Just In
- 8 hrs ago
ಯೋಧರ ಚಿತಾಭಸ್ಮ ಸಂಗ್ರಹಿಸಲು ಬರೋಬ್ಬರಿ 1.2 ಲಕ್ಷ ಕಿ.ಮೀ ದೂರ ಕ್ರಮಿಸಿದ ಬೆಂಗಳೂರಿನ ವ್ಯಕ್ತಿ, ದೇಶ ಸೇವೆ ಅಂದರೆ ಇದಲ್ವೇ?
- 12 hrs ago
ಲೈಂಗಿಕತೆಯು ನೀರಸವಾಗುತ್ತಿದೆ ಎಂದು ನಿಮ್ಮ ಪತಿಗೆ ನೀವು ಹೇಗೆ ಹೇಳುತ್ತೀರಿ? ಇಲ್ಲಿದೆ ಕೆಲವು ಟಿಪ್ಸ್!
- 16 hrs ago
Today Rashi Bhavishya: ಸೋಮವಾರದ ದಿನ ಭವಿಷ್ಯ: ತುಲಾ, ಮಕರ, ಕುಂಭ ರಾಶಿಯವರು ಆರೋಗ್ಯದ ಬಗ್ಗೆ ಕಾಳಜಿ ಇರಲಿ
- 1 day ago
ಆಗಸ್ಟ 14ರಿಂದ ಆಗಸ್ಟ 20ರ ವಾರ ಭವಿಷ್ಯ: ಮಿಥುನ, ಕರ್ಕ, ಕನ್ಯಾ ರಾಶಿಯವರಿಗೆ ಆರ್ಥಿಕ ಲಾಭದ ಸಾಧ್ಯತೆ
Don't Miss
- News
ದಾವಣಗೆರೆ: ಯುವತಿಯರ ಜೊತೆ ಸೇರಿ ಬ್ಲಾಕ್ಮೇಲ್ ಮಾಡುತ್ತಿದ್ದ ನಾಲ್ವರ ಬಂಧನ
- Movies
ಆಮಿರ್, ಹೃತಿಕ್ ನಂತರ ಈಗ ಶಾರುಖ್ ಖಾನ್ಗೆ ಬಾಯ್ಕಾಟ್ ಬಿಸಿ
- Sports
ಏಷ್ಯಾ ಕಪ್ 2022: ಭಾರತ ತಂಡವೇ ಚಾಂಪಿಯನ್ ಆಗಲಿದೆ ಎಂದ ಪಾಕ್ ಮಾಜಿ ನಾಯಕ
- Automobiles
ಅತ್ಯಾಧುನಿಕ ಸೌಲಭ್ಯವುಳ್ಳ ಐದು ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಅನಾವರಣಗೊಳಿಸಿದ ಮಹೀಂದ್ರಾ
- Finance
Best Under A Billion: ಫೋರ್ಬ್ಸ್ ಪಟ್ಟಿಯಲ್ಲಿ ಭಾರತಕ್ಕೆ 4ನೇ ಸ್ಥಾನ
- Technology
ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ನಲ್ಲಿ ಲ್ಯಾಂಗ್ವೇಜ್ ಸೆಟ್ಟಿಂಗ್ಸ್ ಬದಲಾಯಿಸುವುದು ಹೇಗೆ?
- Education
CSG Karnataka Recruitment 2022 : 128 ಪ್ರಾಜೆಕ್ಟ್ ಮ್ಯಾನೇಜರ್ ಮತ್ತು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
75ನೇ ಸ್ವಾತೊಂತ್ರೋತ್ಸವವನ್ನು ಸ್ಮರಿಸುತ್ತಾ ಸ್ವಾತಂತ್ರ್ಯ ಹೋರಾಟದೊಡನೆ ಸಂಬಂಧವಿರುವ ಭಾರತದ ಈ ಸ್ಮಾರಕಗಳು
ಕರ್ನಾಟದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹತ್ತೇ ದಿನದಲ್ಲಿಮೂರು ಪಟ್ಟು ಹೆಚ್ಚಳ
ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸಂಖ್ಯೆ ಹೆಚ್ಚುತ್ತಿದೆ. ಜೂನ್ 1ಕ್ಕೆ ಹೋಲಿಸಿದರೆ ಈಗ ಕೊರೊನಾ ಸಮಖ್ಯೆ ಮೂರು ಪಟ್ಟು ಹೆಚ್ಚಾಗಿದೆ.
ಶಾಲೆಗಳು ಪ್ರಾರಂಭವಾಗಿದೆ, ಆಫೀಸ್ಗಳು ತಮ್ಮ ಉದ್ಯೋಗಿಗಳನ್ನು ಆಫೀಸ್ಗೆ ಬರಲು ಹೇಳುತ್ತಿದ್ದಾರೆ, ಜನ ಜೀವನ ಮೊದಲಿನ ಸ್ಥಿತಿಗೆ ಮರಲಿದೆ ಹೀಗಿರುವಾಗ ಮತ್ತೆ ಕೊರೊನಾ ಅಧಿಕವಾಗುತ್ತಿರುವುದು ಈಗ ಮತ್ತೆ ಆತಂಕಕ್ಕೆ ಕಾರಣವಾಗಿದೆ.

