For Quick Alerts
ALLOW NOTIFICATIONS  
For Daily Alerts

ಟೆನ್ಷನ್‌ ಕಡಿಮೆ ಮಾಡುವ ಶಕ್ತಿ ಈ ಆಹಾರದಲ್ಲಿವೆ

|

ಮಾನಸಿಕ ಒತ್ತಡ ಒಂದೆಲ್ಲಾ ಒಂದು ಕಾತಣದಿಂದ ಉಂಟಾಗುವುದು ಸಹಜ. ಆದರೆ ಅವುಗಳನ್ನು ನಿಭಾಯಿಸುತ್ತೇವೆ. ಆದರೆ ಕೆಲವೊಂದು ಮಾನಸಿಕ ಒತ್ತಡವನ್ನು ನಿಭಾಯಿಸಲು ಸಾದ್ಯವೇ ಆಗುವುದಿಲ್ಲ.

ಮಾನಸಿಕ ಒತ್ತಡದ ಕಾರಣದಿಂದಾಗಿ ನೋವು, ಹತಾಶೆ, ಕೋಪ ಎಲ್ಲವೂ ಒಟ್ಟೊಟ್ಟಿಗೆ ಉಂಟಾಗುತ್ತದೆ. ಯಾವುದೇ ಕೆಲಸ ಕಾರ್ಯ ಮಾಡಲು ಮನಸ್ಸಾಗುವುದಿಲ್ಲ, ಮಾಡಿದರೂ ಏಕಾಗ್ರತೆಯಿಂದ ಮಾಡಲೂ ಸಾಧ್ಯವಾಗುವುದಿಲ್ಲ.

ಆದರೆ ಹಾಗಂತ ಮಾನಸಿಕ ಒತ್ತಡವನ್ನು ಹೊರಹಾಕದೇ ಹೋದರೆ ಅದರಿಂದ ನಮಗೇ ತೊಂದರೆ ತಪ್ಪಿದ್ದಲ್ಲ. ಮಾನಸಿಕ ಒತ್ತಡವನ್ನು ಕಡಿಮೆ ಮಾಡುವಲ್ಲಿ ಧ್ಯಾನ ತುಂಬಾನೇ ಸಹಕಾರಿ ಅದರ ಜೊತೆಗೆ ಕೆಲವೊಂದು ಆಹಾರಗಳು ನಿಮ್ಮ ಮೂಡ್‌ ಬದಲಾಯಿಸುವಲ್ಲಿ ಸಹಕಾರಿಯಾಗಿದೆ.

1. ಬೆಣ್ಣೆಹಣ್ಣು

1. ಬೆಣ್ಣೆಹಣ್ಣು

ಇದು ಅತ್ಯುತ್ತಮ ಕೊಬ್ಬಿನಂಶವಿರುವ ಹಣ್ಣಾಗಿದೆ. ಇದರಲ್ಲಿರುವ ಕೊಬ್ಬಿನಂಶ ಮೋನೋಸ್ಯಾಚುರೇಟಡ್‌ ಆಗಿದ್ದು ಈ ಕೊಬ್ಬಿನಂಶ ಸಂಗ್ರಹವಾಗುವುದಿಲ್ಲ, ಬದಲಾಗಿ ಶಕ್ತಿಯಾಗಿ ಪರಿವರ್ತನೆಯಾಗುತ್ತದೆ. ಈ ಹಣ್ಣು ನರಗಲ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು. ಅಲ್ಲದೆ ಮಾನಸಿಕ ಒತ್ತಡ ಕಡಿಮೆ ಮಾಡಿ ಹ್ಯಾಪಿ ಹಾರ್ಮೋನ್ ಉಂಟು ಮಾಡುವ ಹಣ್ಣು ಇದಾಗಿದೆ.

 ನಟ್ಸ್

ನಟ್ಸ್

ದಿನದಲ್ಲಿ ಒಂದು ಮುಷ್ಠಿಯಷ್ಟು ನಟ್ಸ್‌ ತಿನ್ನುವುದು ಒಟ್ಟು ಮೊತ್ತ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಪಿಸ್ತಾ, ವಾಲ್‌ನಟ್ಸ್, ಗೋಡಂಬಿ, ಬಾದಾಮಿ ಇವುಗಳಲ್ಲಿ ವಿಟಮಿನ್ ಬಿ ಅಂಶ ಅಧಿಕವಿದ್ದು ಇವುಗಳು ಮಾನಸಿಕ ಒತ್ತಡ ಕಡಿಮೆ ಮಾಡುತ್ತದೆ.

