For Quick Alerts
ALLOW NOTIFICATIONS  
For Daily Alerts

ಮಂಕಿಪಾಕ್ಸ್ ಕಾಯಿಲೆಯ 3 ಗಂಭೀರ ಲಕ್ಷಣಗಳಿವು

|

ಭಾರತಕ್ಕೆ ಕೊರೊನಾ ನಾಲ್ಕನೆ ಅಲೆ ಅಪ್ಪಳಿಸುವ ಸಾಧ್ಯತೆ ಇದೆ ಎನ್ನುವ ಸುದ್ದಿಯ ಮಧ್ಯೆ ಮಂಕಿ ಪಾಕ್ಸ್ ಕೂಡ ಭಾರತದಲ್ಲಿ ಜಾಸ್ತಿಯಾಗುತ್ತಿರುವ ಕಳವಳ ಜನರಲ್ಲಿ ಹೆಚ್ಚುತ್ತಿದೆ. ಹೌದು, ಕಳೆದ ಕೆಲವು ದಿನಗಳಿಂದ ಮಂಕಿ ಪಾಕ್ಸ್ ಸೋಂಕಿತರ ಸಂಖ್ಯೆ ಭಾರತದಲ್ಲಿ ಹೆಚ್ಚುತ್ತಿದೆ. ಈಗಾಗಲೇ ಭಾರತದ ನಾಲ್ಕು ಮಂದಿಯಲ್ಲಿ ಮಂಕಿ ಪಾಕ್ಸ್ ಅಥವಾ ಮಂಗನ ಸಿಡುಬು ಕಾಯಿಲೆ ಇರುವುದು ದೃಢಪಟ್ಟಿದೆ.

ಈ ಕಾಯಿಲೆ ಒಂದು ಮನುಷ್ಯನಿಂದ ಇನ್ನೊಂದು ಮನುಷ್ಯನಿಗೆ ಹಬ್ಬುತ್ತಿದೆ. ಕೊರೊನಾ ರೀತಿಯಲ್ಲೇ ಹರಡುತ್ತಿದೆ. ಇನ್ನು ಜಗತ್ತಿನಾದ್ಯಂತ ತೀವ್ರ ಪ್ರಮಾಣದಲ್ಲಿ ಮಂಕಿ ಪಾಕ್ಸ್ ಸೋಂಕು ಹರಡುತ್ತಿದೆಯಾದ್ರು ಸಾವಿನ ಸಂಖ್ಯೆ ಜಾಸ್ತಿ ಇಲ್ಲ. ಆದರೂ ಸದ್ಯ ಮಿತಿಮೀರಿ ಮಂಕಿ ಪಾಕ್ಸ್ ಹರಡುತ್ತಿರುವುದರಿಂದ ಕೇಂದ್ರ ಸರ್ಕಾರ ತಲೆಕೆಡಿಸಿಕೊಂಡಿದೆ. ಲಸಿಕೆ ಕಂಡುಹುಡುಕುವಂತೆ ಆರೋಗ್ಯ ಸಂಬಂಧಪಪಟ್ಟ ಸಂಸ್ಥೆಗಳಿಗೆ ಮನವಿ ಮಾಡಿದೆ. ಮೊದಲು ಪ್ರಾಣಿಗಳಿಗೆ ಮಾತ್ರ ಹರಡುತ್ತಿದ್ದ ಈ ಮಂಕಿ ಪಾಕ್ಸ್ ಮನುಷ್ಯರಲ್ಲೂ ಹರಡುವ ಮೂಲಕ ಕಳವಳ ಮೂಡಿಸಿದೆ.

3 ಹೊಸ ರೋಗಕ್ಕೆ ಕಾರಣವಾಗುತ್ತೆ ಮಂಕಿ ಪಾಕ್ಸ್!

3 ಹೊಸ ರೋಗಕ್ಕೆ ಕಾರಣವಾಗುತ್ತೆ ಮಂಕಿ ಪಾಕ್ಸ್!

