For Quick Alerts
ALLOW NOTIFICATIONS  
For Daily Alerts

ಹಣ್ಣು ಹೇಗೆ ಸೇವಿಸಬೇಕು? : ಹಣ್ಣು ಸೇವನೆ ವೇಳೆ ಈ ರೀತಿಯ ಮಿಸ್ಟೇಕ್ ನೀವು ಮಾಡುತ್ತಿದ್ದರೆ ಕೂಡಲೇ ನಿಲ್ಲಿಸಿ

|

ಹಣ್ಣುಗಳ ಸೇವೆನೆ ಆರೋಗ್ಯಕ್ಕೆ ಒಳ್ಳೆಯದು ಎಂದು ಗೊತ್ತಿರುವ ವಿಚಾರವಾಗಿದೆ. ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ಹಣ್ಣುಗಳು ಒದಗಿಸುತ್ತದೆ. ನೈಸರ್ಗಿಕವಾಗಿ ಸಿಗುವ ಹಣ್ಣುಗಳು ಅನೇಕ ಪೌಷ್ಟಿಕ ಗುಣಗಳನ್ನು ಹೊಂದಿರುತ್ತವೆ.ವಿವಿಧ ಹಣ್ಣುಗಳ ಸೇವನೆ ದೇಹಕ್ಕೆ ಅತಿ ಮುಖ್ಯ. ವಿಟಮಿನ್‌ಗಳ ಆಗರವಾಗಿರುವ ಹಣ್ಣುಗಳು ಪಚನ ಕ್ರಿಯೆಯನ್ನು ಸರಳಗೊಳಿಸುತ್ತವೆ.

ಚರ್ಮದ ಬಣ್ಣವನ್ನು ತಿಳಿಗೊಳಿಸುವ ಹಾಗೂ ವಯೋ ಸಹಜ ನೆರಿಗೆಗಳನ್ನು ತಡೆಯುವ ಶಕ್ತಿ ಕೂಡ ಕೆಲವು ಹಣ್ಣಿಗಿವೆ. ಹೀಗಾಗಿಯೇ ನಾವು ಅನಾರೋಗ್ಯಕ್ಕೆ ತುತ್ತಾದರೆ ಹಣ್ಣುಗಳನ್ನು ಸೇವಿಸಿ ಎಂದು ವೈದ್ಯರು ಸಲಹೆ ನೀಡುತ್ತಾರೆ. ಇನ್ನು ಕೆಲವರು ಹಣ್ಣನ್ನು ಒಂದೊಂದು ರೀತಿಯಲ್ಲಿ ಸೇವನೆ ಮಾಡುತ್ತಾರೆ.

123

ಕೆಲವರು ಹಣ್ಣನ್ನು ಹಾಗೇ ತಿನ್ನುತ್ತಾರೆ. ಇನ್ನು ಕೆಲವರು ಜ್ಯೂಸ್, ಮಿಲ್ಕ್ ಶೇಕ್ ಮಾಡಿ ಕುಡಿಯುತ್ತಾರೆ. ಯಾವುದೇ ರೀತಿಯಲ್ಲೂ ಸೇವಿಸಿದರೂ ಹಣ್ಣಿನಿಂದ ಸಿಗುವ ಫಲದಲ್ಲಿ ಬದಲಾವಣೆ ಇಲ್ಲ. ಹೀಗಿದ್ದರೂ ಹಣ್ಣನ್ನು ಸರಿಯಾದ ರೀತಿಯಲ್ಲಿ ತಿನ್ನದಿದ್ದರೆ ಅದರಿಂದ ಸಿಗುವ ವಿಟಮಿನ್ ಗಳನ್ನು ನಾವು ಮಿಸ್ ಮಾಡ್ಕೋತ್ತೀವಿ ಅನ್ನುವ ಬಗ್ಗೆ ನಿಮಗೆ ಗೊತ್ತಾ? ಹೌದು, ಹಣ್ಣುಗಳಿಂದ ಸಿಗುವ ಆರೋಗ್ಯ ಪ್ರಯೋಜನಗಳನ್ನು ಹೆಚ್ಚಿಸಲು ನಾವು ಅವುಗಳನ್ನು ಸರಿಯಾಗಿ ತಿನ್ನುವುದು ಮುಖ್ಯ.

ಸರಿಯಾಗಿ ತಿನ್ನದಿದ್ದರೆ ನಾವು ತಿಂದೂ ಪ್ರಯೋಜನವಿಲ್ಲ. ಹಾಗಾದರೆ ಹಣ್ಣುಗಳನ್ನು ಸರಿಯಾಗಿ ಹೇಗೆ ತಿನ್ನಬೇಕು? ಸರಿಯಾದ ರೀತಿ ಯಾವುದು? ಅದರಿಂದ ಸಿಗುವ ಪ್ರಯೋಜನಗಳೇನು? ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ.

