For Quick Alerts
ALLOW NOTIFICATIONS  
For Daily Alerts

ಉಪ್ಪು ಕಡಿಮೆ ಎಂದು ಅಡುಗೆಗೆ ಮೇಲುಪ್ಪು ಹಾಕಿ ಸೇವಿಸುತ್ತಿದ್ದೀರಾ? ಹಾಗಿದ್ರೆ ನಿಮ್ಮ ಜೀವಿತದ 2 ವರ್ಷ ಕಡಿಮೆ ಆಗುತ್ತೆ ಹುಷಾರ್‌

|

ಊಟ ತಯಾರಾದ ಮೇಲೆ ಅದಕ್ಕೆ ಉಪ್ಪು ಬೆರೆಸಿ ತಿನ್ನುವ ಹವ್ಯಾಸವನ್ನು ನೀವು ಹೊಂದಿದ್ದೀರಾ? ಹಾಗಾದರೆ ಇಂದೇ ಬಿಟ್ಟುಬಿಡಿ. ಹೌದು, ಉಪ್ಪು ನಮ್ಮ ದೇಹಕ್ಕೆ ಎಷ್ಟು ಒಳ್ಳೆಯದೋ ಅಷ್ಟೇ ಕೆಟ್ಟದ್ದು. ಉಪ್ಪನ್ನು ಆಹಾರ ತಯಾರಿಸುವ ಸಂದರ್ಭ ಬಳಸಿದರೆ ಸಮಸ್ಯೆ ಇಲ್ಲ. ಆದರೆ ತಯಾರಾದ ಆಹಾರಕ್ಕೆ ನಾವು ಉಪ್ಪನ್ನು ಹಾಕಿ ಸೇವಿಸಿದರೆ ನಮ್ಮ ಜೀವಕ್ಕೆ ಇದು ಕಂಟಕವಾಗಲಿದೆ.

123

ಬ್ರಿಟನ್ನಿನ 500,000ಕ್ಕೂ ಹೆಚ್ಚು ಮಧ್ಯವಯಸ್ಕರ ಮೇಲೆ ನಡೆಸಿದ ಅಧ್ಯಯನದ ಪ್ರಕಾರ, ತಯಾರಾದ ಆಹಾರಕ್ಕೆ ಹೆಚ್ಚುವರಿ ಉಪ್ಪನ್ನು ಸೇರಿಸಿ ತಿನ್ನುವ ಜನರು ಅಕಾಲಿಕ ಮರಣಕ್ಕೆ ತುತ್ತಾಗುವ ಅಪಾಯ ಜಾಸ್ತಿ ಎಂದು ತಿಳಿದುಬಂದಿದೆ.

ಇನ್ನು ಈ ಸಂಶೋಧನೆ ಉಪ್ಪನ್ನು ತಯಾರಿಸಿದ ಆಹಾರಕ್ಕೆ ಸೇರಿಸದವರು ಹಾಗೂ ಆಹಾರಕ್ಕೆ ಉಪ್ಪನ್ನು ಸೇರಿಸುವವರ ಮೇಲೆ ನಡೆಸಲಾಗಿದ್ದು, ಈ ಪೈಕಿ ಶೇ. 28 ಜನರು ಅಕಾಲಿಕ ಸಾವಿನ ಅಪಾಯವನ್ನು ಎದುರಿಸುತ್ತಿದ್ದಾರೆ. ಇವರೆಲ್ಲ ಈ ರೀತಿ ಉಪ್ಪು ಸೇವಿಸಿದ್ದರಿಂದ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.

ಸಂಶೋಧನೆ ಹೇಳುವುದೇನು?

ಸಂಶೋಧನೆ ಹೇಳುವುದೇನು?

