For Quick Alerts
ALLOW NOTIFICATIONS  
For Daily Alerts

ಬೆಡ್‌ರೂಮ್‌ನ ಹಾಸಿಗೆಯಲ್ಲಿ ಬಲಿಷ್ಠರಾಗಬೇಕಾದರೆ ಈ ಕ್ರಮಗಳನ್ನು ಅನುಸರಿಸಿ!

|

ಪ್ರತಿಯೊಂದು ಜೀವಿಗೂ ಲೈಂಗಿಕ ಜೀವನ ಅಥವಾ ಲೈಂಗಿಕ ಕ್ರಿಯೆ ಎನ್ನುವುದು ನೈಸರ್ಗಿಕ ಮೂಲಭೂತ ಅವಶ್ಯಕತೆ ಯಾಗಿರುತ್ತದೆ. ಪ್ರಾಯಕ್ಕೆ ಬಂದ ಪ್ರತಿಯೊಂದು ಜೀವಿಯೂ ಲೈಂಗಿಕ ಕ್ರಿಯೆಗೆ ಆಕರ್ಷಿಸುತ್ತದೆ. ಮನೋ ವಿಜ್ಞಾನದ ಪ್ರಕಾರ ವ್ಯಕ್ತಿ ಮಾನಸಿಕ ಹಾಗೂ ದೈಹಿಕವಾಗಿ ಆರೋಗ್ಯವಂತರಾಗಿರಲು ಸೂಕ್ತವಾದ ಲೈಂಗಿಕ ಕ್ರಿಯೆಯು ಅತ್ತುತ್ತಮ ಪಾತ್ರವಹಿಸುತ್ತದೆ. ಅಲ್ಲದೆ ಮನಸ್ಸಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಸಹ ದೂರವಾಗುವುದು ಎನ್ನಲಾಗುತ್ತದೆ. ಸಂಭೋಗಕ್ಕೆ ಇಳಿದಾಗ ನೀವು ನಿಮ್ಮ ಸಾಮರ್ಥ್ಯವನ್ನು ಕೇವಲ ಎರಡು ನಿಮಿಷದಲ್ಲಿ ಕಳೆದುಕೊಳ್ಳುತ್ತೀರಿ ಎಂದಾದರೆ ನೀವು ನಿಮ್ಮನ್ನು ಹಾಗೂ ನಿಮ್ಮ ಸಂಗಾತಿಯನ್ನು ತೃಪ್ತಿ ಪಡಿಸಲು ಸಾಧ್ಯವಾಗುವುದಿಲ್ಲ.

ಇದಕ್ಕೆ ಕಾರಣ ವ್ಯಕ್ತಿಯ ದೋಷವಲ್ಲ. ಜೀವನ ಶೈಲಿ ಹಾಗೂ ಆರೋಗ್ಯ ಸಮಸ್ಯೆಯೂ ಆಗಿರುತ್ತದೆ. ಇಂತಹ ಲೈಂಗಿಕ ಸಮಸ್ಯೆಗಳನ್ನು ಇಂದು ಅನೇಕ ದಂಪತಿಗಳು ಎದುರಿಸುತ್ತಿದ್ದಾರೆ. ಕೆಲಸದ ಒತ್ತಡ ಹಾಗೂ ಮಾನಸಿಕ ಕಿರಿಕಿರಿ, ಕೀಳರಿಮೆ ಸೇರಿದಂತೆ ಅನೇಕ ಕಾರಣಗಳಿಗೆ ಜೀವನದ ಅಮೂಲ್ಯ ಕ್ಷಣಗಳನ್ನು ಕಳೆದುಕೊಳ್ಳುತ್ತಿದ್ದಾರೆ ಅಥವಾ ಅವರ ಲೈಂಗಿಕ ಸಾಮರ್ಥ್ಯವು ಬಹಳ ಚಿಕ್ಕ ವಯಸ್ಸಿನಲ್ಲಿಯೇ ಕ್ಷೀಣಿಸುತ್ತಿದೆ ಎಂದು ಹೇಳಬಹುದು. ಚಿಂತಿಸದಿರಿ ಇಂತಹ ಸಮಸ್ಯೆಗಳಿಂದ ಹೊರಬರಲು ಕೆಲವೊಂದು ಸರಳವಾದ ಪರಿಹಾರಗಳನ್ನು ಇಲ್ಲಿ ನೀಡಿದ್ದೇವೆ, ಇದನ್ನು ನೀವು ತಿಳಿದುಕೊಂಡು ಸೆಕ್ಸ್ ಜೀವನ ಆನಂದಿಸಿ.

