For Quick Alerts
ALLOW NOTIFICATIONS  
For Daily Alerts

ಕೆಲವೊಮ್ಮೆ ಮಹಿಳೆಯರಿಗೆ ಸೆಕ್ಸ್ ಬಳಿಕ ಮೂತ್ರ ವಿಸರ್ಜನೆ ಮಾಡುವುದಕ್ಕೆ ಕಷ್ಟವಾಗುವುದು ಯಾಕೆ?

|

ಸೆಕ್ಸ್ ಬಳಿಕ ಮೂತ್ರ ವಿಸರ್ಜನೆ ಮಾಡಿದರೆ ಅದರಿಂದ ಮೂತ್ರನಾಳದ ಆರೋಗ್ಯವು ಚೆನ್ನಾಗಿರುವುದು ಎಂದು ಹೇಳಲಾಗುತ್ತದೆ. ಹೆಚ್ಚಿನ ಮಹಿಳೆಯರು ಸೆಕ್ಸ್ ಬಳಿಕ ಮೂತ್ರ ವಿಸರ್ಜನೆ ಮಾಡುವರು. ಆದರೆ ಕೆಲವು ಮಂದಿ ಹೀಗೆ ಮಾಡದೆ ಹಾಗೆ ಮಲಗಿಕೊಂಡು ಬಿಡುವರು. ಇದರಿಂದ ಮೂತ್ರನಾಳದಲ್ಲಿ ಸೋಂಕು ಕಾಣಿಸಿಕೊಳ್ಳುವಂತಹ ಸಾಧ್ಯತೆಗಳು ಇದೆ ಎಂದು ಹೇಳಲಾಗುತ್ತದೆ.

ಆದರೆ ಕೆಲವು ಮಹಿಳೆಯರಿಗೆ ಸೆಕ್ಸ್ ಬಳಿಕ ಮೂತ್ರ ವಿಸರ್ಜನೆ ಮಾಡಬೇಕೆಂದು ಅನಿಸಿದರೂ ಮೂತ್ರ ಬಂದಂತೆ ಆದರೂ ಶೌಚಾಲಯದಲ್ಲಿ ಹೋಗಿ ಕುಳಿತುಕೊಂಡ ಬಳಿಕ ಮೂತ್ರ ಬರುವುದೇ ಇಲ್ಲ. ಆದರೆ ಇದರ ಬಗ್ಗೆ ಯಾವುದೇ ಚಿಂತೆ ಮಾಡಬೇಕಾಗಿಲ್ಲವೆಂದು ತಜ್ಞ ವೈದ್ಯರು ಹೇಳುತ್ತಾರೆ. ಯಾಕೆಂದರೆ ಸೆಕ್ಸ್ ಬಳಿಕ ಕೆಲವೊಂದು ಹಾರ್ಮೋನುಗಳು ಮಾಡುವಂತಹ ಕಿತಾಪತಿಯು ಇದಾಗಿದೆ.