ಸಾಮಾನ್ಯವಾಗಿ ಹೇಳಬೇಕೆಂದರೆ 40 ರಿಂದ 69 ವರ್ಷ ವಯಸ್ಸಿನವರ ಪೈಕಿ ಪ್ರತಿ ನೂರರಲ್ಲಿ ಮೂರು ಜನರು ಅತೀ ಹೆಚ್ಚು ಉಪ್ಪು ಸೇವನೆಯಿಂದ ಅಕಾಲಿಕವಾಗಿ ಸಾಯುತ್ತಿದ್ದಾರೆ ಎಂದು ಅಧ್ಯಯನ ತಿಳಿಸಿದೆ. ಅಧ್ಯಯನ ಕ್ಲಿಯರ್ ಆಗಿ ಹೇಳುವುದಾದರೆ, ತಯಾರಾದ ಆಹಾರಕ್ಕೆ ಉಪ್ಪನ್ನು ಸೇರಿಸಿ ತಿನ್ನುವುದರಿಂದ ಅಕಾಲಿಕ ಸಾವು ಸಂಭವಿಸುತ್ತದೆ ಎನ್ನಲಾಗಿದೆ. ಇನ್ನು ಊಟಕ್ಕೆ ಹೆಚ್ಚುವರಿ ಉಪ್ಪನ್ನು ಸೇರಿಸುವುದರಿಂದ 50 ವರ್ಷ ವಯಸ್ಸಿನ ಪುರುಷರ ಜೀವಿತಾವಧಿಯು ಎರಡು ವರ್ಷಗಳಿಗಿಂತ ಕಡಿಮೆ ಮತ್ತು ಅದೇ ವಯಸ್ಸಿನ ಮಹಿಳೆಯರಿಗೆ 1.5 ವರ್ಷ ಜೀವಿತಾವಧಿಯು ಕಡಿತವಾಗಲಿದೆ ಎಂದು ಸಂಶೋಧನೆ ಬಹಿರಂಗಪಡಿಸಿವೆ.

ಅಧ್ಯಯನಕಾರ ಲು ಕಿ ಹೇಳುವುದೇನು?

ಅಧ್ಯಯನಕಾರ ಲು ಕಿ ಹೇಳುವುದೇನು?

ಟುಲೇನ್ ಯೂನಿವರ್ಸಿಟಿ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ಅಂಡ್ ಟ್ರಾಪಿಕಲ್ ಮೆಡಿಸಿನ್‌ನ ಪ್ರೊಫೆಸರ್ ಲು ಕಿ ನೇತೃತ್ವದಲ್ಲಿ ಈ ಅಧ್ಯಯನ ನಡೆದಿದ್ದು ಅವರು ಹೇಳುವ ಪ್ರಕಾರ, ತಯಾರಿಸಿದ ಊಟಕ್ಕೆ ಉಪ್ಪು ಸೇರಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಇದರಿಂದ ಅಕಾಲಿಕ ಮರಣ ಸಂಭವಿಸುತ್ತದೆ. ಈ ವಿಚಾರ ನಮ್ಮ ಸಂಶೋಧನೆಯಲ್ಲಿ ಬೆಳಕಿಗೆ ಬಂದಿದೆ ಎಂದು ತಿಳಿಸಿದ್ದಾರೆ. ಆಹಾರ ತಯಾರಿಸುವಾಗಲೂ ರುಚಿಗೆ ತಕ್ಕಂತೆ ಉಪ್ಪು ಬಳಸುವುದು ಒಳ್ಳೆಯದು. ಜಾಸ್ತಿ ಇದರ ಬಳಕೆಯಿಂದ ಮಾನವ ಜೀವನ ಶೈಲಿ ಮೇಲೆ ಪರಿಣಾಮ ಬೀರುತ್ತದೆ ಎಂದು ಲು ಕಿ ಹೇಳಿದ್ದಾರೆ. ಹೀಗಾಗಿ ಊಟದಲ್ಲಿ ಉಪ್ಪು ಕಡಿಮೆಗೊಳಿಸಿದರೆ ನಮ್ಮ ಆರೋಗ್ಯಕ್ಕೆ ಹಲವು ಬೆನಿಫಿಟ್ ಗಳು ಸಿಗುತ್ತವೆ ಎಂದಿದ್ದಾರೆ.

ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನುವುದರಿಂದ ಅಕಾಲಿಕ ಮರಣದ ಅಪಾಯ ತಗ್ಗುತ್ತದೆ!

ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನುವುದರಿಂದ ಅಕಾಲಿಕ ಮರಣದ ಅಪಾಯ ತಗ್ಗುತ್ತದೆ!

