For Quick Alerts
ALLOW NOTIFICATIONS  
For Daily Alerts

ಉಬ್ಬಸ: ಲಕ್ಷಣಗಳು, ಕಾರಣಗಳು ಮತ್ತು ಚಿಕಿತ್ಸೆ

|

ಉಸಿರಾಟದಲ್ಲಿ ಕಾಣಬರುವ ಯಾವುದೇ ಅಸಹಜತೆಯನ್ನು ಉಬ್ಬಸ ಎಂದು ಸುಲಭಪದಗಳಲ್ಲಿ ಕರೆಯಬಹುದು. ಆದರೆ ಕೆಲವೊಮ್ಮೆ ಉಬ್ಬಸ ತೀವ್ರತರನಾಗಿದ್ದು ಪ್ರತಿ ನಿಃಶ್ವಾಸದ ಸದ್ದಿನಲ್ಲಿ ಚಿಕ್ಕದಾಗಿ ಸಿಳ್ಳೆ ಹೊಡೆದ ಶಬ್ದವೂ ಮಿಳಿತವಾಗಿರುತ್ತದೆ. ತೀವ್ರ ಉಬ್ಬಸವಿದ್ದರೆ ಉಶ್ವಾಸ-ನಿಃಶ್ವಾಸಗಳಲ್ಲೆರಡಲ್ಲಿಯೂ ಸೀಟಿಯ ಸದ್ದು ಕೇಳಿಬರಬಹುದು. ಇದಕ್ಕೆ ಪ್ರಮುಖ ಕಾರಣ ಶ್ವಾಸನಾಳಗಳು ಕಿರಿದಾಗುವುದು. ಈ ತೊಂದರೆಯನ್ನು ನಿರ್ಲಕ್ಷಿಸಿದರೆ ಕಾಲಕ್ರಮೇಣ ಇದು ಗಂಭೀರ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು ಹಾಗೂ ಹೆಚ್ಚಿನ ಪರೀಕ್ಷೆ ಮತ್ತು ಚಿಕಿತ್ಸೆಗಳ ಅಗತ್ಯತೆ ತಲೆದೋರಬಹುದು.

ಉಬ್ಬಸದ ವಿಷಯದಲ್ಲಿ ಹೆಚ್ಚಿನ ಸಂಶೋಧನೆ ನಡೆಸುವ ಸಂಸ್ಥೆಯಾದ the American Thoracic Society Committee on pulmonary nomenclature ಪ್ರಕಾರ ಮಂದ್ರಸ್ತರದ ನಾನ್ನೂರು ಹರ್ಟ್ಸ್ ಅಥವಾ ಅದಕ್ಕೂ ಹೆಚ್ಚಿನ ಕಂಪನಗಳ ಸ್ತರದ ಧ್ವನಿ ಹೊರಡಿಸುವ ಉಸಿರಾಟವಿದ್ದರೆ ಇದು ಅಪಾಯಕರವಾಗಿದೆ. ಒಂದು ವೇಳೆ ಈ ಕಂಪನಗಳು ಇನ್ನೂರು ಹರ್ಟ್ಸ್ ಗಿಂತಲೂ ಕಡಿಮೆ ಇದ್ದರೆ ಈ ಸ್ಥಿತಿಯನ್ನು Rhonchi ಎಂದು ಕರೆಯಲಾಗುತ್ತದೆ. ಆ ಪ್ರಕಾರ, ಉಬ್ಬಸವನ್ನು ಶ್ವಾಸಕೋಶದ ತೊಂದರೆಯಿಂದ ಹೊರಟ ಸದ್ದುಗಳು ಎಂದೂ ಕರೆಯಬಹುದು.

Wheezing

ಉಬ್ಬಸ ಎದುರಾಗಲು ಕಾರಣಗಳೇನು?

*ಉಬ್ಬಸ ಎದುರಾಗಲು ಕೆಲವಾರು ಕಾರಣಗಳಿವೆ. ಇವುಗಳಲ್ಲಿ ಕೆಲವು ಅಲ್ಪಪ್ರಮಾಣದ ಉಬ್ಬಸಕ್ಕೆ ಕಾರಣವಾದರೆ ಕೆಲವು ತೀವ್ರತರದ ಉಬ್ಬಸಕ್ಕೆ ಕಾರಣವಾಗಬಹುದು.

