For Quick Alerts
ALLOW NOTIFICATIONS  
For Daily Alerts

ಪುರುಷರ ಶಿಶ್ನದಲ್ಲಿ ಕಾಣಿಸುವ ಪೆರೋನಿ ರೋಗದ ಬಗ್ಗೆ ನೀವು ತಿಳಿಯಲೇಬೇಕಾಗಿರುವ ಸಂಗತಿಗಳು

|

ನೇರ ಹಾಗೂ ನಿಮಿರಿದ ಶಿಶ್ನದ ಬದಲು ಬಾಗಿರುವ ಶಿಶ್ನವನ್ನು ಪೆರೋನಿ ಎಂದು ಹೇಳುವರು. ಇದು ತುಂಬಾ ನೋವುಂಟು ಮಾಡುವುದು ಮತ್ತು ಜೀವನದ ಗುಣಮಟ್ಟದ ಮೇಲೆ ಇದು ಪರಿಣಾಮ ಬೀರಬಹುದು. ವೈದ್ಯರನ್ನು ತಕ್ಷಣವೇ ಭೇಟಿಯಾಗಿ ಪರೀಕ್ಷೆ ಮಾಡಿಕೊಂಡು, ಜೀವನಶೈಲಿಯಲ್ಲಿ ಕೆಲವು ಬದಲಾವಣೆ ಮಾಡಿಕೊಂಡರೆ ಈ ಸಮಸ್ಯೆ ನಿವಾರಣೆ ಆಗುವುದು.

ನಿಮಿರುವಿಕೆ ಉಂಟಾಗದೆ ಇದ್ರೆ ಆಥವಾ ನಿಮಿರುವಿಕೆಯನ್ನು ಕಾಪಾಡಿಕೊಳ್ಳಲು ವಿಫಲವಾದರೆ ಆಗ ಇದನ್ನು ನಿಮಿರು ದೌರ್ಬಲ್ಯ ಎಂದು ಕರೆಯಲಾಗುತ್ತದೆ. ಎಲ್ಲಾ ವಯೋವರ್ಗದ ಪುರುಷರಲ್ಲಿ ಈ ಸಮಸ್ಯೆಯು ಕಾಣಿಸಿಕೊಳ್ಳುವುದು. ಪೆರೋನಿ ಎನ್ನುವುದು ನಿಮಿರು ದೌರ್ಬಲ್ಯದ ಒಂದು ಭಾಗವಾಗಿದ್ದು, ಇದು ಶಿಶ್ನವನ್ನು ಬಾಗಿಸುವುದು ಮತ್ತು ಅದು ನಿಮಿರುವಿಕೆ ವೇಳೆ ನೋವುಂಟು ಮಾಡುವುದು. ಪೆರೋನಿ ಸಮಸ್ಯೆಗೆ ಒಳಗಾಗಿರುವ ಜನರಿಗೆ ಒಳನುಗ್ಗುವಿಕೆ ವೇಳೆ ತುಂಬಾ ಕಷ್ಟವಾಗುವುದು. ಇದರಿಂದಾಗಿ ತುಂಬಾ ಅಹಿತ ಮತ್ತು ಆತಂಕವು ಉಂಟಾಗುವುದು. ಪುರುಷರಲ್ಲಿ ಈ ರೀತಿಯ ಸಮಸ್ಯೆಯು ಬಾಗುವಿಕೆ ಅಥವಾ ಅಪಘಾತದಿಂದ ಗಾಯಾಳುವಾಗಿರುವುದ, ಕ್ರೀಡಾ ಚುಟವಟಿಕೆ ಅಥವಾ ಲೈಂಗಿಕ ಕ್ರಿಯೆ ವೇಳೆ ಅಂಗಾಂಶಗಳು ರಕ್ತದಿಂದ ತುಂಬಿರಬಹುದು.

