For Quick Alerts
ALLOW NOTIFICATIONS  
For Daily Alerts

ಪುರುಷರಿಗೆ ನಿಮಿರುವ ಸಮಸ್ಯೆ ಬರಬಾರದೆಂದರೆ-ಈ ಕಟ್ಟ ಆಹಾರ ಪದಾರ್ಥಗಳಿಂದ ದೂರ ಇರಬೇಕು!

|

ಲೈಂಗಿಕ ಕ್ರಿಯೆ ಅಥವಾ ಸಂಭೋಗ ಎನ್ನುವುದು ಜೀವನ ಸಮುದಾಯಗಳ ಸಾಮಾನ್ಯ ಕ್ರಿಯೆ. ಲೈಂಗಿಕ ಕ್ರಿಯೆ ಎನ್ನುವುದು ಮನುಷ್ಯನಿಗೆ ಅತ್ಯಂತ ಅಗತ್ಯವಾದ ಸಂಗತಿ. ಯಾವ ವ್ಯಕ್ತಿ ಜೀವನದಲ್ಲಿ ಉತ್ತಮವಾದ ಸಂಭೋಗ ನಡೆಸುತ್ತಾನೆ? ಹಾಗೂ ಅದರಿಂದ ಸಾಕಷ್ಟು ಸಂತೋಷವನ್ನು ಅನುಭವಿಸುತ್ತಾನೋ ಅಂತಹವನು ಮಾನಸಿಕವಾಗಿ ಹಾಗೂ ದೈಹಿಕವಾಗಿ ಹೆಚ್ಚು ಆರೋಗ್ಯವಂತರಾಗಿ ಇರುತ್ತಾರೆ ಎಂದು ಹೇಳಲಾಗುವುದು. ಪ್ರಾಯಕ್ಕೆ ಬಂದ ಪ್ರತಿಯೊಂದು ಜೀವಿಯು ಲೈಂಗಿಕ ಕ್ರಿಯೆಯ ಬಗ್ಗೆ ಹೆಚ್ಚು ಆಸಕ್ತರಾಗುತ್ತಾರೆ. ಜೊತೆಗೆ ಅದನ್ನು ಅನುಭವಿಸಲು ಮುಂದಾಗುವುದು ಸಹಜ.

ಸಮಾಜದಲ್ಲಿ ಆರೋಗ್ಯಕರ ವಾತಾವರಣವನ್ನು ಕಾಪಾಡುವ ದೃಷ್ಟಿಯಿಂದ ಕುಂಟುಂಬ ವ್ಯವಸ್ಥೆಯನ್ನು ಮಾಡಲಾಗಿದೆ. ಈ ನಿಯಮದ ಅಡಿಯಲ್ಲಿಯೇ ವ್ಯಕ್ತಿ ವಿವಾಹದ ಬಂಧನಕ್ಕೆ ಒಳಗಾಗಬೇಕು. ಜೀವನದ ಪ್ರತಿಯೊಂದು ಹಂತದಲ್ಲಿ ಬದಲಾಗುವ ದೈಹಿಕ ಹಾಗೂ ಮಾನಸಿಕ ಭಾವನೆಗಳಿಗೆ ಅನುಗುಣವಾಗಿ ವರ್ತನೆ ಹಾಗೂ ಅಭಿಲಾಶೆಗಳನ್ನು ಪೂರೈಸಿಕೊಳ್ಳಬೇಕು. ವ್ಯಕ್ತಿಯ ಬೆಳವಣಿಗೆ ಹೊಂದುತ್ತಿದ್ದಂತೆ ದೇಹದ ರಚನೆ ಹಾಗೂ ಮಾನಸಿಕ ಸ್ಥಿತಿಯಲ್ಲೂ ಸಾಕಷ್ಟು ರೀತಿಯ ಬದಲಾವಣೆಗಳು ಜರುಗುತ್ತಲೇ ಇರುತ್ತವೆ. ಅವುಗಳನ್ನು ನಿಭಾಯಿಸುವುದು ಅಥವಾ ನಿಯಂತ್ರಣದಲ್ಲಿ ಇಟ್ಟುಕೊಂಡು ಆರೋಗ್ಯವಂತ ಜೀವನ ನಡೆಸುವುದು ಉತ್ತಮ.

