಂದರೆ:

* ತುಂಬಾ ಜ್ವರ (ಬೆನ್ನು, ಎದೆ ಭಾಗ ಮುಟ್ಟಿದಾಗ ತುಂಬಾ ಬಿಸಿಯಿರುತ್ತದೆ, ಮೈಯೆಲ್ಲಾ ಸುಡುವಷ್ಟು ಬಿಸಿಯಿರುತ್ತದೆ)

* ನಿರಂತರ ಕೆಮ್ಮು.... ಗಂಟೆಗಟ್ಟಲೆ ಕೆಮ್ಮುತ್ತಲೇ ಇರುವುದು. ಇನ್ನು ಕೆಮ್ಮು, ಅಸ್ತಮಾ ಸಮಸ್ಯೆ ಇರುವವರಿಗೆ ತಗುಲಿದರೆ ಪರಿಸ್ಥಿತಿ ಮತ್ತಷ್ಟು ಕೆಟ್ಟದಾಗುವುದು.

* ರುಚಿ ಹಾಗೂ ವಾಸನೆ ಇಲ್ಲವಾಗುವುದು.

 AY4.2 ರೂಪಾಂತರ ವೈರಸ್ ತಡೆಗಟ್ಟಲು ಲಸಿಕೆ ಪರಿಣಾಮಕಾರಿಯೇ?

AY4.2 ರೂಪಾಂತರ ವೈರಸ್ ತಡೆಗಟ್ಟಲು ಲಸಿಕೆ ಪರಿಣಾಮಕಾರಿಯೇ?

* ಲಸಿಕೆ ಪಡೆದವರಲ್ಲಿ ಈ ಸೋಂಕು ಹರಡಿರುವ ಪ್ರಮಾಣ ಕಡಿಮೆಯೇ ಅಥವಾ ಲಸಿಕೆ ಪಡೆದವರಲ್ಲೂ ಈ ವೈರಸ್‌ ಹರಡುತ್ತಿದೆಯೇ ಎಂಬುವುದನ್ನು ಇನ್ನೂ ನಿಖರವಾಗಿ ಹೇಳಲು ಸಾಧ್ಯವಾಗಿಲ್ಲ. ಇದರ ಕುರಿತು ಅಧ್ಯಯನಗಳು ನಡೆಯುತ್ತಾ ಇವೆ.

ಈ ವೈರಸ್‌ ಎಷ್ಟರ ಮಟ್ಟಿಗೆ ಅಪಾಯಕಾರಿಯಾಗಿದೆ ಎಂಬುವುದರ ಕುರಿತು ಪರೀಕ್ಷೆಗಳು ನಡೆಯುತ್ತಿವೆ. ಆದ್ದರಿಂದ ಲಸಿಕೆ ಈ ವೈರಸ್‌ ಮೇಲೆ ಪರಿಣಾಮ ಬೀರುತ್ತಿದೆಯೇ ಇಲ್ಲವೇ ಎಂದು ಹೇಳಲು ಸಾಧ್ಯವಿಲ್ಲ.

ಯುಕೆಯಲ್ಲಿ ಡೆಲ್ಟಾ ಪ್ಲಸ್ ಕೇಸ್‌ಗಳು ಎಷ್ಟಿವೆ?

ಯುಕೆಯಲ್ಲಿ ಡೆಲ್ಟಾ ಪ್ಲಸ್ ಕೇಸ್‌ಗಳು ಎಷ್ಟಿವೆ?

ಯುಕೆಯಲ್ಲಿ AY4.2 ರೂಪಾಂತರ ಜುಲೈನಿಂದಲೇ ಹೆಚ್ಚಾಗುತ್ತಿದೆ. ಯುಕೆಯಲ್ಲಿ ಶೇ. 8ರಷ್ಟು ಜನರಲ್ಲಿ ಈ ವೈರಸ್‌ ಪತ್ತೆಯಾಗಿದ್ದು, ಈಗೀನ ಅಂಕಿ ಅಂಶದ ಪ್ರಕಾರ 14,385 ಜನರಲ್ಲಿ ಈ ರೂಪಾಂತರ ವೈರಸ್‌ ಪತ್ತೆಯಾಗಿದೆ.

ಕೊರೊನಾ ಸಾಂಕ್ರಾಮಿಕ ಮುಕ್ತಾಯವಾಗಿಲ್ಲವೇ?

ಕೊರೊನಾ ಸಾಂಕ್ರಾಮಿಕ ಮುಕ್ತಾಯವಾಗಿಲ್ಲವೇ?

ಜಗತ್ತಿನಲ್ಲಿ ಕೊರೊನಾ ಪ್ರಮಾಣಗಳು ಇಳಿಕೆಯಾದಾಗ ಈ ಸಾಂಕ್ರಾಮಿಕ ಕೊನೆಯಾಯ್ತು ಎಂದು ಭಾವಿಸಲಾಗಿತ್ತು. ಆದರೆ ಕೋವಿಡ್‌ 19 ಸಾಂಕ್ರಾಮಿಕ ಕೊನೆಯಾಗಿಲ್ಲ ಎಂದು ತಜ್ಞರು ಎಚ್ಚರಿಸಿದ್ದಾರೆ.

ಯುಕೆಯಲ್ಲಿ ಕೊರೊನಾ ಕೇಸ್‌ಗಳು ಹೆಚ್ಚಾಗುತ್ತಲೇ ಇವೆ.

ಭಾರತದಲ್ಲಿ ಈ ರೂಪಾಂತರ ಪತ್ತೆಯಾಗಿದೆಯೇ?

AY4.2 ರೂಪಾಂತರ ಇದುವರೆಗೆ ಭಾರತದಲ್ಲಿ ಪತ್ತೆಯಾಗಿಲ್ಲ. ಕೋವಿಡ್ 19 ಪತ್ತೆಯಾದವರಲ್ಲಿ ಈ ವೈರಸ್‌ ಇದೆಯೇ ಎಂಬ ಕುರಿತು ಪರೀಕ್ಷೆಯೂ ನಡೆಯುತ್ತಿದೆ.

ಡೆಲ್ಟಾ ರೂಪಾಂತರಕ್ಕಿಂತ ತುಂಬಾ ಅಪಾಯಕಾರಿಯೇ?

ಡೆಲ್ಟಾ ರೂಪಾಂತರಕ್ಕಿಂತ ತುಂಬಾ ಅಪಾಯಕಾರಿಯೇ?

ಇದರ ಕುರಿತು ಅನೇಕ ಅಧ್ಯಯನಗಳು ನಡೆಯುತ್ತಿವೆ. ಇದುವರೆಗೆ AY4.2 ವೈರಸ್‌ ಡೆಲ್ಟಾ ರೂಪಾಂತರಕ್ಕಿಂತ ತುಂಬಾ ಅಪಾಯಕಾರಿ ಎಂಬುವುದು ತಿಳಿದು ಬಂದಿಲ್ಲ. ಕೆಲ ಅಧ್ಯಯನಗಳು ಡೆಲ್ಟಾ ಪ್ಲಸ್‌ಗಿಂತ ಈ ವೈರಸ್‌ ಶೇ.15ರಷ್ಟು ಅಪಾಯಕಾರಿ ಎಂದು ಹೇಳಿದೆ.

English summary

AY4.2 New Covid Variant symptoms and is vaccine effective with it? Explained in kannada

AY4.2 New Covid Variant symptoms and is vaccine effective with it? Explained in kannada,
X
Desktop Bottom Promotion