For Quick Alerts
ALLOW NOTIFICATIONS  
For Daily Alerts

ಋತುಚಕ್ರದ ಕಪ್‌‌ ಧರಿಸಿದರೆ, ಮಹಿಳೆಯರು ಬೇಗನೆ ಗರ್ಭ ಧರಿಸುತ್ತಾರಂತೆ

|

ಋತುಚಕ್ರದ ವೇಳೆ ಸಾಮಾನ್ಯವಾಗಿ ಪ್ಯಾಡ್ ಅಥವಾ ಟ್ಯಾಂಪನ್ಸ್ ಧರಿಸುವುದು ಸಾಮಾನ್ಯವಾಗಿದೆ. ಆದರೆ ಋತುಚಕ್ರದ ವೇಳೆ ಧರಿಸಲು ಹೊಸ ಅವಿಷ್ಕಾರವಾಗಿರುವಂತಹ ಕಪ್ ಬಂದಿದೆ. ಇದು ಸ್ವಚ್ಛತೆಯನ್ನು ಮತ್ತೊಂದು ಮಟ್ಟದಕ್ಕೆ ಕೊಂಡೊಯ್ದಿದೆ. ಪ್ಯಾಡ್ ಮತ್ತು ಟ್ಯಾಂಪನ್ಸ್ ಗಳನ್ನು ಬಳಸಿದ ಬಳಿಕ ಅದನ್ನು ವಿಲೇವಾರಿ ಮಾಡುವುದು ದೊಡ್ಡ ಸಮಸ್ಯೆಯಾಗಿರುವ ಹಿನ್ನೆಲೆಯಲ್ಲಿ ಈ ಕಪ್ ತುಂಬಾ ನೆರವಿಗೆ ಬರುತ್ತದೆ. ಇದನ್ನು ಬಳಸುವುದು ತುಂಬಾ ಸುಲಭ ಮತ್ತು ಕೋನ್ ಮಾದರಿಯಲ್ಲಿ ಇರುವಂತಹ ಕಪ್ ಯೋನಿಯೊಳಗೆ ಇಡಲಾಗುತ್ತದೆ.

ಇದು ಗರ್ಭಕಂಠದ ತನಕ ಹೋಗುತ್ತದೆ ಮತ್ತು ಬರುವಂತಹ ರಕ್ತವನ್ನು ಅದು ಜಮೆ ಮಾಡುವುದು. ರಕ್ತಸ್ರಾವಕ್ಕೆ ಅನುಗುಣವಾಗಿ ಇದನ್ನು ಕೇವಲ 10-12 ಗಂಟೆಗೊಮ್ಮೆ ಮಾತ್ರ ಬದಲಾಯಿಸಿಕೊಳ್ಳಬಹುದು. ಅದಾಗ್ಯೂ ಋತುಚಕ್ರದ ಕಪ್ ಗಳನ್ನು ಈಗ ತುಂಬಾ ವಿಭಿನ್ನವಾಗಿ ಬಳಕೆ ಕೂಡ ಮಾಡಲಾಗುತ್ತದೆ. ಕೆಲವು ದಂಪತಿಗೆ ಸಂತಾನಭಾಗ್ಯ ಎನ್ನುವುದು ಇರಲ್ಲ. ಋತುಚಕ್ರದ ಕಪ್ ನ್ನು ಬಳಸಿಕೊಂಡರೆ ಆಗ ಬೇಗನೆ ಗರ್ಭ ಧರಿಸಬಹುದು ಎಂದು ಹಲವಾರು ಅಧ್ಯಯನಗಳು ಹೇಳಿವೆ.

Women are Using Menstrual Cups to Conceive Quicker: Study

ಇದನ್ನು ಬಳಕೆ ಮಾಡುವುದು ಹೇಗೆ?

