Just In
- 25 min ago
World Thyroid Day: ಥೈರಾಯ್ಡ್ ಬಗ್ಗೆ ಇರುವ ತಪ್ಪು ಕಲ್ಪನೆಗಳಿವು, ಹಾಗಾದರೆ ಸತ್ಯಾಂಶಗಳೇನು ಗೊತ್ತಾ?
- 2 hrs ago
ಈ ಪ್ರಾಯಾಣಾಮ ತಪ್ಪದೇ ಮಾಡಿದರೆ ಸಾಕು, ಅಧಿಕ ರಕ್ತದೊತ್ತಡಕ್ಕೆ ಬೈಬೈ ಹೇಳಬಹುದು..!
- 4 hrs ago
ಒಂದೇ ದಿನದಲ್ಲಿ ಬಂದಿದೆ ವಟ ಸಾವಿತ್ರಿ ವ್ರತ ಹಾಗೂ ಶನಿ ಜಯಂತಿ: ಈ ಕಾಕತಾಳೀಯಗಳು ಸಂಭವಿಸಲಿದೆ
- 6 hrs ago
ಇತ್ತೀಚೆಗಷ್ಟೇ ಟೈಪ್ 2 ಮಧುಮೇಹ ಕಾಣಿಸಿಕೊಂಡಿದ್ದರೆ ಗುಣಪಡಿಸುವುದು ಹೇಗೆ?
Don't Miss
- News
ವಿದೇಶಿ ಕರೆನ್ಸಿ ಆಸೆಗೆ 1 ಲಕ್ಷ ಕಳೆದುಕೊಂಡ ಉದ್ಯಮಿ
- Sports
LSG vs RCB: ಕೊನೆಯ ಬಾರಿಗೆ ಶತಕ ಗಳಿಸಿದ್ದ ಈಡನ್ ಗಾರ್ಡನ್ಸ್ಗೆ ಮರಳಿದ ವಿರಾಟ್ ಕೊಹ್ಲಿ!
- Movies
ಕರಣ್ ಜೋಹರ್ ಬರ್ತ್ ಡೇ: ರಶ್ಮಿಕಾ, ಯಶ್ ಮತ್ತು ಸೌತ್ ಸ್ಟಾರ್ಸ್ ಭಾಗಿ!
- Technology
ಐಫೋನ್ನಲ್ಲಿ ಸ್ಟೋರೇಜ್ ಸ್ಪೇಸ್ ಫ್ರೀ ಮಾಡಲು ಹೀಗೆ ಮಾಡಿ?
- Automobiles
ಹೊಸ ಇವಿ ನೀತಿ: ರಾಜಸ್ತಾನದಲ್ಲಿ ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ಭರ್ಜರಿ ಸಬ್ಸಡಿ!
- Education
KLE Society Recruitment 2022 : 14 ಪ್ರಾಧ್ಯಾಪಕ ಮತ್ತು ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ದಾವೋಸ್: ರೆನ್ಯೂ ಪವರ್ನಿಂದ ರಾಜ್ಯದಲ್ಲಿ 50 ಸಾವಿರ ಕೋಟಿ ರೂ. ಹೂಡಿಕೆ ಒಪ್ಪಂದ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕೋವಿಡ್ 19ಗೆ ಆ್ಯಂಟಿಬಯೋಟಿಕ್ ಸೇವಿಸಿದರೆ ಜನನೇಂದ್ರೀಯ ಸೋಂಕು ಉಂಟಾಗುವುದೇಕೆ? ಪರಿಹಾರವೇನು?
ಕೊರೊನಾ ನಮ್ಮ ಬದುಕಿನಿಂದ ದೂರವಾಯ್ತು, ಇನ್ನು ಈ ಮಹಾಮಾರಿ ಆತಂಕವಿಲ್ಲ ಎಂದು ಅಂದುಕೊಳ್ಖುವಷ್ಟರಲ್ಲಿ ಒಮಿಕ್ರಾನ್ ಬಂದು ಬಿಡ್ತು, ಇದೀಗ ಸೋಂಕಿತರ ಸಂಖ್ಯೆ ದಿನೇ ದಿನ ಹೆಚ್ಚಾಗುತ್ತಿದೆ. ಆದರೆ ಸಮಧಾನದ ವಿಷಯವೆಂದರೆ ಒಮಿಕ್ರಾನ್ ಡೆಲ್ಟಾದಷ್ಟು ಮಾರಾಣಾಂತಿಕವಲ್ಲ, ಜ್ವರ, ಮೈ, ಕೈ ನೋವು ಇಂಥ ಲಕ್ಷಣಗಳು ಕಂಡು ಬರುತ್ತಿದ್ದು ವಾರದೊಳಗೆ ಹೆಚ್ಚಿನವರು ಚೇತರಿಸಿಕೊಳ್ಳುತ್ತಿದ್ದಾರೆ.
