For Quick Alerts
ALLOW NOTIFICATIONS  
For Daily Alerts

ಕೊರೊನಾದಿಂದ ಗುಣಮುಖರಾದವರಲ್ಲಿ ಕಾಣಿಸಿಕೊಳ್ಳುತ್ತಿದೆ ಕಿಡ್ನಿ ಸಮಸ್ಯೆ! ಏನಿದು ಇಲ್ಲಿದೆ

|

ಕೊರೊನಾದ ಹಾವಳಿ ಸದ್ಯಕ್ಕೆ ಮುಗಿಯುವಂತೆ ತೋರುತ್ತಿಲ್ಲ. ಪ್ರತಿದಿನ ಹೊಸಹೊಸ ರೂಪಗಳೊಂದಿಗೆ ಜನರನ್ನು ಕಾಡುತ್ತಿರುವ ಈ ಸೋಂಕು ಇದೀಗ ಮತ್ತೊಂದು ಸಮಸ್ಯೆಯನ್ನ ತಂದಿಟ್ಟಿದೆ. ಹೌದು, ಕೊರೊನಾದಿಂದ ಗುಣಮುಖರಾದವರಲ್ಲಿ ಕಿಡ್ನಿಯ ಸಮಸ್ಯೆಗಳು ಮತ್ತು ಕಿಡ್ನಿಯ ಕಾರ್ಯನಿರ್ವಹಣೆಯಲ್ಲಿ ಅಡಚಣೆಗಳು ಕಾಣಿಸಿಕೊಳ್ಳುತ್ತಿವೆ ಎಂದು ಸಂಶೋಧನೆಯೊಂದು ಹೇಳುತ್ತಿದೆ. ಏನಿದು ಅಧ್ಯಯನ, ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಕೊರೊನಾದಿಂದ ಗುಣಮುಖರಾದವರಲ್ಲಿ ಮೂತ್ರಪಿಂಡದ ಸಮಸ್ಯೆ ಕಾಣಿಸಿಕೊಳ್ಳುತ್ತಿರುವ ಬಗ್ಗೆ ಅಧ್ಯಯನ ಏನು ಹೇಳುತ್ತಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಏನಿದು ಅಧ್ಯಯನ?:

ಏನಿದು ಅಧ್ಯಯನ?:

ಸೇಂಟ್ ಲೂಯಿಸ್‌ನ ವಾಷಿಂಗ್ಟನ್ ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್‌ನ ಸಂಶೋಧಕರು ನಡೆಸಿದ ಅಧ್ಯಯನವು, ಕೊರೊನಾ ಸೋಂಕಿತ ಜನರು ಮೂತ್ರಪಿಂಡದ ಹಾನಿ ಹಾಗೂ ದೀರ್ಘಕಾಲದ ಕಿಡ್ನಿ ಸಮಸ್ಯೆಗಳನ್ನು ಪಡೆಯುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಿದೆ. ಈ ಅಧ್ಯಯನವು ಆನ್‌ಲೈನ್‌ನಲ್ಲಿ ಜರ್ನಲ್ ಆಫ್ ದಿ ಅಮೇರಿಕನ್ ಸೊಸೈಟಿ ಆಫ್ ನೆಫ್ರಾಲಜಿಯಲ್ಲಿ ಪ್ರಕಟಣೆಗೊಂಡಿದೆ.

ಸಂಶೋಧಕರು ಮಾರ್ಚ್ 1, 2020 ರಿಂದ ಮಾರ್ಚ್ 15, 2021 ರವರೆಗೆ 1.7 ಮಿಲಿಯನ್ ಗಿಂತ ಹೆಚ್ಚು ಆರೋಗ್ಯವಂತ ಮತ್ತು ಕೋವಿಡ್ ಸೋಂಕಿತ ಜನರಆರೋಗ್ಯ ಮಾಹಿತಿಯನ್ನು ಒಳಗೊಂಡ ಡೇಟಾವನ್ನು ಸಂಗ್ರಹಿಸಿದ್ದಾರೆ. ಇದರಲ್ಲಿ 1,51,289 ಮಹಿಳೆಯರಿದ್ದು, 8,817 ಜನರು ಕೊರೊನಾ ಸೋಂಕಿತರು ಸೇರಿದಂತೆ ಎಲ್ಲಾ ವರ್ಗದ ವಯಸ್ಕರಿದ್ದರು ಎಂದು ಸಂಶೋಧಕರು ಹೇಳಿದ್ದಾರೆ.