ಮೂರೂವರೆ ತಿಂಗಳ ಬಳಿಕ ಮತ್ತೆ ಕೊರೊನಾ ಸಂಖ್ಯೆ ಹೆಚ್ಚಳ
ಕರ್ನಾಟಕದಲ್ಲಿ ಕೊರೊನಾ ಸಂಖ್ಯೆ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿತ್ತು, ಕೆಲವೊಂದು ಜಿಲ್ಲೆಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಶೂನ್ಯವಾಗಿತ್ತು. ಆದರೆ ಮೂರೂವರೆ ತಿಂಗಳ ಬಳಿಕ ಕೊರೊನಾ ಸೋಂಕಿತರ ಸಂಖ್ಯೆ 500 ದಾಟಿದೆ. ಶನಿವಾರ ಅಂದರೆ ಜೂನ್ 11ಕ್ಕೆ 562 ಕೊರೊನಾ ಸೋಂಕಿತರು ಪತ್ತೆಯಾಗಿದ್ದರು. Covid -19 Information Portal ಮಾಹಿತಿ ಪ್ರಕಾರ ಇಂದಿಗೆ ಕರ್ನಾಟಕದಲ್ಲಿ 3, 882 ಸಕ್ರೀಯ ಕೇಸ್ಗಳಿವೆ.

ಬೆಂಗಳೂರಿನಲ್ಲಿ ಅಧಿಕ ಕೇಸ್
ಜೂನ್ 1ಕ್ಕೆ 178 ಕೊರೊನಾ ಸೋಂಕಿತರು ಪತ್ತೆಯಾಗಿದ್ದರು, ಹತ್ತೇ ದಿನದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 3 ಪಟ್ಟು ಹೆಚ್ಚಾಗಿದೆ. ಆದರೆ ಕಳೆದ ಸಾವಿನ ಸಂಖ್ಯೆ ತುಂಬಾ ಕಡಿಮೆಯಿದೆ ಹಾಗೂ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ತುಂಬಾ ಕಡಿಮೆ ಇದೆ. ತುಂಬಾ ಕೊರೊನಾ ಸೋಂಕಿತರು ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ.

ಯಾವುದೇ ಹೊಸ ತಳಿ ಪತ್ತೆಯಾಗಿಲ್ಲ
ಕರ್ನಾಟಕದಲ್ಲಿ ಯಾವುದೇ ಹೊಸ ತಳಿ ವೈರಸ್ ಕಂಡು ಬಂದಿಲ್ಲ. ಈಗ ಹರಡುತ್ತಿರುವುದು ಒಮಿಕ್ರಾನ್ ವೈರಸ್ ಆಗಿದೆ. ಒಮಿಕ್ರಾನ್ ಈಗಾಗಲೇ ಒಮ್ಮೆ ಬಂದು ಹೋಗಿರುವುದರಿಂದ ಇದರಿಂದ ನಾಲ್ಕನೇ ಅಲೆ ಉಂಟಾಗಲ್ಲ ಎಂಬುವುದು ತಜ್ಞರ ಅಭಿಪ್ರಾಯವಾಗಿದೆ.

ಕೊರೊನಾ ನಿಯಮಗಳನ್ನು ತಪ್ಪದೆ ಪಾಲಿಸಿ
* ಕೊರೊನಾ ಬಗ್ಗೆ ಈ ಹಿಂದೆ ನಿರ್ಲಕ್ಷ್ಯ ತೋರಿ ಎಷ್ಟು ನಷ್ಟ ಅನುಭವಿಸಿದ್ದೇವೆ ಎಂಬುವುದು ಜನರ ಅನುಭವಕ್ಕೆ ಬಂದಿದೆ
* ಆದ್ದರಿಂದ ಈ ಬಾರಿ ಕೊರೊನಾ ನಿಯಮಗಳನ್ನು ತಪ್ಪದೆ ಪಾಲಿಸಿ, ಕೊರೊನಾ ಹರಡದಂತೆ ಮುನ್ನೆಚ್ಚರಿಕೆವಹಿಸಿ.