ಈ 4 ತಪ್ಪುಗಳು ಹಣ್ಣಿನ ಪ್ರಯೋಜನಗಳ ಮೇಲೆ ಪರಿಣಾಮ ಬೀರಬಹುದು!

ಹೌದು ನಾವು ಇವತ್ತು ನಿಮಗೆ ಹೇಗೆ ಹಣ್ಣು ಸೇವಿಸಬೇಕು ಎನ್ನುವುದನ್ನು ಹೇಳಿಕೊಡುತ್ತೇವೆ. ನಾವು ನೀಡುವ ನಾಲ್ಕು ರೀತಿಯಲ್ಲಿ ನೀವು ಹಣ್ಣುಗಳನ್ನು ಸೇವಿಸುತ್ತಿದ್ದರೆ ಕೂಡಲೇ ಸ್ಟಾಪ್ ಮಾಡಿ.

1. ಮಿಕ್ಸ್ ಮಾಡಿ ತಿನ್ನುವಾಗ ಈ ವಿಚಾರ ಗಮನದಲ್ಲಿರಲಿ!

1. ಮಿಕ್ಸ್ ಮಾಡಿ ತಿನ್ನುವಾಗ ಈ ವಿಚಾರ ಗಮನದಲ್ಲಿರಲಿ!

ಬೇರೆ ಬೇರೆ ಹಣ್ಣುಗಳನ್ನು ಮಿಕ್ಸ್ ಮಾಡಿ ತಿನ್ನುವಾಗ ಕಾಂಬಿನೇಷನ್ ಸರಿ ಇರಲಿ. ಹೌದು, ಸಿಹಿ ಹಣ್ಣುಗಳನ್ನು ಸಿಟ್ರಿಕ್ ಹಣ್ಣುಗಳೊಂದಿಗೆ ಮಿಕ್ಸ್ ಮಾಡದೆ ತಿನ್ನುವುದು ಉತ್ತಮ. ಮಿಕ್ಸ್ ಹಣ್ಣು ತಿನ್ನುವುದಾದರೆ ಕೇವಲ ಸಿಹಿ ಹಣ್ಣುಗಳನ್ನೇ ಆಯ್ಕೆ ಮಾಡಿ. ಹುಳಿ ಹಣ್ಣುಗಳನ್ನು ಸೇವಿಸೋದಾದರೆ ಹುಳಿ ಹಣ್ಣುಗಳನ್ನೇ ಸೇವಿಸಿ. ಯಾಕೆಂದರೆ ಪ್ರತಿಯೊಂದು ಹಣ್ಣು ನಿಮ್ಮ ಹೊಟ್ಟೆಯಲ್ಲಿ ವಿಭಿನ್ನ ಜೀರ್ಣಕಾರಿ ರಸವನ್ನು ಬಿಡುಗಡೆ ಮಾಡುತ್ತದೆ. ಉದಾಹರಣೆಗೆ ಮಾವಿನ ಹಣ್ಣಿಗೆ ಅನಾನಾಸು, ಆರೆಂಜ್ ಯಾವತ್ತೂ ಮಿಕ್ಸ್ ಮಾಡಿ ಸೇವಿಸಬೇಡಿ. ಇನ್ನು ಕಲ್ಲಂಗಡಿ ಹಣ್ಣಿಗೆ ಯಾವ ಹಣ್ಣನ್ನು ಮಿಕ್ಸ್ ಮಾಡಿ ತಿನ್ನಬೇಡಿ. ಯಾಕೆಂದರೆ ಕಲ್ಲಂಗಡಿ ಹಣ್ಣಿನಲ್ಲಿ ನೀರಿನಾಂಶ ಜಾಸ್ತಿ ಹಾಗೂ ಅದಕ್ಕೆ ಬೇಗ ಜೀರ್ಣವಾಗುವ ಶಕ್ತಿ ಇದೆ.ಬೇರೆ ಹಣ್ಣಿಗೆ ಕಲ್ಲಂಗಡಿ ಹಣ್ಣಿನಷ್ಟು ಜೀರ್ಣವಾಗುವ ಶಕ್ತಿ ಇಲ್ಲ. ಹೀಗಾಗಿ ಕಲ್ಲಂಗಡಿ ತಿನ್ನೋದಾದರೆ ಅದನ್ನು ಮಾತ್ರ ಸೇವಿಸಿ. ಮಿಕ್ಸ್ ಮಾಡಿಕೊಳ್ಳಲು ಹೋಗಬೇಡಿ.

2. ಹಣ್ಣಿಗೆ ಉಪ್ಪು-ಚಾಟ್ ಮಸಾಲ ಬಳಸಬೇಡಿ!