*ಮೂಗಿನ ಮೂಲಕ ದ್ರವಾಹಾರದ ನಳಿಕೆಯನ್ನು ಅಳವಡಿಸಿದ ಬಳಿಕ

*ಮೂಗಿನೊಳಗಿನ ಗಡ್ಡೆಗಳು

*ಉಸಿರಾಟದಲ್ಲಿ ಪರಕೀಯ ವಸ್ತುಗಳನ್ನು ಒಳಗೆಳೆದುಕೊಳ್ಳುವುದು

*ಸಾಮಾನ್ಯ ಆರೋಗ್ಯವಂತರು ಬಲವಂತವಾಗಿ ಉಸಿರು ಎಳೆದುಕೊಳ್ಳುವುದು

*ಶ್ವಾಸನಾಳಗಳಲ್ಲಿ ಉಸಿರಾಟಕ್ಕೆ ತಡೆಯೊಡ್ದುವ ಕಾರಣಗಳು, ಉದಾಹರಣೆಗೆ ಅಸ್ತಮಾ

*ಕ್ರೂಪ್ ಮತ್ತು ಲ್ಯಾರಿಂಜೈಟಿಸ್ ನಂತಹ ಸೋಂಕುಗಳು

*ಶ್ವಾಸನಳಿಕೆಯ ದ್ವಾರ ಮುಚ್ಚುವುದು (tracheobronchomalacia)

*ಶ್ವಾಸಕೋಶದಿಂದ ಹೃದಯಕ್ಕೆ ರಕ್ತಪರಿಚಲನೆ ಒದಗಿಸುವ ನಾಳಗಳಲ್ಲಿ ತೊಂದರೆ (Pulmonary peribronchial oedema)

*ಶ್ವಾಸನಳಿಕೆ ಒತ್ತಲ್ಪಟ್ಟಿರುವುದು (ಅಲ್ಪ ಪ್ರಮಾಣ ಅಥವಾ ಗಂಭೀರ ಸ್ಥಿತಿ(squamous cell carcinomas, goitre)

*ಧ್ವನಿಪೆಟ್ಟಿಗೆಯ ತೊಂದರೆಗಳು (paradoxical vocal fold motion (PVFM)

*ಧ್ವನಿಪೆಟ್ಟಿಗೆಗೆ ಪಾರ್ಶ್ವವಾಯು ಆವರಿಸಿರುವುದು (vocal cord paralysis)

*ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳು (Chronic Obstructive pulmonary diseases (COPD) ಉದಾಹರಣೆಗೆ anaphylaxis ಮತ್ತು bronchiolitis)

ಉಬ್ಬಸದ ಲಕ್ಷಣಗಳು

ಉಬ್ಬಸದ ಹಲವಾರು ಲಕ್ಷಣಗಳಿವೆ. ಪ್ರಮುಖವಾಗಿ ಉಸಿರಾಟದ ಸಮಯದಲ್ಲಿ ಸೀಟಿ ಹೊಡೆದಂತೆ ಸದ್ದಾಗುವುದು ಹಾಗೂ ಉಸಿರಾಟ ಸರಾಗವಾಗಿರದೇ ಪ್ರತಿ ಉಸಿರನ್ನೂ ಬಲವಂತವಾಗಿ ಎಳೆದುಕೊಳ್ಳುವುದು ಹಾಗೂ ಎದೆಯ ಭಾಗದಲ್ಲಿ ಒತ್ತಿಕೊಂಡುರುವ ಭಾವನೆ ಮೂಡುತ್ತದೆ. ಅಚ್ಚರಿ ಎಂದರೆ ಉಸಿರಾಟದ ಸೀಟಿಯ ದನಿ ಕಿವಿ ಮುಚ್ಚಿಕೊಂಡಿದ್ದಾಗ ಈ ಸದ್ದು ಅತಿ ಸ್ಪಷ್ಟವಾಗಿ ಕೇಳಿಸುತ್ತದೆ. ಉಸಿರಾಟದ ತೊಂದರೆ ರೋಗಿಯ ನೋಟ, ಹಸಿವು, ಉಸಿರಾಟದ ಗತಿ ಹಾಗೂ ನಿದ್ದೆಯ ಗತಿಗಳು ಬದಲಾಗುತ್ತವೆ. ಉಸಿರಾಟ ಸದ್ದಿನಿಂದ ಕೂಡಿರುವ ಜೊತೆಗೇ ಎದೆಯಲ್ಲಿಯೂ ದನಿ, ಸತತ ಕೆಮ್ಮು ಮತ್ತು ಜ್ವರ ಆವರಿಸುತ್ತದೆ.

