For Quick Alerts
ALLOW NOTIFICATIONS  
For Daily Alerts

ತೂಕ ಇಳಿಕೆಗೆ ಹುರುಳಿ ರಾಮಬಾಣ! ನೀವು ಪ್ರಯತ್ನಿಸಿ ನೋಡಿ

|

ಆರೋಗ್ಯಕರ ರೀತಿಯಲ್ಲಿ ತೂಕ ಇಳಿಸಬೇಕೆ? ಹಾಗಿದ್ದಲ್ಲಿ ಹುರುಳಿ ಕಾಳನ್ನು ತೂಕ ಇಳಿಸುವ ಪರ್ಯಾಯ ಮಾರ್ಗವಾಗಿ ಬಳಸಬಹುದು. ಇದು ನೋಡಲು ಒಂದು ನಯವಾದ ಮಸೂರದಂತಿರುವ ಕಾಳಾಗಿದ್ದು,ಇದನ್ನು ಋತುಸ್ರಾವದ ತೊಂದರೆ, ಮೂತ್ರಪಿಂಡದ ಕಲ್ಲುಗಳು, ಆಸ್ತಮಾ, ಶೀತ ಮತ್ತು ಕೆಮ್ಮಿನಂತಹ ತೊಂದರೆಗಳಿಗೆ ವೈದ್ಯಕೀಯ ಚಿಕಿತ್ಸೆ ನೀಡಲು ಪರ್ಯಾಯ ಜಾನಪದ ಔಷಧಿಯಾಗಿ ಹಿಂದಿನ ಕಾಲದಿಂದಲೂ ಬಳಸುತ್ತಾ ಬಂದಿದ್ದಾರೆ.

 ಆರೋಗ್ಯಕರ ರೀತಿಯಲ್ಲಿ ತೂಕ ಇಳಿಸಬೇಕೆ? ಹಾಗಿದ್ದಲ್ಲಿ ಹುರುಳಿ ಕಾಳನ್ನು ತೂಕ ಇಳಿಸುವ ಪರ್ಯಾಯ ಮಾರ್ಗವಾಗಿ ಬಳಸಬಹುದು. ಇದು ನೋಡಲು ಒಂದು ನಯವಾದ ಮಸೂರದಂತಿರುವ ಕಾಳಾಗಿದ್ದು,ಇದನ್ನು ಋತುಸ್ರಾವದ ತೊಂದರೆ, ಮೂತ್ರಪಿಂಡದ ಕಲ್ಲುಗಳು, ಆಸ್ತಮಾ, ಶೀತ ಮತ್ತು ಕೆಮ್ಮಿನಂತಹ ತೊಂದರೆಗಳಿಗೆ ವೈದ್ಯಕೀಯ ಚಿಕಿತ್ಸೆ ನೀಡಲು ಪರ್ಯಾಯ ಜಾನಪದ ಔಷಧಿಯಾಗಿ ಹಿಂದಿನ ಕಾಲದಿಂದಲೂ ಬಳಸುತ್ತಾ ಬಂದಿದ್ದಾರೆ. ಅಷ್ಟೇ ಅಲ್ಲದೆ ಈ ಅತ್ಯಂತ ಉಪಯುಕ್ತವಾದ ದ್ವಿದಳ ಧಾನ್ಯವನ್ನು ಆಹಾರದಲ್ಲಿ ಸೇರಿಸುವುದರಿಂದ ತೂಕವನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ. ಅಲ್ಲದೇ ಇನ್ನಿತರ ಆರೋಗ್ಯದ ಸ್ಥಿತಿಗಳಿಗೆ ಚಿಕಿತ್ಸೆ ನೀಡುವಲ್ಲಿ ಪರಿಣಾಮಕಾರಿ ಇದು ಉಪಯುಕ್ತವಾಗಲಿದೆ. ಈ ಲೇಖನದಲ್ಲಿ ಹುರುಳಿಕಾಳು ತೂಕ ಕಡಿಮೆ ಮಾಡುವಲ್ಲಿ ಹೇಗೆ ಸಹಾಯ ಮಾಡುತ್ತದೆ ಮತ್ತು ಇದರ ಪರಿಣಾಮಕಾರಿ ಫಲಿತಾಂಶಗಳಿಗಾಗಿ ಅದನ್ನು ಸೇವಿಸುವ ಕೆಲವು ಪಾಕವಿಧಾನಗಳ ಬಗ್ಗೆ ತಿಳಿದುಕೊಳ್ಳೋಣ. ತೂಕ ಕಡಿಮೆ ಮಾಡುವಲ್ಲಿ ಹುರುಳಿ ಕಾಳು ಹೇಗೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂಬುದನ್ನು ನೋಡೋಣ ಹುರುಳಿ ಕಾಳಿನಲ್ಲಿ ಅತ್ಯಧಿಕ ಪ್ರೊಟೀನ್, ಆಹಾರದ ಫೈಬರ್, ಜೀವಸತ್ವಗಳು ಮತ್ತು ಖನಿಜಗಳು ತುಂಬಿರುತ್ತವೆ ಮತ್ತು ಕಡಿಮೆ ಕ್ಯಾಲೊರಿಗಳನ್ನು ಹೊಂದಿರುವುದರಿಂದ ಇದು ತೂಕ ಇಳಿಸಲು ಅದ್ಭುತವಾದ ಆಹಾರವಾಗಿಸುತ್ತದೆ. ತೂಕ ಇಳಿಸುವಿಕೆಗೆ ಇದನ್ನು ಏಕೆ ಸೇವಿಸಬೇಕು ಎಂಬುದನ್ನು ಇಲ್ಲಿ ವಿವರಿಸಲಾಗಿದೆ:

ಅಷ್ಟೇ ಅಲ್ಲದೆ ಈ ಅತ್ಯಂತ ಉಪಯುಕ್ತವಾದ ದ್ವಿದಳ ಧಾನ್ಯವನ್ನು ಆಹಾರದಲ್ಲಿ ಸೇರಿಸುವುದರಿಂದ ತೂಕವನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ. ಅಲ್ಲದೇ ಇನ್ನಿತರ ಆರೋಗ್ಯದ ಸ್ಥಿತಿಗಳಿಗೆ ಚಿಕಿತ್ಸೆ ನೀಡುವಲ್ಲಿ ಪರಿಣಾಮಕಾರಿ ಇದು ಉಪಯುಕ್ತವಾಗಲಿದೆ.

ಈ ಲೇಖನದಲ್ಲಿ ಹುರುಳಿಕಾಳು ತೂಕ ಕಡಿಮೆ ಮಾಡುವಲ್ಲಿ ಹೇಗೆ ಸಹಾಯ ಮಾಡುತ್ತದೆ ಮತ್ತು ಇದರ ಪರಿಣಾಮಕಾರಿ ಫಲಿತಾಂಶಗಳಿಗಾಗಿ ಅದನ್ನು ಸೇವಿಸುವ ಕೆಲವು ಪಾಕವಿಧಾನಗಳ ಬಗ್ಗೆ ತಿಳಿದುಕೊಳ್ಳೋಣ.

ತೂಕ ಕಡಿಮೆ ಮಾಡುವಲ್ಲಿ ಹುರುಳಿ ಕಾಳು ಹೇಗೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂಬುದನ್ನು ನೋಡೋಣ

ಹುರುಳಿ ಕಾಳಿನಲ್ಲಿ ಅತ್ಯಧಿಕ ಪ್ರೊಟೀನ್, ಆಹಾರದ ಫೈಬರ್, ಜೀವಸತ್ವಗಳು ಮತ್ತು ಖನಿಜಗಳು ತುಂಬಿರುತ್ತವೆ ಮತ್ತು ಕಡಿಮೆ ಕ್ಯಾಲೊರಿಗಳನ್ನು ಹೊಂದಿರುವುದರಿಂದ ಇದು ತೂಕ ಇಳಿಸಲು ಅದ್ಭುತವಾದ ಆಹಾರವಾಗಿಸುತ್ತದೆ. ತೂಕ ಇಳಿಸುವಿಕೆಗೆ ಇದನ್ನು ಏಕೆ ಸೇವಿಸಬೇಕು ಎಂಬುದನ್ನು ಇಲ್ಲಿ ವಿವರಿಸಲಾಗಿದೆ:

 1. ಅತ್ಯಧಿಕ ಪ್ರೋಟೀನ್

1. ಅತ್ಯಧಿಕ ಪ್ರೋಟೀನ್

ಹುರುಳಿ ಕಾಳಿನಲ್ಲಿ ಪ್ರೊಟೀನ್ ಅಂಶ ಹೆಚ್ಚಾಗಿದ್ದು, 100ಗ್ರಾಂ ಹುರುಳಿ ಕಾಳಿನಲ್ಲಿ ಸುಮಾರು 22ಗ್ರಾಂ ನಷ್ಟು ಪ್ರೊಟೀನ್ ಅಂಶವನ್ನು ಹೊಂದಿರುತ್ತದೆ. ಅಲ್ಲದೇ, ಅಮೈನೋ ಆಮ್ಲಗಳು ಮತ್ತು ಅಲ್ಬುಮಿ ಮತ್ತು ಗ್ಲೋಬ್ಯುಲಿನ್ ಗಳು ಈ ಒಟ್ಟು ಪ್ರಮಾಣದ ಹುರುಳಿಕಾಳಿನಲ್ಲಿ ಸುಮಾರು 75-79% ರಷ್ಟು ಸೇರಿರುತ್ತದೆ.

ಅಷ್ಟೇ ಅಲ್ಲದೆ ಈ ದ್ವಿದಳ ಧಾನ್ಯದಲ್ಲಿ ಮೆಥಿಯೋನಿನ್ ಮತ್ತು ಟ್ರಿಪ್ಟೋಫಾನ್ ಗಳೂ ಇದರಲ್ಲಿ ಒಂದು ಸೀಮಿತ ಪ್ರಮಾಣದಲ್ಲಿ ಕಂಡು ಬರುತ್ತದೆ.

ಪ್ರೋಟೀನ್ ಭರಿತ ಆಹಾರಳಲ್ಲಿರುವ ಅಮೈನೊ ಆಸಿಡ್ ಅಂಶಗಳು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ, ಹಾಗೂ ಅನಗತ್ಯ ಆಹಾರ ಸೇವನೆಯ ಅತ್ಯಧಿಕ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ಋಣಾತ್ಮಕ ಶಕ್ತಿಯನ್ನು ಸಮತೋಲನಗೊಳಿಸಿ , ಶಕ್ತಿಯ ಪ್ರಮಾಣದಲ್ಲಿ ಹೆಚ್ಚಿಸುವಲ್ಲಿ ಸಹಕಾರಿಯಾಗುತ್ತದೆ.

ಹೊಟ್ಟೆ ತುಂಬುವಂತೆ ಮಾಡುವ ಸಾಮರ್ಥ್ಯ ಇರುವ ಈ ಕಾಳು ಅನಗತ್ಯ ಆಹಾರ ಸೇವನೆಯನ್ನು ಕಡಿಮೆ ಮಾಡುತ್ತದೆ (ಅಂದರೆ, ಕಡಿಮೆ ತಿನ್ನುವಂತೆ ಮಾಡುತ್ತದೆ), ಇದು ತೂಕ ಇಳಿಸಲು ಮುಖ್ಯವಾದುದಾಗಿದೆ.

