For Quick Alerts
ALLOW NOTIFICATIONS  
For Daily Alerts

ಅಜೀರ್ಣ ಮತ್ತು ಹೊಟ್ಟೆಯುಬ್ಬರಿಕೆಯೇ? ಬರೀ ಎರಡೇ ನಿಮಿಷದ ಇಂತಹ ಮಸಾಜ್ ಮಾಡಿ-ತಕ್ಷಣವೇ ಗುಣವಾಗುತ್ತದೆ

|

ಊಟದ ಬಳಿಕ ಎದುರಾಗುವ ಅಜೀರ್ಣತೆಯಿಂದ ಹೊಟ್ಟೆಯುರಿ, ಹುಳಿತೇಗು, ಹೊಟ್ಟೆಯುಬ್ಬರಿಕೆ (ಹೊಟ್ಟೆಯಲ್ಲಿ ಗ್ಯಾಸ್) ಮೊದಲಾದವು ಎದುರಾರೆ ಭಾರೀ ಹಿಂಸೆಯಾಗುತ್ತದೆ. ಹೊಟ್ಟೆ ತುಂಬಿಲ್ಲದಿದ್ದರೂ ಕೊಂಚ ಆಹಾರ ಸೇವಿಸುತ್ತಲೇ ಹೊಟ್ಟೆ ತುಂಬಿರುವ ಭಾವನೆ ಎದುರಾಗುತ್ತದೆ. ಇದರಿಂದ ಆರೋಗ್ಯ ಕೆಡುವುದು ಮಾತ್ರವಲ್ಲದೇ ದಿನದ ಕಾರ್ಯಗಳಲ್ಲಿ ಅತೀವ ನಿತ್ರಾಣವೂ ಎದುರಾಗುತ್ತದೆ. ಕೆಲವೊಮ್ಮೆ ಅಜೀರ್ಣತೆಯ ಜೊತೆಗೇ ಫ್ಲೂ ಜ್ವರ, ಮಾಸಿಕ ದಿನಗಳ ಮುನ್ನಾದಿನಗಳ ಹೊಟ್ಟೆ ಕಿವುಚುವಿಕೆ ಮೊದಲಾದವು ಮಾನಸಿಕವಾಗಿಯೂ ದೈಹಿಕವಾಗಿ ಹಿಂಡಿ ಹಿಪ್ಪೆ ಮಾಡಿಬಿಡುತ್ತವೆ.

ಸಾಮಾನ್ಯವಾಗಿ ಅಜೀರ್ಣತೆಯ ತೊಂದರೆ ಎಂದರೆ ಜೀರ್ಣಕ್ರಿಯೆಯಲ್ಲಿ ಏರುಪೇರು ಎಂದೇ ನಾವೆಲ್ಲಾ ತಿಳಿದುಕೊಂಡಿದ್ದೇವೆ. ವಾಸ್ತವವಾಗಿ, ಮಾನಸಿಕವಾದ ಬಳಲುವಿಕೆಯಿಂದಲೂ ಈ ತೊಂದರೆ ಎದುರಾಗುತ್ತದೆ. ಈ ತೊಂದರೆಗಳಿಂದ ಹೊಟ್ಟೆ ಮತ್ತು ಕರುಳುಗಳಲ್ಲಿ ಉತ್ಪತ್ತಿಯಾದ ವಾಯುಗಳು ಹೊರಹೋಗಲು ಸಾಧ್ಯವಾಗದೇ ಈ ಅಂಗಗಳನ್ನು ಊದಿಕೊಳ್ಳುವಂತೆ ಮಾಡುವುದೇ ಹೊಟ್ಟೆಯುಬ್ಬರಿಕೆ ಎಂದು ಕರೆಯುತ್ತೇವೆ. ಈ ಉಬ್ಬರಿಕೆಯಿಂದ ಹುಳಿತೇಗು, ಅಪಾಯವಾಯು, ಹೊಟ್ಟೆ ಕರುಳುಗಳಲ್ಲಿ ಉರಿ, ಹುಣ್ಣು ಮೊದಲಾದವು ಎದುರಾಗಬಹುದು.

