For Quick Alerts
ALLOW NOTIFICATIONS  
For Daily Alerts

ಮಹಿಳೆಯರೇ! ಒಳ ಚಡ್ಡಿಯನ್ನು ದಿನಕ್ಕೊಮ್ಮೆಯಾದರೂ ಬದಲಿಸಿ! ಇಲ್ಲಾಂದ್ರೆ ಇದೆಲ್ಲಾ ಸಮಸ್ಯೆ ಬರಬಹುದು....

|

ಮಹಿಳೆಯರು ಸಾಮಾನ್ಯವಾಗಿ ಸ್ವಚ್ಛತೆಯ ಬಗ್ಗೆ ಅತಿ ಹೆಚ್ಚಿನ ಕಾಳಜಿ ವಹಿಸುವವರಾಗಿದ್ದು ಒಳವಸ್ತ್ರಗಳನ್ನು ನಿತ್ಯವೂ ಬದಲಿಸುವವರೇ ಆಗಿರುತ್ತಾರೆ. ದಿನಕ್ಕೊಂದರಂತೆ ಮುನ್ನೂರರವತ್ತೈದು ಒಳವಸ್ತ್ರಗಳು ನಿಮ್ಮಲ್ಲಿದ್ದರೆ ಶಾಭಾಶ್, ಒಳ್ಳೆಯದೇ ಸರಿ. ಆದರೆ ಹೆಚ್ಚಿನ ಮಹಿಳೆಯರ ಬಳಿ ಕೇವಲ ಮೂವತ್ತನಾಲ್ಕು ಜೋಡಿ ಒಳವಸ್ತ್ರಗಳಿರುತ್ತವಂತೆ ಹಾಗೂ ಇವುಗಳಲ್ಲಿಯೇ ನಿತ್ಯ ಧರಿಸಬೇಕಾದವುಗಳನ್ನು ಆರಿಸಿಕೊಳ್ಳುವುದು ಕಷ್ಟಕರವಾಗುತ್ತದೆ.

ಆದರೆ, ನೈರ್ಮಲ್ಯದ ದೃಷ್ಟಿಯಿಂದ ನಿಮ್ಮ ಒಳವಸ್ತ್ರಗಳನ್ನೂ ಆಗಾಗ ಬದಲಿಸುತ್ತಲೇ ಇರಬೇಕು. ಇಲ್ಲದಿದ್ದರೆ ಕೆಲವು ಋಣಾತ್ಮಕ ಅಡ್ಡಪರಿಣಾಮಗಳು ಎದುರಾಗಬಹುದು!. ಹೌದು, ನೀವು ಸರಿಯಾಗಿಯೇ ಓದಿದಿರಿ, ಈ ಬಗ್ಗೆ ನಿಮ್ಮ ಅಸಡ್ಡೆ ಈ ಕೆಳಗೆ ವಿವರಿಸಿದ ಐದು ತೊಂದರೆಗಳಿಗೆ ಕಾರಣವಾಬಹುದು.

ನಿಮ್ಮ ತ್ವಚೆಯಲ್ಲಿ ತುರಿಕೆ ಕಾಣಿಸಿಕೊಳ್ಳಬಹುದು

ನಿಮ್ಮ ತ್ವಚೆಯಲ್ಲಿ ತುರಿಕೆ ಕಾಣಿಸಿಕೊಳ್ಳಬಹುದು

ಒಂದು ವೇಳೆ ಒಮ್ಮೆ ಬಳಸಿದ ಒಳ ಉಡುಪನ್ನು ಒಗೆಯದೇ ಮತ್ತೊಮ್ಮೆ ತೊಟ್ಟರೆ, ಇದರಿಂದ ತ್ವಚೆಯಲ್ಲಿ ಕೆಲವೊಮ್ಮೆ ತುರಿಕೆಯುಂಟಾಬಹುದು ಹಾಗೂ ಈ ತುರಿಕೆ ಸತತವಾಗಿ ಮುಂದುವರೆಯಬಹುದು. ಏಕೆಂದರೆ ಒಳ ಉಡುಪುಗಳ ಅಂಚುಗಳಲ್ಲಿ ಸಂಗ್ರಹವಾಗುವ ಕೊಳೆಯಲ್ಲಿ ಸೂಕ್ಷ್ಮ ಬ್ಯಾಕ್ಟೀರಿಯಾಗಳು ಬೆಳೆಯುತ್ತವೆ ಹಾಗೂ ಹೀಗೆ ಬೆಳೆಯುತ್ತಾ ಒಂದು ದಿನ ಕಾಯಿಲೆ ಹಬ್ಬಿಸುವಷ್ಟು ಪ್ರಬಲಗೊಳ್ಳಬಹುದು.

