For Quick Alerts
ALLOW NOTIFICATIONS  
For Daily Alerts

2024 ವಿಶ್ವ ಕ್ಷಯ ರೋಗ ದಿನ: ಕ್ಷಯ ರೋಗದ ಅಪಾಯಗಳೇನು, ತಡೆಗಟ್ಟುವುದು ಹೇಗೆ?

|

ಮಾರ್ಚ್ 24ನ್ನು ವಿಶ್ವದೆಲ್ಲೆಡೆಯಲ್ಲಿ ಟಿವಿ ದಿನವನ್ನಾಗಿ ಆಚರಿಸಲಾಗುತ್ತದೆ. ಯಾಕೆಂದರೆ ಟಿಬಿಯ ಬಗ್ಗೆ ಜಾಗೃತಿ ಮೂಡಿಸುವುದು ಮುಖ್ಯ ಉದ್ದೇಶ ಆಗಿದೆ. ವಿಶ್ವದೆಲ್ಲೆಡೆಯಲ್ಲಿ ಕಾಯಿಲೆಗಳಿಂದ ಜನರು ಸಾಯುವುದಕ್ಕೆ ಇದು ಒಂದು ಕಾರಣವಾಗಿದೆ.

Tuberculosis

ಕ್ಷಯ ರೋಗವು ಒಬ್ಬರಿಂದ ಮತ್ತೊಬ್ಬರಿಗೆ ಹರಡಬಹುದು. ಯಾಕೆಂದರೆ ಇದು ಗಾಳಿಯಲ್ಲಿ ಹರಡುವಂತಹ ರೋಗವಾಗಿದೆ. ಕ್ಷಯ ರೋಗದ ಕೀಟಾಣುಗಳು ಒಬ್ಬ ವ್ಯಕ್ತಿಯ ಕೆಮ್ಮು, ಸೀನು ಮತ್ತು ಕಫದಿಂದ ಹರಡಬಹುದು.

ಕ್ಷಯ ರೋಗದಿಂದಾಗಿ ಹೆಚ್ಚಾಗಿ ಶ್ವಾಸಕೋಶದ ಮೇಲೆ ದೀರ್ಘ ಪರಿಣಾಮ ಬೀರುವುದು. ಆದರೆ ಕೆಲವೊಂದು ಸಲ ದೇಹದ ಇತರ ಭಾಗಗಳ ಮೇಲೆ ಕೂಡ ಇದು ಪರಿಣಾಮ ಉಂಟು ಮಾಡುವುದು. ದೇಹದಲ್ಲಿ ಪ್ರತಿರೋಧಕ ಶಕ್ತಿಯು ಕಡಿಮೆ ಇರುವಂತಹ ವ್ಯಕ್ತಿಗಳಿಗೆ ಕ್ಷಯ ರೋಗವು ಹರಡುವ ಸಾಧ್ಯತೆಯು ಹೆಚ್ಚಾಗಿರುವುದು.

Most Read: ದೈನಂದಿನ ಆಹಾರ ಪಥ್ಯ ಹೀಗಿದ್ದರೆ, 'ಕ್ಷಯ ರೋಗಕ್ಕೆ' ಮದ್ದೇ ಬೇಡ!

ಕ್ಷಯ ರೋಗದ ಲಕ್ಷಣಗಳು

ಕ್ಷಯ ರೋಗದ ಲಕ್ಷಣಗಳನ್ನು ಕೆಲವೊಂದು ಸಲ ತಪ್ಪಾಗಿ ಅರ್ಥ ಮಾಡಿಕೊಳ್ಳಲಾಗುತ್ತದೆ. ಯಾಕೆಂದರೆ ಇದು ತುಂಬಾ ಸಾಮಾನ್ಯ ಲಕ್ಷಣಗಳನ್ನು ತೋರಿಸುವುದು. ಕ್ಷಯ ರೋಗದ ಕೆಲವೊಂದು ಸಾಮಾನ್ಯ ಲಕ್ಷಣಗಳು ಈ ರೀತಿಯಾಗಿ ಇದೆ.

  • ದೀರ್ಘ ಕಾಲದ ಕೆಮ್ಮು
  • ಕಫದಲ್ಲಿ ರಕ್ತ
  • ಹಸಿವು ಕಡಿಮೆ ಆಗುವುದು
  • ಜ್ವರ
  • ಚಳಿ
  • ರಾತ್ರಿ ಬೆವರುವುದು
  • ಎದೆನೋವು
  • ಕಾರಣವಿಲ್ಲದೆ ತೂಕ ಕಡಿಮೆ ಆಗುವುದು

Most Read: ಕಿಸ್ ಹಾಗೂ ಲೈಂಗಿಕ ಸಂಪರ್ಕದಿಂದ ಕೂಡ 'ಟಿಬಿ' ರೋಗ ಹರಡಬಹುದು!!