ಅಜೀರ್ಣತೆಗೆ ಮೂಲ ಕಾರಣ

ಅಜೀರ್ಣತೆಗೆ ಮೂಲ ಕಾರಣ

ಒಂದು ವೇಳೆ ನೀವು ಆಹಾರವನ್ನು ವೇಗವಾಗಿ ತಿನ್ನುತ್ತಾ, ಸರಿಯಾಗಿ ಜಗಿಯದೇ ನುಂಗುತ್ತಾ ಹೋದರೆ, ಈ ಘನ ಆಹಾರದ ತುಣುಕುಗಳು ಒಂದರ ಹಿಂದೊಂದು ಹೋಗುವಾಗ ತಮ್ಮ ಜೊತೆಯಲ್ಲಿ ಕೊಂಚ ಗಾಳಿಯನ್ನೂ ಕೊಂಡೊಯ್ಯುತ್ತವೆ ಹಾಗೂ ಇದೇ ಹೊಟ್ಟೆಯಲ್ಲಿ ಗಾಳಿ ತುಂಬಿಕೊಳ್ಳಲು ಪ್ರಮುಖ ಕಾರಣವಾಗಿದೆ. ಆದ್ದರಿಂದ ಪ್ರತಿ ತುತ್ತನ್ನೂ ಸಾವಕಾಶವಾಗಿ ಜಗಿದು ನೀರಾಗಿಸಿಯೇ ನುಂಗಬೇಕು. ಇದರಿಂದಾಗಿ ಕೊಂಚ ಹೆಚ್ಚು ಹೊತ್ತು ಬಳಕೆಯಾದರೂ ಸರಿ. ಸಾಮಾನ್ಯವಾಗಿ ಹಸುಗಳ ಜೀರ್ಣಾಂಗಗಳು ಆಹಾರವನ್ನು ಜೀರ್ಣಿಸಿಕೊಳ್ಳುವ ಸಮಯಕ್ಕಿಂತಲೂ ಮೂವತ್ತೆರಡು ಪಟ್ಟು ಕಡಿಮೆ ಸಮಯ ನಮ್ಮದು.

Most Read: ರಾಶಿಚಕ್ರದ ಅನುಸಾರ ಪ್ರೀತಿಯಲ್ಲಿ ಬಿದ್ದಾಗ ಯಾವ್ಯಾವ ರಾಶಿಯವರು ಹೇಗೆಲ್ಲಾ ವರ್ತಿಸುತ್ತಾರೆ ನೋಡಿ...