ಲೈಂಗಿಕ ಆಸಕ್ತಿ

ಲೈಂಗಿಕ ಆಸಕ್ತಿ

ವ್ಯಕ್ತಿ ಪ್ರಬುದ್ಧತೆ ಅಥವಾ ಪ್ರಾಯಕ್ಕೆ ಬಂದಾಗ ಲೈಂಗಿಕ ಆಸಕ್ತಿ ಹೆಚ್ಚಾಗಿರುತ್ತದೆ. ಅಂತೆಯೇ ಲೈಂಗಿಕ ಕ್ರಿಯೆಗೆ ಬೇಕಾದ ರೀತಿಯಲ್ಲಿ ದೇಹದ ಅಂಗಾಂಗಗಳ ರಚನೆಯು ಸಿದ್ಧಗೊಂಡಿರುತ್ತವೆ. ಅದರಲ್ಲೂ ಪುರುಷರಿಗೆ ಲೈಂಗಿಕ ಕ್ರಿಯೆಯ ಪ್ರಚೋದನೆಯು ಅತ್ಯಂತ ಶೀಘ್ರವಾಗಿ ಆಗುವುದು. ಶಿಶ್ನಗಳು ನಿಮಿರಿಕೊಳ್ಳುವುದು, ಲೈಂಗಿಕ ಆಸಕ್ತಿಯನ್ನು ಕೆರಳಿಸುವುದು ಸಹಜವಾದ ಪ್ರಕ್ರಿಯೆಯಾಗಿರುತ್ತದೆ. ಆದರೆ ಅದರ ನಿಯಂತ್ರಣ ಹಾಗೂ ಮಾನಸಿಕ ಸಿದ್ಧತೆಯನ್ನು ಸರಿಯಾಗಿ ಹೊಂದಿರಬೇಕು. ಪುರಾತನ ಕಾಲದಲ್ಲಿ ಉತ್ತಮ ಆಹಾರಗಳು ಹಾಗೂ ದೈಹಿಕ ವ್ಯಾಯಾಮಗಳ ಪರಿಣಾಮವಾಗಿ ಪುರುಷರಲ್ಲಿ ಲೈಂಗಿಕ ಆಸಕ್ತಿಯನ್ನು ದೀರ್ಘ ವಯಸ್ಸಿನವರೆಗೂ ಹೊಂದಿರುತ್ತಿದ್ದರು ಎನ್ನಲಾಗುವುದು. ಈ ಹಿನ್ನೆಲೆಯಲ್ಲಿಯೇ ಮಡದಿಯನ್ನು ಬೇಗ ಕಳೆದುಕೊಂಡು 50-60 ವರ್ಷಗಳಾಗಿದ್ದರೂ ಇನ್ನೊಂದು ವಿವಾಹ ಆಗುತ್ತಿದ್ದರು ಎಂದು ಹೇಳಲಾಗುವುದು.

