For Quick Alerts
ALLOW NOTIFICATIONS  
For Daily Alerts

ರಂಜಾನ್‌ ಮಾಸಾಚರಣೆಯ ಅಚ್ಚರಿಯ ಆರೋಗ್ಯ ಪ್ರಯೋಜನಗಳು

|

ಉಪವಾಸದ ತಿಂಗಳು ಎಂದೇ ಪರಿಗಣಿಸಲ್ಪಟ್ಟಿರುವ ರಮಧಾನ್ ತಿಂಗಳು (ಪವಿತ್ರ ಗ್ರಂಥ ಕುರಾನ್ ಪ್ರಕಾರ ಸರಿಯಾದ ಉಚ್ಛಾರಣೆ ರಮಧಾನ್, ಆದರೆ ಉಚ್ಚರಿಸಲು ಸುಲಭ ಎಂದು ರಂಜಾನ್ ಎಂದೂ ಕರೆಯುತ್ತಾರೆ) ಉಪವಾಸಕ್ಕಿಂತಲೂ ಮನಸ್ಸನ್ನು ಹಿಡಿತದಲ್ಲಿರಿಸಿಕೊಳ್ಳುವುದಕ್ಕೆ ಹೆಚ್ಚಿನ ಮಹತ್ವ ನೀಡುತ್ತದೆ.

7 Amazing Health Benefits Of Ramadan | Boldsky Kannada

ರೋಜಾ ಎಂದರೆ ಕೇವಲ ಊಟವನ್ನು ಮಾಡದೇ ಹಸಿವಿನಿಂದಿರುವುದು ಮಾತ್ರವಲ್ಲ, ರೋಜಾ ಇರುವ ಹೊತ್ತಿನಲ್ಲಿ ಮನಸ್ಸನ್ನು ಯಾವುದೇ ಪ್ರಲೋಭನೆಗಳಿಗೆ ಒಡ್ಡದಂತೆ ದೃಢವಾಗಿರಿಸಿಕೊಳ್ಳುವುದೇ ನಿಜವಾದ ಉಪವಾಸ.

ಉದಾಹರಣೆಗೆ ನೆನಪಿಲ್ಲದೇ ಊಟ ಮಾಡಿಬಿಟ್ಟರೂ ಉಪವಾಸ ಅಸಿಂಧುವಾಗುವುದಿಲ್ಲ, ಆದರೆ ನೆನಪಿದ್ದೂ ರೋಜಾ ಅವಧಿಯಲ್ಲಿ ಮನಸ್ಸಿನಲ್ಲಿಯೇ ಬಿರಿಯಾನಿ ತಿಂದಂತೆ ಕಲ್ಪಿಸಿ ಬಾಯಿಯಲ್ಲಿ ನೀರೂರಿದರೆ ಉಪವಾಸ ಅಸಿಂಧುವಾಗುತ್ತದೆ.

ಒಂದು ತಿಂಗಳಿಡೀ ಸೂರ್ಯೋದಯಕ್ಕೂ ಮುನ್ನಾಸಮಯದಿಂದ ತೊಡಗಿ ಸೂರ್ಯಾಸ್ತ ಸಮಯದವರೆಗೂ ಉಪವಾಸ ಇರುವ ಮೂಲಕ ಪಡೆಯುವ ಆರೋಗ್ಯಕರ ಪ್ರಯೋಜನಗಳ ಬಗ್ಗೆ ಅರಿಯೋಣ.