ಇನ್ನು ಸ್ವಲ್ಪ ಚಟುವಟಿಕೆಯಿಂದ ಇರಿ

ಇನ್ನು ಸ್ವಲ್ಪ ಚಟುವಟಿಕೆಯಿಂದ ಇರಿ

ವಾರದಲ್ಲಿ ನೀವು ಒಂದು ಸಲ ಸೆಕ್ಸ್ ಮೂಲಕ ಮಾತ್ರ ವ್ಯಾಯಾಮದಲ್ಲಿ ತೊಡಗಿಕೊಳ್ಳುತ್ತಲಿದ್ದರೆ ಆಗ ನೀವು ಇದರ ಬಗ್ಗೆ ಮರುಚಿಂತನೆ ಮಾಡಲೇಬೇಕು ಎಂದು ಡಾ. ಹೊಕೆಮೆಯರ್ ಹೇಳುತ್ತಾರೆ. ನೀವು ಪ್ರತಿನಿತ್ಯವು ಕೆಲವು ನಿಮಿಷಗಳ ಕಾಲ ವ್ಯಾಯಾಮ ಮಾಡಿದರೆ ಅದರಿಂದ ಹಾಸಿಗೆಯಲ್ಲಿ ನಿಮ್ಮ ಶಕ್ತಿ ಹೆಚ್ಚಾಗಲು ನೆರವಾಗುವುದು. ದೈಹಿಕವಾಗಿ ನೀವು ಎಷ್ಟು ಸದೃಢವಾಗಿದ್ದಷ್ಟು ನಿಮ್ಮ ಲೈಂಗಿಕ ಪ್ರದರ್ಶನವು ಚೆನ್ನಾಗಿರುವುದು ಎಂದು ಅವರು ತಿಳಿಸುತ್ತಾರೆ. ಆದರೆ ಈ ಶಕ್ತಿ ಪಡೆಯಲು ನೀವು ಒಲಿಂಪಿಕ್ಸ್ ಗೆ ಮಾಡುವಂತಹ ತಯಾರಿ ಮಾಡಬೇಕಾಗಿಲ್ಲ. ವಾರದಲ್ಲಿ ಮೂರು ಸಲ 20 ನಿಮಿಷ ಕಾಲ ಸಾಮಾನ್ಯ ವ್ಯಾಯಾಮ ಮಾಡಿ. ಇದು ನಿಮಗೆ ಹಾಸಿಗೆಯಲ್ಲಿ ಸುವರ್ಣ ದಿನಗಳನ್ನು ಒದಗಿಸಿಕೊಡುವುದು.