ಪುರುಷರು ಲೈಂಗಿಕ ಆಸಕ್ತಿಯನ್ನು ಬಹಳ ಚಿಕ್ಕ ವಯಸ್ಸಿನಲ್ಲಿಯೇ ಕಳೆದುಕೊಳ್ಳುತ್ತಿದ್ದಾರೆ

ಪುರುಷರು ಲೈಂಗಿಕ ಆಸಕ್ತಿಯನ್ನು ಬಹಳ ಚಿಕ್ಕ ವಯಸ್ಸಿನಲ್ಲಿಯೇ ಕಳೆದುಕೊಳ್ಳುತ್ತಿದ್ದಾರೆ

ಇತ್ತೀಚಿನ ದಿನಗಳಲ್ಲಿ ಪುರುಷರು ಲೈಂಗಿಕ ಆಸಕ್ತಿಯನ್ನು ಬಹಳ ಚಿಕ್ಕ ವಯಸ್ಸಿನಲ್ಲಿಯೇ ಕಳೆದುಕೊಳ್ಳುತ್ತಾರೆ ಎನ್ನಲಾಗುವುದು. ಇದಕ್ಕೆ ಕಾರಣ ಪುರುಷರು ಸೇವಿಸುವ ಆಹಾರ, ಹವ್ಯಾಸಗಳು ಹಾಗೂ ಸೂಕ್ತ ರೀತಿಯ ದೈಹಿಕ ಶ್ರಮ ಹೊಂದದೆ ಇರುವುದು ಎಂದು ಹೇಳಲಾಗುತ್ತದೆ. ಪುರುಷರು ಲೈಂಗಿಕ ಆಸಕ್ತಿ ಹೊಂದಿದ್ದು, ಶಿಶ್ನಗಳ ನಿಮಿರುವಿಕೆ ಉಂಟಾಗದೆ ಹೋದರೆ ಲೈಂಗಿಕ ಸುಖವನ್ನು ಪಡೆದುಕೊಳ್ಳಲು ಕಷ್ಟವಾಗುವುದು. ಅಂತೆಯೇ ನಿಮಿರುವಿಕೆಯು ಪದೇ ಪದೇ ಆಗುತ್ತಲೇ ಇದ್ದರೂ ಸಮಸ್ಯೆ ಉಂಟಾಗುವುದು. ಅನುಚಿತ ಆಹಾರ ಪದಾರ್ಥಗಳ ಸೇವನೆ ಹಾಗೂ ಪೋಷಕಾಂಶಗಳ ಕೊರತೆ ಇದ್ದರೆ ಶಿಶ್ನಗಳು ನಿಮಿರುವಿಕೆಗೆ ಒಳಗಾಗುವುದಿಲ್ಲ ಎಂದು ಹೇಳಲಾಗುವುದು.

Most Read: ಪುರುಷರ ಸೆಕ್ಸ್ ಲೈಫ್ ಹೆಚ್ಚಿಸುವ ನೈಸರ್ಗಿಕ ಆಹಾರಗಳು

ಪುರುಷರಲ್ಲಿ ನಿಮಿರುವಿಕೆಯ ಸಮಸ್ಯೆ

ಪುರುಷರಲ್ಲಿ ನಿಮಿರುವಿಕೆಯ ಸಮಸ್ಯೆ

ಸಂಗಾತಿಯೊಂದಿಗೆ ಇರುವಾಗ ಅಥವಾ ಸಂಗಾತಿ ಲೈಂಗಿಕ ಕ್ರಿಯೆಯನ್ನು ಬಯಸುತ್ತಿರುವಾಗ ಪುರುಷರಲ್ಲಿ ನಿಮಿರುವಿಕೆಯ ಸಮಸ್ಯೆ ಇದ್ದರೆ ಸಂಭೋಗ ಕ್ರಿಯೆ ನಡೆಸಲು ಸಾಧ್ಯವಾಗದು. ಜೊತೆಗೆ ಪುರುಷರು ಅಂತಹ ಸಂದರ್ಭದಲ್ಲಿ ಸಾಕಷ್ಟು ಮಾನಸಿಕ ಹಿಂಸೆ, ಭಯ ಹಾಗೂ ಅವಮಾನದ ರೀತಿಯಲ್ಲಿ ಪರಿಸ್ಥಿತಿಯನ್ನು ಸ್ವೀಕರಿಸುತ್ತಾರೆ. ಶಿಶ್ನವು ಆರೋಗ್ಯಯುತವಾಗಿ ನಿಮಿರುವಿಕೆಯನ್ನು ಹೊಂದಬೇಕು ಎಂದರೆ ಅದು ಅವರ ಮಿದುಳಿನಲ್ಲಿ ಪ್ರಚೋದನೆ ಆಗಬೇಕು. ಅಲ್ಲದೆ ಹಾರ್ಮೋನ್ಗಳು ಪ್ರಚೋದನೆ ನೀಡಬೇಕು. ಶಿಶ್ನಗಳನ್ನು ಕಾರ್ಯನಿರ್ವಹಿಸುವಂತೆ ಮಾಡುವಲ್ಲಿ ಟೆಸ್ಟೋಸ್ಟೆರಾನ್ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇದರ ಪ್ರಚೋದನೆ ಉತ್ತಮವಾಗಿ ಇರಬೇಕು ಅಥವಾ ನೀವು ಬಯಸಿದಾಗ ಸಂಗಾತಿಯೊಂದಿಗೆ ಉತ್ತಮ ಸಂಭೋಗ ನಡೆಸಬೇಕು ಎಂದಾದರೆ ಲೇಖನದ ಮುಂದಿನ ಭಾಗದಲ್ಲಿ ವಿವರಿದಲಾದ ಆಹಾರಗಳಿಂದ ದೂರ ಸರಿಯುವುದು ಒಳಿತು.

