For Quick Alerts
ALLOW NOTIFICATIONS  
For Daily Alerts

ಕ್ಯಾನ್ಸರ್ ವಿರುದ್ಧ ಹೋರಾಡುವ ಕಲೋಂಜಿ ಬೀಜದ ಬಗ್ಗೆ ನಿಮಗೆಷ್ಟು ಗೊತ್ತು?

|

ಭಾರತೀಯರು ಅಡುಗೆಯಲ್ಲಿ ಹೆಚ್ಚಾಗಿ ಬಳಸುವಂತಹ ಕಲೊಂಜಿ ಆಹಾರಕ್ಕೆ ವಿಶೇಷವಾದ ರುಚಿ ಹಾಗೂ ಸುವಾಸನೆ ನೀಡುವುದು. ಈ ಕಲೊಂಜಿ ಬೀಜಗಳ ಮೂಲ ಈಜಿಪ್ಟ್. ಆದರೆ ಹಿಂದಿನಿಂದಲೂ ಇದನ್ನು ಭಾರತೀಯ ಆಯುರ್ವೇದ ಚಿಕಿತ್ಸಾ ಕ್ರಮದಲ್ಲಿ ಬಳಸಿಕೊಂಡು ಬರಲಾಗುತ್ತಿದೆ. ಈ ಬೀಜಗಳಲ್ಲಿ ಉನ್ನತ ಮಟ್ಟದ ವಿಟಮಿನ್ ಗಳು, ಆಮಿನೊ ಆಮ್ಲ, ಪ್ರೋಟೀನ್, ಕಚ್ಚಾ ನಾರಿನಾಂಶ ಮತ್ತು ಕೊಬ್ಬಿನಾಮ್ಲಗಳು ಸಮೃದ್ಧವಾಗಿದೆ. ಸಣ್ಣ ಬೀಜವನ್ನು ನಿಮ್ಮ ಅಡುಗೆಯಲ್ಲಿ ಬಳಸಿಕೊಂಡರೆ ಅದರಿಂದ ಹಲವಾರು ರೀತಿಯ ಆರೋಗ್ಯ ಲಾಭಗಳು ಸಿಗುವುದು. ಕಲೊಂಜಿಯಿಂದ ಸಿಗುವ ಐದು ಆರೋಗ್ಯ ಲಾಭಗಳ ಬಗ್ಗೆ ನಾವು ನಿಮಗೆ ಇಲ್ಲಿ ತಿಳಿಸಿಕೊಡಲಿದ್ದೇವೆ.

1. ಉರಿಯೂತ ತಗ್ಗಿಸುವುದು

1. ಉರಿಯೂತ ತಗ್ಗಿಸುವುದು

ಈ ಕಪ್ಪು ಬೀಜಗಳಲ್ಲಿ ಥೈಮೋಕ್ವಿನೋನ್ ಎನ್ನುವ ಅಂಶವಿದ್ದು, ಇದು ಅನಾರೋಗ್ಯದಿಂದಾಗಿ ಉಂಟಾಗಿರುವಂತಹ ದೀರ್ಘಕಾಲಿಕ ಉರಿಯೂತವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಈ ಬೀಜಗಳನ್ನು ಮಿತ ಪ್ರಮಾಣದಲ್ಲಿ ದಿನನಿತ್ಯವೂ ಸೇವಿಸಿದರೆ ಅದರಿಂದ ದೇಹದಲ್ಲಿನ ಊತ ಕಡಿಮೆ ಮಾಡಲು ನೆರವಾಗುವುದು.

2. ಯಕೃತ್ ರಕ್ಷಿಸುವುದು

2. ಯಕೃತ್ ರಕ್ಷಿಸುವುದು

ದೇಹದಲ್ಲಿ ಯಕೃತ್ ತುಂಬಾ ಪ್ರಮುಖ ಅಂಗ ಹಾಗೂ ಹಲವಾರು ಪ್ರಮುಖ ಕಾರ್ಯಗಳನ್ನು ಇದು ನಿಭಾಯಿಸುವುದು. ಇದರಲ್ಲಿ ಮುಖ್ಯವಾಗಿ ಇದು ದೇಹದಲ್ಲಿನ ವಿಷಕಾರಿ ಅಂಶ ಹೊರಹಾಕುವುದು, ಔಷಧಿಗಳನ್ನು ಚಯಾಪಚಯಗೊಳಿಸುವುದು ಮತ್ತು ಪೋಷಕಾಂಶಗಳನ್ನು ಸಂಸ್ಕರಿಸುವುದು. ಕಲೊಂಜಿ ಯಕೃತ್ ಅನ್ನು ಗಾಯಾಳು ಸಮಸ್ಯೆಯಿಂದ ರಕ್ಷಿಸುವುದು ಅಥವಾ ಯಾವುದೇ ರೀತಿಯ ಹಾನಿಯಿಂದಲೂ ಇದು ತುಂಬಾ ಪರಿಣಾಮಕಾರಿ ಆಗಿ ಸುಧಾರಣೆ ಮಾಡುವಂತೆ ಮಾಡುವುದು.