ಆರಂಭದಲ್ಲಿ ಮಂಕಿ ಪಾಕ್ಸ್ ಸಾಮಾನ್ಯ ರೋಗಲಕ್ಷಣವನ್ನು ಹೊಂದಿತ್ತು ಆದರೆ ಇದೀಗ ಅಂತರರಾಷ್ಟ್ರೀಯ ವೈದ್ಯರ ಸಹಯೋಗವು ಸೋಂಕಿತ ಜನರಲ್ಲಿ ಮಂಕಿಪಾಕ್ಸ್ ವೈರಸ್ ಸೋಂಕಿನ ಮೂರು ಹೊಸ ತೀವ್ರ ಲಕ್ಷಣಗಳನ್ನು ಕಂಡುಹಿಡಿದಿದ್ದಾರೆ. ದಿ ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್‌ನಲ್ಲಿ ಪ್ರಕಟವಾದ ಅಧ್ಯಯನವು ಮಂಕಿಪಾಕ್ಸ್ ವೈರಸ್‌ನಿಂದ ಉಂಟಾಗುವ ಸಾಮಾನ್ಯ ಚರ್ಮದ ಸಮಸ್ಯೆಗಳು ಮತ್ತು ಗುಳ್ಳೆಗಳು ಜೊತೆಗೆ, ಈ ಸೋಂಕು ಮೂರು ತೀವ್ರ ರೋಗ ಲಕ್ಷಣಗಳ ಬಗ್ಗೆ ತಿಳಿಸಿದ್ದಾರೆ.

ಮಂಕಿಪಾಕ್ಸ್‌ನ 3 ಗಂಭೀರ ಲಕ್ಷಣಗಳು

ಮಂಕಿಪಾಕ್ಸ್‌ನ 3 ಗಂಭೀರ ಲಕ್ಷಣಗಳು

ಹೌದು, ಮಂಕಿ ಪಾಕ್ಸ್ ರೋಗಿಗಗಳ ಜನನಾಂಗದ ಮೇಲೆ ತೀವ್ರ ಪರಿಣಾಮ ಬೀರಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಜನನಾಂಗದ ಭಾಗದಲ್ಲಿಗಾಯಗಳು, ಬಾಯಿಯಲ್ಲಿ ಹುಣ್ಣುಗಳಾಗುವುದು, ಗುದದ್ವಾರದ ಮೇಲೆ ಹುಣ್ಣುಗಳಾಗುವಂತಹ ಲಕ್ಷಣಗಳು ಮಂಕಿ ಪಾಕ್ಸ್ ಬಾಧಿತರನ್ನು ತೀವ್ರವಾಗಿ ಕಾಡಬಹುದು ಎಂದಿದ್ದಾರೆ.

ಸಾಮಾನ್ಯ ಲಕ್ಷಣ

ಸಾಮಾನ್ಯ ಲಕ್ಷಣ

ಹೀಗಾಗಿ ಮಂಕಿ ಪಾಕ್ಸ್ ಬರದಂತೆ ತಡೆಯುವುದು ಒಳ್ಳೆಯದು ಎಂದಿದ್ದಾರೆ. ಇನ್ನು ಈ ತೀವ್ರವಾದ ರೋಗಲಕ್ಷಣಗಳ ಹೊರತಾಗಿ, ವೈರಸ್ ಸಾಮಾನ್ಯವಾಗಿ ಜ್ವರ, ಬೆನ್ನು ನೋವು, ಗಂಟಲು ನೋವು, ಊದಿಕೊಂಡ ದುಗ್ಧರಸ ಗ್ರಂಥಿಗಳು, ತಲೆನೋವು, ಚರ್ಮದ ಗಾಯಗಳು, ಚರ್ಮದ ಮೇಲೆ ಗುಳ್ಳೆಗಳು ಮತ್ತು ತೀವ್ರ ಆಯಾಸವನ್ನು ಉಂಟುಮಾಡುತ್ತದೆ.