ಸೋಯಾ

ಸೋಯಾ

ಸೋಯಾ ಆರೋಗ್ಯಕ್ಕೆ ಉತ್ತಮವಾದ ಆಹಾರ ಪದಾರ್ಥ ಆಗಿರಬಹುದು. ಆದರೆ ಅದನ್ನು ನಿಯಮಿತವಾಗಿ ಸೇವಿಸಬೇಕು. ಇಲ್ಲವಾದರೆ ದೇಹದ ಮೇಲೆ ಗಂಭೀರ ಪ್ರಭಾವ ಬೀರುವುದು. ಅದರಲ್ಲೂ ಪುರುಷರಿಗೆ ಶಿಶ್ನಗಳ ನಿಮಿರುವಿಕೆಯ ಮೇಲೆ ಹೆಚ್ಚಿನ ಪ್ರಭಾವ ಬೀರುವುದು. ಹಿಂದಿನ ರಾತ್ರಿ ಹಾಗೂ ಅದರ ಹಿಂದಿನ ದಿನ ನಿಯಮಿತವಾಗಿ ಸೋಯಾವನ್ನು ಸೇವಿಸುತ್ತಾ ಇದ್ದಿದ್ದೀರಿ ಎಂದಾದರೆ ಅದು ಮುಂದಿನ ದಿನದಲ್ಲಿ ನಿಮಿರುವಿಕೆಯಲ್ಲಿ ತೊಂದರೆಯನ್ನುಂಟುಮಾಡುವುದು. ಕ್ಯಾನ್ಸರ್ ಎಪಿಡೆಮಿಯಾಲಜಿ ಬಯೋಮಾರ್ಕರ್ಸ್ ಅಂಡ್ ಪ್ರಿವೆನ್ಷನ್ಅಲ್ಲಿ ಪ್ರಕಟವಾದ ಒಂದು ಅಧ್ಯಯನದ ಪ್ರಕಾರ ಶುದ್ಧ ಸೋಯಾ ಪ್ರೋಟೀನ್ ಪುಡಿಯನ್ನು ಎರಡು ಚಮಚ ಸ್ವೀಕರಿಸಿದರೆ ಪುರುಷರಿಗೆ ಡೆಸ್ಟೋಸ್ಟೆರಾನ್ ಮಟ್ಟವು ಕುಸಿತವನ್ನು ಕಾಣುವುದು. ಇದು ನಾಲ್ಕು ವಾರಗಳ ಕಾಲ ಪ್ರಭಾವವನ್ನು ಬೀರುವುದು. ಅಲ್ಲದೆ ನಾಲ್ಕು ವಾರದ ನಂತರ ಶೇ.19ರಷ್ಟು ಕಡಿಮೆಯಾಗುವುದು ಎಂದು ಹೇಳಲಾಗಿದೆ.