2. ಹಣ್ಣಿಗೆ ಉಪ್ಪು-ಚಾಟ್ ಮಸಾಲ ಬಳಸಬೇಡಿ!

ಈಗ ನಗರಗಳಲ್ಲಿ ಎಲ್ಲಿ ನೋಡಿದರೂ ಫ್ರುಟ್ ಬಾಲ್ ಸಿಗುತ್ತದೆ. ಅದರ ಟೇಸ್ಟ್ ಹೆಚ್ಚು ಮಾಡಲು ಅದಕ್ಕೆ ಚಾಟ್ ಮಸಾಲ ಮತ್ತು ಉಪ್ಪು ಹಾಕಲಾಗುತ್ತೆ. ಫ್ರುಟ್ ಬಾಲ್ ಇಷ್ಟ ಪಡುವ ಅನೇಕರು ಈ ರೀತಿಯ ಕಾಂಬೀನೇಷನ್ ಇಷ್ಟಪಡುತ್ತಾರೆ. ಆದರೆ ನಿಮಗೊಂದು ಗೊತ್ತಾ? ಈ ರೀತಿ ಉಪ್ಪು ಮತ್ತು ಚಾಟ್ ಮಸಾಲಾಯುಕ್ತ ಹಣ್ಣು ದೇಹಕ್ಕೆ ಒಳ್ಳೆಯದಲ್ಲ. ಹೌದು, ಹಣ್ಣುಗಳಿಗೆ ಉಪ್ಪು ಹಾಕಿದರೆ ಕೂಡಲೇ ಹಣ್ಣುಗಳಿಂದ ನೀರು ಬಿಡುಗಡೆಯಾಗುತ್ತದೆ. ಈ ನೀರು ಪೋಷಕಾಂಶಗಳನ್ನು ಹಣ್ಣಿನಿಂದ ಬೇರ್ಪಡಿಸುತ್ತದೆ. ಹೀಗಾಗಿ ಉಪ್ಪು ಸೇರಿಸಿದ ಹಣ್ಣು ವಿಟಮಿನ್ ಇಲ್ಲದೆ ತಿನ್ನುವಂತೆ ಆಗಲಿದೆ. ಅಲ್ಲದೆ, ಉಪ್ಪು ಮತ್ತು ಚಾಟ್ ಮಸಾಲಾದಲ್ಲಿರುವ ಸೋಡಿಯಂ ಮೂತ್ರಪಿಂಡಗಳಿಗೆ ಒಳ್ಳೆಯದಲ್ಲ ಏಕೆಂದರೆ ಅವು ನಮ್ಮ ದೇಹದಲ್ಲಿ ನೀರಿನ ಧಾರಣಕ್ಕೆ ಕಾರಣವಾಗುತ್ತವೆ. ಹೀಗಾಗಿ ನೀವು ಹಣ್ಣುಗಳನ್ನು ಸೇವಿಸುವವರಾದರೆ ಅದಕ್ಕೆ ಉಪ್ಪು ಮತ್ತು ಚಾಟ್ ಮಸಾಲೆ ಎಂದಿಗೂ ಸೇರಿಸಿ ತಿನ್ನಬೇಡಿ. ಇದು ನಿಮ್ಮ ಆರೋಗ್ಯದ ಮೇಲೆ ಅಡ್ಡಪರಿಣಾಮ ಬೀರುತ್ತದೆ.

3. ಊಟದ ಬಳಿಕ ಹಣ್ಣು ತಿನ್ನಬೇಡಿ!

3. ಊಟದ ಬಳಿಕ ಹಣ್ಣು ತಿನ್ನಬೇಡಿ!

ಊಟದ ನಂತರ ಹಣ್ಣು ತಿಂದರೆ ಒಳ್ಳೆಯದು ಅಂತಾರೆ. ಊಟದ ನಂತರ ಹಣ್ಣು ತಿನ್ನುವ ಎಂದು ಮನಸ್ಸು ಹೇಳುತ್ತದೆ. ಈ ರೀತಿ ಎಂದಿಗೂ ಮಾಡಲು ಹೋಗಬೇಡಿ. ಯಾಕೆಂದರೆ, ಊಟದ ಬಳಿಕ ಹಣ್ಣು ಸೇವಿಸಿದರೆ ಅದು ನಿಮ್ಮ ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರುತ್ತದೆ. ಹಣ್ಣಿನಲ್ಲಿರುವ ಸಕ್ಕರೆ ಅಂಶವು ಕಾರ್ಬೋಹೈಡ್ರೇಟ್‌ಗಳು ಮತ್ತು ಪ್ರೋಟೀನ್‌ಗಳೊಂದಿಗೆ ಹುದುಗುತ್ತದೆ, ಇದು ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಇದು ಜೀರ್ಣಾಂಗ ವ್ಯವಸ್ಥೆಯ ಮೇಲೆ ಹೆಚ್ಚಿನ ಒತ್ತಡವನ್ನು ನೀಡುತ್ತದೆ. ಹೀಗಾಗಿ ಈ ವೇಳೆ ನಿಮಗೆ ಹೊಟ್ಟೆ ನೋವು ಹಾಗೂ ಇತರ ಸಮಸ್ಯೆಗಳು ಕಾಡಬಹುದು. ಹಾಗಾಗಿ, ಊಟವಾದ ತಕ್ಷಣ ಹಣ್ಣುಗಳನ್ನು ಸೇವಿಸುವುದು ಒಳ್ಳೆಯದಲ್ಲ. ಹಣ್ಣುಗಳನ್ನು ತಿನ್ನಲು ಉತ್ತಮ ಸಮಯವೆಂದರೆ ಊಟದ ನಂತರ ಕನಿಷ್ಠ 30 ನಿಮಿಷದಿಂದ ಒಂದು ಗಂಟೆಯ ಬಳಿಕ ಹಾಗೂ ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಹಣ್ಣು ಸೇವಿಸಬಹುದು.