ಇನ್ನು ಕಾಯಿಲೆ ಕಾಣಿಸಿಕೊಳ್ಳುವ ಸಮಯ ಭಿನ್ನವಾಗಿದೆ. ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಪ್ರಕಾರ, ಮಂಕಿಪಾಕ್ಸ್ ಕಾಣಿಸಿಕೊಳ್ಳಲು 7 ರಿಂದ 14 ದಿನಗಳವರೆಗೆ ತೆಗೆದುಕೊಳ್ಳಬಹುದು. ಆದರೆ ಚಿಕನ್ ಪಾಕ್ಸ್ ನ ರೋಗಲಕ್ಷಣಗಳು ಕಾಣಿಸಿಕೊಳ್ಳಲು 16 ದಿನಗಳವರೆಗೆ ತೆಗೆದು ಕೊಳ್ಳಬಹುದು.

ಲೈಂಗಿಕತೆಯಿಂದ ಹರಡುತ್ತದೆ ಮಂಕಿಪಾಕ್ಸ್!

ಲೈಂಗಿಕತೆಯಿಂದ ಹರಡುತ್ತದೆ ಮಂಕಿಪಾಕ್ಸ್!

ಇನ್ನು ಮಂಕಿ ಪಾಕ್ಸ್ ಲೈಂಗಿಕತೆಯಿಂದ ಹರಡುತ್ತಿದೆ ಎಂದು ವೈದ್ಯರುಗಳು ಹೇಳುತ್ತಿದ್ದಾರೆ. ಅಮೆರಿಕದ ಮಂಕಿ ಪಾಕ್ಸ್ ರೋಗ ಹೆಚ್ಚುತ್ತಿರುವುದನ್ನು ನೋಡುತ್ತಿದ್ದರೆ ಲೈಂಗಿಕತೆಯಿಂದ ಹೆಚ್ಚುತ್ತಿದೆ ಎಂದಿದ್ದಾರೆ. WHO ಪ್ರಕಾರ ಮಂಕಿಪಾಕ್ಸ್ ಯಾವುದೇ ರೀತಿಯ ನಿಕಟ ಸಂಪರ್ಕದ ಮೂಲಕ ಹರಡಬಹುದು, ಚುಂಬನ, ಸ್ಪರ್ಶ, ಮೌಖಿಕ ಲೈಂಗಿಕ್ರಿಯೆ ಅಥವಾ ಸಂಭೋಗದ ಮೂಲಕ ಹರಡುವ ಸಾಂಕ್ರಾಮಿಕವಾಗಿದೆ ಎಂದು ತಜ್ಞರು ಹೇಳಿದ್ದಾರೆ.

ಮಂಕಿಪಾಕ್ಸ್ ಕಾಯಿಲೆ ಬರದಂತೆ ತಡೆಗಟ್ಟುವುದು ಹೇಗೆ?

ಮಂಕಿಪಾಕ್ಸ್ ಕಾಯಿಲೆ ಬರದಂತೆ ತಡೆಗಟ್ಟುವುದು ಹೇಗೆ?

ಭಾರತಕ್ಕೂ ಲಗ್ಗೆ ಇಟ್ಟಿರುವ ಮಂಕಿಪಾಕ್ಸ್ ತೀವ್ರ ಸಮಸೆಯನ್ನು ಸೃಷ್ಟಿಸಲಿದೆ ಎಂದು ಅಂದಾಜಿಸಲಾಗಿದೆ. ಈಗಾಗಲೇ ನಾಲ್ಕು ಮಂದಿಯಲ್ಲಿ ಮಂಕಿ ಪಾಕ್ಸ್ ರೋಗ ಇರುವುದು ದೃಡಪಟ್ಟಿದೆ. ಹೀಗಾಗಿ ನಾವು ಮುನ್ನಚ್ಚರಿಕೆ ವಹಿಸುವುದು ಅಗತ್ಯ. ಯಾಕೆಂದರೆ ಸೋಂಕು ತಗುಲಿ ಅದನ್ನು ರಿಕವರಿ ಮಾಡುವುದಕ್ಕಿಂತ ಮುನ್ನೆಚ್ಚರಿಕೆ ಕ್ರಮಕೈಗೊಳ್ಳುವುದು ಉತ್ತಮ. ಹಾಗಾದರೆ ಮಂಕಿ ಪಾಕ್ಸ್ ಬರದಂತೆ ಅದನ್ನು ತಡೆಗಟ್ಟುವುದು ಹೇಗೆ? ಇಲ್ಲಿದೆ ಈ ಬಗ್ಗೆ ಟಿಪ್ಸ್.