ತಲೆನೋವು, ಗಂಟಲು ನೋವು, ಮೈಕೈ ನೋವು, ಅತ್ಯಧಿಕ ಜ್ವರ ಇವೆಲ್ಲಾ ಒಮಿಕ್ರಾನ್ನ ಸಾಮಾನ್ಯ ಲಕ್ಷಣಗಳಾಗಿವೆ. ಆದರೆ ಈ ಲಕ್ಷಣಗಳು ಕಡಿಮೆಯಾಗಬೇಕೆಂದರೆ ಆ್ಯಂಟಿಬಯೋಟಿಕ್ ತೆಗೆದುಕೊಳ್ಳಲೇಬೇಕು. ಈ ಆ್ಯಂಟಿಬಯೋಟಿಕ್ಗಳು ದೇಹವನ್ನು ಮತ್ತಷ್ಟು ಸುಸ್ತಾಗಿಸುವುದು ಜೊತೆಗೆ ಮಹಿಳೆಯರಲ್ಲಿ ಜನನೇಂದ್ರೀಯಗಳಲ್ಲಿ ಸೋಂಕು ಉಂಟಾಗುವುದು.
ಕೋವಿಡ್ 19 ಚೇತರಿಸಿಕೊಳ್ಳುತ್ತಿರುವವರು ಅನೇಕರು ಈ ಸಮಸ್ಯೆಯ ಕುರಿತು ಹೇಳುತ್ತಿದ್ದಾರೆ. ಯೀಸ್ಟ್ ಸೋಂಕಿನಿಂದಾಗಿ ಹೆಚ್ಚಿನವರಲ್ಲಿ ತುರಿಕೆ, ನೋವು ಈ ರೀತಿಯ ಲಕ್ಷಣಗಳು ಕಂಡು ಬರುತ್ತಿವೆ. ಏಕೆ ಈ ರೀತಿ ಉಂಟಾಗುತ್ತಿದೆ, ಮೂತ್ರ ಸೋಂಕಿನ ಲಕ್ಷಣಗಳೇನು, ಮೂತ್ರ ಸೋಂಕು ಕಡಿಮೆ ಮಾಡುವುದು ಹೇಗೆ ಎಂದು ನೋಡೋಣ ಬನ್ನಿ:

ಒಮಿಕ್ರಾನ್ ಮೈಲ್ಡ್ ಎನ್ನುತ್ತಿದ್ದರೂ ಕಂಡು ಬರುತ್ತಿದೆ ತುಂಬಾ ಸುಸ್ತು
ಒಮಿಕ್ರಾನ್ ತುಂಬಾ ಮೈಲ್ಡ್ ಎಂದು ಹೇಳುತ್ತಿದ್ದರೂ ಒಮಿಕ್ರಾನ್ ಬಂದವರಲ್ಲಿ ತುಂಬಾ ಸುಸ್ತು, ಜ್ವರದ ಜೊತೆಗೆ ತುಂಬಾ ಮೈಕೈ ನೋವು, ತಲೆಸುತ್ತು ಕಂಡು ಬರುತ್ತಿದೆ. ಈ ಲಕ್ಷಣಗಳು ಕಡಿಮೆಯಾಗಬೇಕೆಂದರೆ ಆ್ಯಂಟಿಬಯೋಟಿಕ್ ತೆಗೆದುಕೊಳ್ಳಲೇಬೇಕು. ಆದರೆ ಹೀಗೆ ಆ್ಯಂಟಿಬಯೋಟಿಕ್ ತೆಗೆದುಕೊಂಡಾಗ ಕೋವಿಡ್ 19 ಲಕ್ಷಣಗಳು ಕಡಿಮೆಯಾದರು ಜನನೇಂದ್ರೀಯದ ಸೋಂಕು ಕಂಡು ಬರುತ್ತಿದೆ.