500,000ಕ್ಕೂ ಹೆಚ್ಚು ಮಧ್ಯವಯಸ್ಕರ ಮೇಲೆ ಈ ಅಧ್ಯಯನ ನಡೆಸಲಾಗಿದ್ದು ಹಲವಾರು ಅಂಶಗಳು ಈ ಅಧ್ಯಯನದಿಂದ ಹೊರಬಂದಿದೆ. ಅಧ್ಯಯನದ ಪ್ರಕಾರ ತಯಾರಿಸಿದ ಆಹಾರಕ್ಕೆ ಉಪ್ಪು ಸೇರಿಸುವುದು ಅಕಾಲಿಕ ಮರಣದ ಅಪಾಯನ್ನು ಹೆಚ್ಚಿಸುತ್ತದೆ. ಅದಾಗ್ಯೂ ಅಕಾಲಿಕ ಸಾವಿನ ಅಪಾಯಗಳು ಹೆಚ್ಚು ಹಣ್ಣು ಮತ್ತು ತರಕಾರಿಗಳನ್ನು ಸೇವಿಸುವ ಜನರಲ್ಲಿ ಸ್ವಲ್ಪಮಟ್ಟಿಗೆ ಕಡಿಮೆಯಾಗುತ್ತವೆ ಎಂದು ಅಧ್ಯಯನದಲ್ಲಿ ತಿಳಿದುಬಂದಿದೆ.

ಹೀಗಾಗಿ ಈ ರೀತಿ ಉಪ್ಪು ಸೇವಿಸುತ್ತಿದ್ದರೆ, ಈ ರೀತಿಯ ಹ್ಯಾಬಿಟ್ ಬಿಡಲು ಸಾಧ್ಯವಾಗದವರು ಅದನ್ನು ಸಮತೋಲನ ಮಾಡಲು ತರಕಾರಿ, ಹಣ್ಣುಗಳನ್ನು ಸೇವಿಸಿದರೆ ಉತ್ತಮ ಎಂದು ಅಧ್ಯಯನದಲ್ಲಿ ಹೇಳಲಾಗಿದೆ. ಹಣ್ಣು ಮತ್ತು ತರಕಾರಿಯಲ್ಲಿ ಪೊಟ್ಯಾಶೀಯಂ ಹೇರಳವಾಗಿರುವುದರಿಂದ ಪ್ರಿಮೆಚ್ಯೂರ್ ಸಾವುಗಳು ಸಂಭವಿಸುವುದನ್ನು ಕಡಿತಗೊಳಿಸಬಹುದು.

ತಯಾರಾದ ಆಹಾರಕ್ಕೆ ಉಪ್ಪು ಹಾಕುವುದನ್ನು ನಿಲ್ಲಿಸಿ!

ತಯಾರಾದ ಆಹಾರಕ್ಕೆ ಉಪ್ಪು ಹಾಕುವುದನ್ನು ನಿಲ್ಲಿಸಿ!

ತಯಾರಿಸಿದ ಆಹಾರಕ್ಕೆ ಉಪ್ಪು ಸೇವಿಸಿ ತಿನ್ನುವುದನ್ನು ಬಿಟ್ಟುಬಿಡಿ ಎಂದು ಅಧ್ಯಯನ ಪ್ರತಿಪಾದಿಸಿದೆ. ತಯಾರಾಗುವುದಕ್ಕಿಂತ ಮುಂಚೆ ಆಹಾರಕ್ಕೆ ಉಪ್ಪು ಹಾಕಿ ತಯಾರು ಮಾಡಬಹುದು. ಈ ಮೂಲಕ ದೇಹಕ್ಕೆ ಸೋಡಿಯಂ ಕೂಡ ಸಿಗುತ್ತದೆ. ಆದರೆ ಅನೇಕರಿಗೆ ಊಟ ಟೇಬಲ್ ಗೆ ಬಂದ ಮೇಲೆ ಉಪ್ಪು ಸೇರಿಸಿ ತಿನ್ನುವ ಅಭ್ಯಾಸವಿದೆ. ಇದು ನಿಜಕ್ಕೂ ಒಳ್ಳೆಯದಲ್ಲ. ಈ ರೀತಿಯ ಹವ್ಯಾಸದಿಂದ ಅವರಿಗೆ ಅಕಾಲಿಕ ಸಾವು ಕೂಡ ಬರಬಹುದು. ಹೀಗಾಗಿ ಇಂತಹ ಅಭ್ಯಾಸವನ್ನು ಬಿಟ್ಟುಬಿಡಿ.

ಕಡಿಮೆ ಉಪ್ಪು ತಿಂದರೂ ಸಮಸ್ಯೆ!

ಕಡಿಮೆ ಉಪ್ಪು ತಿಂದರೂ ಸಮಸ್ಯೆ!