1. ಖರ್ಜೂರಗಳು

1. ಖರ್ಜೂರಗಳು

ಆಧ್ಯಾತ್ಮಿಕ ಕಾರಣಗಳಿಗಾಗಿ ರಂಜಾನ್ ಸಮಯದಲ್ಲಿ ಪ್ರತಿದಿನ ಮೂರು ಖರ್ಜೂರಗಳನ್ನು (ವಾಸ್ತವದಲ್ಲಿ ಇದು ಬೆಸಸಂಖ್ಯೆಯಾಗಿರಬೇಕು ಅಂದರೆ , ಒಂದು, ಮೂರು ಐದು ಇತ್ಯಾದಿ) ಇಫ್ತಾರ್ ಸಮಯದಲ್ಲಿ ಸೇವಿಸಲಾಗುತ್ತದೆ. ಅವುಗಳಲ್ಲಿ ಅನೇಕ ಆರೋಗ್ಯ ಪ್ರಯೋಜನಗಳಿವೆ. ಉಪವಾಸದ ಒಂದು ಪ್ರಮುಖ ಅಂಶವೆಂದರೆ ಸರಿಯಾದ ಪ್ರಮಾಣದ ಶಕ್ತಿಯನ್ನು ಪಡೆಯುವುದು, ಮತ್ತು ಖರ್ಜೂರಗಳ ಸರಾಸರಿ ಸೇವೆಯನ್ನು ಪರಿಗಣಿಸುವುದರಿಂದ 31 ಗ್ರಾಂ (ಕೇವಲ 1 ಔನ್ಸ್ ಗಿಂತಲೂ ಹೆಚ್ಚು) ಕಾರ್ಬೋಹೈಡ್ರೇಟ್‌ಗಳಿವೆ, ಇದು ನಿಮಗೆ ಉತ್ತೇಜನ ನೀಡುವ ಪರಿಪೂರ್ಣ ಆಹಾರಗಳಲ್ಲಿ ಒಂದಾಗಿದೆ.

ಅಲ್ಲದೇ ಖರ್ಜೂರಗಳು ಹೆಚ್ಚು ಅಗತ್ಯವಿರುವ ಕರಗುವ ನಾರಿನಂಶವನ್ನು ಪಡೆಯುವ ಉತ್ತಮ ಮಾರ್ಗವಾಗಿದೆ, ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಸುಲಭಗೊಳಿಸಿ ಮಲಬದ್ದತೆಯಾಗದಂತೆ ಕಾಪಾಡುತ್ತದೆ. ಅವುಗಳ ಹೆಚ್ಚಿನ ಮಟ್ಟದ ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ವಿಟಮಿನ್ ಬಿ ಜೀವಸತ್ವಗಳನ್ನು ಪರಿಗಣಿಸಿದರೆ ಮತ್ತು ಖರ್ಜೂರಗಳು ಈ ಜಗತ್ತಿನಲ್ಲಿ ಲಭ್ಯವಿರುವ ಅತಿ ಆರೋಗ್ಯಕರ ಹಣ್ಣುಗಳಲ್ಲಿ ಒಂದು ಎಂಬುದು ಸ್ಪಷ್ಟವಾಗುತ್ತದೆ.

2. ಮೆದುಳಿನ ಕ್ಷಮತೆಯನ್ನು ಹೆಚ್ಚಿಸುತ್ತದೆ

2. ಮೆದುಳಿನ ಕ್ಷಮತೆಯನ್ನು ಹೆಚ್ಚಿಸುತ್ತದೆ

ಉಪವಾಸದಿಂದ ನಿಮ್ಮ ಮಾನಸಿಕ ಸ್ವಾಸ್ಥ್ಯ ಮತ್ತು ಆಧ್ಯಾತ್ಮಿಕ ವಿಷಯಗಳ ಮೇಲೆ ಹೆಚ್ಚು ಗಮನದ ಹರಿಸುವ ಮೂಲಕ ಮೆದುಳಿನ ಉಂಟುಮಾಡುವ ಸಕಾರಾತ್ಮಕ ಪರಿಣಾಮಗಳನ್ನು ನೀವು ಈಗಾಗಲೇ ಅನುಭವಿಸಿರಬಹುದು. ಆದರೆ ರಂಜಾನ್‌ನ ತಿಂಗಳ ಉಪವಾಸದಿಂದ ಮೆದುಳಿನ ಕ್ಷಮತೆಯನ್ನು ಹೆಚ್ಚಿಸುವ ಶಕ್ತಿಗಳು ನೀವು ಯೋಚಿಸುವುದಕ್ಕಿಂತಲೂ ಹೆಚ್ಚು ಮಹತ್ವದ್ದಾಗಿದೆ.