ಯೋಗ ಅಭ್ಯಾಸ ಮಾಡಿ

ಯೋಗ ಅಭ್ಯಾಸ ಮಾಡಿ

ನೀವು ಯೋಗಾಭ್ಯಾಸ ಮಾಡುವ ಕಾರಣದಿಂದಾಗಿ ಅಂಗಾಂಗಗಳು ಸಡಿಲವಾಗುವುದು ಮತ್ತು ಸ್ಥಿತಿಸ್ಥಾಪಕತ್ವ ಪಡೆಯುವುದು. ಇದು ಪುರುಷರಿಗೆ ದೀರ್ಘಕಾಲದ ಲಾಭವನ್ನು ಉಂಟು ಮಾಡುವುದು. ಶೀಘ್ರ ಸ್ಖಲನ ಉಂಟಾಗುವಂತಹ ಪುರುಷರಿಗೆ ಯೋಗವು ಒಂದು ಅದ್ಭುತವಾದ ಸಾಧನವಾಗಿದೆ. ಇದರಿಂದ ಅವರು ಸ್ಖಲನ ವೇಳೆ ನಿಯಂತ್ರಣ ಸಾಧಿಸಬಹುದು ಎಂದು ಹೊಕೆಮೆಯರ್ ತಿಳಿಸಿದ್ದಾರೆ. ಸೆಕ್ಸ್ ನ್ನು ಒಂದು ಗುರಿಯಾಗಿಸದೆ ಪ್ರಯಾಣವಾಗಿಸುವಂತಹ ಪುರುಷರಿಗೆ ಇದು ತುಂಬಾ ಒಳ್ಳೆಯದು.

ನೀವು ಹೆಚ್ಚು ಧ್ಯಾನ ಮಾಡಬೇಕು

ನೀವು ಹೆಚ್ಚು ಧ್ಯಾನ ಮಾಡಬೇಕು

ನಿಮ್ಮ ದೈನಂದಿನ ಚಟುವಟಿಕೆಗಳಲ್ಲಿ ಧ್ಯಾನವನ್ನು ಸೇರಿಸಿಕೊಳ್ಳಲು ಬಯಸಿದ್ದರೆ ಆಗ ನೀವು ಇದರಿಂದ ಹಾಸಿಗೆಯಲ್ಲಿ ಹೆಚ್ಚಿನ ಲಾಭ ಪಡೆದುಕೊಳ್ಳಬಹುದು. ಇದು ಹಾಸಿಗೆಯಲ್ಲಿ ತುಂಬಾ ಪ್ರಮುಖ ಅಂಶವಾಗಿರುವುದು.

Most Read: ಶೀಘ್ರಸ್ಖಲನಕ್ಕೆ ಒತ್ತಡವೂ ಕಾರಣವಾಗಬಹುದಂತೆ! ಅದು ಹೇಗೆ ಗೊತ್ತೇ?

ನಿಮ್ಮೊಳಗೆ ಅನ್ಯೋನ್ಯತೆ ಸಾಧಿಸಿ

ನಿಮ್ಮೊಳಗೆ ಅನ್ಯೋನ್ಯತೆ ಸಾಧಿಸಿ

ಹಸ್ತಮೈಥುನ ಎನ್ನುವುದು ಕೆಲವರಿಗೆ ನಿಷೇಧವಾಗಿರಬಹುದು. ಆದರೆ ಇದು ನಿಮಗೆ ಕೂಡ ಆಗಿರಬೇಕು ಎಂದೇನಿಲ್ಲ ಎಂದು ಡಾ. ಹೊಕೆಮೆಯರ್ ತಿಳಿಸುತ್ತಾರೆ. ನಿಮ್ಮನ್ನು ನೀವು ಪ್ರತಿನಿತ್ಯವು ಹೆಚ್ಚು ಪ್ರೀತಿಸುವ ಕಾರಣದಿಂದಾಗಿ ದೀರ್ಘಕಾಲಕ್ಕೆ ಸಂಗಾತಿ ಜತೆಗೆ ಅನ್ಯೋನ್ಯವಾಗಿ ಇರಬಹುದು. ಇಂದಿನ ಒತ್ತಡದ ದಿನಗಳಲ್ಲಿ ನಾವು ನಮಗಾಗಿ ಕೆಲವು ನಿಮಿಷಗಳನ್ನು ನೀಡುವುದನ್ನು ಮರೆತು ಬಿಡುತ್ತಿದ್ದೇವೆ. ಅದಾಗ್ಯೂ, ಹಸ್ತಮೈಥುನ ಎನ್ನವುದು ನಾಚಿಕೆಪಡುವಂತಹ ವಿಚಾರ ಎಂದು ನಮಗೆ ಕಲಿಸಿಕೊಡಲಾಗುತ್ತದೆ. ಆದರೆ ಅದು ಹಾಗೆ ಅಲ್ಲ. ಹಸ್ತಮೈಥುನ ಮಾಡಿಕೊಳ್ಳುವ ಕಾರಣದಿಂದಾಗಿ ಸೆಕ್ಸ್ ನ ಒತ್ತಡ ಕಡಿಮೆ ಮಾಡಿಕೊಳ್ಳಬಹುದು ಮತ್ತು ಇದರಿಂದ ನೀವು ಸಂಗಾತಿ ಜತೆಗೆ ಹೆಚ್ಚು ಉತ್ತಮವಾಗಿ ಪ್ರದರ್ಶನ ನೀಡಬಹುದು.