ಹುಣ್ಣುಗಳು ಎದುರಾಗಬಹುದು ಮತ್ತು ಚರ್ಮ ಕೆಂಪಗಾಗಿ ಉರಿಯಾಗಬಹುದು

ಹುಣ್ಣುಗಳು ಎದುರಾಗಬಹುದು ಮತ್ತು ಚರ್ಮ ಕೆಂಪಗಾಗಿ ಉರಿಯಾಗಬಹುದು

ಒಳ ಉಡುಪುಗಳ ಬಳಕೆ ಮುಂದುವರೆಯುತ್ತಾ ಹೋದಂತೆ ಇವುಗಳ ಅಂಚುಗಳು ಹೆಚ್ಚು ಹೆಚ್ಚು ದೃಢವಾಗುತ್ತಾ ಹೋಗುತ್ತವೆ ಹಾಗೂ ಚಲನೆಯ ಸಮಯದಲ್ಲಿ ಈ ದೃಢಗೊಂಡಿರುವ ಬಟ್ಟೆಯ ಭಾಗ ತಗುಲಿರುವ ಚರ್ಮವನ್ನು ಸತತ ಘರ್ಷಣೆಯಿಂದ ಹಿಸಿಯತೊಡಗುತ್ತದೆ. ಅಲ್ಲದೇ ಈ ಭಾಗದಲ್ಲಿ ಈಗಾಗಲೇ ಮನೆ ಮಾಡಿರುವ ಬ್ಯಾಕ್ಟೀರಿಯಾಗಳು ಈ ಹಿಸಿದ ಭಾಗದ ಚರ್ಮದ ಮೂಲಕ ಸುಲಭವಾಗಿ ಒಳಚರ್ಮಕ್ಕೆ ಇಳಿದುಕೊಳ್ಳುತ್ತವೆ. ಒಂದೇ ಬಗೆಯ ವಿನ್ಯಾಸದ ಒಳ ಉಡುಪನ್ನು ಸತತವಾಗಿ ತೊಟ್ಟುಕೊಳ್ಳುವವರಿಗೆ ಈ ತೊಂದರೆ ಹೆಚ್ಚಾಗಿ ಕಾಡುತ್ತದೆ.

Most Read: ಸೆಕ್ಸ್ ಬಳಿಕ ಒಳಉಡುಪು ಹಾಕಬೇಡಿ! ಇಲ್ಲಾಂದ್ರೆ ಸೋಂಕು ಮತ್ತು ತುರಿಕೆ ಕಾಡಬಹುದು

ಚರ್ಮ ಕೆಂಪಗಾಗಿ ಉರಿಯಾಗಬಹುದು

ಚರ್ಮ ಕೆಂಪಗಾಗಿ ಉರಿಯಾಗಬಹುದು

ಸತತ ಒಂದೇ ಭಾಗದಲ್ಲಿ ಈ ಅಂಚುಗಳು ಉಜ್ಜುತ್ತಾ ಇರುವ ಮೂಲಕ ಉತ್ಪತ್ತಿಯಾಗುವ ಬಿಸಿ ಸಹಾ ಚರ್ಮ ಕೆಂಪಗಾಗಲು ಕಾರಣವಾಗುತ್ತದೆ. ಪ್ರಾರಂಭದಲ್ಲಿ ಈ ಬಗ್ಗೆ ಅರಿವೇ ಆಗದಿದ್ದರೂ ಕ್ರಮೇಣ ಈ ಉರಿ ಸಹಿಸಲಸಾಧ್ಯವಾಗುತ್ತದೆ. ಆದರೆ ಇದು ಉಲ್ಬಣಗೊಂಡು ದೊಡ್ಡ ತೊಂದರೆಗೆ ಮೂಲವಾಗುವ ಮುನ್ನವೇ ವೈದ್ಯರ ಬಳಿ ತೆರಳಿ ಸೂಕ್ತ ಚಿಕಿತ್ಸೆ ಮತ್ತು ಸಲಹೆಯನ್ನು ಪಡೆದುಕೊಳ್ಳಬೇಕು. ಜಾಣತನದ ಕ್ರಮವೆಂದರೆ ನಿಮ್ಮಲ್ಲಿ ಭಿನ್ನ ವಿನ್ಯಾಸ ಹಾಗೂ ಬಗೆಯ ಒಳ ಉಡುಪುಗಳಿರಬೇಕು ಹಾಗೂ ಉತ್ತಮ ಗುಣಮಟ್ಟದ್ದಾಗಿದ್ದು ದೇಹಕ್ಕೆ ಒತ್ತಡ ನೀಡದಂತಿರಬೇಕು. ಎಂದಿಗೂ ರಾತ್ರಿ ಮಲಗುವ ಸಮಯದಲ್ಲಿ ಒಳ ಉಡುಪುಗಳನ್ನು ತೊಡಬಾರದು.