ಅಮೇರಿಕಾದ ಕೆಲವು ವಿಜ್ಞಾನಿಗಳು ನಡೆಸಿದ ಅಧ್ಯಯನದಲ್ಲಿ ರಂಜಾನ್ ಸಮಯದಲ್ಲಿ ಸಾಧಿಸಿದ ಮಾನಸಿಕ ಗಮನವು ಮೆದುಳಿನಿಂದ ಪಡೆದ ನ್ಯೂರೋಟ್ರೋಫಿಕ್ ಅಂಶದ ಮಟ್ಟವನ್ನು ಹೆಚ್ಚಿಸುತ್ತದೆ, ಇದು ದೇಹವು ಹೆಚ್ಚು ಮೆದುಳಿನ ಕೋಶಗಳನ್ನು ಉತ್ಪಾದಿಸಲು ಕಾರಣವಾಗುತ್ತದೆ ಮತ್ತು ಇದರಿಂದಾಗಿ ಮೆದುಳಿನ ಕ್ಷಮತೆಯನ್ನು ಉತ್ತಮಗೊಳಿಸುತ್ತವೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಅಂತೆಯೇ, ಅಡ್ರಿನಲ್ ಗ್ರಂಥಿಯಿಂದ ಉತ್ಪತ್ತಿಯಾಗುವ ಕಾರ್ಟಿಸೋಲ್ ಎಂಬ ರಸದೂತದ ಪ್ರಮಾಣವನ್ನು ಸ್ಪಷ್ಟವಾಗಿ ಕಡಿಮೆ ಮಾಡುವುದು ಎಂದರೆ ರಂಜಾನ್ ಸಮಯದಲ್ಲಿ ಮತ್ತು ನಂತರ ಒತ್ತಡದ ಮಟ್ಟಗಳು ಗಣನೀಯವಾಗಿ ಕಡಿಮೆಯಾಗುವುದನ್ನೂ ಅಧ್ಯಯನಗಳು ಕಂಡುಕೊಂಡಿವೆ.

3. ದುರಭ್ಯಾಸಗಳನ್ನು ಬಿಟ್ಟು ವ್ಯಸನರಹಿತರಾಗಲು ಸಕಾಲ

3. ದುರಭ್ಯಾಸಗಳನ್ನು ಬಿಟ್ಟು ವ್ಯಸನರಹಿತರಾಗಲು ಸಕಾಲ

ನೀವು ಹಗಲಿಡೀ ಉಪವಾಸವಿರುವುದರಿಂದ, ನಿಮ್ಮ ಕೆಟ್ಟ ಅಭ್ಯಾಸಗಳಿಂದ ಆರೋಗ್ಯಕರವಾಗಿ ಹೊರಬರಲು ರಂಜಾನ್ ಅತಿ ಸೂಕ್ತ ಸಮಯವಾಗಿದೆ. ಉದಾಹರಣೆಗೆ. ಧೂಮಪಾನ ಮತ್ತು ಅತಿಯಾದ ಸಿಹಿ ತಿನ್ನುವುದು ಮೊದಲಾದ ವ್ಯಸನಗಳನ್ನು ರಂಜಾನ್ ಸಮಯದಲ್ಲಿ ಕಡ್ಡಾಯವಾಗಿ ದೂರವಿರಿಸುವ ಮೂಲಕ ನೀವು ಅವುಗಳನ್ನು ತ್ಯಜಿಸಲು ಮಾನಸಿಕರಾಗಿ ಹೆಚ್ಚು ದೃಢರಾಗುತ್ತೀರಿ. ನಿಮ್ಮ ದೇಹವು ನಿಮ್ಮ ವ್ಯಸನದ ಪ್ರಭಾವ ಇಲ್ಲದೆಯೇ ತಾನಾಗಿಯೇ ಕ್ರಮೇಣ ಅವುಗಳ ಅನುಪಸ್ಥಿತಿಗೆ ಒಗ್ಗಿಕೊಳ್ಳುತ್ತದೆ.

