For Quick Alerts
ALLOW NOTIFICATIONS  
For Daily Alerts

ಕೊರೊನಾದಿಂದ ಗುಣ ಮುಖರಾದರೂ ಕಾಡಬಹುದು ಶ್ವಾಸಕೋಶ, ಕಿಡ್ನಿ ಸಮಸ್ಯೆ

|

ಕಳೆದ ಮೂರು ತಿಂಗಳಿನಿಂದ ಜಗತ್ತಿನೆಲ್ಲಡೆ ಕೇಳಿ ಬರುತ್ತಿರುವ ಆಹಾಕಾರವೆಂದರೆ ಕೋವಿಡ್ 19...ಕೊರೊನಾ ವೈರಸ್! ಈ ಮಹಾಪಿಡುಗಿನಿಂದಾಗಿ ಸಾವನ್ನಪ್ಪುತ್ತಿರುವ ಸಂಖ್ಯೆ ಏರುತ್ತಲೇ ಇದೆ. ಭಾರತದಲ್ಲಿ ಸೋಂಕಿತರ ಸಂಖ್ಯೆ 8000 ಗಟಿ ದಾಡಿದೆ.

After Recover From Covid 19, Be Carefull About kidney Health

ಲಾಕ್‌ಡೌನ್‌ ಆಗುವ ಮುನ್ನ 1000 ಒಳಗೆ ಇದ್ದ ಸೋಂಕಿತರು ಇದೀಗ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಒಂದು ವೇಳೆ ಲಾಕ್‌ಡೌನ್‌ ತೆಗೆದರೆ ಪರಿಸ್ಥಿತಿ ಎಷ್ಟು ಗಂಭಿರವಾಗಲಿದೆ ಎಂದು ಊಹಿಸುವುದು ಕೂಡ ಕಷ್ಟ.

ಇನ್ನು ಕೋವಿಡ್‌ 19 ಕಾಯಿಲೆಯಿಂದ ಹೆಚ್ಚಿನವರು ಗುಣಮುಖರಾಗುತ್ತಿರುವುದು ಸಮಧಾನಕರ ವಿಷಯವಾದರೂ, ಗುಣಮುಖರಾದವರ ಮುಂದಿನ ಆರೋಗ್ಯ ಸಮಸ್ಯೆ ಇದೀಗ ವಿಜ್ಞಾನಿಗಳು ಹಾಗೂ ವೈದ್ಯರನ್ನು ಕಾಡುತ್ತಿದೆ. ಕೋವಿಡ್‌ 19ನಿಂದ ಪಾರಾದರೂ ಇದರ ಕಾಟ ತಪ್ಪಿದ್ದಲ್ಲ, ಇದರಿಂದಾಗಿ ಮುಂದೆ ಶಾಶ್ವತವಾಗಿ ಶ್ವಾಸಕೋಶಕ್ಕೆ ಹಾನಿಯುಂಟಾಗಬಹುದು ಹಾಗೂ ಗುಣಮುಖರಾದವರ ಕಿಡ್ನಿ ಆರೋಗ್ಯ ಕೂಡ ಅಪಾಯದಲ್ಲಿದೆ.