ನೀವು ಕಡಿಮೆ ಉಪ್ಪನ್ನು ತಿಂದರೆ ನಿಮ್ಮ ದೇಹಕ್ಕೆ ಬೇಕಾದ ಪ್ರಮಾಣದಲ್ಲಿ ಸೋಡಿಯಂ ಸಿಗುವದಿಲ್ಲ. ಇದರಿಂದಾಗಿ ನೀವು ಟೈಪ್ 2 ಮಧುಮೇಹಕ್ಕೆ ಬಲಿಯಾಗಬಹುದು. ಪೌಷ್ಟಿಕತಜ್ಞರ ಪ್ರಕಾರ, ನೀವು ತುಂಬಾ ಕಡಿಮೆ ಉಪ್ಪನ್ನು ಸೇವಿಸಿದರೆ, ಅದು ದೇಹದಲ್ಲಿ ಇನ್ಸುಲಿನ್ ಪ್ರತಿರೋಧದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಹಾರ್ಮೋನ್ ಇನ್ಸುಲಿನ್ ನಿಂದ ಸಿಗ್ನಲ್ ಗಳಿಗೆ ಕೋಶಗಳು ಸರಿಯಾಗಿ ಪ್ರತಿಕ್ರಿಯಿಸುವುದಿಲ್ಲ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಹೀಗಾಗಿ ಎಷ್ಟು ಬೇಕು ಅಷ್ಟು ಉಪ್ಪನ್ನು ನಾವು ಆಹಾರ ತಯಾರಿಸುವ ಸಂದರ್ಭದಲ್ಲಿ ಬಳಸಿಕೊಳ್ಳಬಹುದು. ಈ ಮೂಲಕ ಸೋಡಿಯಂ ಲೆವೆಲ್ ಅನ್ನು ಸಮತೋಲನದಲ್ಲಿ ಇಡಬಹುದು.

ಎಷ್ಟು ಉಪ್ಪು ನಮ್ಮ ದೇಹಕ್ಕೆ ಸಾಕು?

ಎಷ್ಟು ಉಪ್ಪು ನಮ್ಮ ದೇಹಕ್ಕೆ ಸಾಕು?

ಅಕಾಡೆಮಿ ಆಫ್ ನ್ಯೂಟ್ರಿಷನ್ ಅಂಡ್ ಡಯೆಟಿಕ್ಸ್ ಪ್ರಕಾರ ಪ್ರತಿದಿನ 1,500 ಮಿ.ಗ್ರಾಂ.ನಿಂದ 2,300 ಮಿ.ಗ್ರಾಂ ಉಪ್ಪನ್ನು (ಅಂದಾಜು 1 ಟೇ.ಸ್ಪೂಗಿಂತ ಕೊಂಚ ಕಮ್ಮಿ) ಸೇವಿಸುವುದು ಒಳ್ಳೆಯದು. ಇದರಿಂದ ರಕ್ತದೊತ್ತಡ, ಹೃದಯರಕ್ತನಾಳದ ಕಾಯಿಲೆ, ಪಾರ್ಶ್ವವಾಯು ಮತ್ತು ಪರಿಧಮನಿಯ ಹೃದಯಾಘಾತದ ಕಾಯಿಲೆಯಿಂದ ದೂರ ಇರಬಹುದು. ಇನ್ನು ಇದು ಸಣ್ಣ ಪ್ರಾಯದ ಮಕ್ಕಳಿಗೆ ಅನ್ವಯವಾಗುವುದಿಲ್ಲ. ಯಾಕೆಂದರೆ 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಅವರ ಎನರ್ಜಿಗೆ ತಕ್ಕಂತೆ ಉಪ್ಪು ಸೇವಿಸಬಹುದಾಗಿದೆ.

ಅದೇನೆ ಇದ್ದರೂ ತಯಾರಿಸದ ಆಹಾರಕ್ಕೆ ಉಪ್ಪು ಸೇವಿಸಿ ತಿನ್ನುವುದನ್ನು ಆದಷ್ಟು ಅವಾಯ್ಡ್ ಮಾಡೋದು ಒಳ್ಳೆದು. ಅದಕ್ಕೆ ಡೈನಿಂಗ್ ಟೇಬಲ್ ಮೇಲೆ ಉಪ್ಪಿನ ಡಬ್ಬವನ್ನು ಇಡದೆ ಇರುವುದು ಒಳ್ಳೆಯ ಐಡಿಯಾವಾಗಿದೆ.

English summary

Adding extra salt to food at table can cut 2 years off your life, finds study

Here discussing about Adding extra salt to food at table can cut 2 years off your life, finds study, Read on
X
Desktop Bottom Promotion