ಜನನಾಂಗದ ವಾಸನೆ ಭಿನ್ನವಾಗುತ್ತದೆ

ಜನನಾಂಗದ ವಾಸನೆ ಭಿನ್ನವಾಗುತ್ತದೆ

ಒಳ ಉಡುಪುಗಳಲ್ಲಿ ಆಶ್ರಯ ಪಡೆದಿರುವ ಬ್ಯಾಕ್ಟೀರಿಯಾಗಳೇನೂ ಆರೋಗ್ಯಸ್ನೇಹಿಗಳಲ್ಲ. ಅದರಲ್ಲೂ ವಿಶೇಷವಾಗಿ ನಿಮ್ಮ ಅತ್ಯಂತ ಸೂಕ್ಷ್ಮಸಂವೇದನೆಯುಳ್ಳ ಮತ್ತು ತೇವವಿರುವ ಭಾಗವಾದ ಜನನಾಂಗದಲ್ಲಿ ಇವು ಪ್ರವೇಶ ಪಡೆದವೋ, ಆಗ ಇವು ಅಲ್ಲಿನ ಆರೋಗ್ಯಸ್ನೇಹಿ ಬ್ಯಾಕ್ಟೀರಿಯಾಗಳನ್ನೂ ಕೊಂದು ಕೊಳೆಸಿ ದುರ್ನಾತ ಬೀರುವಂತೆ ಮಾಡುತ್ತವೆ. ಹೌದು, ನೀವು ಸರಿಯಾಗಿಯೇ ಓದಿದಿರಿ. ಒಮ್ಮೆ ಬಳಸಿದ ಒಳ ಉಡುಪನ್ನೇ ಸತತವಾಗಿ ಬಳಸುತ್ತಾ ಬಂದರೆ, ಇದರ ಬಟ್ಟೆ ಹೆಚ್ಚು ಹೆಚ್ಚು ದೃಢವಾಗುತ್ತಾ ಜನನಾಂಗದ ಎದುರು ಗಾಳಿಯಾಡದಂತಹ ಪರದೆಯಾಗಿಬಿಡುತ್ತದೆ ಹಾಗೂ ಈ ಮೂಲಕ ಆಮ್ಲಜನಕ ಲಭ್ಯವಾಗದೇ ಈ ಪರಿಸರದಲ್ಲಿ ಬ್ಯಾಕ್ಟೀರಿಯಾಗಳು ಹೆಚ್ಚು ಕ್ರಿಯಾಶೀಲವಾಗುತ್ತವೆ ಹಾಗೂ ಕ್ರಮೇಣ ವಾಸನೆ ಹೆಚ್ಚುತ್ತಾ ಅನಾರೋಗ್ಯಕರ ವಾತಾವರಣ ಉಂಟಾಗುತ್ತದೆ.

Most Read: ಯಾವತ್ತೂ ಒಳ ಚಡ್ಡಿಯನ್ನು ಪ್ರತ್ಯೇಕವಾಗಿ ಒಗೆಯಬೇಕಂತೆ! ಯಾಕೆ ಗೊತ್ತೇ?

ಶಿಲೀಂಧ್ರದ ಸೋಂಕು ತಗಲುವ ಸಾಧ್ಯತೆ ಹೆಚ್ಚುತ್ತದೆ

ಶಿಲೀಂಧ್ರದ ಸೋಂಕು ತಗಲುವ ಸಾಧ್ಯತೆ ಹೆಚ್ಚುತ್ತದೆ

ನಿಮ್ಮ ಒಳ ಉಡುಪಿನಲ್ಲಿ ಯಾವುದೇ ಬ್ಯಾಕ್ಟೀರಿಯಾ ಆಶ್ರಯ ಪಡೆದಿರಲಿ, ಈ ಭಾಗದಲ್ಲಿ ನಿಮಗೆ ಬೆವರು ಹರಿದಿದ್ದರೆ ಶಿಲೀಂಧ್ರದ ಸೋಂಕು ಹರಡುವ ಸಾಧ್ಯತೆ ಖಚಿತವಾಗಿ ಹೆಚ್ಚುತ್ತದೆ. ಏಕೆಂದರೆ ಹತ್ತಿಯದ್ದಲ್ಲದ ಒಳ ಉಡುಪುಗಳು ಜನನಾಂಗದ ಭಾಗದಲ್ಲಿನ ಬಿಸಿಯನ್ನು ಹೊರಬಿಡದೇ ಉಳಿಸಿಕೊಳ್ಳುತ್ತವೆ ಹಾಗೂ ಈ ಬೆಚ್ಚಗಿನ ವಾತಾವರಣ ಶಿಲೀಂಧ್ರಗಳಿಗೆ ಬೆಳೆಯಲು ಅತ್ಯಂತ ಸೂಕ್ತವಾಗಿದ್ದು ಇವುಗಳು ಶೀಘ್ರವೇ ತೇವವಿರುವ ಹಾಗೂ ಸುತ್ತಮುತ್ತಲ ಭಾಗಗಳಿಗೆ ಸೋಂಕು ಹರಡುತ್ತವೆ.