ಕ್ಷಯ ರೋಗ ಕೆಲವು ವಿಧಗಳು

ಸುಪ್ತ ಕ್ಷಯ ರೋಗ

ಈ ವಿಧದ ಕ್ಷಯ ರೋಗವಿದ್ದರೆ ಆಗ ರೋಗಿಗೆ ಯಾವುದೇ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ. ಕ್ಷಯ ರೋಗದ ಬ್ಯಾಕ್ಟೀರಿಯಾವು ದೇಹದೊಳಗೆ ಇರುತ್ತದೆ. ಆದರೆ ಅದು ನಿಷ್ಕ್ರೀಯವಾಗಿರುವುದು. ಈ ರೀತಿಯ ಕ್ಷಯ ರೋಗವು ಸಾಂಕ್ರಾಮಿಕವಲ್ಲ. ಆದರೆ ಸೋಂಕು ಯಾವುದೇ ಸಮಯದಲ್ಲೂ ಕ್ರಿಯಾಶೀಲವಾಗಬಹುದು ಮತ್ತು ಇದಕ್ಕೆ ತಕ್ಷಣವೇ ಚಿಕಿತ್ಸೆ ಕೊಡಿಸುವುದು ಅತೀ ಅಗತ್ಯ ಆಗಿರುವುದು.

ಕ್ರಿಯಾಶೀಲ ಕ್ಷಯ ರೋಗ

ಈ ವಿಧದಲ್ಲಿ ಕ್ಷಯ ರೋಗದ ಸೋಂಕು ಸಕ್ರಿಯವಾಗಿರುವುದು ಮತ್ತು ಇದು ಬೇರೆಯವರಿಗೆ ಕೂಡ ಹಬ್ಬಬಹುದು. ರೋಗಿಗೆ ಕೂಡ ಕ್ಷಯ ರೋಗದ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಕ್ರಿಯಾಶೀಲ ಕ್ಷಯ ರೋಗವು ಕೆಲವೊಂದು ಸಲ ಸುಪ್ತ ಕ್ಷಯ ರೋಗವು ಮರಳಿರುವ ಪರಿಣಾಮ ಆಗಿರುವುದು. ಯಾಕೆಂದರೆ ಇದಕ್ಕೆ ಯಾವುದೇ ಚಿಕಿತ್ಸೆ ನೀಡದೆ ಇದ್ದರೆ ಅದು ಕ್ರಿಯಾಶೀಲ ಕ್ಷಯ ರೋಗವಾಗಿ ಪರಿವರ್ತಿತವಾಗಬಹುದು.

ಕ್ಷಯ ರೋಗವು ಬೇರೆ ಅಂಗಾಂಗಗಳಿಗೆ ಪರಿಣಾಮ ಉಂಟು ಮಾಡಬಹುದೇ?

ಕ್ಷಯ ರೋಗವು ಹೆಚ್ಚಾಗಿ ಶ್ವಾಸಕೋಶದ ಮೇಲೆ ಪರಿಣಾಮ ಬೀರುವುದು. ಆದರೆ ಕೆಲವು ಸಂದರ್ಭದಲ್ಲಿ ಮಾತ್ರ ಇದು ಬೇರೆ ಅಂಗಾಂಗಗಳ ಮೇಲೆ ಕೂಡ ಪರಿಣಾಮ ಬೀರುವುದು. ಇದು ಬಾಧಿಸಿದ ಅಂಗಾಗಂಗಳಿಗೆ ಅನುಗುಣವಾಗಿ ಲಕ್ಷಣಗಳು ತುಂಬಾ ಭಿನ್ನವಾಗಿ ಇರುವುದು. ಉದಾಹರಣೆಗೆ ಕ್ಷಯ ರೋಗವು ಮೂಳೆಗಳಿಗೆ ಭಾದಿಸಿದ್ದರೆ ಆಗ ನೀವು ಗಂಟಿನ ಸಮಸ್ಯೆ ಅಥವಾ ಬೆನ್ನು ಮೂಳೆ ನೋವಿಗೆ ಒಳಗಾಗುವಿರಿ. ಕ್ಷಯ ರೋಗದ ಸೋಂಕು ಯಕೃತ್ ಅಥವಾ ಕಿಡ್ನಿ ಮೇಲೆ ಪರಿಣಾಮ ಬೀರಿದ್ದರೆ, ಆಗ ದೇಹದಲ್ಲಿನ ಕಲ್ಮಷವನ್ನು ಹೊರಹಾಕಲು ಸಾಧ್ಯವಾಗದು. ಇದರಿಂದಾಗಿ ಮೂತ್ರದಲ್ಲಿ ರಕ್ತದ ಅಂಶವು ಕಂಡುಬರಬಹುದು ಮತ್ತು ಮೂತ್ರದಲ್ಲಿ ವಿವಿಧ ರೀತಿಯ ಸಮಸ್ಯೆಗಳು ಕಂಡುಬರಬಹುದು.