ನೀವು ಗುಂಪಿನಲ್ಲಿದ್ದು ಹಾಗೆ ಮಾಡುವಾಗ ಈ ಅಭ್ಯಾಸಗಳನ್ನು ತ್ಯಜಿಸುವುದು ತುಂಬಾ ಸುಲಭ, ಇದು ರಂಜಾನ್ ಸಮಯದಲ್ಲಿ ಸುಲಭವಾಗಿ ಸಾಧ್ಯವಾಗುತ್ತದೆ. ಕೆಟ್ಟ ಅಭ್ಯಾಸಗಳಿಂದ ಹೊರಬರಲು ನಿಮಗೆ ಸಹಾಯ ಮಾಡುವ ಉಪವಾಸದ ಸಾಮರ್ಥ್ಯವು ಎಷ್ಟು ಮಹತ್ವದ್ದಾಗಿದೆ ಎಂದರೆ ಯುಕೆ ನ ರಾಷ್ಟ್ರೀಯ ಆರೋಗ್ಯ ಸೇವಾ ಸಂಸ್ಥೆಯೂ ಧೂಮಪಾನದ ವ್ಯಸನದಿಂದ ಹೊರಬರಲು ರಂಜಾನ್ ಅತಿ ಸೂಕ್ತ ಸಮಯ ಎಂದು ಶಿಫಾರಸ್ಸು ಮಾಡುತ್ತದೆ.್

4. ಕೊಲೆಸ್ಟ್ರಾಲ್ ಮಟ್ಟಗಳನ್ನು ತಗ್ಗಿಸುತ್ತದೆ

4. ಕೊಲೆಸ್ಟ್ರಾಲ್ ಮಟ್ಟಗಳನ್ನು ತಗ್ಗಿಸುತ್ತದೆ

ತೂಕ ಇಳಿಕೆ ರಂಜಾನ್ ಸಮಯದಲ್ಲಿ ಉಪವಾಸದ ಮೂಲಕ ಲಭಿಸುವ ಸಂಭವನೀಯ ದೈಹಿಕ ಫಲಿತಾಂಶಗಳಲ್ಲಿ ಒಂದಾಗಿದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಆದರೆ ಇದರ ಹಿಂದೆಯೂ ಇನ್ನೂ ಕಣ್ಣಿಗೆ ಕಾಣದ ಅಥವಾ ಗಮನಕ್ಕೆ ಬಾರದ ಕೆಲವಾರು ಆರೋಗ್ಯಕರ ಬದಲಾವಣೆಗಳೂ ಇವೆ. ರಂಜಾನ್ ಆಚರಿಸುವ ಜನರ ಲಿಪಿಡ್ ಪ್ರೊಫೈಲ್ ಮೇಲೆ ಸಕಾರಾತ್ಮಕ ಪರಿಣಾಮವನ್ನು ಬೀರುತ್ತದೆ ಎಂದು ಯುಎಇಯ ಹೃದ್ರೋಗ ತಜ್ಞರ ತಂಡವು ಕಂಡುಹಿಡಿದಿದೆ, ಅಂದರೆ ರಕ್ತದಲ್ಲಿ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗಿದ್ದು ಆರೋಗ್ಯಕರ ಮಟ್ಟವನ್ನು ತಲುಪುತ್ತದೆ.