ಕೋವಿಡ್‌ 19 ಚೇತರಿಕೆ ಬಳಿಕ ಶ್ವಾಸಕೋಶದ ಆರೋಗ್ಯ

ಕೋವಿಡ್‌ 19 ಚೇತರಿಕೆ ಬಳಿಕ ಶ್ವಾಸಕೋಶದ ಆರೋಗ್ಯ

ಕೋವಿಡ್‌ 19ನ ಪ್ರಾಥಮಿಕ ಲಕ್ಷಣಗಳು ಕಂಡು ಬಂದವರಲ್ಲಿ ಕೋವಿಡ್‌ ಮುಕ್ತರಾದ ಬಳಿಕ ಶ್ವಾಸಕೋಶಕ್ಕೆ ಯಾವುದೇ ತೊಂದರೆ ಉಂಟಾಗುವುದಿಲ್ಲ ಹಾಗೂ ಮುಂದೆ ದೇಹದಲ್ಲೂ ಯಾವುದೇ ತೊಂದರೆಗಳು ಕಾಣಿಸುವುದಿಲ್ಲ, ಆದರೆ ಪರಿಸ್ಥಿತಿ ತುಂಬಾ ಗಂಭೀರವಾಗಿ (ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು) ನಂತರ ಚೇತರಿಸಿಕೊಂಡವರ ಶ್ವಾಸಕೋಶಕ್ಕೆ ಶಾಶ್ವತವಾಗಿ ಹಾನಿಯುಂಟಾಗಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಕೊರೊನಾವೈರಸ್‌ 3 ಹಂತವಾಗಿ ಶ್ವಾಸಕೋಶಕ್ಕೆ ಹಾನಿಯುಂಟು ಮಾಡುವುದು

ಕೊರೊನಾವೈರಸ್‌ 3 ಹಂತವಾಗಿ ಶ್ವಾಸಕೋಶಕ್ಕೆ ಹಾನಿಯುಂಟು ಮಾಡುವುದು

ಕೊರೊನಾವೈರಸ್‌ ನಮ್ಮ ದೇಹವನ್ನು ಸೇರಿದ ಮೇಲೆ ಮೊದಲು ಹಾನಿ ಮಾಡುವುದೇ ಶ್ವಾಸಕೋಶವನ್ನು. ವಿಶ್ವ ಆರೋಗ್ಯ ಸಂಸ್ಥೆಯು ಇದು ಶ್ವಾಸಕೋಶವನ್ನು ಮೂರು ಹಂತವಾಗಿ ಹಾನಿ ಮಾಡುವುದು ಎಂದು ಹೇಳಿದೆ.

1. ವೈರಲ್‌ ರೆಪ್ಲಿಕೇಷನ್: ಈ ಹಂತದಲ್ಲಿ ವೈರಾಣುಗಳು ಸಂಖ್ಯೆ ವೃದ್ಧಿಯಾಗುವುದು.

2. ಇಮ್ಯೂನೆ ಹೈಪರ್ ರಿಯಾಕ್ಟಿವಿಟಿ: ಈ ಹಂತದಲ್ಲಿ ವೈರಾಣುಗಳ ರೋಗ ನಿರೋಧಕ ಕಣಗಳನ್ನು ನಾಶ ಮಾಡುತ್ತವೆ. ಈ ಹಂತದಲ್ಲಿ ಗಂಟಲಿನಲ್ಲಿ ಉರಿಯೂತ ಉಂಟಾಗುವುದು. ಈ ರೀತಿ ಕೊರೊನಾವೈರಸ್ ಸೋಂಕಿದ ಶೇ.14ರಷ್ಟು ಜನರಿಗೆ ಉಂಟಾಗುತ್ತದೆ.

3. ಪುಲ್ಮೋನರಿ ಡೆಸ್ಟ್ರಕ್ಷನ್: ಈ ಹಂತದಲ್ಲಿ ಶ್ವಾಸಕೋಶವನ್ನು ಹಾನಿ ಮಾಡಿ, ಶ್ವಾಸನಾಳದಲ್ಲಿ ದ್ರವ ತುಂಬಿ ಕೊಳ್ಳುವುದು ಹಾಗೂ ಇತರ ಬ್ಯಾಕ್ಟಿರಿಯಾಗಳನ್ನು ಆಕರ್ಷಿಸುತ್ತದೆ. ಇದರಿಂದಾಗಿ ಉಸಿರಾಟಕ್ಕೆ ತೊಂದರೆ ಉಂಟಾಗುವುದು. ರೋಗಿ ಈ ಹಂತ ತಲುಪಿದರೆ ಬದುಕಲು ವೆಂಟಿಲೇಟರ್ ಅವಶ್ಯಕವಾಗಿರುತ್ತದೆ.