4. ಹಣ್ಣು ಕತ್ತರಿಸದ ಬಳಿಕ ತೊಳೆಯಬೇಡಿ!

4. ಹಣ್ಣು ಕತ್ತರಿಸದ ಬಳಿಕ ತೊಳೆಯಬೇಡಿ!

ಯಾವತ್ತೂ ಹಣ್ಣು ಕತ್ತರಿಸಿದ ಬಳಿಕ ಆ ಹಣ್ಣುಗಳನ್ನು ತೊಳೆಯಲು ಎಂದಿಗೂ ಹೋಗಬೇಡಿ. ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನುವ ಮೊದಲು ತೊಳೆಯುವುದು ಉತ್ತಮ ಕತ್ತರಿಸಿದ ಬಳಿಕ ಎಂದಿಗೂ ತೊಳೆಯಬೇಡಿ. ಕತ್ತರಿಸಿದ ನಂತರ ಹಣ್ಣನ್ನು ತೊಳೆದರೆ, ಅದರಲ್ಲಿರುವ ವಿಟಮಿನ್ ಹಾಗೂ ಮಿನರಲ್ಸ್ ಗಳೂ ಕೂಡ ತೊಳೆದು ಹೋಗುತ್ತದೆ. ಹೀಗಾಗಿ ಹಣ್ಣನ್ನು ಬಳಕೆ ಮಾಡುವಾಗ ಈ ತಪ್ಪುಗಳನ್ನು ಎಂದಿಗೂ ಮಾಡದಿರಿ.

5. ಹಣ್ಣಿನ ಇತರೆ ವಿಚಾರಗಳು!

5. ಹಣ್ಣಿನ ಇತರೆ ವಿಚಾರಗಳು!

ಇದಲ್ಲದೇ ಬೆಳಗ್ಗಿನ ಸಮಯದ ಬಳಿಕ ಹಣ್ಣುತಿನ್ನಲು ಸಕಾಲ ಎಂದರೆ ಮಧ್ಯಾಹ್ನವಾಗಿದೆ. ಅಂದರೆ ಯಾವುದೋ ಕಾರಣಕ್ಕೆ ಬೆಳಗ್ಗಿನ ಸಮಯದಲ್ಲಿ ಹಣ್ಣು ತಿನ್ನಲು ಸಾಧ್ಯವಾಗದೇ ಇದ್ದಾಗ ಮಾತ್ರ ಮಧ್ಯಾಹ್ನ ತಿನ್ನಬಹುದು. ಬೆಳಗ್ಗಿನ ಸಮಯ ಹಣ್ಣು ತಿನ್ನಲು ಭಾರೀ ಉತ್ತಮವಾಗಿದೆ. ಒಂದು ವೇಳೆ ನೀವು ನಿತ್ಯವೂ ವ್ಯಾಯಮ ಮಾಡುವವರಾಗಿದ್ದರೆ ವ್ಯಾಯಮಕ್ಕೂ ಅರ್ಧ ಗಂಟೆ ಮುನ್ನ ಹಣ್ಣುಗಳನ್ನು ತಿನ್ನುವ ಮೂಲಕ ವ್ಯಾಯಮಕ್ಕೆ ಅಗತ್ಯವಾದ ಶಕ್ತಿ ಮತ್ತು ನೀರು ದೊರಕುತ್ತದೆ. ಇದರಿಂದ ನಿಮ್ಮ ವ್ಯಾಯಮ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.

English summary

Avoid These Mistakes While Eating Fruits in kannada

Here we are discussing about Avoid These Mistakes While Eating Fruits in kannada, Read on:
X
Desktop Bottom Promotion