ಹೊಟ್ಟೆಯಲ್ಲಿ ನೋವು ಅಥವಾ ಮಲಬದ್ಧತೆ

ಹೊಟ್ಟೆಯಲ್ಲಿ ನೋವು ಅಥವಾ ಮಲಬದ್ಧತೆ

ಯಾವಾಗ ನಿಮಗೆ ನಿಮ್ಮ ಜೀರ್ಣಕ್ರಿಯೆಯಲ್ಲಿ ಏನಾದರೂ ತೊಂದರೆ ಇದೆ ಎಂದು ಅನ್ನಿಸಿದರೆ, ಇದರ ಪರಿಣಾಮವಾಗಿ ಹೊಟ್ಟೆಯಲ್ಲಿ ನೋವು ಅಥವಾ ಮಲಬದ್ದತೆ ಮೊದಲಾದ ಯಾವುದೇ ತೊಂದರೆ ಎದುರಾಗಬಹುದು. ಈ ಸ್ಥಿತಿ ಎದುರಾದರೆ ನಾವೇನು ಮಾಡುತ್ತೇವೆ? ತಕ್ಷಣವೇ ನೋವು ನಿವಾರಕ ಗುಳಿಗೆಯನ್ನು ನುಂಗಿಬಿಡುತ್ತೇವೆ. ಇದಕ್ಕೂ ಬಗ್ಗದೇ ಇದ್ದರೆ ನೈಸರ್ಗಿಕವಾಗಿಯೇ ಇದು ಕಡಿಮೆಯಾಗುತ್ತದೆ ಎಂಬ ನಿರೀಕ್ಷೆಯಿಂದ ಈ ನೋವನ್ನು ಸಹಿಸುತ್ತಾ ಹೋಗುತ್ತೇವೆ. ಆದರೆ ಈ ನೋವು ಮತ್ತು ಚಡಪಡಿಕೆಯಿಂದ ನಮ್ಮ ನಿತ್ಯದ ಅಗತ್ಯ ಕಾರ್ಯಗಳೂ ಬಾಧೆಗೊಳಗಾಗುವುದು ಮಾತ್ರ ಸುಳ್ಳಲ್ಲ. ಈ ತೊಂದರೆಯನ್ನು ನಿವಾರಿಸುವ ಕೆಲವು ಸುಲಭ ಮನೆಮದ್ದುಗಳಿದ್ದರೂ ಇವು ಪ್ರತಿ ಬಾರಿಯೂ ಸೂಕ್ತ ಪರಿಹಾರವನ್ನು ಒದಗಿಸುವ ಖಾತರಿ ಇಲ್ಲ.

Most Read: ಶೀಘ್ರ ಸ್ಖಲನ ಬಗ್ಗೆ ಇರುವಂತಹ ಸತ್ಯ ಹಾಗೂ ಸುಳ್ಳುಗಳು-ಇವೆಲ್ಲಾ ಸಂಗತಿಗಳು ನಿಮಗೆ ತಿಳಿದಿರಲಿ

ಹಾಗಾದರೆ ಈಗೇನು ಮಾಡಬೇಕು?

ಹಾಗಾದರೆ ಈಗೇನು ಮಾಡಬೇಕು?

ಈ ಪರಿಸ್ಥಿತಿಯಲ್ಲಿ, ಹೊಟ್ಟೆಯಲ್ಲಿ ಸಿಲುಕಿದ್ದ ವಾಯುವನ್ನು ಬಾಹ್ಯ ಒತ್ತಡದಿಂದ ಹೊರಹಾಕಲು ಸಾಧ್ಯವಾದರೆ ಇದರಿಂದ ತಕ್ಷಣ ಪರಿಹಾರ ದೊರಕಬಹುದು. ಈ ಕಾರ್ಯಕ್ಕೆ ಬೆರಳುಗಳಿಂದ ಹೊಟ್ಟೆಯನ್ನು ಸೊಂಟದ ಭಾಗದಿಂದ ಕಿವುಚಿಕೊಳ್ಳಬಹುದು. ಆದರೆ ಈ ವಿಧಾನದಿಂದ ಅಲ್ಪ ಮಟ್ಟಿಗಿನ ಪರಿಹಾರ ದೊರಕಬಹುದೇ ವಿನಃ ಹೆಚ್ಚಿನ ಪ್ರಯೋಜನವಿಲ್ಲ. ಆದರೆ ಈ ತೊಂದರೆಯನ್ನು ನಿಯಂತ್ರಿಸುವ ಒಂದು ಭಾವನೆ ಮಾತ್ರ ಮೂಡುತ್ತದೆ. ಆದರೆ ಈ ತೊಂದರೆಗೆ ಇನ್ನೊಂದು ಸುಲಭ ವಿಧಾನವಿದೆ ಹಾಗೂ ಇದಕ್ಕೆ ಇತರರ ಸಹಾಯವೂ ಬೇಕಾಗಿಲ್ಲ. ನೀವೇ ನಿಮಗೆ ಎರಡು ನಿಮಿಷಗಳ ಮಸಾಜ್ ಕೊಟ್ಟುಕೊಳ್ಳಬಹುದು.