ಒಂದು ಮಿಲಿಯನ್ ನಲ್ಲಿ ಒಂದು ಅವಕಾಶದಲ್ಲಿ ಗರ್ಭ ಧರಿಸಬಹುದು. ಕೆಲವೊಂದು ಕಾರಣಗಳಿಂದಾಗಿ ಗರ್ಭಧಾರಣೆಯು ವಿಳಂಬವಾಗಬಹುದು. ಅತಿಯಾದ ಧೂಮಪಾನ ಮತ್ತು ಮದ್ಯಪಾನ, ನಿದ್ರಾಹೀನತೆ, ಅನಾರೋಗ್ಯಕರ ಆಹಾರ ಕ್ರಮ ಮತ್ತು ಅನುವಂಶೀಯತೆ. ಋತುಚಕ್ರದ ವೇಳೆ ಕಪ್ ಧರಿಸುವಂತಹ ಮಹಿಳೆಯರು ಗರ್ಭ ಧರಿಸುವ ಸಾಧ್ಯತೆಯು ಹೆಚ್ಚಾಗಿ ಇರುವುದು ಎಂದು ವರದಿಗಳು ಹೇಳಿವೆ. ಲೈಂಗಿಕ ಕ್ರಿಯೆ ಬಳಿಕ ತಕ್ಷಣವೇ ಋತುಚಕ್ರದ ಕಪ್ ನ್ನು ಅಳವಡಿಸುವ ಕಾರಣದಿಂದಾಗಿ ವೀರ್ಯವು ಅಲ್ಲೇ ಹೋಗಿ ನಿಲ್ಲುವುದು. ಇದು ಗರ್ಭ ತೆರೆಯುವುದಕ್ಕೆ ತುಂಬಾ ಹತ್ತಿರವಾಗಿರುವುದು. ಡಾ. ಶೆರ್ರಿ ರೋಸ್ ಅವರು ಹೇಳುವ ಪ್ರಕಾರ ಇದು ನಿಜವಾಗಿಯೂ ಮಹಿಳೆಯ ಆರೋಗ್ಯಕ್ಕೆ ಒಂದು ಮಾರ್ಗದರ್ಶಿ. ಗರ್ಭಕ್ಕೆ ವೀರ್ಯವು ಎಷ್ಟು ಹತ್ತಿರವಾಗಿರುತ್ತದೋ ಅಷ್ಟು ಗರ್ಭ ಧರಿಸುವ ಸಾಧ್ಯತೆಯು ಇರುವುದು. ಗಾಳಿಗೆ ಒಡ್ಡಲ್ಪಡದೆ ಇರುವಂತಹ ವೀರ್ಯವು ಮಹಿಳೆಯ ದೇಹದಲ್ಲಿ ಸುಮಾರು 12 ಗಂಟೆಗಳ ಕಾಲ ಹಾಗೆ ಇರುತ್ತದೆ. ಋತುಚಕ್ರದ ಕಪ್‌ ಧರಿಸಿದರೆ ಆಗ ಅದು ತುಂಬಾ ಆರೋಗ್ಯಕಾರಿ ಹಾಗೂ ಬೇಗನೆ ಗರ್ಭ ಧರಿಸುವಂತೆ ಮಾಡುತ್ತದೆ.

Most Read: ಅನಿಯಮಿತ ಮುಟ್ಟಿನ ಸಮಸ್ಯೆಗಳನ್ನು ನಿವಾರಿಸುವುದು ಹೇಗೆ?

Women are Using Menstrual Cups to Conceive Quicker: Study

ಋತುಚಕ್ರದ ಕಪ್ ಬಳಸುವ ವಿಧಾನಗಳು

ಮೊದಲ ಸಲ ಋತುಚಕ್ರದ ಕಪ್ ಬಳಸುವಂತಹವರಿಗೆ ಇದು ಸ್ವಲ್ಪ ಮಟ್ಟಿಗೆ ಕಿರಿಕಿರಿ ಅನಿಸಬಹುದು. ಅದಾಗ್ಯೂ, ಈ ಕಪ್ ಗಳನ್ನು ಸ್ವಲ್ಪ ಮಟ್ಟಿಗೆ ಅಭ್ಯಾಸ ಮಾಡಿಕೊಂಡು ಧರಿಸುವುದು ತುಂಬಾ ಸುಲಭವಾಗಿದೆ. ಆರಂಭದಲ್ಲಿ ಈ ಕಪ್ ನ್ನು ನೀವು ಯು ಆಕಾರಕ್ಕೆ ಬಗ್ಗಿಸಿಕೊಳ್ಳಬೇಕು. ಇದನ್ನು ಹೆಬ್ಬೆರಳು ಮತ್ತು ತೋರುಬೆರಳಿನಿಂದ ಹಿಡಿಯಿರಿ ಮತ್ತು ವೃತ್ತವು ನಿಮ್ಮ ಅಂಗೈಯಿಂದ ದೂರಕ್ಕೆ ಮುಖ ಮಾಡಿರಲಿ. ಟ್ಯಾಂಪ್ಟನ್ ಬಳಸುವಂತೆ ನೀವು ಇದನ್ನು ಬಳಸಬಹುದು. ಕಪ್ ನ ಅಡಿಭಾಗವನ್ನು ಹಿಡಿದುಕೊಳ್ಳಿ ಮತ್ತು ಅದು ಸಂಪೂರ್ಣವಾಗಿ ತೆರೆದುಕೊಳ್ಳುವಂತೆ ಮಾಡಿ. ನೀವು ಕೆಲವು ಸಲ ಇದನ್ನು ಅಭ್ಯಾಸ ಮಾಡಿದರೆ ಬಳಕೆ ಸುಲಭವಾಗುವುದು. ಬಳಕೆ ಬಗ್ಗೆ ಅದರ ಪ್ಯಾಕೆಟ್ ನಲ್ಲಿ ಕ್ರಮಗಳನ್ನು ಸೂಚಿಸಲಾಗಿದೆ.