 3. ಸಾಲಮೋನ್

3. ಸಾಲಮೋನ್

ಮಾನಸಿಕ ಒತ್ತಡ ಕಡಿಮೆ ಮಾಡುವ ಅತ್ಯುತ್ತಮವಾದ ಆಹಾರವೆಂದರೆ ಸಾಲಮೋನ್. ಇದರಲ್ಲಿರುವ ಒಮೆಗಾ ಅಂಶ ಮಾನಸಿಕ ಒತ್ತಡ ಕಡಿಮೆ ಮಾಡುತ್ತದೆ. 100ಗ್ರಾಂ ಸಾಲಮೋನ್‌ ಮೀನಿನಲ್ಲಿ ಸುಮಾರು 2000ಮಿಗ್ರಾಂ ಒಮೆಗಾ 3 ಕೊಬ್ಬಿನಂಶವಿರುತ್ತದೆ.

4. ಡಾರ್ಕ್‌ ಚಾಕಲೇಟ್

4. ಡಾರ್ಕ್‌ ಚಾಕಲೇಟ್

ನೀವು ದಿನದಲ್ಲಿ ಸ್ವಲ್ಪ ಡಾರ್ಕ್ ಚಾಕಲೇಟ್ ಬಾಯಿಗೆ ಹಾಕಿದರೆ ನಿಮ್ಮ ಹೃದಯಕ್ಕೆ, ಮೆದುಳಿಗೆ ಮೂಡ್‌ಗೆ ತುಂಬಾನೇ ಒಳ್ಳೆಯದು. ಸ್ವಲ್ಪ ಡಾರ್ಕ್‌ ಚಾಕಲೇಟ್‌ ಬಾಯಿಗೆ ಹಾಕಿದರೆ ಡೊಪಾಮೈನ್ ಹಾರ್ಮೋನ್‌ ಬಿಡುಗಡೆ ಮಾಡುತ್ತದೆ. ಇದು ಹ್ಯಾಪಿ ಹಾರ್ಮೋನ್‌ ಆಗಿದ್ದು ಮಾನಸಿಕ ಒತ್ತಡ ಕಡಿಮೆಯಾಗುವುದು.

 ಓಟ್‌ ಮೀಲ್‌

ಓಟ್‌ ಮೀಲ್‌

ನಿಮ್ಮ ಆಹಾರದಲ್ಲಿ ಸೇರಿಸಬೇಕಾದ ಅತ್ಯುತ್ತಮವಾದಾಹಾರ ಇದಾಗಿದೆ. ಇದು ತೂಕ ನಿಯಂತ್ರಣ ಮಾಡುತ್ತದೆ, ಇದರಲ್ಲಿರುವ ನಾರಿನಂಶ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಅಲ್ಲದೆ ಇದು ಮೆದುಳಿನಲ್ಲಿ ಸೆರೋಟೊನಿನ್ ಹಾರ್ಮೋನ್ ಉತ್ಪತ್ತಿ ಮಾಡುತ್ತದೆ. ಈ ಹಾರ್ಮೋನ್ ಕೂಡ ಮಾನಸಿಕ ಒತ್ತಡ ಕಡಿಮೆ ಮಾಡುವಲ್ಲಿ ತುಂಬಾನೇ ಸಹಕಾರಿ.

ಮಲಗುವ ಮುನ್ನ ಬಿಸಿ ಹಾಲು ಕುಡಿಯುವುದು

ಮಲಗುವ ಮುನ್ನ ಬಿಸಿ ಹಾಲು ಕುಡಿಯುವುದು

ಮಲಗುವ ಮುನ್ನ ಒಂದು ಲೋಟ ಬಿಸಿ ಹಾಲು ಕುಡಿಯುವುದು ಸುಖ ನಿದ್ದೆಗೆ ತುಂಬಾನೇ ಸಹಕಾರಿ. ಬಿಸಿ ಹಾಲು ದೇಹಕ್ಕೆ ವಿಶ್ರಾಂತಿಯ ಅನುಭವ ನೀಡುತ್ತದೆ. ನ್ಯೂಟ್ರಿಷಿಯನ್ ರಿಸರ್ಚ್ ಅಂಡ್ ಪ್ರಾಕ್ಟಿಸ್ ಎಂಬ ಜರ್ನಲ್‌ನಲ್ಲಿ ಪ್ರಕಟವಾದ ವರದಿ ಪ್ರಕಾರ ಹಾಲಿನಲ್ಲಿರುವ ವಿಟಮಿನ್ ಡಿ ಹಾಗು ಕ್ಯಾಲ್ಸಿಯಂಶವಿದ್ದು, ಸ್ನಾಯುಗಳಿಗೆ ವಿಶ್ರಾಂತಿ, ಮಾನಸಿಕ ಒತ್ತಡ ಕಡಿಮೆ ಮಾಡುತ್ತದೆ ಎಂದು ಹೇಳಿದೆ.

English summary

Anti Stress Foods To Change Your Mood

Here are anti stress foods to change your mood, have a look,
X