2. ಡಯಟರೀ ಫೈಬರ್ ಅನ್ನು ಹೇರಳವಾಗಿ ಒಳಗೊಂಡಿದೆ

2. ಡಯಟರೀ ಫೈಬರ್ ಅನ್ನು ಹೇರಳವಾಗಿ ಒಳಗೊಂಡಿದೆ

100 ಗ್ರಾಂ ಹುರುಳಿ ಕಾಳಿನಲ್ಲಿ 8 ಗ್ರಾಂ ನಷ್ಟು ಫೈಬರ್ ನ ಪ್ರಮಾಣವಿದೆ. ಈ ಡಯೆಟರಿ ಫೈಬರ್ ಹಸಿವಿನ ಪ್ರಮಾಣವನ್ನು ನಿಯಂತ್ರಿಸುತ್ತದೆ ಮತ್ತು ಇದರ ಮೂಲಕ ಕೊಬ್ಬಿನ ಅಂಶವನ್ನು ತಡೆಗಟ್ಟುವ ಮೂಲಕ ಅಧಿಕ ಸೇವನೆಯನ್ನು ತಡೆಯುವಂತೆ ಮಾಡುತ್ತದೆ.

ಕೆನಡಾದಲ್ಲಿ ನಡೆಸಿದ ಅಧ್ಯಯನದ ಪ್ರಕಾರ ಧಾನ್ಯಗಳನ್ನು ಸೇವಿಸುವ ಜನರು ಕಡಿಮೆ ತೂಕ ಮತ್ತು ಸೊಂಟದ ಸುತ್ತಳತೆ ಮತ್ತು ಉತ್ತಮ ಪೋಷಕಾಂಶಗಳ ಸೇವನೆಯನ್ನು ಹೊಂದಿರುತ್ತಾರೆ ಎನ್ನುವುದು ರುಜುವಾತಾಗಿದೆ.

20 ಜನರ ಮೇಲೆ ನಡೆಸಿದ ಪ್ರಾಯೋಗಿಕ ಅಧ್ಯಯನವು ಹುರುಳಿಗೆ ಸಂಬಂಧಿಸಿದ ಅಧಿಕ ಫೈಬರ್ ಯುಕ್ತ ಆಹಾರವು ಫೈಬರ್ ಸೇವನೆಯನ್ನು 75% ಹೆಚ್ಚಿಸುತ್ತದೆ ಎಂದು ಕಂಡುಹಿಡಿದಿದೆ, ಅಲ್ಲದೆ ಇದು ಹೊಟ್ಟೆ ತುಂಬಿರುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಮತ್ತು ತೂಕ ಇಳಿಸಲು ಸಹಾಯಕವಾಗುವಂತೆ ಹಸಿವನ್ನು ಕಡಿಮೆ ಮಾಡುತ್ತದೆ.

3. ಕ್ಯಾಲೊರಿ ಕಡಿಮೆ

3. ಕ್ಯಾಲೊರಿ ಕಡಿಮೆ

ಹುರುಳಿಕಾಳಿನಲ್ಲಿ ಕ್ಯಾಲೋರಿಗಳು ಕಡಿಮೆ ಪ್ರಮಾಣದಲ್ಲಿ ಇರುವುದರಿಂದ ನಿಮ್ಮ ಹಸಿವನ್ನು ನೀಗಿಸಲು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ (3) ಇದು ಹೆಚ್ಚು ಪರಿಣಾಮಕಾರಿಯಾಗಬಲ್ಲದು. ಕೆನಡಿಯನ್ ಮೆಡಿಕಲ್ ಅಸೋಸಿಯೇಶನ್ ಜರ್ನಲ್ ಪ್ರಕಾರ, ಕಡಿಮೆ ಕ್ಯಾಲೋರಿ ಹೊಂದಿರುವ ಆಹಾರವು ಕಿಬ್ಬೊಟ್ಟೆಯ ಕೊಬ್ಬು ಮತ್ತು ಸೊಂಟದ ಸುತ್ತಳತೆಯನ್ನು 1.5-9.5 ಸೆಂ.ಮೀ. ಗಳಷ್ಟು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ.