ಕಡಿಮೆ ಕೊಲೆಸ್ಟ್ರಾಲ್ ಮಟ್ಟಗಳು ಹೃದಯರಕ್ತನಾಳಗಳ ಆರೋಗ್ಯವನ್ನು ಹೆಚ್ಚಿಸುತ್ತದೆ. ತನ್ಮೂಲಕ ಹೃದಯದ ಕಾಯಿಲೆ, ಹೃದಯಾಘಾತ ಅಥವಾ ಪಾರ್ಶ್ವವಾಯು ಎದುರಾಗುವ ಅಪಾಯದ ಸಾಧ್ಯತೆಯನ್ನು ಬಹಳವಾಗಿ ಕಡಿಮೆ ಮಾಡುತ್ತದೆ. ಅಷ್ಟೇ ಅಲ್ಲ, ನೀವು ರಂಜಾನ್ ನಂತರವೂ ಇದೇ ಆರೋಗ್ಯಕರ ಆಹಾರವನ್ನು ಅನುಸರಿಸಿದರೆ, ಇತ್ತೀಚೆಗೆ ಕಡಿಮೆಯಾದ ಈ ಕೊಲೆಸ್ಟ್ರಾಲ್ ಮಟ್ಟವನ್ನು ಕಾಪಾಡಿಕೊಳ್ಳುವುದು ಅತಿ ಸುಲಭ.

5. ಆಹಾರದ ವ್ಯಸನಕ್ಕೆ ಒಳಗಾಗದಿರುವ ಮಾನಸಿಕ ದೃಢತೆ ಹೆಚ್ಚುತ್ತದೆ

5. ಆಹಾರದ ವ್ಯಸನಕ್ಕೆ ಒಳಗಾಗದಿರುವ ಮಾನಸಿಕ ದೃಢತೆ ಹೆಚ್ಚುತ್ತದೆ

ಹೋಟೆಲ್ ಕಂಡರೆ ಹೊಟ್ಟೆ ಹಸಿವು ಎಂಬುದು ಕನ್ನಡದ ಗಾದೆ. ನಮ್ಮೆಲ್ಲರಿಗೂ ಆಹಾರ ಕಂಡಾಕ್ಷಣ ಅದನ್ನು ತಿನ್ನುವ ಮನಸ್ಸಾಗಿಯೇ ಆಗುತ್ತದೆ. ಆದರೆ ಆಹಾರ ಎದುರಿಗಿದ್ದೂ ತಿನ್ನದಿರುವ ಮನಃಸ್ಥಿತಿಯನ್ನು ಪಡೆಯಲು ಮನಸ್ಸನ್ನು ಹೆಚ್ಚು ದೃಢಗೊಳಿಸಬೇಕಾಗುತ್ತದೆ. ವಿಪರೀತ ಒಲವು ಹೊಂದಿರುವ ಆಹಾರಕ್ರಮದ ಒಂದು ಪ್ರಮುಖ ಸಮಸ್ಯೆಯೆಂದರೆ, ಕಷ್ಟಪಟ್ಟು ಕಳೆದುಕೊಂಡ ತೂಕವನ್ನು ಮತ್ತೆ ಹಿಂದೆ ಪಡೆಯುವುದು.

ಕೆಲವೊಮ್ಮೆ ಹಿಂದಿನಕ್ಕಿಂತಲೂ ಕೊಂಚ ಹೆಚ್ಚೇ ಆಗುತ್ತದೆ. ರಂಜಾನ್ ವಿಷಯದಲ್ಲಿ ಇದು ನಿಜವಲ್ಲ. ಉಪವಾಸದುದ್ದಕ್ಕೂ ಸೇವಿಸುವ ಆಹಾರದ ಪ್ರಮಾಣದಲ್ಲಿ ಮಾಡಿದ ಕಡಿತವು ನಿಮ್ಮ ಹೊಟ್ಟೆ ಕ್ರಮೇಣ ಕುಗ್ಗಲು ಕಾರಣವಾಗುತ್ತದೆ, ಅಂದರೆ ಹೊಟ್ಟೆ ತುಂಬಿರುವ ಭಾವನೆ ಪಡೆಯಲು ಕಡಿಮೆ ಆಹಾರ ಸಾಕಾಗುತ್ತದೆ. ನೀವು ಆರೋಗ್ಯಕರ ಆಹಾರ ಪದ್ಧತಿಯನ್ನು ಪಡೆಯಲು ಬಯಸಿದರೆ ರಂಜಾನ್ ಪ್ರಾರಂಭಿಸಲು ಉತ್ತಮ ಸಮಯ. ಅದು ಮುಗಿದ ನಂತರ ನಿಮ್ಮ ಹಸಿವು ಮೊದಲಿಗಿಂತ ಕಡಿಮೆಯಿರುತ್ತದೆ ಮತ್ತು ನೀವಾಗಿ ಬಯಸದ ಹೊರತು ಮತ್ತೊಮ್ಮೆ ಅಧಿಕ ಪ್ರಮಾಣದ ಆಹಾರ ಸೇವನೆಗೆ ನೀಮ್ಮ ದೇಹ ಒಲವು ತೋರುವ ಸಾಧ್ಯತೆ ಕಡಿಮೆ.