ವೈಟ್ ಬ್ರೆಡ್ ಮತ್ತು ಸಂಸ್ಕರಿಸಿದ ಕಾಬ್ರ್ಸ್

ವೈಟ್ ಬ್ರೆಡ್ ಮತ್ತು ಸಂಸ್ಕರಿಸಿದ ಕಾಬ್ರ್ಸ್

ವೈಟ್ ಬ್ರೆಡ್ ಮತ್ತು ಸಂಸ್ಕರಿಸಿದ ಕಾಬ್ರ್ಸ ಸೇವಿಸುವುದರಿಂದ ಅತಿಯಾದ ತೂಕ ಉಂಟಾಗುವುದು. ಇಂತಹ ಆಹಾರಗಳನ್ನು ಸೇವಿಸುವುದರಿಂದ ಈಸ್ಟ್ರೋಜೆನ್ ಮತ್ತು ಟೆಸ್ಟೋಸ್ಟೆರಾನ್ ಮಟ್ಟವು ಕಡಿಮೆಯಾಗುವುದು. ಜೊತೆಗೆ ಅನಿಯಮಿತವಾಗಿ ದೇಹದ ತೂಕವು ಹೆಚ್ಚುವುದು. ಯುನಿವರ್ಸಿಟಿ ಆಫ್ ಬಫಲೋ ಅಧ್ಯಯನದ ಪ್ರಕಾರ ಶೇ.40ರಷ್ಟು ಮಧುಮೇಹ, ಬೊಜ್ಜು ಬರುವ ಸಾಧ್ಯತೆಗಳು ಇರುತ್ತವೆ. ಜೊತೆಗೆ ಲೈಂಗಿಕ ಜೀವನದ ಬಗ್ಗೆ ಆಸಕ್ತಿಯನ್ನು ಕಳೆದುಕೊಳ್ಳುತ್ತಾರೆ ಎಂದು ಹೇಳಲಾಗುವುದು.

Most Read: ಬಲವಾದ ಆರೋಗ್ಯಕರ ನಿಮಿರುವಿಕೆ ಪಡೆಯುವುದು ಹೇಗೆ?

ಅತಿಯಾಗಿ ಡ್ರಿಂಕ್ಸ್ ಮಾಡುವುದು

ಅತಿಯಾಗಿ ಡ್ರಿಂಕ್ಸ್ ಮಾಡುವುದು

ಆಲ್ಕೋಹಾಲ್ ಕುಡಿಯುವುದು ಇಂದಿನ ಯುವ ಪೀಳಿಗೆಗೆ ಒಂದು ಹವ್ಯಾಸ ಹಾಗೂ ಸಂತೋಷದ ಸಂಗತಿ. ಆದರೆ ಇದು ನಿಧಾನವಾಗಿ ನಿಮ್ಮ ಮೆದುಳಿನ ಮೇಲೆ ಪ್ರಭಾವ ಬೀರುವುದು. ಜೊತೆಗೆ ಹಾರ್ಮೋನ್ಗಳ ಮೇಲೆ ಪ್ರಭಾವ ಬೀರುವುದರ ಮೂಲಕ ಲೈಂಗಿಕ ಆಸಕ್ತಿಯನ್ನು ಕಡಿಮೆ ಮಾಡುವುದು. ಕೆಲವು ಅಧ್ಯಯನಗಳ ಪ್ರಕಾರ ಈ ರೀತಿಯ ಪಾನೀಯಗಳು ಅತಿಯಾಗಿ ಕುಡಿಯುವುದರಿಂದ ಟೆಸ್ಟೋಸ್ಟೆರಾನ್ ಉತ್ಪಾದನೆಯು ನಿಗ್ರಹಿಸಲ್ಪಡುತ್ತದೆ. ಸಣ್ಣ ಪ್ರಮಾಣದಲ್ಲಿ ಇಲ್ಲವೇ ಒಂದು ಅಥವಾ ಎರಡು ಸಿಪ್ಗಳನ್ನು ಸೇವಿಸುವುದರಿಂದ ಯಾವುದೇ ಪರಿಣಾಮ ಉಂಟಾಗದು ಎಂದು ಹೇಳಲಾಗುವುದು.