ವಾಸೊಪ್ರೆಸ್ಸಿನ್ ಮತ್ತು ಆಕ್ಸಿಟೋಸಿನ್ ಬಿಡುಗಡೆ

ವಾಸೊಪ್ರೆಸ್ಸಿನ್ ಮತ್ತು ಆಕ್ಸಿಟೋಸಿನ್ ಬಿಡುಗಡೆ

ಸೆಕ್ಸ್ ಬಳಿಕ ದೇಹವು ವಾಸೊಪ್ರೆಸ್ಸಿನ್ ಮತ್ತು ಆಕ್ಸಿಟೋಸಿನ್ ಬಿಡುಗಡೆ ಮಾಡುವುದು. ಈ ಎರಡು ಹಾರ್ಮೋನುಗಳು ಸಂಗಾತಿಗಳ ನಡುವಿನ ಅನ್ಯೋನ್ಯತೆ ಹೆಚ್ಚಿಸುವುದು. ವಾಸೊಪ್ರೆಸ್ಸಿನ್ ಎನ್ನುವುದು ಮೂತ್ರನಿರೋಧಕವಾಗಿದ್ದು, ಇದರಿಂದಾಗಿ ಸೆಕ್ಸ್ ಬಳಿಕ ಮೂತ್ರ ವಿಸರ್ಜನೆಯು ಕಷ್ಟವಾಗುವುದು ಎಂದು ಚಿಕಾಗೋದ ನಾರ್ತ್ ವೆಸ್ಟರ್ನ್ ಮೆಮೋರಿಯಲ್ ಹಾಸ್ಪಿಟಲ್ ನ ಯುರಿಗ್ಯಾನೆಕಾಲಜಿ ಆ್ಯಂಡ್ ಪೆಲ್ವಿಕ್ ರಿಕ್ನಸ್ಟ್ರಟ್ಟಿವ್ ಸರ್ಜನ್ ಡಾ. ಕ್ರಿಸ್ಟಿನಾ ಎ. ವೆವಿಸ್ಕಿ ಗೌಪ್ಪ ಹೇಳಿದ್ದಾರೆ. ಈ ಹಾರ್ಮೊನು ಅತಿಯಾದರೆ ಆಗ ಕಿಡ್ನಿಯು ನೀರನ್ನು ಉಳಿಸಿಕೊಳ್ಳುವುದು. ಇದರಿಂದಾಗಿ ಪರಾಕಾಷ್ಠೆ ತಲುಪಿದ ಕೂಡಲೇ ಮೂತ್ರ ಮೂಲಕ ಹೊರಹೋಗುವ ನೀರಿನ ಪ್ರಮಾಣವು ತುಂಬಾ ಕಡಿಮೆಯಾಗುವುದು.

ತಕ್ಷಣ ನಿಮಗೆ ಮೂತ್ರ ಬರದೇ ಇದ್ದರೆ

ತಕ್ಷಣ ನಿಮಗೆ ಮೂತ್ರ ಬರದೇ ಇದ್ದರೆ

ಸೆಕ್ಸ್ ಬಳಿಕ ಮೂತ್ರ ವಿಸರ್ಜನೆ ಮಾಡುವುದು ಕೆಟ್ಟ ಆಲೋಚನೆಯಲ್ಲ, ಆದರೆ ತಕ್ಷಣ ನಿಮಗೆ ಮೂತ್ರ ಬರದೇ ಇದ್ದರೆ ಅದರ ಬಗ್ಗೆ ನೀವು ಚಿಂತೆ ಮಾಡಬೇಕಿಲ್ಲ. ಸೆಕ್ಸ್ ಗೆ ಮೊದಲು ಮತ್ತು ಬಳಿಕ ಮೂತ್ರ ವಿಸರ್ಜನೆ ಮಾಡುವುದರಿಂದ ಲೈಂಗಿಕ ರೋಗಗಳು ಬರುವುದೇ ಇಲ್ಲ ಎನ್ನುವುದಕ್ಕೆ ಯಾವುದೇ ದೃಢವಾದ ಆಧಾರಗಳು ಇಲ್ಲ. ಸೆಕ್ಸ್ ಬಳಿಕ ಮೂತ್ರಕೋಶವನ್ನು ಖಾಲಿ ಮಾಡುವುದು ಒಂದು ಒಳ್ಳೆಯ ಅಭ್ಯಾಸ ಎಂದು ವೈದ್ಯರು ಹೇಳುತ್ತಾರೆ. ಒಂದು ಹಂತದಲ್ಲಿ ಮೂತ್ರಕೋಶವನ್ನು ಖಾಲಿ ಮಾಡುವುದು ಒಳ್ಳೆಯದು. ಆದರೆ ನಿಮಗೆ ಮೂತ್ರ ವಿಸರ್ಜನೆ ಮಾಡಬೇಕೆಂದು ಅನಿಸದೆ ಇದ್ದರೆ ಕೆಲವು ಹನಿಗಳನ್ನು ಹೊರಹಾಕುವುದು ಖಂಡಿತವಾಗಿಯೂ ನೆರವಾಗುವುದಿಲ್ಲ. ಸೆಕ್ಸ್ ಬಳಿಕ ಮಾಡುವಂತಹ ಕೆಲವೊಂದು ನಡವಳಿಕೆಗಳಿಂದ ಯುಟಿಐ ಅಪಾಯವನ್ನು ಕುಗ್ಗಿಸಲು ಸಾಧ್ಯ ಎಂದು ಸಾಬೀತಾಗಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಮೂತ್ರಕೋಶಗಳ ಬಗ್ಗೆ ನೀವು ಹೆಚ್ಚು ಚಿಂತೆ ಮಾಡುತ್ತಲಿದ್ದರೆ ಆಗ ನೀವು ಈ ಸಲಹೆಗಳನ್ನು ಪಾಲಿಸಿ.