6. ದೇಹದಿಂದ ಕಲ್ಮಶಗಳನ್ನು ನಿವಾರಿಸುತ್ತದೆ

6. ದೇಹದಿಂದ ಕಲ್ಮಶಗಳನ್ನು ನಿವಾರಿಸುತ್ತದೆ

ನಿಮ್ಮನ್ನು ಆಧ್ಯಾತ್ಮಿಕವಾಗಿ ಶುದ್ಧೀಕರಿಸುವಲ್ಲಿ ಉತ್ತಮವಾಗಿರುವುದರ ಜೊತೆಗೆ, ರಂಜಾನ್ ತಿಂಗಳ ಉಪವಾಸ ನಿಮ್ಮ ದೇಹಕ್ಕೆ ಅದ್ಭುತವಾದ ಕಲ್ಮಶ ನಿರೋಧಕ ಸಮಯವಾಗಿಯೂ ಕಾರ್ಯನಿರ್ವಹಿಸುತ್ತದೆ. ದಿನವಿಡೀ ಏನೇನೋ ತಿಂದು ಅಥವಾ ಕುಡಿಯದಿರುವ ಮೂಲಕ ನಿಮ್ಮ ದೇಹದ ಜೀರ್ಣಾಂಗ ವ್ಯವಸ್ಥೆಗೆ ತನ್ನನ್ನು ತಾನೇ ಸ್ವಚ್ಛಗೊಳಿಸಿಕೊಂಡು ಕಲ್ಮಶಗಳನ್ನು ಹೊರಹಾಕಲು ಅವಕಾಶ ಸಿಗುತ್ತದೆ. ಇದನ್ನು ಹೀಗೆ ಹೇಳಬಹುದೆಂದರೆ ನೀರಿನ ಟ್ಯಾಂಕಿಯನ್ನು ಒಳಗಿನಿಂದ ಸ್ವಚ್ಛಗೊಳಿಸಬೇಕಾದರೆ ನೀರನ್ನು ಖಾಲಿ ಮಾಡಿದಾಗ ಮಾತ್ರವೇ ಸಾಧ್ಯವಾಗುತ್ತದೆ.

ದಿನವಿಡೀ ನೀರು ತುಂಬಿಸಿಯೇ ಇಟ್ಟರೆ ಸ್ವಚ್ಛಗೊಳಿಸುವುದಾದರೂ ಹೇಗೆ? ಈ ಅವಕಾಶವನ್ನು ರಂಜಾನ್ ನ ಉಪವಾಸ ನೀಡುತ್ತದೆ. ಉಪವಾಸದ ಅವಧಿಯಲ್ಲಿ ಆಹಾರದ ಮೂಲಕ ಶಕ್ತಿ ದೊರಕದೇ ಇದ್ದಾಗ ದೇಹ ಅನಿವಾರ್ಯವಾಗಿ ಕೊಬ್ಬಿನ ಬಳಕೆಯನ್ನು ಪ್ರಾರಂಭಿಸುತ್ತದೆ. (ಇದನ್ನೇ ನಾವು ಹಸಿವು ಸತ್ತು ಹೋಯಿತು ಎಂದು ಕರೆಯುತ್ತೇವೆ). ಹಾಗಾಗಿ, ಉಪವಾಸದ ಅವಧಿಯಲ್ಲಿದ್ದರೂ ವಿಪರೀತ ಎನಿಸುವಂತಹ ದಣಿವಾಗದೇ ನಿತ್ಯದ ಎಲ್ಲಾ ಕೆಲಸಗಳನ್ನು ನಿರ್ವಹಿಸಬಹುದು ಹಾಗೂ ಖಾಲಿಯಾಗಿರುವ ಜೀರ್ಣಾಂಗಗಳು ತಮ್ಮನ್ನು ಸ್ವಚ್ಛಗೊಳಿಸಿಕೊಂಡು ಕಲ್ಮಶಗಳನ್ನು ಹೊರಹಾಕಲು ನೆರವಾಗುತ್ತದೆ.