ಬಾಟಲ್ ನೀರು

ಬಾಟಲ್ ನೀರು

ಮನೆಯಿಂದ ಆಚೆ ಹೋಗುವಾಗ ನೀರನ್ನು ಪ್ಲಾಸ್ಟಿಕ್ ಬಾಟಲಿಯಲ್ಲಿ ಕೊಂಡೊಯ್ಯುವುದು ಸಾಮಾನ್ಯ. ಪ್ಲಾಸ್ಟಿಕ್ ಬಾಟಲಿ ಹಾಗೂ ಪಾತ್ರೆಗಳಲ್ಲಿ ರಾಸಾಯನಿಕ ಪದಾರ್ಥಗಳು ಅಡಕವಾಗಿರುತ್ತವೆ. ಅವುಗಳಲ್ಲಿ ಸಂಗ್ರಹಿಸಿಟ್ಟಿಕೊಳ್ಳುವ ಆಹಾರವನ್ನು ಸೇವಿಸುವುದರಿಂದ ಆರೋಗ್ಯ ಸಮಸ್ಯೆ ಹೆಚ್ಚುವುದು. ಫರ್ಟಿಲಿಟಿ ಮತ್ತು ಸ್ಟೆರಿಲಿಟಿ ಎಂಬ ಜರ್ನ್ಲ್ ಸ್ಲೊವೆನಿಯನ್ ಅಧ್ಯಯನಗಳ ಪ್ರಕಾರ ಪುರುಷರಲ್ಲಿ ಮೂತ್ರದ ಸಾಂದ್ರತೆಯ ಮೇಲೆ ಪ್ರಭಾವ ಬೀರುವುದು. ಪುರುಷರಲ್ಲಿ ವೀರ್ಯಾಣುಗಳ ಮಟ್ಟ ಕುಗ್ಗುವುದು. ಹಾರ್ಮೋನ್ಗಳ ವ್ಯತ್ಯಾಸ ಹಾಗೂ ಶಿಶ್ನಗಳು ನಿಮಿರುವಿಕೆಯ ಸಾಮಥ್ರ್ಯವನ್ನು ಕಳೆದುಕೊಳ್ಳುತ್ತವೆ ಎಂದು ಹೇಳಲಾಗುವುದು.

ಪೂರ್ವಸಿದ್ಧಗೊಳಿಸಿರುವ ಸೂಪ್ಗಳು

ಪೂರ್ವಸಿದ್ಧಗೊಳಿಸಿರುವ ಸೂಪ್ಗಳು

ಬಾಟಲ್, ಕ್ಯಾನ್ ಅಥವಾ ಕಾಗದದ ಡಬ್ಬಗಳಲ್ಲಿ ಸಂಗ್ರಹಿಸಡುವ ಆಹಾರ ಪದಾರ್ಥಗಳು ಮತ್ತು ಸೂಪ್ಗಳು ಆರೋಗ್ಯಕ್ಕೆ ಉತ್ತಮವಾದುದ್ದಲ್ಲ. ಇದರಲ್ಲಿ ರಾಸಾಯನಿಕ ಪದಾರ್ಥಗಳು ಹೆಚ್ಚಾಗಿರುತ್ತವೆ. ಅವು ಆರೋಗ್ಯದ ಮೇಲೆ ನೇರವಾಗಿ ಪ್ರಭಾವ ಬೀರುತ್ತವೆ. ರಕ್ತದೊತ್ತಡದ ಮೇಲೆ ಗಂಭೀರವಾದ ಪರಿಣಾಮ ಬೀರುವುದು. ದೇಹದ ಕೆಲವು ಭಾಗದಲ್ಲಿ ರಕ್ತದ ಹರಿವು ಕಡಿಮೆಯಾಗುವುದು. ಪುರುಷರಿಗೆ ಶಿಶ್ನಗಳ ಭಾಗದಲ್ಲೂ ಪ್ರಭಾವ ಬೀರುವುದು. ರಕ್ತದ ಹರಿವು ಆರೋಗ್ಯಕರ ರೀತಿಯಲ್ಲಿ ಇಲ್ಲದೆ ಹೋದರೆ ಶಿರ್ಶನಗಳು ನಿಮಿರುವಿಕೆಯನ್ನು ಕಳೆದುಕೊಳ್ಳುವುದು.