1. ಮಂಕಿಪಾಕ್ಸ್ ರೋಗಕ್ಕೆ ಸಂಬಂಧಪಟ್ಟ ಯಾವುದೇ ಲಕ್ಷಣವಿದ್ದರೂ ಅಂತಹವರಿಂದ ದೂರ ಇರುವುದು ಒಳ್ಳೆಯ ಐಡಿಯಾ. ಜ್ವರ ಆಗಿರಲಿ ಶೀತ ಆಗಿರಲಿ ಕೊಂಚ ದಿನ ಅವರಿಂದ ಅಂತರ ಕಾಯ್ದುಕೊಳ್ಳಬೇಕು.

2. ದೇಹದ ಚರ್ಮದ ಮೇಲೆ ಯಾರಾದರೂ ಗುಳ್ಳೆಗಳನ್ನು ಹೊಂದಿದ್ದರೆ ಅದನ್ನು ಮುಟ್ಟಬೇಡಿ. ಮಂಕಿಪಾಕ್ಸ್ ಅಥವಾ ಸಿಡುಬು ಅಥವಾ ಇನ್ನಾವುದೇ ರೋಗವಾಗಿದ್ದರೂ ಅಂತಹ ಗುಳ್ಳೆಗಳನ್ನು ಮುಟ್ಟಲು ಹೋಗಬೇಡಿ.

3.ಮಂಕಿ ಪಾಕ್ಸ್ ವೈರಸ್ ಸೋಂಕಿನ ಲಕ್ಷಣಗಳನ್ನು ಹೊಂದಿರುವ ವ್ಯಕ್ತಿ ಬಳಸುವ ವಸ್ತುಗಳನ್ನು ಮುಟ್ಟಲು ಹೋಗಬೇಡಿ. ಇದರಿಂದ ರೋಗ ಹರಡುವ ಸಾಧ್ಯತೆ ಇದೆ.

4.ಕೈಗಳನ್ನು ಆಗಾಗ ಸೋಪು ಹಚ್ಚಿ ತೊಳೆಯಿರಿ

5. ಸದ್ಯದ ಪರಿಸ್ಥಿತಿಯಲ್ಲಿ ಯಾರನ್ನು ಚುಂಬಿಸಬೇಡಿ, ತಬ್ಬಿಕೊಳ್ಳಬೇಡಿ ಅಥವಾ ತಿನ್ನುವ ಪಾತ್ರೆಗಳು ಅಥವಾ ಕಪ್‌ಗಳನ್ನು ಇತರರೊಂದಿಗೆ ಹಂಚಿಕೊಳ್ಳಬೇಡಿ

6.ನಿಮ್ಮ ಕಣ್ಣುಗಳು, ಚರ್ಮ ಅಥವಾ ದೇಹದ ಇತರ ಯಾವುದೇ ಭಾಗಗಳನ್ನು ಮುಟ್ಟುವ ಮೊದಲು ಯಾವಾಗಲೂ ನಿಮ್ಮ ಕೈಗಳನ್ನು ತೊಳೆಯಿರಿ ಅಥವಾ ಸ್ವಚ್ಛಗೊಳಿಸಿ.

English summary

3 Severe monkeypox Symptoms in kannada

Monkeypox cases increasing: expert warn to notice 3 Severe monkeypox Symptoms, Read on...
Story first published: Friday, July 29, 2022, 12:03 [IST]
X
Desktop Bottom Promotion