ಒಳ್ಳೆಯ ಆರೋಗ್ಯವು ನಿಮ್ಮದಾಗಿರಲಿ

ಒಳ್ಳೆಯ ಆರೋಗ್ಯವು ನಿಮ್ಮದಾಗಿರಲಿ

ಲೈಂಗಿಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ವ್ಯಾಯಾಮವು ಅತ್ಯುತ್ತಮ ವಿಧಾನ ಎಂದು ಮೂತ್ರಶಾಸ್ತ್ರಜ್ಞ ಮತ್ತು ಪುರುಷರ ಲೈಂಗಿಕ ಆರೋಗ್ಯ ತಜ್ಞರು ಹೇಳುತ್ತಾರೆ. ಸಂಪೂರ್ಣ ದೈಹಿಕ ಆರೋಗ್ಯವನ್ನು ಪಡೆದುಕೊಳ್ಳುವುದು ಅತೀ ಮುಖ್ಯವಾಗಿರುವುದು ಎಂದು ಅವರು ಅಭಿಪ್ರಾಯಪಡುವರು.

Most Read: ಸಡನ್ ಆಗಿ ಪುರುಷರ ವೀರ್ಯದ ಬಣ್ಣ ಬದಲಾಗಲು ಕಾರಣವೇನು?

ಒತ್ತಡದಿಂದ ದೂರವಿರಲು ನೀವು ಸಾಧ್ಯವಾದಷ್ಟು ಪ್ರಯತ್ನಿಸಿ

ಒತ್ತಡದಿಂದ ದೂರವಿರಲು ನೀವು ಸಾಧ್ಯವಾದಷ್ಟು ಪ್ರಯತ್ನಿಸಿ

ಒತ್ತಡವನ್ನು ದೂರ ಮಾಡುವುದು ನಾವು ಅಂದುಕೊಂಡಂತೆ ಅಷ್ಟು ಸುಲಭದ ವಿಚಾರವಲ್ಲ. ಆದರೆ ಒತ್ತಡ ದೂರ ಮಾಡಿದರೆ ಆಗ ನಿಮಗೆ ಹಾಸಿಗೆಯಲ್ಲಿ ತುಂಬಾ ಒಳ್ಳೆಯ ಪ್ರದರ್ಶನ ನೀಡಲು ನೆರವಾಗುವುದು.