Most Read: ಮಹಿಳೆಯರೇ! ಒಳ ಚಡ್ಡಿಯನ್ನು ದಿನಕ್ಕೊಮ್ಮೆಯಾದರೂ ಬದಲಿಸಿ! ಇಲ್ಲಾಂದ್ರೆ ಇದೆಲ್ಲಾ ಸಮಸ್ಯೆ ಬರಬಹುದು....

ಕ್ರಾನ್ ಬೆರ್ರಿ ಮಾತ್ರೆಗಳು ಮತ್ತು ವಿಟಮಿನ್ ಸಿ

ಕ್ರಾನ್ ಬೆರ್ರಿ ಮಾತ್ರೆಗಳು ಮತ್ತು ವಿಟಮಿನ್ ಸಿ

ಯುಟಿಐ ಬರದಂತೆ ತಡೆಯಲು ಕ್ರಾನ್ ಬೆರ್ರಿ ಮಾತ್ರೆಗಳನ್ನು ಹೆಚ್ಚಾಗಿ ತೆಗೆದುಕೊಳ್ಳುವುದು ಸರಿಯಾದ ಕ್ರಮವಲ್ಲ ಎಂದು ಲೆವಿಕ್ಕಿ ಗಾಪ್ಪ ಅವರು ಹೇಳುತ್ತಾರೆ. ಇದು ಅಷ್ಟು ಹಾನಿಕಾರಕವಲ್ಲ. ಕ್ರಾನ್ ಬೆರ್ರಿಗಳಲ್ಲಿ ಪ್ರೊನ್ಟೋಸಯಾನಿಡಿನ್ ಗಳು ಇರುತ್ತದೆ. ಇದು ಮೂತ್ರಕೋಶದ ಗೋಡೆ, ಗರ್ಭಕೋಶ ಅಥವಾ ಕಿಡ್ನಿಗೆ ಬಾಧಿಸುವಂತಹ ಬ್ಯಾಕ್ಟೀರಿಯಾಗಳನ್ನು ತಡೆಯುತ್ತದೆ. ಕ್ರಾನ್ ಬೆರ್ರಿ ಸಪ್ಲಿಮೆಂಟ್ ಗಳು ಎಷ್ಟು ಪರಿಣಾಮ ಬೀರುತ್ತದೆ ಎಂದು ಹೇಳಲು ಸಾಧ್ಯವಿಲ್ಲ.

ಋತುಚಕ್ರಕ್ಕೆ ಮೊದಲು

ಋತುಚಕ್ರಕ್ಕೆ ಮೊದಲು

ಆದರೆ ಇದು ಋತುಚಕ್ರಕ್ಕೆ ಮೊದಲು ಕಾಡುವಂತಹ ಕೆಲವೊಂದು ಸೋಂಕುಗಳನ್ನು ತಡೆಯಲು ಸಹಕಾರಿಯಾಗಿದೆ. ಇದು ಪರಿಣಾಮಕಾರಿ. ಆದರೆ ಈ ಮಾತ್ರೆಗಳಲ್ಲಿ ವಿಟಮಿನ್ ಸಿ ಕೂಡ ಇದೆ. ವಿಟಮಿನ್ ಸಿಯು ಮೂತ್ರವನ್ನು ಆಮ್ಲೀಕರಿಸುವುದು ಮತ್ತು ಬ್ಯಾಕ್ಟೀರಿಯಾ ಪ್ರಸರಣವಾಗದಂತೆ ತಡೆಯುವುದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ನೀವು ಯಾವುದೇ ರೀತಿಯ ಸಪ್ಲಿಮೆಂಟ್ ಅಥವಾ ವಿಟಮಿನ್ ಮಾತ್ರೆಗಳನ್ನು ತೆಗೆದುಕೊಳ್ಳುವ ಮೊದಲು ವೈದ್ಯರನ್ನು ಸಂಪರ್ಕಿಸಿ.