ಪ್ಯಾಡ್ ಮತ್ತು ಟ್ಯಾಂಪ್ಟನ್ ನಿಗೆ ಇದು ಸರಿಯಾದ ಪರ್ಯಾಯವಾಗಿದೆ. ಆದರೆ ಕೆಲವೊಂದು ಸಲ ನೀವು ಸ್ವಚ್ಛತೆಗಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೂಡ ತೆಗೆದುಕೊಳ್ಳಬೇಕು. ಆರಾಮದಲ್ಲಿ ಇದು ತುಂಬಾ ಕಿರಿಕಿರಿ ಅನಿಸಬಹುದು. ಆದರೆ ಇದಕ್ಕೆ ಸ್ವಲ್ಪ ಲ್ಯೂಬ್ರಿಕೆಂಟ್ ಧರಿಸಿಕೊಳ್ಳಿ. ಆದರೆ ನೀವು ಇದನ್ನು ಯೋನಿಯೊಳಗೆ ಹಾಕುವಾಗ ನೀರಿನಾಂಶ ಇರುವಂತಹ ಲ್ಯುಬ್ರಿಕೆಂಟ್ ನ್ನು ಬಳಸಿಕೊಳ್ಳಿ. ಯಾಕೆಂದರೆ ಇದು ತುಂಬಾ ಸುಲಭವಾಗಿರುವುದು.

Women are Using Menstrual Cups to Conceive Quicker: Study

ನೀವು ಈ ಕಪ್ ನ್ನು ಹೊರಗೆ ತೆಗೆದ ಬಳಿಕ ಕೈಗಳನ್ನು ಸರಿಯಾಗಿ ತೊಳೆಯದುಕೊಳ್ಳಿ. ಹೆಬ್ಬೆರಳು ಮತ್ತು ತೋರುಬೆರಳನ್ನು ಬಳಸಿಕೊಂಡು ನೀವು ಇದನ್ನು ನಿಧಾನವಾಗಿ ಹೊರಗೆ ತೆಗೆಯಿರಿ. ಇದು ಮೂಲಕ್ಕೆ ಬಂದ ಬಳಿಕ ಅದರ ಸೀಲ್ ಬಿಡುಗಡೆ ಆಗಿರುವುದು ಮತ್ತು ಇದನ್ನು ನಿಧಾನವಾಗಿ ತೆಗೆಯಿರಿ. ಇದನ್ನು ಸರಿಯಾಗಿ ತೊಳೆದುಕೊಂಡ ಬಳಿಕ ಮತ್ತೆ ಬಳಸಿ. ಈ ಕಪ್ ನ್ನು ಮರಳಿ ಬಳಕೆ ಮಾಡಬಹುದು ಮತ್ತು ಇದು ಅದರ ದಿನಾಂಕದ ಬಳಿಕ ಬದಲಾಯಿಸಿಕೊಳ್ಳಿ. ಇದನ್ನು ನೀವು ಆರು ತಿಂಗಳ ಕಾಲ ಬಳಸಿಕೊಳ್ಳಬಹುದು. ಇದನ್ನು ನೀವು ಬಳಸಿಕೊಳ್ಳಲು ಬಯಸುವುದಾದರೆ ಆಗ ನೀವು ಇದರಿಂದ ಖಚಿತವಾಗಿ ಗರ್ಭ ಧಾರಣೆ ಆಗುವುದು ಎಂದು ಬಯಸಬೇಡಿ. ಆದರೆ ಇದನ್ನು ಪ್ರಯೋಗಿಸಿ ನೋಡಬಹುದು.

English summary

Women are Using Menstrual Cups to Conceive Quicker: Study

A practical alternative to pads and tampons, menstrual cups have taken menstrual hygiene to a new high. With the disposal of used pads and tampons being a significant issue, especially while on-the-go, these cups are a saviour for women. Extremely simple to use, the cone-shaped cups are inserted into the vagina. It suctions onto the opening of the cervix, letting the blood accumulate in the cup. The best part, it needs to be changed/cleaned only once in 10-12 hours depending upon the flow.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more