4. ವಿಷಕಾರಿ ಅಂಶಗಳನ್ನು (ಟಾಕ್ಸಿನ್) ತೆಗೆದುಹಾಕುತ್ತದೆ

4. ವಿಷಕಾರಿ ಅಂಶಗಳನ್ನು (ಟಾಕ್ಸಿನ್) ತೆಗೆದುಹಾಕುತ್ತದೆ

ಕರಗುವ ಮತ್ತು ಕರಗದೇ ಇರುವ ನಾರಿನ ಗುಣಗಳನ್ನು ಹೊಂದಿರುವ ಹುರುಳಿಕಾಳು ನಿಮ್ಮ ಜೀರ್ಣಾಂಗ ಮತ್ತು ಕರುಳನ್ನು ಶುದ್ದಿಗೊಳಿಸಲು ಸಹಾಯಮಾಡುತ್ತದೆ. ಇದರಲ್ಲಿರುವ ಕರಗದೇ ಇರುವ ನಾರಿನ ಅಂಶವು ಮಲಬದ್ದತೆಯ ತೂಕವನ್ನು ಹೆಚ್ಚಿಸಿ ಹೊರಗೆ ಸಾಗಿಸುವ ಕ್ರಿಯೆಯ ಸಮಯದಲ್ಲಿ ಕಡಿಮೆ ಮಾಡುತ್ತದೆ (10), (11).

ಸಿಯೋಲ್ ನ್ಯಾಷನಲ್ ಯೂನಿವರ್ಸಿಟಿಯಲ್ಲಿ (ದಕ್ಷಿಣ ಕೊರಿಯಾ) ನಡೆಸಿದ ಅಧ್ಯಯನವು ದ್ವಿದಳ ಧಾನ್ಯಗಳು, ಬೀಜಗಳು, ಮೀನುಗಳು ಮತ್ತು ಧಾನ್ಯಗಳು ತಮ್ಮಲ್ಲಿ ವಿಷಕಾರಿ ಅಂಶಗಳನ್ನು ನಿರ್ಮೂಲನೆ ಮಾಡುವ ಗುಣಗಳನ್ನು ಹೊಂದಿರುತ್ತದೆ.

ಆದುದರಿಂದ, ಇವುಗಳನ್ನು ಒಳಗೊಂಡಿರುವ ಆಹಾರಗಳನ್ನು ತಮ್ಮ ದೈನಂದಿನ ಆಹಾರ ಪದ್ದತಿಯಲ್ಲಿ ಸೇರಿಸಿಕೊಳ್ಳುವ ಜನರು ತೂಕದಲ್ಲಿ ಇಳಿಕೆ ಮತ್ತು ದೇಹದ ಕೊಬ್ಬಿನಂತಹ ಇತರ ದೇಹದ ಸಂಯೋಜನೆ ಮಾಪನಗಳಲ್ಲಿನ ಶೇಕಡಾವಾರು, ದೇಹದ ಕೊಬ್ಬಿನಂಶ, ದ್ರವ್ಯರಾಶಿ ಮತ್ತು ಸೊಂಟದ ಸುತ್ತಳತೆ (12). ಕಡಿತ ಹೊಂದುವುದು ಗಮನಕ್ಕೆ ಬಂದಿದೆ ಎಂದು ಕಂಡು ಹಿಡಿದಿದ್ದಾರೆ.