ವಿಶ್ವ ಆರೋಗ್ಯ ಸಂಸ್ಥೆಯು 'ಕೊರೊನಾವೈರಸ್ ಕೂಡ SARS ವರ್ಗಕ್ಕೆ ಸೇರಿದ ವೈರಾಣು ಆಗಿದ್ದು, ಇದು ಶ್ವಾಸಕೋಶಕ್ಕೆ ಸಾಶ್ವತ ಹಾನಿಯುಂಟು ಮಾಡುವುದು' ಎಂದು ಆದರೆ ಈ ರೀತಿ ಕೆಲವೇ ಜನರಿಗಷ್ಟೇ ಉಂಟಾಗುವುದು. ತೀವ್ರ ಉಸಿರಾಟದ ತೊಂದರೆ ಉಂಟಾಗದಿದ್ದರೆ ಕೋವಿಡ್ 19ನಿಂದ ಚೇತರಿಸಿಕೊಂಡ ಬಳಿಕ ಸ್ವಲ್ಪ ದಿನಗಳಲ್ಲಿಯೇ ದೇಹ ಸಹಜ ಸ್ಥಿತಿಗೆ ಮರಳುತ್ತದೆ.

ಕಿಡ್ನಿ ಆರೋಗ್ಯ

ಕಿಡ್ನಿ ಆರೋಗ್ಯ

ಇನ್ನು ಕೋವಿಡ್‌ 19 ರೋಗಿಗೆ ಚಿಕಿತ್ಸೆ ನೀಡುವಾಗ ಆರೋಗ್ಯ ಕಾರ್ಯಕರ್ತರು ರೋಗಿಯ ಶ್ವಾಸಕೋಶದ ಆರೋಗ್ಯ ಮಾತ್ರವಲ್ಲ, ಕಿಡ್ನಿಯ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಮದ್ದು ನೀಡಬೇಕಾಗುತ್ತದೆ.

ಪರಿಸ್ಥತಿ ಗಂಭೀರವಾದರೆ ಅದನ್ನು ಸೆಪ್‌ಸಿಸ್ (sepsis) ಎಂದು ಕರೆಯುತ್ತಾರೆ. ಈ ಸಂದರ್ಭದಲ್ಲಿ ಸೋಂಕು ಹೆಚ್ಚಾಗಿ ಇತರ ಅಂಗಾಂಗಗಳಿಗೂ ಅದರಲ್ಲಿ ಹಾನಿಯುಂಟಾಗಬಹುದು. ಅದರಲ್ಲೊಂದು ಕಿಡ್ನಿ.

ದೇಹದಲ್ಲಿ ರಕ್ತದೊತ್ತಡವನ್ನು ನಿಯಂತ್ರಿಸಲು ಹಾಗೂ ರಕ್ತವನ್ನು ಶುದ್ಧೀಕರಿಸಲು ಕಿಡ್ನಿ ಆರೋಗ್ಯವಾಗಿರಬೇಕು. ಆದರೆ ಸೆಪ್‌ಸಿಸ್ ಹಂತದಲ್ಲಿ ರಕ್ತನಾಳಗಳನ್ನು ಸಡಿಲವಾಗಿಸುತ್ತದೆ ಹಾಗೂ ಅವುಗಳ ಒತ್ತಡ ಕಡಿಮೆ ಮಾಡುವುದು. ಇದ್ದಕ್ಕಿದ್ದಂತೆ ಕಿಡ್ನಿಗೆ ರಕ್ತಸಂಚಾರ ಕಡಿಮೆಯಾಗಿ, ಸಹಜ ರೀತಿಯಲ್ಲಿ ರಕ್ತ ಪೂರೈಕೆಯಾಗದೇ ಇದ್ದಾಗ ಕಿಡ್ನಿಗೆ ಹಾನಿಯುಂಟಾಗುವುದು.