ಇದರ ಲಕ್ಷಣಗಳೂ ತುಂಬಾ ನಿಧಾನವಾಗಿ ಕಂಡುಬರುವುದು ಅಥವಾ ರಾತ್ರಿ ವೇಳೆ ಇದು ನಿಮಗೆ ಕಾಣಿಸಬಹುದು. ಪೆರೋನಿ ಕಾಯಿಲೆಯಿಂದ ಬಳಲುತ್ತಿರುವವರು ದೇಹದ ಬೇರೆ ಯಾವುದೇ ಭಾಗವಾದ ಕೈ ಅಥವಾ ಕಾಲಿನ ಅಂಗಾಂಶದಲ್ಲಿ ಗಾಯವಾಗಿರಬಹುದು. ನಿಮಗೆ ತುಂಬಾ ನೋವಾಗಬಹುದು ಮತ್ತು ಶಿಶ್ನವು ಸಣ್ಣದಾಗಿರುವಂತೆ ಕಾಣಿಸಬಹುದು. ವೈದ್ಯರ ಬಳಿಗೆ ತೆರಳಿದರೆ ಆಗ ಅವರು ನಿಮಗೆ ಮಾತ್ರೆಗಳನ್ನು ಸೂಚಿಸಬಹುದು. ಈ ಸಮಸ್ಯೆ ನಿವಾರಣೆ ಮಾಡಲು ಶಸ್ತ್ರಚಿಕಿತ್ಸೆಯಲ್ಲದೆ ಇರುವಂತಹ ಶಾಕ್ ಥೆರಪಿ ಕೂಡ ಇದೆ. ಕೆಲವು ಕ್ರಮಗಳಿಂದಾಗಿ ನಿಮಿರುವಿಕೆ ಸಂಬಂಧಿತ ಪೆರೋನಿ ಕಾಯಿಲೆ ನಿವಾರಣೆ ಮಾಡಬಹುದು.

ಪೆರೋನಿ ಕಾಯಿಲೆಯಿಂದ ದೂರವಿರಲು ಹೀಗೆ ಮಾಡಿ

ಪೆರೋನಿ ಕಾಯಿಲೆಯಿಂದ ದೂರವಿರಲು ಹೀಗೆ ಮಾಡಿ

•ಧೂಮಪಾನ ತ್ಯಜಿಸಬೇಕು

•ಆಲ್ಕೋಹಾಲ್ ಸೇವನೆ ಕಡಿಮೆ ಮಾಡಿ.

•ನಿಯಮಿತವಾಗಿ ವ್ಯಾಯಾಮ ಮಾಡಿ.

•ಶಿಶ್ನಗಳಿಗೆ ನೀವು ಹರಳೆಣ್ಣೆ ಹಚ್ಚಿಕೊಳ್ಳಿ: ಗಾಯಗೊಂಡಿರುವ ಮತ್ತು ಕಲೆಗಳ ಮೇಳೆ ಹಚ್ಚಿದಾಗ ಎಣ್ಣೆಯು ಕಠಿಣ ಅಂಗಾಂಶವನ್ನು ನಯವಾಗಿಸುವುದು. ಆದರೆ ಇದರ ಫಲಿತಾಂಶವು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುವುದು. ಇದರಿಂದ ನೀವು ಬಾಧಿತ ಜಾಗಕ್ಕೆ ಹರಳೆಣ್ಣೆ ಹಚ್ಚಿಕೊಳ್ಳಿ ಮತ್ತು ಅದಕ್ಕೆ ಹತ್ತಿ ಬ್ಯಾಂಡೇಜ್ ಕಟ್ಟಿಕೊಳ್ಳಿ. ತುರಿಕೆ ಅಥವಾ ಉರಿ ಕಂಡುಬಂದರೆ ಆಗ ನೀವು ತಕ್ಷಣವೇ ಇದನ್ನು ನಿಲ್ಲಿಸಿಬಿಡಿ.

•ಕಾರ್ನಿಟೈನ್ ಸಮೃದ್ಧ ಆಹಾರ ಸೇವಿಸಿ: ಪೆರೋನಿ ಕಾಯಿಲೆ ಇರುವಂತಹ ಜನರಲ್ಲಿ ಕಾರ್ನಿಟೈನ್ ಎಲ್ ಎನ್ನುವುದು ಕಡಿಮೆ ಆಗಿರುವುದು ಮತ್ತು ಇದರಿಂದಾಗಿ ಗಾತ್ರವು ಕಿರಿದಾಗಿರುವುದು. ಇದರಿಂದಾಗಿ ಕಾರ್ನಿಟೈನ್ ನ್ನು ಸೇವಿಸಬೇಕು. ಇದು ಹಾಲು ಮತ್ತು ಮೀನಿನಲ್ಲಿ ಲಭ್ಯವಿದೆ.

ಪೆರೋನಿ ಕಾಯಿಲೆ ನಿವಾರಿಸಬಹುದೇ?

ಪೆರೋನಿ ಕಾಯಿಲೆ ನಿವಾರಿಸಬಹುದೇ?