ಆಹಾರ ಮತ್ತು ಆರೋಗ್ಯತಜ್ಞರ ಪ್ರಕಾರ

ಆಹಾರ ಮತ್ತು ಆರೋಗ್ಯತಜ್ಞರ ಪ್ರಕಾರ

ಆಹಾರ ಮತ್ತು ಆರೋಗ್ಯತಜ್ಞರ ಪ್ರಕಾರ, ಆಹಾರ ಸೇವಿಸುವ ಅತ್ಯುತ್ತಮ ವಿಧಾನವೆಂದರೆ ನಿಧಾನವಾಗಿ, ಒಂದೊಂದು ತುತ್ತನ್ನೂ ಚೆನ್ನಾಗಿ ಜಗಿದು ನೀರಾಗಿಸಿ ನುಂಗುವುದಾಗಿದೆ. ಮಾನಸಿಕ ಒತ್ತಡದ ಸಮಯದಲ್ಲಿ ನಾವು ಆಹಾರವನ್ನು ಲಗುಬಗೆಯಿಂದ ತಿನ್ನತೊಡಗುತ್ತೇವೆ ಹಾಗೂ ಇದರಿಂದ ವಾಯುವನ್ನೂ ನುಂಗುತ್ತೇವೆ. ಇದರಿಂದ ಹೊಟ್ಟೆಯಲ್ಲಿ ಉರಿಯೂತವುಂಟಾಗುತ್ತದೆ ಹಾಗೂ ಇದು ಮುಂದುವರೆದು ಕರುಳು ಹಾಗೂ ಇತರ ಅಂಗಗಳಿಗೂ ವ್ಯಾಪಿಸಿ ಆರೋಗ್ಯವನ್ನು ಕೆಡಿಸಬಹುದು. ಹಾಗಾಗಿ ಆಹಾರಸೇವನೆಯಲ್ಲಿ ಸೂಕ್ತಕ್ರಮವನ್ನು ಅನುಸರಿಸಬೇಕು, ಅಂದರೆ ಬಾಯಿ, ಅನ್ನನಾಳ, ಜಠರ ಮತ್ತು ಕರುಳುಗಳು. ಈ ವ್ಯವಸ್ಥೆಯನ್ನು ನಿರಾಳ ಗೊಳಿಸಿದಾಗಲೇ ಜೀರ್ಣಕ್ರಿಯೆಯೂ ಸುಲಭವಾಗಿ ಜರುಗುತ್ತದೆ. ಒಂದು ಸರಳ ಹೊಟ್ಟೆಯ ಮಸಾಜ್, ಪ್ರತಿದಿನ ಊಟಕ್ಕೂ ಮೊದಲು ಮತ್ತು ಬಳಿಕ ನಿರ್ವಹಿಸುವ ಕಾರಣ ಈ ತೊಂದರೆಯಿಂದ ಮುಕ್ತಿ ನೀಡುತ್ತದೆ.

Most Read: ದಿನಕ್ಕೆ ಒಂದು ಎಳನೀರು ಕುಡಿದರೂ ಸಾಕು-ಪುರುಷರ ನಿಮಿರು ದೌರ್ಬಲ್ಯ ನಿಯಂತ್ರಿಸಬಹುದು

ಹೊಟ್ಟೆಯ ಮಸಾಜ್ ನಿರ್ವಹಿಸುವ ವಿಧಾನ

ಹೊಟ್ಟೆಯ ಮಸಾಜ್ ನಿರ್ವಹಿಸುವ ವಿಧಾನ

*ನೆಲದ ಮೇಲೆ ಯೋಗಾಸನ ಚಾಪೆಯನ್ನು ಹಾಸಿ ಬೆನ್ನ ಮೇಲೆ ಮಲಗಿಕೊಳ್ಳಿ.