ಆ್ಯಂಟಿಬಯೋಟಿಕ್ ತೆಗೆದುಕೊಂಡಾಗ ಜನನೇಂದ್ರೀಯದ ಸೋಂಕು ಉಂಟಾಗುತ್ತಿರುವುದು ಏಕೆ?
ಆ್ಯಂಟಿಬಯೋಟಿಕ್ ತೆಗೆದುಕೊಂಡಾಗ ಅದರ ಅಡ್ಡಪರಿಣಾಮ ಇದ್ದೇ ಇರುತ್ತದೆ. ಕರುಳಿನಲ್ಲಿರುವ ಬ್ಯಾಕ್ಟಿರಿಯಾಗಳನ್ನು ಕೊಲ್ಲುತ್ತದೆ. ಹೀಗೆ ಆ್ಯಂಟಿಬಯೋಟಿಕ್ ಬ್ಯಾಕ್ಟಿರಿಯಾಗಳನ್ನು ಕೊಲ್ಲುವಾಗ ಕೆಟ್ಟ ಬ್ಯಾಕ್ಟಿರಿಯಾ ಜೊತೆಗೆ ಒಳ್ಳೆಯ ಬ್ಯಾಕ್ಟಿರಿಯಾಗಳನ್ನೂ ಕೊಲ್ಲುತ್ತದೆ. ಇದರಿಂದ ವಾಂತಿ, ತಲೆಸುತ್ತು ಈ ರೀತಿಯ ಅಡ್ಡಪರಿಣಾಮಗಳು ಕಂಡು ಬರುವುದು. ಅಲ್ಲದೆ ರೋಗ ನಿರೋಧಕ ಶಕ್ತಿಯನ್ನೂ ಕಡಿಮೆ ಮಾಡುತ್ತದೆ.
ಆ್ಯಂಟಿಬಯೋಟಿಕ್ ಜನನೇಂದ್ರೀಯದಲ್ಲಿರುವ ಕೆಟ್ಟ ಹಾಗೂ ಒಳ್ಳೆಯ ಬ್ಯಾಕ್ಟಿರಿಯಾಗಳನ್ನು ಕೊಲ್ಲುತ್ತದೆ, ಇದರಿಂದಾಗಿ ಜನನೇಂದ್ರೀಯದಲ್ಲಿ ಸೋಂಕು ಉಂಟಾಗುವುದು. ಆ್ಯಂಟಿಬಯೋಟಿಕ್ ಜನನೇಂದ್ರೀಯದ pH ಸಮತೋಲನದ ಮೇಲೆ ಪರಿಣಾಮ ಬೀರುತ್ತದೆ, ಇದರಿಂದಾಗಿ ಜನನೇಂದ್ರೀಯದ ಸೋಂಕು ಉಂಟಾಗುವುದು.

ಜನನೇಂದ್ರೀಯದ ಸೋಂಕಿನ ಲಕ್ಷಣಗಳು
* ಜನನೇಂದ್ರೀಯದ ಸುತ್ತ ಉರಿ ಕಂಡು ಬರುವುದು
* ಬಿಳಿ ಮತ್ತು ವಾಸನೆ ರಹಿತ ಬಿಳುಪು ಹೋಗುವುದು
* ಸೆಕ್ಸ್ ಸಮಯದಲ್ಲಿ ನೋವುಂಟಾಗುವುದು
* ಮೂತ್ರವಿಸರ್ಜನೆ ಸಮಯದಲ್ಲಿ ನೋವುಂಟಾಗುವುದು
* ಬಿಳುಪು ಹೋಗುವುದು ಹೆಚ್ಚುವುದು.

ಜನನೇಂದ್ರೀಯದ ಸೋಂಕು ಕಂಡು ಬಂದಾಗ ಏನು ಮಾಡಬೇಕು?
* ವೈದ್ಯರನ್ನು ಕಂಡು ಚಿಕಿತ್ಸೆ ಪಡೆಯಿರಿ
* ಜೀರಿಗೆ ನೀರು ಮಾಡಿ ಕುಡಿಯಿರಿ
* ಎಳನೀರು ಕುಡಿಯಿರಿ
* ಗಂಜಿ ನೀರು ಕೂಡ ಒಳ್ಳೆಯದು