ಆದ್ದರಿಂದ ವೈದ್ಯರು ಕೋವಿಡ್‌ 19 ರೋಗಿಗಳಲ್ಲಿ ಅವರ ಶ್ವಾಸಕೋಶದ ಆರೋಗ್ಯದ ಜೊತೆ, ಕಿಡ್ನಿ ಆರೋಗ್ಯದ ಕಡೆಯೂ ಗಮನ ನೀಡಬೇಕಾಗುತ್ತದೆ. ಗಂಟಲಿನಲ್ಲಿ ದ್ರವ ಹೆಚ್ಚು ಸಂಗ್ರಹವಾದಾಗ ಕಿಡ್ನಿಯಲ್ಲೂ ನೀರು ತುಂಬದಂತೆ ಚಿಕಿತ್ಸೆ ನೀಡಬೇಕಾಗುತ್ತದೆ.

ಕೋವಿಡ್‌ 19ನಿಂದ ಚೇತರಿಕೆ ಬಳಿಕ ಕಿಡ್ನಿ ಆರೋಗ್ಯ ಜೋಪಾನ

ಕೋವಿಡ್‌ 19ನಿಂದ ಚೇತರಿಕೆ ಬಳಿಕ ಕಿಡ್ನಿ ಆರೋಗ್ಯ ಜೋಪಾನ

ಕೋವಿಡ್ 19ನಿಂದ ಚೇತರಿಸಿಕೊಂಡ ಅದೃಷ್ಟವಂತರು ಮುಂದೆ ತಮ್ಮ ರಕ್ತದೊತ್ತಡ ಹಾಗೂ ಕಿಡ್ನಿ ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ರಕ್ತ ಪರೀಕ್ಷೆ ಹಾಗೂ ಮೂತ್ರ ಪರೀಕ್ಷೆ ಮಾಡಿಸುತ್ತಾ ತಮ್ಮ ಕಿಡ್ನಿ ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ.

ಸಲಹೆ: ಕೋವಿಡ್‌ 19 ಎನ್ನುವುದು ಸಾಂಕ್ರಾಮಿಕ ಪಿಡುಗು ಆಗಿದ್ದು, ಇದು ಸೋಂಕಿತ ವ್ಯಕ್ತಿಗಳಿಂದ ಇತರರಿಗೆ ಹರಡುವುದು. ಈ ರೋಗ ಬಂದ ಮೇಲೆ ಕಷ್ಟಪಡುವುದಕ್ಕಿಂತ ಇದನ್ನು ಬರದಂತೆ ತಡೆಯಬಹುದಾಗಿದೆ. ಅದಕ್ಕಾಗಿ ಜನರು ಮಾಡಬೇಕಾಗಿರುವುದು ಈ ಲಾಕ್‌ಡೌನ್‌ ಸಮಯದಲ್ಲಿ ಅನಗ್ಯತವಾಗಿ ಹೊರಗಡೆ ತಿರುಗಾಡದೆ ಇರುವುದು. ಆಗಾಗ ಕೈಗಳನ್ನು ಸೋಪ್‌ ಹಾಕಿ ತೊಳೆಯಿರಿ. ಮನೆಗೆ ತರುವ ದಿನಸಿ, ತರಕಾರಿಗಳನ್ನು ತೊಳೆದು ಬಳಸಿ. ಮಾಂಸಾಹಾರ ಚೆನ್ನಾಗಿ ಬೇಯಿಸಿ ತಿನ್ನಿ, ಮನೆಯಲ್ಲಿಯೇ ಇರಿ, ಆರೋಗ್ಯವಾಗಿರಿ.

English summary

After Recover From Covid 19, Be Carefull About kidney Health

Now doctors are beginning to worry that for patients who have survived COVID-19, the same may be true.
Story first published: Monday, April 13, 2020, 9:23 [IST]
X
Desktop Bottom Promotion