ಧೂಮಪಾನ ನಿಲ್ಲಿಸಿ

ಧೂಮಪಾನ ನಿಲ್ಲಿಸಿ

ಧೂಮಪಾನವು ಆರೋಗ್ಯದ ಮೇಲೆ ಅನೇಕ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಕ್ಯಾನ್ಸರ್ ಸೇರಿದಂತೆ ಅನೇಕ ಗಂಭೀರ ಸಮಸ್ಯೆಗಳು ನಮ್ಮನ್ನು ಕಾಡುವುದು. ಅಲ್ಲದೆ ಧೂಮಪಾನದಿಂದ ಜನನಾಂಗಕ್ಕೆ ಆರೋಗ್ಯಕರವಾದ ರಕ್ತದ ಹರಿವು ಪ್ರತಿಬಂಧಿಸುತ್ತದೆ. ಜೊತೆಗೆ ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆಯನ್ನು ಉಂಟುಮಾಡುತ್ತದೆ. ಈ ಅಭ್ಯಾಸವನ್ನು ತ್ಯಜಿಸುವುದರಿಂದ ಆರೋಗ್ಯಕರ ಲೈಂಗಿಕ ಜೀವನವನ್ನು ಅನುಭವಿಸಬಹುದು.

Most Read: ಶಿಶ್ನದ ಸಮಸ್ಯೆಗಳ ಬಗ್ಗೆ ಕೇಳಲು ನಾಚಿಕೆಪಡುವ ಪ್ರಶ್ನೆಗಳಿಗೆ ಇಲ್ಲಿದೆ ನೋಡಿ ಉತ್ತರಗಳು

ಡಾರ್ಕ್ ಚಾಕೊಲೇಟ್ ಸೇವಿಸಿ

ಡಾರ್ಕ್ ಚಾಕೊಲೇಟ್ ಸೇವಿಸಿ

ಡಾರ್ಕ್ ಚಾಕೊಲೇಟ್ ಆಂಟಿಆಕ್ಸಿಡೆಂಡ್ ಮತ್ತು ಫ್ಲೇವನಾಯಿಡ್‍ಗಳೊಂದಿಗೆ ಕೂಡಿರುತ್ತದೆ. ಇದು ಕೇವಲ ಉತ್ಕರ್ಷಣ ನಿರೋಧಕವಾಗಿ ಕಾರ್ಯನಿರ್ವಹಿಸುವುದರ ಜೊತೆಗೆ ಮೆದುಳು ಮತ್ತು ಜನನಾಂಗಗಳಿಗೆ ರಕ್ತದ ಆರೋಗ್ಯಕರ ಹರಿವನ್ನು ಅನುಮತಿಸುತ್ತದೆ. ಬಲವಾದ ನಿರ್ಮಾಣವನ್ನು ಪ್ರೇರೇಪಿಸುವುದು.

ತೂಕವನ್ನು ಇಳಿಸಿ

ತೂಕವನ್ನು ಇಳಿಸಿ

ಪುರುಷರು ಸಾಮಾನ್ಯವಾಗಿ ಅಧಿಕ ಈಸ್ಟ್ರೋಜನ್ ಮಟ್ಟವನ್ನುಹೊಂದಿರುತ್ತಾರೆ. ಇದು ವ್ಯಕ್ತಿಯ ಹಾರ್ಮೋನ್ ಸೃಷ್ಟಿ ಹಾಗೂ ನಿಮಿರುವಿಕೆಗೆ ಕಾರಣವಾಗುತ್ತದೆ. ಅಧಿಕ ತೂಕ ಹೊಂದಿದ್ದರೆ ಹಾರ್ಮೋನ್‍ಗಳ ವ್ಯತ್ಯಾಸ ಹಾಗೂ ಅಪಸಾಮಾನ್ಯ ನಿಮಿರುವಿಕೆಯ ಸಮಸ್ಯೆಗಳಿಗೆ ಒಳಗಾಗಬೇಕಾಗುವುದು.

English summary

Things that can improve stamina in the bedroom

Sex is an important part of many healthy relationships. Though many strive to give their best performance in the bedroom, sometimes, factors out of their control can prevent them from delivering an experience applaudable to their partner. Although this may be discouraging to some and even more familiar to others, lacking stamina in the bedroom doesn't have to be your story forever. Lack of stamina is not irreversible and with the proper practice and care, you can be on your way to surviving and thriving in bed like you've always dreamed of doing.
Story first published: Wednesday, January 30, 2019, 9:56 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more