Most Read: ಸಣ್ಣ ವಯಸ್ಸಿನಲ್ಲಿ ಸೆಕ್ಸ್‌ನಲ್ಲಿ ಭಾಗಿಯಾದರೆ ಏನೆಲ್ಲಾ ಸಮಸ್ಯೆಗಳಾಗುತ್ತದೆ ನೋಡಿ...

ಯಾವಾಗ ಹೋಗಬೇಕು

ಯಾವಾಗ ಹೋಗಬೇಕು

ಒಳನುಗ್ಗುವಿಕೆಯ ಸೆಕ್ಸ್ ನಿಂದಾಗಿ ಮೂತ್ರಕೋಶದ ಮೇಲೆ ಒತ್ತಡ ಬೀಳಬಹುದು ಅಥವಾ ಶ್ರೋಣಿಯ ಪದರದಲ್ಲಿ ಕಿರಿಕಿರಿ ಉಂಟು ಮಾಡಬಹುದು. ಇದರಿಂದ ಮೂತ್ರವು ಸೋರಬಹುದು ಅಥವಾ ತಕ್ಷಣವೇ ಶೌಚಾಲಯಕ್ಕೆ ಹೋಗಬೇಕೆಂದು ಆಗಬಹುದು. ಇದಕ್ಕಾಗಿ ಸೆಕ್ಸ್ ಗೆ ಮೂತ್ರವಿಸರ್ಜನೆ ಮಾಡಿದರೆ ಇಂತಹ ಸಮಸ್ಯೆಯು ಕಡಿಮೆಯಾಗುವುದು. ಆದರೆ ಸೆಕ್ಸ್ ಗೆ ಮೊದಲು ಅಥವಾ ಬಳಿಕ ನಿಮಗೆ ನಿಯಮಿತವಾಗಿ ಹೀಗೆ ಆಗುತ್ತಲಿದ್ದರೆ ಆಗ ನೀವು ಶ್ರೋಣಿಯ ಪದರವನ್ನು ಸರಿಯಾಗಿಡಬೇಕು.

ಮೂತ್ರ ವಿಸರ್ಜನೆಗೆ ಹೋಗಬೇಕು ಎಂದು ಅನಿಸಿದರೆ ಆಗ ಹೋಗಿ

ಮೂತ್ರ ವಿಸರ್ಜನೆಗೆ ಹೋಗಬೇಕು ಎಂದು ಅನಿಸಿದರೆ ಆಗ ಹೋಗಿ

ಸಾಮಾನ್ಯವಾಗಿ ಹೇಳುವುದಾದರೆ ಮೂತ್ರ ವಿಸರ್ಜನೆಯನ್ನು ತಡೆಯುವುದು ಸರಿಯಾದ ಕ್ರಮವಲ್ಲ. ನಿಮಗೆ ಮೂತ್ರ ವಿಸರ್ಜನೆಗೆ ಹೋಗಬೇಕು ಎಂದು ಅನಿಸಿದರೆ ಆಗ ಹೋಗಿ ಮತ್ತು ನೀರನ್ನು ಕುಡಿಯುತ್ತಾ ಯಾವಾಗಲೂ ದೇಹವನ್ನು ತೇವಾಂಶದಿಂದ ಇಟ್ಟುಕೊಳ್ಳಿ. ಇದಕ್ಕಾಗಿ ನೀವು ಲೀಟರ್ ಗಟ್ಟಲೆ ನೀರು ಕುಡಿಯಬೇಕು ಎಂದಿಲ್ಲ. ಬಾಯಾರಿಕೆ ಆದಾಗ ಮಾತ್ರ ನೀರು ಕುಡಿದರೆ ಸಾಕು ಎಂದು ಡಾ. ಗಾಪ್ಪ ತಿಳಿಸಿದ್ದಾರೆ.