ಉಬ್ಬಸದ ಅಪಾಯಗಳು

ಉಬ್ಬಸ ಯಾವುದೇ ವಯಸ್ಸಿನಲ್ಲಿ, ಯಾರಿಗೂ ಕಾಣಿಸಿಕೊಳ್ಳಬಹುದು. ಆದರೆ ಕೆಲವು ಲಕ್ಷಣಗಳನ್ನು ಗಮನಿಸಿ ಸೂಕ್ತ ಎಚ್ಚರಿಕೆ ವಹಿಸುವ ಮೂಲಕ ಮುಂದೆ ಇದು ಉಬ್ಬಸಕ್ಕೆ ತಿರುಗುವುದನ್ನು ತಪ್ಪಿಸಬಹುದು. ಅಸ್ತಮಾ ಸಹಾ ಉಸಿರಾಟಕ್ಕೆ ಸಂಬಂಧಿಸಿದ ಕಾಯಿಲೆಯಾಗಿದೆ ಹಾಗೂ ವಂಶಪಾರಂಪರ್ಯವಾಗಿ ಬರುತ್ತದೆ. ಆದರೆ ಉಬ್ಬಸ ಅಲರ್ಜಿ, ಶ್ವಾಸಕೋಶದ ಕ್ಯಾನ್ಸರ್ ಹಾಗೂ ಧೂಮಪಾನಿಗಳಲ್ಲಿ ಆವರಿಸುವ ಸಾಧ್ಯತೆ ಹೆಚ್ಚು. ಅಲ್ಲದೇ ಪುಟ್ಟ ಮಕ್ಕಳಿಗೆ ಕೆಲವು ಸೋಂಕುಗಳ ಮೂಲಕವೂ ಎದುರಾಗಬಹುದು.

ಉಬ್ಬಸದ ಪತ್ತೆಹಚ್ಚುವಿಕೆ

*ಮೊದಲಾಗಿ ವೈದ್ಯರು ರೋಗಿಗೆ ಕೆಲವು ಪ್ರಶ್ನೆಗಳನ್ನು ಕೇಳಿ ರೋಗಗ ವಿವರ ಪಡೆದುಕೊಳ್ಳುತ್ತಾರೆ. ಮುಖ್ಯವಾಗಿ ಉಬ್ಬಸ ಎಂದಿನಿಂದ ಪ್ರಾರಂಭವಾಗಿದೆ ಎಂಬ ಪ್ರಶ್ನೆ ಮೊದಲಾಗಿ ಕೇಳಲಾಗುತ್ತದೆ.

*ಬಳಿಕ ಕೆಲವು ಪರೀಕ್ಷೆಗಳನ್ನು ನಡೆಸಿ ಇದು ಎಷ್ಟರ ಮಟ್ಟಿನ ತೀವ್ರತೆಗೆ ತಲುಪಿದೆ ಎಂಬುದನ್ನು ಕಂಡುಕೊಳ್ಳಲಾಗುತ್ತದೆ. ಉಬ್ಬಸ ಸತತವಾಗಿದೆಯೇ ಅಥವಾ ಬಿಟ್ಟು ಬಿಟ್ಟು ಬರುತ್ತದೆಯೇ, ನಿಃಶ್ವಾಸದ ಸಮಯದಲ್ಲಿ ಕಫ ಹೊರಬರುತ್ತದೆಯೇ ಮೊದಲಾದವುಗಳನ್ನು ಪ್ರಶ್ನಿಸಿ ವೈದ್ಯರು ರೋಗದ ಮಾಹಿತಿಗಳನ್ನು ಪಡೆದುಕೊಳ್ಳುತ್ತಾರೆ.