ವಕ್ರ ಶಿಶ್ನವೆಂದು ಕರೆಯಲ್ಪಡುವಂತಹ ಈ ಕಾಯಿಲೆಯು ಕೆಲವೊಂದು ಸಲ ತನ್ನಿಂದ ತಾನೇ ಗುಣವಾಗುವುದು. ಇನ್ನು ಕೆಲಸವು ಸಲ ಚಿಕಿತ್ಸೆ ಮಾಡಬೇಕಾಗಬಹುದು. ಚಿಕಿತ್ಸೆಗೆ ತೆರಳುವ ಮೊದಲು ಒಂದು ಅಥವಾ ಎರಡು ವರ್ಷ ತನಕ ಕಾದರೆ, ಇದು ತಾನಾಗಿಯೇ ಗುಣಮುಖವಾಗುವಂತಹ ಸಾಧ್ಯತೆಯು ಹೆಚ್ಚಾಗಿ ರುವುದು. ಶೇ.10ರಷ್ಟು ಮಾತ್ರ ಪೆರೋನಿ ಕಾಯಿಲೆಯು ಗುಣಮುಖವಾಗದೆ ಇರಬಹುದು. ಆದರೆ ಇದು ಬಲು ಅಪರೂಪ. ಆದರೆ ಇದನ್ನು ತಪಾಸಣೆ ಮಾಡಬೇಕು. ವೈದ್ಯರು ಸಣ್ಣ ಮಟ್ಟದ ಪರೀಕ್ಷೆಯಿಂದ ಇದನ್ನು ಪತ್ತೆ ಮಾಡುವರು. ಅಸಾಮಾನ್ಯ ವಕ್ರತೆ ಮತ್ತು ಗಾಯವಾಗುವುದು ಇದರ ಪ್ರಮುಖ ಲಕ್ಷಣವಾಗಿದೆ. ಕೆಲವು ಸಪ್ಲಿಮೆಂಟ್ ಮತ್ತು ವಿಟಮಿನ್ ಗಳನ್ನು ಬಳಸಿಕೊಂಡು ಇದನ್ನು ನಿವಾರಿಸಬಹುದು.

ಪೆರೋನಿ ಕಾಯಿಲೆ ಅನುವಂಶೀಯವೇ?

ಪೆರೋನಿ ಕಾಯಿಲೆ ಅನುವಂಶೀಯವೇ?

ಕೆಲವೊಂದು ಅಧ್ಯಯನಗಳು ಮತ್ತು ವೈದ್ಯಕೀಯ ಸಲಹೆಗಳ ಪ್ರಕಾರ ತಂದೆ ಅಥವಾ ಸಹೋದರರಿಗೆ ಈ ಕಾಯಿಲೆಯು ಇದ್ದರೆ ಆಗ ಇದು ನಿಮಗೂ ಬರಬಹುದು. ಈ ಕಾಯಿಲೆಗೆ ಅನುವಂಶೀಯ ತೆಯ ಜತೆಗೆ ವಯಸ್ಸು ಕೂಡ ಪ್ರಮುಖ ಪಾತ್ರ ವಹಿಸುವುದು. ಅದಾಗ್ಯೂ, ಇದೊಂದು ಸಂಬಂಧಿತ ಅಂಗಾಂಶಗಳ ಅಸ್ವಸ್ಥತೆ ಎಂದು ಹೇಳಲಾಗುತ್ತದೆ ಮತ್ತು ಇದು ಆಘಾತದಿಂದ ಉಂಟಾಗುವುದು ಎಂದು ಕೆಲವೊಂದು ವರದಿಗಳು ಹೇಳಿವೆ. ಪೆರೋನಿ ಕಾಯಿಲೆಯು ಅನುವಂಶೀಯತೆಯಿಂದ ಬರುವಂತಹ ಶಿಶ್ನದ ವಕ್ರತೆ ಎನ್ನಲಾಗುತ್ತದೆ.

Most Read: ಪುರುಷರೇ, ಶಿಶ್ನದ ಬಗ್ಗೆ ನಿಮಗೆ ತಿಳಿದಿರದ 12 ಸಮಸ್ಯೆಗಳು

ಶಿಶ್ನಗಳನ್ನು ಕಾಪಾಡಿಕೊಳ್ಳುವುದು ಹೇಗೆ?

ಶಿಶ್ನಗಳನ್ನು ಕಾಪಾಡಿಕೊಳ್ಳುವುದು ಹೇಗೆ?

ಪೆರೋನಿ ಕಾಯಿಲೆಗೆ ಆಘಾತವು ಪ್ರಮುಖ ಕಾರಣವೆಂದು ನಿಮಗೆ ಈಗಾಗಲೇ ತಿಳಿದಿರುವ ಕಾರಣದಿಂದಾಗಿ ನಿಮ್ಮ ಶಿಶ್ನಗಳನ್ನು ಕಾಪಾಡಿಕೊಳ್ಳಬೇಕು. ಯಾವುದೇ ರೀತಿಯ ಸ್ಪಷ್ಟ ಕ್ರಮಗಳು ಇದಕ್ಕೆ ಇಲ್ಲವಾದರೂ ನೀವು ಕೆಳಗಿನ ಕಾರಣಗಳಿಂದ ಶಿಶ್ನ ರಕ್ಷಿಸಬಹುದು.