3. ಮಧುಮೇಹ ತಡೆಯುವುದು

3. ಮಧುಮೇಹ ತಡೆಯುವುದು

ಸಣ್ಣ ಬೀಜವು ಹಠಾತ್ ಆಗಿ ರಕ್ತದಲ್ಲಿ ಸಕ್ಕರೆ ಪ್ರಮಾಣವು ಹೆಚ್ಚಾಗುವುದನ್ನು ತಡೆಯುವುದು ಮತ್ತು ಮಧುಮೇಹದ ಇತರ ಕೆಲವು ಲಕ್ಷಣಗಳನ್ನು ಇದು ತಗ್ಗಿಸುವುದು. ಕಲೊಂಜಿಯನ್ನು ಪ್ರತಿನಿತ್ಯವು ಸೇವನೆ ಮಾಡಿದರೆ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಆಗುವುದು. ಮಧುಮೇಹಿಗಳು ಪ್ರತಿನಿತ್ಯ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕಲೊಂಜಿ ಹಾಕಿದ ನೀರು ಕುಡಿಯಬೇಕು.

4. ಮೊಡವೆ ನಿವಾರಣೆ

4. ಮೊಡವೆ ನಿವಾರಣೆ

ಕಲೊಂಜಿ ತೈಲವು ಚರ್ಮವನ್ನು ನಯ ಹಾಗೂ ಬಿಗಿಯಾಗಿಸುವುದು. ಇದರಿಂದ ಚಳಿಗಾಲದಲ್ಲಿ ಚರ್ಮ ಒಣಗುವುದು ಹಾಗೂ ನಿಸ್ತೇಜವಾಗುವಂತಹ ಸಮಸ್ಯೆಯನ್ನು ಇದು ನಿವಾರಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಪ್ರತಿನಿತ್ಯ ಕಲೆ ಹಾಗೂ ಮೊಡವೆ ನಿವಾರಣೆ ಮಾಡಲು ದಿನಕ್ಕೆ ಎರಡು ಸಲ ಕಲೊಂಜಿ ತೈಲ ಮುಖಕ್ಕೆ ಹಚ್ಚಿಕೊಳ್ಳಿ.

5. ಕ್ಯಾನ್ಸರ್ ವಿರುದ್ಧ ಹೋರಾಡುವ ಗುಣ

5. ಕ್ಯಾನ್ಸರ್ ವಿರುದ್ಧ ಹೋರಾಡುವ ಗುಣ

ಕಲೊಂಜಿಯಲ್ಲಿ ಆಂಟಿಆಕ್ಸಿಡೆಂಟ್ ಗುಣಗಳು ಇವೆ ಮತ್ತು ಇದು ಫ್ರೀ ರ್ಯಾಡಿಕಲ್ ಅನ್ನು ತಟಸ್ಥಗೊಳಿಸುವುದು ಮತ್ತು ಕ್ಯಾನ್ಸರ್ ಕಾರಕ ಅಂಗಾಂಶಗಳ ವಿರುದ್ಧ ಹೋರಾಡುವುದು. ಮೇಧೋಜೀರಕ ಗ್ರಂಥಿ, ಶ್ವಾಸಕೋಶ, ಪ್ರಾಸ್ಟೇಟ್, ಚರ್ಮ ಮತ್ತು ಕರುಳಿನ ಕ್ಯಾನ್ಸರ್ ವಿರುದ್ಧ ಹೋರಾಡಲು ಇದು ಸಹಕಾರಿ.

English summary

Astounding Health Benefits Of Kalonji

Kalonji, also known as Nigella Seeds is a common spice used in different Indian cuisines. These seeds give a distinct taste and aroma to the food. Originally discovered by Egyptians, the tiny black seeds have been used in traditional Ayurvedic medicine for a very long time. They are loaded with vitamins, amino acids, crude fiber, proteins, and fatty acids. Adding a small amount of Nigella Seeds in your diet can prove beneficial in treating numerous health problems. Here are 5 reasons why these tiny black seeds are good for health.
Story first published: Thursday, November 28, 2019, 16:20 [IST]
X
Desktop Bottom Promotion