ಕ್ಷಯ ರೋಗದ ಸೋಂಕು ಹೃದಯವು ಸರಿಯಾಗಿ ಕಾರ್ಯನಿರ್ವಹಿಸದೆ ಇರಬಹದು ಮತ್ತು ಇದರಿಂದಾಗಿ ಅದು ರಕ್ತವನ್ನು ಪಂಪ್ ಮಾಡಲು ಸಾಧ್ಯವಾಗದೆ ಇದರಬಹುದು. ಕ್ಷಯ ರೋಗವು ವ್ಯಕ್ತಿಯ ಮೆದುಳಿನ ಮೇಲೆ ಪರಿಣಾಮ ಬೀರಬಹುದು.

ಕ್ಷಯ ರೋಗವು ವ್ಯಕ್ತಿಯ ಸಂತಾನೋತ್ಪತ್ತಿ ಅಂಗಾಂಗಗಳ ಮೇಲೆ ಪರಿಣಾಮ ಬೀರಿದರೆ, ಆಗ ಈ ಸೋಂಕು ವ್ಯಕ್ತಿಯಲ್ಲಿ ಫಲವತ್ತತೆ ಸಮಸ್ಯೆಯನ್ನು ಉಂಟು ಮಾಡಬಹುದು.

ಕ್ಷಯ ರೋಗಕ್ಕೆ ಚಿಕಿತ್ಸೆಗಳು

*ಕ್ಷಯ ರೋಗಕ್ಕೆ ಚಿಕಿತ್ಸೆಗಳು ವಿವಿಧ ರೀತಿಯದ್ದಾಗಿದೆ. ಇದರಲ್ಲಿ ಕೆಲವೊಂದು ಈ ರೀತಿಯಲ್ಲಿದೆ.
*ಯಾವ ಅಂಗಾಂಗದ ಮೇಲೆ ಇದು ಪರಿಣಾಮ ಬೀರುವುದು
*ಯಾವ ವಿಧದ ಕ್ಷಯ ರೋಗ ಕ್ರಿಯಾಶೀಲ ಅಥವಾ ಸುಪ್ತ
*ರೋಗಿಯ ಪ್ರತಿರೋಧಕ ವ್ಯವಸಥೆ
*ಔಷಧಿಗೆ ಪ್ರತಿರೋಧ
*ರೋಗಿಯ ವಯಸ್ಸು ಮತ್ತು ಸಂಪೂರ್ಣ ಆರೋಗ್ಯ
*ವೈದ್ಯರು ಸಂಯೋಜನೆಯ ಚಿಕಿತ್ಸೆಯನ್ನು ರೋಗಿಗೆ ನೀಡುವರು. ವೈದ್ಯರು ಹೇಳಿರುವ ಕ್ರಮದ ಪ್ರಕಾರವಾಗಿ ರೋಗಿಯು ಚಿಕಿತ್ಸೆ ಪಡೆದುಕೊಳ್ಳಬೇಕು ಮತ್ತು ವೈದ್ಯರು ಹೇಳದೆ ಚಿಕಿತ್ಸೆ ನಿಲ್ಲಿಸಬಾರದು.

English summary

World Tuberculosis Day:Things You Most Know

Tuberculosis(TB) is an infectious disease which can affect any organ inside the human body but is commonly affects the lungs of a person. March 24 is observed as World TB day to create awareness about the disease as it is one of the top 10 causes of death worldwide. The germs of TB can spread from person to person through airborne particles. The infected germs can spread through a sick person's cough, sneeze or tiny droplets that contain TB germs. Lungs are the most commonly affected organs by TB but in some rare cases it can affect other organs of the body as well.
X
Desktop Bottom Promotion