ಉಳಿದಂತೆ ವೈದ್ಯರು ಕೇಳುವ ಇತರ ಪ್ರಶ್ನೆಗಳೆಂದರೆ:

*ಉಬ್ಬಸ ಎದುರಾಗಲು ಯಾವುದಾದರೂ ಪ್ರತ್ಯೇಕ ಕಾರಣವಿದೆಯೆ

*ಹಗಲಿನಲ್ಲಿ ಅಥವಾ ರಾತ್ರಿ, ಯಾವಾಗ ಕಾಣಿಸಿಕೊಳ್ಳುತ್ತದೆ?

*ಯಾವುದಾದರೂ ಆಹಾರ ಸೇವಿಸಿದ ಬಳಿಕವೇ ಎದುರಾಗುತ್ತದೆಯೇ?

*ಉಬ್ಬಸ ಬಂದ ಬಳಿಕ ವಿಶ್ರಾಂತಿ ಪಡೆದರೆ ಕಡಿಮೆಯಾಗುತ್ತದೆಯೇ?

*ನೀವು ಧೂಮಪಾನಿಗಳೇ?

*ಉಶ್ವಾಸ ಅಥವಾ ನಿಃಶ್ವಾಸ, ಯಾವುದು ಹೆಚ್ಚು ಕಷ್ಟಕರ?

*ಒಂದು ವೇಳೆ ನಿಮ್ಮ ಸ್ಥಿತಿ ತೀವ್ರತರದ್ದಾಗಿದ್ದು ಅಥವಾ ಉಲ್ಬಣಾವಸ್ಥೆಯತ್ತ ಸಾಗುತ್ತಿದ್ದರೆ ವೈದ್ಯರು ಇನ್ನೂ ಕೆಲವು ಪರೀಕ್ಷೆಗಳನ್ನು ನಡೆಸಬಹುದು ಹಾಗೂ ಶ್ವಾಸಕೋಶದ ಮತ್ತು ಉಸಿರಾಟದ ಸದ್ದುಗಳನ್ನು ಸೂಕ್ಷ್ಮವಾಗಿ ಆಲಿಸಿ ಧಾಖಲಿಸಿಕೊಳ್ಳಬಹುದು. ರಕ್ತಪರೀಕ್ಷೆ, ಶ್ವಾಸಕೋಶದ ಎಕ್ಸ್ ರೇ, ಶ್ವಾಸಕೋಶದ ಕ್ಷಮತೆಯ ಪರೀಕ್ಷೆ ಮೊದಲಾದವುಗಳನ್ನು ನಡೆಸಿ ದೇಹದಲ್ಲಿ ಲಭ್ಯವಾಗುತ್ತಿರುವ ಆಮ್ಲಜನಕದ ಪ್ರಮಾಣವನ್ನೂ ಅಳೆಯಲಾಗುತ್ತದೆ.

*ಪುಟ್ಟ ಮಕ್ಕಳಿಗೆ ಈ ಪರೀಕ್ಷೆಗಳ ಹೊರತಾಗಿ ಇವರು ಅರಿವಿಲ್ಲದೇ ಯಾವುದಾದರೂ ವಸ್ತುಗಳನ್ನು ನುಂಗಿದ್ದರೆ ಅಥವಾ ಉಸಿರಾಟದ ಮೂಲಕ ಶ್ವಾಸನಳಿಕೆಯಲ್ಲೇನಾದರೂ ಸಿಕ್ಕಿಕೊಂಡಿದ್ದರೆ, ಉದಾಹರಣೆಗೆ ನಾಣ್ಯಗಳು, ಕಾಗದದ ಚೂರುಗಳು, ಪುಟ್ಟ ಆಟಿಕೆಯ ಬಿಡಿಭಾಗಗಳು, ಮೊದಲಾದವು ಇವೆಯೇ ಎಂದು ಪರೀಕ್ಷಿಸಲಾಗುತ್ತದೆ. ಇವೂ ಉಬ್ಬಸಕ್ಕೆ ಕಾರಣವಾಗಬಹುದು.