ಮೂತ್ರನಾಳದ ಸೋಂಕು (Urinary Tract Infection (UTI)ಎದುರಾಬಹುದು

ಮೂತ್ರನಾಳದ ಸೋಂಕು (Urinary Tract Infection (UTI)ಎದುರಾಬಹುದು

ಒಂದು ವೇಳೆ ಮೇಲಿನ ಇಷ್ಟು ಕಾರಣಗಳು ನಿಮ್ಮ ಒಳ ಉಡುಪಿನ ಬದಲಿಸುವಿಕೆಗೆ ಸಾಧ್ಯವಾಗದಿದ್ದರೆ ಇದನ್ನು ಅನಿವಾರ್ಯವಾಗಿಸುವ ಇನ್ನೊಂದು ಕಾರಣ ಇಲ್ಲಿದೆ. ಈ ಉಡುಪುಗಳ ಮೂಲಕ ಹರಡುವ ಸೋಂಕು ಮೂತ್ರನಾಳದ ಮೂಲಕ ಮುಂದುವರೆದು ಮೂತ್ರಕೋಶಕ್ಕೂ ಹರಡಬಹುದು. ಭಾರೀ ಉರಿ ತರುವ ಈ ಸೋಂಕು ನಿಮ್ಮ ನಿತ್ಯದ ಕೆಲಸಗಳನ್ನು ಅಪಾರವಾಗಿ ಬಾಧಿಸಬಹುದು.

Most Read: ಮಲಗುವಾಗ ಮಹಿಳೆಯರು ಒಳ ಉಡುಪು ಹಾಗೂ ಬ್ರಾ ಧರಿಸದೇ ಮಲಗಬೇಕಂತೆ!

ನಿತ್ಯದ ಒಳ ಉಡುಪುಗಳನ್ನು ಆಗಾಗ ಬದಲಿಸುತ್ತಿರಬೇಕು

ನಿತ್ಯದ ಒಳ ಉಡುಪುಗಳನ್ನು ಆಗಾಗ ಬದಲಿಸುತ್ತಿರಬೇಕು

ಹಾಗಾಗಿ, ನಿಮ್ಮ ನಿತ್ಯದ ಒಳ ಉಡುಪುಗಳನ್ನು ಆಗಾಗ ಬದಲಿಸುತ್ತಿರಬೇಕು ಹಾಗೂ ಒಂದು ದಿನ ತೊಟ್ಟ ಉಡುಪನ್ನು ಒಗೆದು ಇಸ್ತ್ರಿ ಮಾಡದೇ ಮತ್ತೊಮ್ಮೆ ತೊಡಬಾರದು. ನಿಮ್ಮಲ್ಲಿ ಆದಷ್ಟೂ ಹೆಚ್ಚಿನ ಬಗೆಯ ಒಳ ಉಡುಪುಗಳಿರಬೇಕು ಹಾಗೂ ಪ್ರತಿದಿನವೂ ಬೇರೆ ಬೇರೆಯದನ್ನೇ ತೊಡುತ್ತಾ ಒಂದು ಬಾರಿ ತೊಟ್ಟ ಉಡುಪು ಮತ್ತೊಮ್ಮೆ ಬಳಸಲು ಹಲವಾರು ದಿನಗಳ ಅಂತರವಿರಬೇಕು. ಈ ವಿಧಾನಗಳ ಬಗ್ಗೆ ಅರಿವೇ ಇಲ್ಲದ ಸೋಮಾರಿ ಯುವತಿಯರಿಗೂ ಈ ಮಾಹಿತಿಯನ್ನು ನೀಡಿ ಕಾಳಜಿಯ ಬಗ್ಗೆ ನೀವು ನೀಡುವ ಪಾಠ ಅವರ ಆರೋಗ್ಯ ಕಾಪಾಡಲೂ ನೆರವಾಗಬಹುದು.

English summary

Women: Change Your Underwear At Least Once A Day!

However, what if I were to tell you that there are actually some negative side effects of not changing your underwear frequently enough? Yup, you heard that right—there are actually 5 things that might happen to you if you don't change your underwear often enough.
Story first published: Tuesday, January 22, 2019, 7:00 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more