ಯಾರಿಗೆ ಅಪಾಯ ಹೆಚ್ಚು?:

ಯಾರಿಗೆ ಅಪಾಯ ಹೆಚ್ಚು?:

ಅಧ್ಯಯನದ ಪ್ರಕಾರ, ಕೊರೊನಾದಿಂದ ಆಸ್ಪತ್ರೆ ಸೇರಿರುವ ಜನರಿಗೆ ಈ ಕಿಡ್ನಿ ಸಮಸ್ಯೆ ಬರುವುದು ಹೆಚ್ಚು, ಅದರಲ್ಲೂ ಮುಖ್ಯವಾಗಿ ಕೊರೊನಾದಿಂದ ಐಸಿಯುನಲ್ಲಿರುವ ಜನರಲ್ಲಿ ಮೂತ್ರಪಿಂಡದ ಕಾರ್ಯವು ಕಡಿಮೆಯಾಗುವ ಅಪಾಯ ಹೆಚ್ಚಾಗಿದೆ. ಇದಲ್ಲದೆ, ಸೌಮ್ಯ ರೋಗ ಹೊಂದಿರುವ, ಆದರೆ ಆಸ್ಪತ್ರೆಗೆ ಸೇರಿಸುವ ಅಗತ್ಯವಿಲ್ಲದ ಜನರು ದೀರ್ಘಕಾಲದ ಮೂತ್ರಪಿಂಡದ ಕಾಯಿಲೆಯನ್ನು ಪಡೆಯುವ ಸಾಧ್ಯತೆ, ಶೇಕಡ 15 ರಷ್ಟಿದ್ದು, ಕಿಡ್ನಿ ಗಾಯವಾಗುವ ಸಾಧ್ಯತೆಯನ್ನು ಶೇ,30 ರಷ್ಟು ಹೊಂದಿದ್ದಾರೆ.

ಯಾಕೆ ಈ ಸಮಸ್ಯೆ ಎದುರಾಗುವುದು?:

ಯಾಕೆ ಈ ಸಮಸ್ಯೆ ಎದುರಾಗುವುದು?:

ಸೈಲೆಂಟ್ ಕಿಲ್ಲರ್ ಎಂದೇ ಕರೆಯಲ್ಪಡುವ ಕಿಡ್ನಿಯ ಅಪಸಾಮಾನ್ಯ ಸಮಸ್ಯೆಯು ಯಾವುದೇ ನೋವು ಅಥವಾ ರೋಗ ಲಕ್ಷಣಗಳನ್ನು ಹೊಂದಿರುವುದಿಲ್ಲ. ಆದ್ದರಿಂದ 90 % ಜನರಿಗೆ ತಮಗೆ ಮೂತ್ರಪಿಂಡಕ್ಕೆ ಹಾನಿಯಾಗಿದೆ ಎಂಬುದು ತಿಳಿದಿರುವುದಿಲ್ಲ ಎಂದು ನ್ಯಾಷನಲ್ ಕಿಡ್ನಿ ಫೌಂಡೇಶನ್ ಹೇಳಿದೆ. ಜೊತೆಗೆ ಕೊರೊನಾ ನಂತರ ಕಿಡ್ನಿಯ ಆರೈಕೆಯ ಕುರಿತು ಸರಿಯಾದ ಮಾಹಿತಿ ಇರದಿರುವುದು, ಈ ನಿರ್ಲಕ್ಷ್ಯ ಸಮಸ್ಯೆಗೆ ಕಾರಣಾಗುವುದೆಂಬ ತಿಳುವಳಿಕೆ ಇಲ್ಲದಿರುವುದು ಎನ್ನುತ್ತಾರೆ ಸಂಶೋಧಕರು.

ಏನು ಮಾಡಬೇಕು?:

ಏನು ಮಾಡಬೇಕು?:

ಕೊರೊನಾ ಬಂದ ನಂತರ ಅಥವಾ ಕೊರೊನಾದಿಂದ ಗುಣಮುಖವಾದ ನಂತರ ರೋಗಿಗಳು ಮೂತ್ರಪಿಂಡದ ಕಾರ್ಯ ಮತ್ತು ಕಾಯಿಲೆಯ ಬಗ್ಗೆ ಗಮನ ಹರಿಸಬೇಕು. ಇದರ ಪ್ರಾಮುಖ್ಯತೆಯನ್ನು ಅರಿತುಕೊಂಡು, ಕಿಡ್ನಿಯ ಪರೀಕ್ಷೆ, ಮೂತ್ರಪಿಂಡದ ಆರೋಗ್ಯಕ್ಕೆ ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳಬೇಕು.

English summary

According to researches, Kidney Damage Found in Recovered COVID-19 Patients

Here we talking about According to researches, Kidney Damage Found in Recovered COVID-19 Patients, read on
X
Desktop Bottom Promotion