MOst Read: ಉಬ್ಬಸ ನಿವಾರಣೆ ಮಾಡಲು ಕೆಲವೊಂದು ನೈಸರ್ಗಿಕ ವಿಧಾನಗಳು

ಉಬ್ಬಸಕ್ಕೆ ಚಿಕಿತ್ಸೆಗಳು

ತೇವಭರಿತ ಗಾಳಿಯ ಸೇವನೆ - ಹಬೆಯನ್ನು ಉಸಿರಾಡುವ ಮೂಲಕ ಶ್ವಾಸನಾಳಗಳಲ್ಲಿ ಕಟ್ಟಿಕೊಂಡಿದ್ದ ತಡೆ ತೆರವಾಗುವುದು ಮಾತ್ರವಲ್ಲ ಕಫವನ್ನೂ ಕರಗಿಸಿ ಶ್ವಾಸದ್ವಾರವನ್ನು ನಿರಾಳವಾಗಿಸುತ್ತದೆ ಹಾಗೂ ಉಸಿರಾಟ ಸರಾಗವಾಗುತ್ತದೆ.

ಬೆಚ್ಚಗಿನ ದ್ರವಾಹಾರದ ಸೇವನೆ: ಉಗುರುಬೆಚ್ಚನೆಯ ನೀರು, ಗಿಡಮೂಲಿಕೆಗಳ ಟೀ ಅಥವಾ ಬಿಸಿ ಹಾಲು ಯಾವುದಾದರೊಂದು ಪಾನೀಯವನ್ನು ಬಿಸಿಯಾಗಿಯೇ ಸೇವಿಸುವ ಮೂಲಕ ಉಸಿರಾಟ ಸರಾಗವಾಗುತ್ತದೆ ಹಾಗೂ ಹಠಮಾರಿ ಕಫ ಕರಗಿ ನೀರಾಗುವ ಮೂಲಕ ತಡೆ ಇಲ್ಲವಾಗುತ್ತದೆ.

Wheezing

ಆಹಾರಕ್ರಮ: ವಿಟಮಿನ್ ಡಿ ಹೆಚ್ಚಿರುವ ಆಹಾರಗಳನ್ನು ಹೆಚ್ಚು ಹೆಚ್ಚಾಗಿ ಸೇವಿಸಬೇಕು ಉದಾಹರಣೆಗೆ ಎಣ್ಣೆಯುಕ್ತ ಮೀನುಗಳು (ಸಾಲ್ಮನ್, ಬಂಗಡೆ, ಕೆಂಪು ಮಾಂಸ) ವಿಟಮಿನ್ ಇ ಹೆಚ್ಚಿರುವ ಆಹಾರಗಳು (ಪಾಲಕ್ ಸೊಪ್ಪು, ಸೂರ್ಯಕಾಂತಿ ಹೂವಿನ ಬೀಜಗಳು, ಶೇಂಗಾಬೀಜದ ಬೆಣ್ಣೆ, ಬಾದಾಮಿ) ಮೊದಲಾದವುಗಳನ್ನು ಹೆಚ್ಚಾಗಿ ಸೇವಿಸುವ ಮೂಲಕ ಶ್ವಾಸಕೋಶಕ್ಕೆ ಸಂಬಂಧಿಸಿದ ತೊಂದರೆಗಳು ಇಲ್ಲವಾಗುತ್ತವೆ. ಹಸಿಯಾಗಿ ತಿನ್ನಬಹುದಾದ ತರಕಾರಿಗಳಾದ ಪಾಲಕ್, ಬ್ರೋಕೋಲಿ, ಟೊಮಾಟೋ, ಕೆಂಪು ದೊಣ್ಣೆಮೆಣಸು, ಕಿತ್ತಳೆಹಣ್ಣು ಮೊದಲಾದವುಗಳ ಸೇವನೆಯೂ ಉತ್ತಮ.