MOst Read: ಸೆಕ್ಸ್ ವೇಳೆ ಪುರುಷರಿಗೆ ಎದುರಾಗುವ ನೋವಿಗೆ ಕಾರಣಗಳೇನು?

ಫ್ಲೇವರ್ಡ್ ಸೋಡಾ

ಫ್ಲೇವರ್ಡ್ ಸೋಡಾ

ಯುರೋಲಜಿ ಸೆಂಟ್ರಲ್ ಯುರೋಪಿಯನ್ ಜರ್ನಲ್ ಅಲ್ಲಿ ಪ್ರಕಟವಾದ ಅಧ್ಯಯನವೊಂದರ ಮಾಹಿತಿಯ ಪ್ರಕಾರ ಫ್ಲೇವರ್ಡ್ ಸೋಡಾ ಆರೋಗ್ಯದ ಮೇಲೆ ಗಂಭೀರವಾದ ಪ್ರಭಾವವನ್ನು ಬೀರುವುದು. ಇದರಲ್ಲಿ ಕೃತಕವಾದ ಸಿಹಿಯ ಗುಣವು ಇರುತ್ತದೆ. ಇದು ದೇಹವನ್ನು ಪ್ರವೇಶಿಸಿದಾಗ ನಿಮಿರುವಿಕೆಯ ಅಪಸಾಮಾನ್ಯತೆಯ ಅಪಾಯವನ್ನು ಹೆಚ್ಚಿಸುವುದು. ಅಲ್ಲದೆ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಅಲ್ಲದೆ ಶಿಶ್ನದಲ್ಲಿ ನಿಮಿರುವಿಕೆಯನ್ನು ಕುಗ್ಗಿಸುತ್ತದೆ.

ಬೆಳೆಸಿದ ಮೀನುಗಳು

ಬೆಳೆಸಿದ ಮೀನುಗಳು

ಇತ್ತೀಚಿನ ದಿನಗಳಲ್ಲಿ ಮೀನುಗಳನ್ನು ಸಾಕುವುದು ಹಾಗೂ ಉತ್ಪಾದನೆಯನ್ನು ಕೃತಕವಾದ ವಾತಾವರಣವನ್ನು ಸೃಷ್ಟಿಸುವುದರ ಮೂಲಕ ಬೆಳೆಸಲಾಗುವುದು. ಅಂತಹಲ್ಲಿ ಬೆಳೆದ ಮೀನುಗಳನ್ನು ಮಾರುಕಟ್ಟೆಯಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ವಿದೇಶಗಳಲ್ಲಿ ಈ ಪರಿಪಾಠ ಹೆಚ್ಚಾಗಿದೆ ಎಂದು ಹೇಳಲಾಗುವುದು. ಹೀಗೆ ಬೆಳೆಸುವಾಗ ಸಾಕಷ್ಟು ಮಾಲಿನ್ಯ ನಿಯಂತ್ರಕಗಳನ್ನು ಬಳಸಲಾಗುವುದು. ಕೆಲವು ವಿಶ್ವ ವಿದ್ಯಾಲಯಗಳು ನಡೆಸಿದ ಅಧ್ಯಯನಗಳ ಪ್ರಕಾರ ಕೃತಕವಾಗಿ ಬೆಳೆಸುವ ಕೃಷಿ ಉತ್ಪನ್ನಗಳಲ್ಲಿ ಅಧಿಕ ಪ್ರಮಾಣದ ರಾಸಾಯನಿಕ ಪದಾರ್ಥಗಳಿರುತ್ತವೆ. ಇವು ಕ್ಯಾನ್ಸರ್ ಹಾಗೂ ಇನ್ನಿತರ ಆರೋಗ್ಯ ಸಮಸ್ಯೆಯನ್ನು ಸೃಷ್ಟಿಸುತ್ತದೆ. ಜೊತೆಗೆ ಪುರುಷರಲ್ಲಿ ಲೈಂಗಿಕ ಜೀವನದ ಮೇಲೆ ಪ್ರಭಾವ ಬೀರುವುದು. ಹಾರ್ಮೋನ್ಗಳ ವ್ಯತ್ಯಾಸ ಹಾಗೂ ಶಿಶ್ನಗಳ ನಿಮಿರುವಿಕೆಯಲ್ಲಿ ದುರ್ಬಲತೆಯನ್ನು ಪಡೆದುಕೊಳ್ಳುವುದು.