5. ಹುರುಳಿಕಾಳಿನಲ್ಲಿ ಎಲ್ಲಾ ಅಗತ್ಯವಾದ ಅಮೈನೋ ಆಮ್ಲಗಳ ಜೊತೆಗೆ ಪ್ರೋಟೀನ್ ಹೇರಳವಾಗಿರುವುದು

5. ಹುರುಳಿಕಾಳಿನಲ್ಲಿ ಎಲ್ಲಾ ಅಗತ್ಯವಾದ ಅಮೈನೋ ಆಮ್ಲಗಳ ಜೊತೆಗೆ ಪ್ರೋಟೀನ್ ಹೇರಳವಾಗಿರುವುದು

ಪ್ರೊಟೀನ್ ಹೇರಳವಾಗಿರುವ ಆಹಾರಗಳನ್ನು ಸೇವಿಸುವುದರಿಂದ ಹೊಟ್ಟೆ ತುಂಬಿರುವ ಅನುಭವವಾಗುವುದು ಮಾತ್ರವಲ್ಲದೆ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ. ಹೆಚ್ಚು ಪ್ರೊಟೀನ್ ಯುಕ್ತ ಪದಾರ್ಥಗಳು ತಳಭಾಗದ ಚಯಾಪಚಯ ಕ್ರಿಯೆಯ ಮಟ್ಟವನ್ನು ಸಮತೋಲನವಾಗಿ ಕಾಪಾಡಿಕೊಳ್ಳುವಂತೆ ಮಾಡುತ್ತದೆ ಇದರಿಂದಾಗಿ ತೂಕ ಕಡಿಮೆ ಮಾಡಿಕೊಳ್ಳಲು ಸಹಾಯವಾಗುತ್ತದೆ.

ಈಗ ಹುರುಳಿಕಾಳು ತೂಕ ಇಳಿಸುವಲ್ಲಿ ಹೇಗೆ ಸಹಾಯ ಮಾಡುತ್ತದೆ ಮತ್ತು ಇದನ್ನು ಸೇವಿಸುವ ಬಗೆ ಹೇಗೆ ಎಂಬುದರ ಕಡೆಗೆ ಒಮ್ಮೆ ನೋಡೋಣ:

ಹುರುಳಿಕಾಳನ್ನು ಸೇವಿಸುವ ವಿಧಾನ ಹೇಗೆ

ಹುರುಳಿಕಾಳನ್ನು ಸೇವಿಸುವ ವಿಧಾನ ಹೇಗೆ

ಹುರುಳಿಕಾಳು ಉಷ್ಣತೆಯನ್ನು ಹೆಚ್ಚಿಸುವ ಗುಣವನ್ನು ಹೊಂದಿರುವ ದ್ವಿದಳ ಧಾನ್ಯವಾಗಿದೆ. ಆದುದರಿಂದ ಜೀರಿಗೆ ಪುಡಿ, ಪಾನೀಯಗಳು ಮತ್ತು ಮಜ್ಜಿಗೆಯಂತಹ ಜೀವವನ್ನು ತಂಪಾಗಿಸುವ ಆಹಾರಗಳ ಜೊತೆಗೆ ಸೇರಿಸಿ ಸೇವಿಸಿದರೆ ಉತ್ತಮ.

ಬನಾರಸ್ ಹಿಂದೂ ವಿಶ್ವವಿದ್ಯಾಲಯದ (ಭಾರತ) ಅಧ್ಯಯನದ ಪ್ರಕಾರ ಹುರುಳಿಕಾಳಿನಲ್ಲಿ ಉಷ್ಣತೆಯನ್ನು ಹೆಚ್ಚಿಸುವ ಸಾಮರ್ಥ್ಯವಿರುವುದರಿಂದ ಇದನ್ನು ಇನ್ನಿತರ ಮಸಾಲೆಗಳ ಜೊತೆಗೆ ಸೇವಿಸಿದಲ್ಲಿ ಶೀತ ಗಂಟಲು ನೋವು ಮತ್ತು ಜ್ವರದಂತಹ ರೋಗಗಳನ್ನು ಪರಿಣಾಮಕಾರಿಯಾಗಿ ಪರಿಹಾರ ಮಾಡಬಲ್ಲದು ಎಂದು ಹೇಳಲಾಗಿದೆ.