ಈಗ ಮೊಣಕಾಲುಗಳನ್ನು ಮಡಚಿ, ಪಾದಗಳು ನೆಲದ ಮೇಲೆ ಚಪ್ಪಟೆಯಾಗಿರುವಂತೆ ಇರಿಸಿ.

*ಬಳಿಕ, ಎರಡೂ ಹಸ್ತಗಳನ್ನು ಹೊಟ್ಟೆಯ ಮೇಲೆ ಇರಿಸಿ ವೃತ್ತಾಕಾರದಲ್ಲಿ ಹೊಟ್ಟೆಯ ಮೇಲೆ ಬೆರಳುಗಳಿಂದ ಮಸಾಜ್ ಮಾಡಿ. ಕೊಂಚ ಹೊತ್ತು ಪ್ರದಕ್ಷಿಣಾಕಾರವಾಗಿ ನಂತರ ಅಪ್ರದಕ್ಷಿಣಾಕಾರವಾಗಿ ತಿರುವುತ್ತಾ ಮಸಾಜ್ ಮುಂದುವರೆಸಿ.

*ಮಸಾಜ್ ನ ಸಮಯದಲ್ಲಿ ದೀರ್ಘವಾಗಿ ಉಸಿರೆಳೆದುಕೊಂಡು ಪೂರ್ಣವಾಗಿ ಬಿಡುತ್ತಾ ಇರಿ.

ನೋವು ಎಂದೆನ್ನಿಸಿದ ಭಾಗದಲ್ಲಿ ಕೊಂಚವೇ ಒತ್ತಡವನ್ನು ಹೆಚ್ಚಿಸಿ. ಹೊಟ್ಟೆಯ ಭಾಗ ಆರಾಮ ಎಂದು ಅನ್ನಿಸುವವರೆಗೂ ಮಸಾಜ್ ಮುಂದುವರೆಸಿ.

ಚೆನ್ನಾಗಿ ನೀರು ಕುಡಿಯಿರಿ

ಚೆನ್ನಾಗಿ ನೀರು ಕುಡಿಯಿರಿ

ಇದರ ಜೊತೆಗೇ ನಿತ್ಯದ ಸೇವನೆಯ ನೀರಿನ ಪ್ರಮಾಣವನ್ನೂ ಹೆಚ್ಚಿಸಿ ನೋಡಿ. ನಿತ್ಯವೂ ದಿನದಲ್ಲಿ ಹಲವು ಬಾರಿ ಸಾಕಷ್ಟು ನೀರು ಕುಡಿಯುತ್ತಿರಿ. ದಿನಕ್ಕೆ ಸುಮಾರು ಆರು ದೊಡ್ಡ ಲೋಟಗಳಷ್ಟಾದರೂ ನೀರು ಕುಡಿಯಿರಿ. ಈ ಮೂಲಕ ಜೀರ್ಣಕ್ರಿಯೆ ಸುಲಭಗೊಂಡು ಹೊಟ್ಟೆಯುಬ್ಬರಿಕೆ ಮತ್ತು ಅಜೀರ್ಣತೆಯ ತೊಂದರೆ ಇಲ್ಲವಾಗುತ್ತದೆ.

English summary

Two minute stomach massage can cure indigestion and bloating!

Having an upset stomach is one of the worst feelings to encounter. You can’t eat properly and feel “full” when you haven't even eaten that much. It definitely hampers your day! Digestion problems often prop up alone or accompanied by the flu, fever or pre-menstrual cramps, each of which is not a happy feeling. Your digestive system always has a way of telling you when something is troubling you mentally. When the pressure builds up in the stomach, you can suffer from trapped wind in different parts of your digestive system, causing a range of symptoms including a bloated stomach, abdomen, burping and flatulence.
Story first published: Wednesday, January 23, 2019, 16:30 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more