ಹೊಟ್ಟೆಯ ಮೇಲೆ ಮಲಗಬೇಡಿ

ಹೊಟ್ಟೆಯ ಮೇಲೆ ಮಲಗಬೇಡಿ

ಸಂತಾನೋತ್ಪತ್ತಿ ತಜ್ಞರ ಪ್ರಕಾರ ವಯಸ್ಕ ಪುರಷರು ಹೊಟ್ಟೆ ಮೇಲೆ ಮಲಗಬಾರದು. ಹೊಟ್ಟೆ ಮೇಲೆ ಮಲಗಿದರೆ ಆಗ ಶಿಶ್ನದ ರಕ್ತನಾಳಗಳ ಮೇಲೆ ಒತ್ತಡ ಬೀಳುವುದು. ಇದರಿಂದ ಶಿಶ್ನದ ಅಂಗಾಂಶಗಳಿಗೆ ರಕ್ತ ಪರಿಚಲನೆ ಕಡಿಮೆಯಾಗುವುದು.

 ಲೈಂಗಿಕ ಕ್ರಿಯೆ ವೇಳೆ ಜಾಗೃತೆ ವಹಿಸಿ

ಲೈಂಗಿಕ ಕ್ರಿಯೆ ವೇಳೆ ಜಾಗೃತೆ ವಹಿಸಿ

ಗಾಯದಿಂದಾಗಿ ಈ ಕಾಯಿಲೆಯು ಬರುವುದು. ಲೈಂಗಿಕ ಕ್ರಿಯೆ ವೇಳೆ ಈ ಗಾಯವು ಕಾಣಿಸಬಹುದು. ನೀವು ಲೈಂಗಿಕ ಕ್ರಿಯೆ ವೇಳೆ ತುಂಬಾ ಎಚ್ಚರಿಕೆ ವಹಿಸಬೇಕು.

Most Read: ಪುರುಷರ ಶಿಶ್ನದ ಗಾತ್ರವನ್ನು ಹೆಚ್ಚಿಸುವ ಪವರ್ ಇಂತಹ ಆಹಾರಗಳಲ್ಲಿದೆ!

ನಿಮ್ಮ ಆಹಾರ ಕ್ರಮದಲ್ಲಿ ವಿಟಮಿನ್ ಇ ಸಪ್ಲಿಮೆಂಟ್ ಬಳಸಿ

ನಿಮ್ಮ ಆಹಾರ ಕ್ರಮದಲ್ಲಿ ವಿಟಮಿನ್ ಇ ಸಪ್ಲಿಮೆಂಟ್ ಬಳಸಿ

ವಿಟಮಿನ್ ಇ ಸಪ್ಲಿಮೆಂಟ್ ಸೇವನೆ ಮಾಡುವುದರಿಂದ ಈ ರೋಗದ ಲಕ್ಷಣಗಳು ಕಡಿಮೆಯಾಗುವುದು ಎಂದು ಕೆಲವೊಂದು ಅಧ್ಯಯನಗಳು ಕಂಡುಕೊಂಡಿವೆ.

ಶಿಶ್ನ ಎಳೆಯುವ ಸಾಧನ ಬಳಕೆ

ಶಿಶ್ನ ಎಳೆಯುವ ಸಾಧನ ಬಳಕೆ

ಇದರ ಬಳಕೆಯಿಂದಾಗಿ ಶಿಶ್ನದ ಗಾತ್ರವು ದೊಡ್ಡದಾಗುವುದು ಎಂದು ಅಧ್ಯಯನಗಳು ಹೇಳಿವೆ. ಆದರೆ ಇದರಿಂದಾಗಿ ಶಿಶ್ನದಲ್ಲಿ ವಕ್ರತೆಯನ್ನು ಕಡಿಮೆ ಮಾಡಬಹುದು. ಲಕ್ಷಣವಿರುವಂತಹ ಭಾಗಕ್ಕೆ ಇದನ್ನು ಅಳವಡಿಸಬೇಕು.

English summary

Things need to know about Peyronie’s disease

Peyronie's disease is where plaques (segments of flat scar tissue) form under the skin of the penis. These plaques can cause the penis to bend or become indented during erections. The plaques can often be felt through the skin, and can also be painful.
Story first published: Friday, May 17, 2019, 21:01 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more