ಬೀಜಗಳನ್ನು 1-2 ಗಂಟೆಗಳ ಕಾಲ ನೆನೆಸಿ ಅಥವಾ ಅದನ್ನು ಮೊಳಕೆಯೊಡೆದು ಸಲಾಡ್‌ನಲ್ಲಿ ಬಳಸುವ ಮೂಲಕ ನೀವು ವಿವಿಧ ಭಾರತೀಯ ಪಾಕವಿಧಾನಗಳನ್ನು ತಯಾರಿಸಲು ಹುರುಳಿಕಾಳನ್ನು ಬಳಸಬಹುದು. ಮುಂದಿನ ವಿಭಾಗದಲ್ಲಿ ತೂಕ ಕಡಿಮೆ ಮಾಡಿಸಬಲ್ಲ ಹುರುಳಿಕಾಳಿನ ಕೆಲವು ರುಚಿಕರವಾದ ಪಾಕವಿಧಾನಗಳನ್ನು ಪರಿಶೀಲಿಸಿ.

FAQ's
  • ಹುರುಳಿಕಾಳಿನಿಂದ ಅಡ್ಡಪರಿಣಾಮವಿದೆಯೇ?

    ಕೆಲವರಿಗೆ ಹುರುಳಿಕಾಳು ತಿಂದಾಗ ಅಲರ್ಜಿ ಉಂಟಾಗಬಹುದು. ಇದರಲ್ಲಿರುವ ಒಂದು ಬಗೆಯ ಕಾರ್ಬ್ಸ್‌ನಿಂದಾಗಿ ಹೊಟ್ಟೆ ಉಬ್ಬುವ ಸಮಸ್ಯೆ ಕಂಡು ಬರಬಹುದು. ಆದರೆ ಸರಿಯಾಗಿ ನೆನೆಹಾಕಿ, ಮೊಳಕೆ ಬರಿಸಿ, ಬೇಯಿಸಿ ತಿಂದರೆ ತೊಂದರೆಯಿಲ್ಲ.

  • ಹುರುಳಿಕಾಳು ಮುಟ್ಟಿನ ಸಮಸ್ಯೆಗೆ ಒಳ್ಳೆಯದಾ?

    ಅತ್ಯಧಿಕ ರಕ್ತಸ್ರಾವ, ಇತರ ಮುಟ್ಟಿನ ಸಮಸ್ಯೆಗಳ ನಿವಾರಣೆಗೆ ಹುರುಳಿಕಾಳು ತುಂಬಾನೇ ಒಳ್ಳೆಯದು. ಇದು ಅನಿಯಮಿತ ಮುಟ್ಟಿನ ಸಮಸ್ಯೆ ದೂರವಾಗಿಸುತ್ತೆ. ದೇಹದಲ್ಲಿ ಹೀಮೋಗ್ಲೋಬಿನ್ ಹೆಚ್ಚಲು ಸಹಕಾರಿ.

  • ಹುರುಳಿಕಾಳು ದಿನಾ ತಿನ್ನುವುದು ಒಳ್ಳೆಯದಾ?

    ಹುರುಳಿಕಾಳು ಪೋಷಕಾಂಶಗಳು ಅಧಿಕವಿರುವ ಒಂದು ಸೂಪರ್‌ಫುಡ್ ಆಗಿದೆ. ಹುರುಳಿಕಾಳನ್ನು ಪ್ರತಿನಿತ್ಯದ ಆಹಾರಕ್ರಮದಲ್ಲಿ ಮಿತಿಯಲ್ಲಿ ಸೇರಿಸಿದರೂ ಒಳ್ಳೆಯದು. ಇದು ತೂಕ ಇಳಿಕೆಗೆ ಸಹಕಾರಿ ಮಾತ್ರವಲ್ಲ ಹೃದಯದ ಆರೋಗ್ಯಕ್ಕೆ ಒಳ್ಳೆಯದು, ದೇಹದ ಒಟ್ಟು ಮೊತ್ತ ಆರೋಗ್ಯಕ್ಕೆ ಒಳ್ಳೆಯದು.

English summary

Health Benefits Of Horse Gram For Weight Loss in Kannada

Here we are discussing about Amazing Benefits Of Horse Gram For Weight Loss. Horse gram is a type of lentil/bean that has been used for ages as an alternative/folk medicine for treating clinical conditions like menstrual irregularity, kidney stones, asthma, cold, and cough. Read more.
X
Desktop Bottom Promotion