Most Read: ಸೆಕ್ಸ್ ಬಗ್ಗೆ ಇರುವ ಈ ವಿಷಯಗಳನ್ನು ನಿಮ್ಮಲ್ಲಿ ಯಾರೂ ಹೇಳುವುದಿಲ್ಲ!

ಮೈಕ್ರೋವೇವಬಲ್ ಪಾಪ್ಕಾರ್ನ್

ಮೈಕ್ರೋವೇವಬಲ್ ಪಾಪ್ಕಾರ್ನ್

ಮೈಕ್ರೋವೇವಬಲ್ ಪಾಪ್ಕಾರ್ನ್ ನಿಮ್ಮ ಆರೋಗ್ಯಕ್ಕೆ ಅತ್ಯಂತ ಹಾನಿಕಾರಕ ಆಹಾರವಾಗಿರುತ್ತದೆ. ಇದನ್ನು ಸೇವಿಸುವುದರಿಂದ ಪುರುಷರಲ್ಲಿ ಟೆಸ್ಟೋಸ್ಟೆರಾನ್ ಉತ್ಪಾದನೆ ಕಡಿಮೆಯಾಗುವುದು. ವಯಸ್ಸಾದ ಬಳಿಕ ಇಂತಹ ಸಮಸ್ಯೆ ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ ವಯಸ್ಸಿನಲ್ಲಿ ಈ ರೀತಿಯ ಸಮಸ್ಯೆಗಳು ಎದುರಾದರೆ ಅದು ನಿಮ್ಮ ಸಂಬಂಧಗಳ ನಡುವೆ ಬಿರುಕು ಹಾಗೂ ನಿಮ್ಮ ಮಾನಸಿಕ ಆರೋಗ್ಯದ ಮೇಲೂ ಪ್ರಭಾವ ಬೀರುವುದು. ಪುರುಷರಲ್ಲಿ ಟೆಸ್ಟೋಸ್ಟೆರಾನ್ ಕಡಿಮೆಯಾದಂತೆ ಶಿಶ್ನಗಳು ನಿಮಿರುವಿಕೆಯನ್ನು ಕಳೆದುಕೊಳ್ಳುತ್ತವೆ. ಜೊತೆಗೆ ಸಂತಾನ ನ್ಯೂನತೆಯನ್ನು ಅನುಭವಿಸಬೇಕಾಗುವುದು.

English summary

Worst Foods that can effects mens Erection

In terms of performance, it’s been said that the penis has a mind of its own. Which means a good erection isn’t always a guarantee. That doesn’t mean you can’t give it some brain food. And on the flip side, certain foods and drinks can have been shown to impair male sexual performance by either directly or indirectly messing with hormone levels. The penis is dependent on testosterone to function properly, and anything that lowers
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more