Most Read: ಅಧ್ಯಯನ ವರದಿ: ಹೆಚ್ಚಾಗಿ ಮಹಿಳೆಯರೇ ಸೆಕ್ಸ್‌ನ ಆರೋಗ್ಯದ ಲಾಭ ಕಡೆಗಣಿಸುತ್ತಾರಂತೆ!

ಪ್ರತಿಯೊಬ್ಬರ ದೇಹವು ಭಿನ್ನ

ಪ್ರತಿಯೊಬ್ಬರ ದೇಹವು ಭಿನ್ನ

ಜನನೇಂದ್ರೀಯ, ಗರ್ಭಕೋಶದ ಉದ್ದ ಮತ್ತು ವೈಯಕ್ತಿಕ ಸೂಕ್ಷ್ಮಜೀವಿಯಿಂದಾಗಿ ಹೆಚ್ಚಿನವರು ಯುಟಿಐ ಪಡೆಯುವುದು ಸಾಮಾನ್ಯವಾಗಿರುವುದು. ನೀವು ಪದೇ ಪದೇ ಸೋಂಕು ಎದುರಿಸುತ್ತಿದ್ದರೆ, ವೈದ್ಯರು ಕೂಡ ಪಾಸಿಟಿವ್ ಯುರಿನ್ ಕಲ್ಚರ್ ಬಗ್ಗೆ ದೃಢಪಡಿಸಿದ್ದರೆ ಆಗ ನೀವು ಸೆಕ್ಸ್ ಬಳಿಕ ಕಡಿಮೆ ಪ್ರಮಾಣದ ಆ್ಯಂಟಿಬಯೋಟಿಕ್ ತೆಗೆದುಕೊಳ್ಳುವುದು ಒಳ್ಳೆಯದು

ಪರಾಕಾಷ್ಠೆ ತಲುಪಿದ ಬಳಿಕ

ಪರಾಕಾಷ್ಠೆ ತಲುಪಿದ ಬಳಿಕ

ಪರಾಕಾಷ್ಠೆ ತಲುಪಿದ ಬಳಿಕ ನೀವು ಪರಸ್ಪರ ಅನ್ಯೋನ್ಯತೆಯಿಂದ ಇರುವ ಮಧ್ಯೆ ಯಾವುದೇ ಅಡ್ಡಿಯಾಗಬಾರದು. ಇದರಿಂದಾಗಿ ನೀವು ತಕ್ಷಣವೇ ಶೌಚಾಲಯಕ್ಕೆ ಓಡಬೇಕಿಲ್ಲ. ಇದರಿಂದ ಸೆಕ್ಸ್ ನ್ನು ನೀವು ಆನಂದಿಸಿ ಮತ್ತು ಅದರ ಬಳಿಕದ ಪ್ರೀತಿಯನ್ನು ಕೂಡ. ಇದರಿಂದ ನೀವು ಮಲಗುವ ಮೊದಲು ಮೂತ್ರವಿಸರ್ಜನೆ ಮಾಡಿದರೆ ಒಳ್ಳೆಯದು.

English summary

why it can be hard to pee after sex for women

After sex, the body releases vasopressin and oxytocin. Both of these hormones play an important role in pair-bonding. But vasopressin is an antidiuretic, which can make it hard to urinate after sex. Lewicky Gaupp, a urogynecology and pelvic reconstructive surgeon at Northwestern Memorial Hospital in Chicago. Too much of this hormone can cause the kidneys to retain water, so a sudden release post-orgasm can limit the amount of water passed in urine.
Story first published: Tuesday, January 22, 2019, 17:57 [IST]
X
Desktop Bottom Promotion