7. ಆಹಾರದಲ್ಲಿರುವ ಹೆಚ್ಚಿನ ಪೋಷಕಾಂಶಗಳನ್ನು ಹೀರಿಕೊಳ್ಳಲು ನೆರವಾಗುತ್ತದೆ

7. ಆಹಾರದಲ್ಲಿರುವ ಹೆಚ್ಚಿನ ಪೋಷಕಾಂಶಗಳನ್ನು ಹೀರಿಕೊಳ್ಳಲು ನೆರವಾಗುತ್ತದೆ

ರಂಜಾನ್ ಸಮಯದಲ್ಲಿ ದಿನವಿಡೀ ಊಟ ಮಾಡದಿರುವ ಮೂಲಕ ನಿಮ್ಮ ಜೀವ ರಾಸಾಯನಿಕ ಕ್ರಿಯೆ ಹೆಚ್ಚು ಪರಿಣಾಮಕಾರಿಯಾಗುವುದನ್ನು ನೀವು ಕಾಣುತ್ತೀರಿ, ಅಂದರೆ ನೀವು ಆಹಾರದಿಂದ ಹೀರಿಕೊಳ್ಳುವ ಪೋಷಕಾಂಶಗಳ ಪ್ರಮಾಣವೂ ಉತ್ತಮಗೊಳ್ಳುತ್ತದೆ.

ಅಡಿಪೋನೆಕ್ಟಿನ್ ಎಂಬ ರಸದೂತದ ಹೆಚ್ಚಳ ಇದಕ್ಕೆ ಕಾರಣ, ಇದು ಹಗಲಿಡೀ ಉಪವಾಸ ಇರುವುದು ಮತ್ತು ಸೂರ್ಯಾಸ್ತದ ಸಮಯದಲ್ಲಿ ಆಹಾರ ಸೇವಿಸುವ ಸಂಯೋಜನೆಯಿಂದ ಉತ್ಪತ್ತಿಯಾಗುತ್ತದೆ ಮತ್ತು ನಿಮ್ಮ ಸ್ನಾಯುಗಳು ಹೆಚ್ಚಿನ ಪೋಷಕಾಂಶಗಳನ್ನು ಹೀರಿಕೊಳ್ಳಲು ಅನುವು ಮಾಡಿಕೊಡುತ್ತದೆ. ಇದು ದೇಹದಾದ್ಯಂತ ಹಲವಾರು ಆರೋಗ್ಯಕರ ಪ್ರಯೋಜನಗಳಿಗೆ ಕಾರಣವಾಗುತ್ತದೆ, ಏಕೆಂದರೆ ವಿವಿಧ ಅಂಗಗಳೆಲ್ಲವೂ ಈಗ ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ ಹಾಗೂ ಇವುಗಳ ಕಾರ್ಯ ನಿರ್ವಹಣೆಗೆ ಅಗತ್ಯವಾದ ಪೋಷಕಾಂಶಗಳನ್ನೂ ಬಳಸಿಕೊಳ್ಳುತ್ತವೆ.

English summary

Amazing Health Benefits Of Ramadan

Here we are discussing about Amazing Health Benefits Of Ramadan. If you’re one of those worriers, then check out these seven health benefits you’ll enjoy during and after Ramadan Read more
X
Desktop Bottom Promotion