ಔಷಧಿಗಳು

ವೈದ್ಯರು ನೀಡಿದ ಸೂಚನೆಗಳನ್ನು ಸರಿಯಾಗಿ ಪಾಲಿಸುವುದು ಹಾಗೂ ಸಲಹೆ ಮಾಡಿದ ಔಷಧಿಗಳನ್ನು ತಪ್ಪದೇ ಸೇವಿಸುವುದು ಅಗತ್ಯವಗಿದೆ. ವೈದ್ಯರು ಉಬ್ಬಸಕ್ಕೆ ನೀಡಿರುವ ಔಷಧಿಗಳಲ್ಲಿ ಕೆಲವು ನಿಯಮಿತವಾಗಿ ಸೇವಿಸಬೇಕಾಗಿದ್ದರೆ ಕೆಲವನ್ನು ಸದಾ ತಮ್ಮೊಂದಿಗಿರಿಸಿ ತುರ್ತು ಸಮಯದಲ್ಲಿ ಸೇವಿಸಬೇಕಾಗುತ್ತದೆ. ಇದರ ಹೊರತಾಗಿಯೂ ಯಾವುದಾದರೂ ತುರ್ತು ಪರಿಸ್ಥಿತಿ ಎದುರಾದರೆ ತಕ್ಷಣವೇ ವೈದ್ಯರ ಸಲಹೆ ಪಡೆಯಬೇಕು.

pursed lip breathing ಎಂಬ ವಿಧಾನದ ಉಸಿರಾಟವನ್ನು ಕಲಿತು ಅಭ್ಯಾಸಮಾಡಿಕೊಳ್ಳಿ. (ಮೂಗಿನಿಂದ ನಿಧಾನವಾಗಿ ಪೂರ್ಣ ಉಸಿರು ಒಳಗೆಳೆದುಕೊಳ್ಳುವುದು ಹಾಗೂ ಸೀಟಿ ಹೊಡೆಯುವಂತೆ ತುಟಿಗಳನ್ನು ವೃತ್ತಾಕಾರವಾಗಿಸಿ ನಿಧಾನವಾಗಿ ಬಾಯಿಯಿಂದ ಉಸಿರನ್ನು ಪೂರ್ಣವಾಗಿ ಹೊರಬಿಡುವುದು). ಪ್ರಾರಂಭದಲ್ಲಿ ಈ ಕ್ರಿಯೆಯನ್ನು ನಿಧಾನವಾಗಿ ಪ್ರಾರಂಭಿಸಿ ಅಭ್ಯಾಸವಾದಂತೆ ಕೊಂಚ ವೇಗ ಹೆಚ್ಚಿಸಬಹುದು. ಈ ಮೂಲಕ ಶ್ವಾಸಕೋಶದಿಂದ ಗರಿಷ್ಟ ಮಟ್ಟಿನ ಆಮ್ಲಜನಕವನ್ನು ಪಡೆಯಬಹುದು.

Wheezing

ಧೂಮಪಾನ ತ್ಯಜಿಸಿ

ಧೂಮಪಾನ ಯಾವತ್ತಿದ್ದರೂ, ಯಾರಿಗಾದರೂ ಅಪಾಯಕಾರವೇ ಹೌದು. ಉಬ್ಬಸವಿರುವ ರೋಗಿ ಧೂಮಪಾನಿಯೂ ಆಗಿದ್ದರೆ ಈ ಸ್ಥಿತಿ ಗಂಭೀರ ಮಟ್ಟದ ಬ್ರಾಂಖೈಟಿಸ್ ಹಾಗೂ ಎಂಫೈಸಿಮಾ ಎಂಬ ಕಾಯಿಲೆಗಳಿಗೆ ಪರಿವರ್ತಿತವಾಗಬಹುದು. ಹಾಗಾಗಿ ಧೂಮಪಾನವನ್ನು ಸಂಪೂರ್ಣವಾಗಿ ತ್ಯಜಿಸುವತ್ತ ಧನಾತ್ಮಕ ಧೋರಣೆ ತಳೆಯಬೇಕು.

English summary

Wheezing: Symptoms, Causes And Treatment

Wheezing is a respiratory disorder or a breathing problem and can occur at any age. It can be identified by loud or constant lung sounds and is treatable in its initial stages. If left untreated, it can result in severe health conditions and can prove to be fatal. This disease is both common and threatening.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more